ಈ. ಲಕ್ಮಣ :

ಇಸರರು ಪಟ್ಟೇ ದೋತ್ರವನ್ನುಟ್ಟು, ಮುತ್ತಿನ ಮುಂಡಾಸವನ್ನು ಸುತ್ತಿಕೊಂಡು, ಬಣ್ಣದ ಎಲಿವಸ್ತ್ರವನ್ನು ಬಲಗೈಯಲ್ಲಿಟ್ಟುಕೊಂಡು, ಚಿನ್ನದುಂಗರವಿಟ್ಟು ಕೊಂಡು ಕವ್ಲರ (ಕೌರವರ) ಮನೆಗೆ ಹೋಗುತ್ತಾನೆ. “ನಮ್ಮಲ್ಲಿ ನಿಮ್ಮಲ್ಲಿ ಗಂಡಿದೆ. ಅವರ ಮುದ್ದು ಮದುವೆಯನ್ನು ಮಾಡಿ,ಸೊಗಸು  ನೋಡೋಣ. ಎಂದು ಮಂಗಲದ ಮಾತನ್ನಾಡು‌ತ್ತಾರೆ. ಇಸರರ ಮಾತಿಗೆ ಕವಲ್ಲರು ಒಪ್ಪುತ್ತಾರೆ. ಈ ಸುದ್ಧಿಯನ್ನುಗಿಳಿಗಳು ಕೇಳಿ ಲಕ್ಷ್ಮಣನೆಡೆಗೆ ಬಂದು “ಮಾಳಿಗೆಯಲ್ಲಿ ಹಾಲನ್ನವನ್ನುಣ್ಣುವ ಲಕ್ಷ್ಮಣ, ನಿನ್ನ ಮಾವನಮಗಳನ್ನು ಬೆರೆಡೆ  ಕೊಡುತ್ತಾರೆ” ಎಂದು ತಿಳಿಸುತ್ತದೆ.

ಗಿಳಿಗಳ ಮಾತನ್ನು ಕೇಳಿದ ಲಕ್ಷ್ಮಣನು ಕೂಡಲೇ ವಸ್ತ್ರಾಭರಣಗಳನ್ನು ತೊಟ್ಟು, ಮಾವನ ಮನೆಗೆ ಹೋಗಿ, “ಮಾಳೀಗೆಯಲ್ಲಿ ಹವಳವನ್ನು ಸುರಿಯುತ್ತಿರುವ ಅತ್ತೆಯಮ್ಮ ಮಾವನವರೆಲ್ಲಿ” ಎಂದು ಪ್ರಶ್ನಿಸುತ್ತಾನೆ. ಆಗ ಅತ್ತೆ, “ಇನ್ನೊಂದರ ಗಳಿಗೆಯಲ್ಲಿ ಬರುತ್ತಾರೆ” ಎಂದು ತಿಳಿಸುತ್ತಾರೆ. ಆದರೆ ಲಕ್ಷ್ಮಣ ಅತ್ತೆಯನ್ನು ಕುರಿತು, “ಮಾದೇವಿಯನ್ನು ಬೇರೆಯವರಿಗೆ ಧಾರೆಯೆರೆದು ಕೊಟ್ಟರೆ ರಾಮನಾಣೆಯಿದೆ : ಭೀಮನಾಣೆಯಿದೆ” ಎಂದು ಅಣೆಯಿಟ್ಟು, ತನ್ನ ಸಣ್ಣ ಮಾವ ಪರವಿಂದ್ರರ ಮನೆಗೆ ಹೋಗುತ್ತಾನೆ. ಅವನ ಹತ್ತಿರ “ಮಾವನ ಮಗಳನ್ನು ನಾನು ತಂದು  ಕೊಳ್ಳಬೇಕೆಂದಿದ್ದೇ, ಅವಳನ್ನು ಬೇರೆಡೆ ಕೊಡುತ್ತಾರಂತೆ”  ಎನ್ನುತ್ತಾನೆ.  ಆಗ ಸಣ್ಣ ಮಾವ, “ನಿನಗೆ  ಮತ್ತೇ ಬೇರೆಯವರಿದ್ದಾರೆ. ಆ ಬೇರೆಯ ಹೆಣ್ಣನ್ನು ನಿನಗೆ ತಂದು ಮುದ್ದು ಮುದವೆಯನ್ನು ಮಾಡಿದರಾಯ್ತು ” ಎನ್ನುತ್ತಾನೆ.  ಆದರೆ ಸಣ್ಣ ಮಾವನ ಈ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಮನೆಗೆ ಬಂದು, “ಮಾವನ ಮಗಳನ್ನು ಲಗ್ನವಾಗುವವರೆಗೂ ಊಟವಿಲ್ಲ” ಎಂದು ತಾಯಿಗೆ ಹೇಳಿ ಮುಸುಕಿಟ್ಟು ಮಲಗುತ್ತಾನೆ.

ಇಸರರು ಕೌರವರ ಹತ್ತಿರ, “ಶುಕ್ರವಾರ ತದಿಗೆ, ಗುರುವಾರ ಬಿದಿಗೆ, ಶನಿವಾರ ಮಾಯದೇವಿಯ ಮದುವೆ. ಮದುವೆಯ ಸಕಲ ಸಿದ್ಧತೆಯಿಂದ ದಿಬ್ಬಣ ಸಮೇತ ಬಂದು ಬಾಳೆಯ ಬನದಲ್ಲಿ ನಿಲ್ಲಬೇಕು” ಎಂದು  ಹೇಳಿ ಮನೆಗ ಬರುತಾರೆ. ಮನೆಗ ಬಂದಾಗ  ಇಸರರ ಪತ್ನಿ ಲಕ್ಷ್ಮಣ ಬಂದು ಮಾದೇವಿಗೆ ಆಣೆಯಿಟ್ಟು ಹೋದ ವಿಚಾರವನ್ನು ತಿಳಿಸುತ್ತಾಳೆ. ಆಗ ಇಸರರರು, ” ಇಲ್ಲಿಗೆ ಬಂದವನು ಒಂದರಗಳಿಗೆ ನಿಲ್ಲದೆ ಹೋದ. ನಿಂತಿದ್ದ ಅವನ ತಾಯಿಯ ಹೊಟ್ಟೆ೩ ಉರಿಯುವಂತೆ ಅವನ ಮುಂದೆಲೆಯನ್ನು ಹಿಡಿದೆಳೆಯುತ್ತಿದ್ದೆ” ಎನ್ನುತ್ತಾನೆ. ಆಮೇಲೆ ಮಾದೇವಿಯ ಮದುವೆಯ ವೀಳ್ಯವನ್ನು ಹಸಗರ ಬರೆಯುವವರಿಗೆ ,ಬಿನ್ನಾಣಿ, ಆಚಾರಿ, ಕುಂಬಾರ, ಮುಂತಾದವರಿಗೆ ಕೊಡುತ್ತಾನೆ.  ಇಂದ್ರಲೋಕದ ಪಟ್ಟಿಯನ್ನು ತರುತ್ತಾನೆ.  ಸೋನಗಾರನಿಂದ ತೋಳ್ಬಳೆ, ರತ್ನಹಾರ, ಕಟ್ಟಾಣಿ, ಮಣಿಸರಗಳನ್ನು ತರುತ್ತಾನೆ.

ಈ ಕಡೆಗೆ ಲಕ್ಷ್ಮಣ ಕೈತುಂಬ ಹಣ ತೆಗೆದುಕೊಂಡು ಹೋಗಿ, ಶಿಂಪಿಯಿಂದ ಅಂಗಿ, ಜೋಳೀಗೆ, ರವಿಕೆಗಳನ್ನು ಹೊಲಿಸುತ್ತಾನೆ.  ಗುಡಗಾರನ ಮನೆಗೆ ಹೋಗಿ ತೊಂಡಿಲು ಬಾಸಿಂಗಗಳನ್ನು ಕೊಂಡುಕೊಳ್ಳುತ್ತಾನೆ. ನಾಗಲೋಕದ ಪಟ್ಟಿಯನ್ನು ಖರಿದಿಸುತ್ತಾನೆ. ನಾಗಲೋಕದ ಸೊನಗಾರರನಿಂದ ತೋಳ್ಬಳೆ ಕಟ್ಟಾಣಿ ಮಣಿಸರಗಳನ್ನು ಮಾಡಿಸುತ್ತಾನೆ. ಎಲ್ಲ ಸಾಮಾನುಗಳನ್ನು ಜೋಳೀಗೆಯಲ್ಲಿ ತುಂಬಿ. ಜೊಳೀಗೆಯನ್ನು ಹೆಗಲಿಗೇರಿಸಿಕೊಂಡು ದೇವರಿಗೆ ಕೈ ಮುಗಿದು, ಲಕ್ಷ್ಮಣನೆನ್ನುವ ಹೆಸರು ಈ ಕಡೆಯೇ ಇರಲಿ. ಜೋಗಿಯೆನ್ನುವ ಹೆಸರು ನನಗಾಗಲಿ” ಎಂದು ಜೋಗಿ  ತೊಟ್ಟು, ನಾರಿಯರ ಕೇರಿಗೆ ನಡೆಯುತ್ತಾನೆ.  ಮೇಲಿನ ಕೇರಿಯ ಅಕ್ಕಂದಿರೆರ, ಕೆಳಗಿನ ಕೇರಿಯ ತಂಗಿಯರೆ ಮದುವೆಯ ಮನೆಗೆ ಬರುತ್ತಿರೇನು?” ಎನ್ನುತ್ತಾನೆ. ಆಗ ಊರ ನಾರಿಯರು, “ಗಂಡನ ಕೈ ಕೆಳಗಿನ ಹೆಂಡಿರು, ಅತ್ತೇಯ ಕೆಳಗಿನ ಸೊಸೆಯಂದಿರು ನಾವು ಜೋಗಿಯ ಬೆನ್ನು ಹತ್ತಿ ಬರುವುದಿಲ್ಲ” ಎನ್ನುತ್ತಾರೆ. ಆವರ ಮಾತು ಕೇಳೀ , ಜೋಗಿ ವೇಷದ ಲಕ್ಷ್ಮಣ ಪನ್ನೆಯ ಮರೆಯಲ್ಲಿ ಮುಗುಳು ನಗುತ್ತಾ, ಇಸರರ ಮನೆಗೆ ಹೋಗುತ್ತಾನೆ. ಅಂಗಳದಲ್ಲಿ ಕುಳ್ಳುತ್ತಾನೆ.

ಮದುವೆಗೆ  ಮುತ್ತಿನ ಚಪ್ಪರ ಹಾಕುತ್ತಿರುವ ಇಸರರು ನೋಡಿ ಜೋಗಿ, “ಒಡಹುಟ್ಟಿದ ಅಣ್ಣ-ತಮ್ಮೀಂದಿರಲ್ಲವೇ? ಸೋದರರ ಅಳಿಯಂದಿರಿಲ್ಲವೇ? ನೀವೊಬ್ಬರೇ ಚಪ್ಪರ ಹಾಕುತ್ತೀರಲ್ಲಾ” ಎಂದು ಕೇಳುತ್ತಾನೆ. ಅದೇ ವೇಳೆಗೆ, ಕುಂಬಾರ ಕುಂಭಗಳನ್ನು ತರುತ್ತಾನೆ. ಬಿನ್ನಾಣಿ ಪನ್ನೆಯ ಶಾಸ್ತ್ರ ಮುಗಿಸಲು ಬರುತ್ತಾನೆ. ಆಚಾರಿ ಬಂದು ಬಾಗಿಲಿಗೆ ತೋರಣವಿಡುತ್ತಾನೆ.  ಆಗಸ ಬಂದು ಮಡಿಯ ಮೇಲ್ಗಟ್ಟು  ಕಟ್ಟುತ್ತಾನೆ.  ಹೆಂಗಳೆಯರು ಹಸಗರ ಬರೆಯುತ್ತಾರೆ.  ಮದುವೆಯ ಮಂಟಪ ಸಿದ್ಧವಾಗುತ್ತದೆ.  ಇಸರದಿ ಮಡದಿ ಅಕ್ಷತೆಯ ಬಟ್ಟಲನ್ನ ತರುತ್ತಾಳೆ. ಹೊನ್ನಮಣೆಯ  ಮೇಲೆ ಕುಳಿತು ಮಾದೇವಿಗೆ ಸೇಸೆಯಿಡುತ್ತಾಳೆ.  ಆಗ ಜೋಗಿಯು ತನ್ನ ಮೇ ಮೇಲೆ ಸೆಸೆಯನ್ನು ತಳಿದುಕೊಳ್ಳುತ್ತಾನೆ” ಇದನ್ನು ನೋಡಿದ ನಾರಿಯರು, “ಮಾದೇವಿಯ ಮಂಗಳಕ್ಕಾಗಿ ತಂದ ಈ ಸೇಸೆಯನ್ನು ನೋಡಿದ ನೆರೆದ ನಾರಿಯರು, “ಮಾದೇವಿಯ ಮಂಗಲಕ್ಕಾಗಿ ತಂದ ಸೇಸೆಯನ್ನು ಎಲಲೆ ಜೋಗಿ, ನೀನೆಕೆ ಕಳೆದುಕೊಂಡೆ?  ಎಂದು ಪ್ರಶ್ನಿಸುತ್ತಾರೆ. ಆಗ ಜೋಗಿಯೂ ತನ್ನ ಮನೈಮೇಲೆ ಸೇಸೆಯನ್ನು ಕಾಣದೆ ಹನ್ನೆರಡು ವರ್ಷಗಳಾದುವು ಈಗ ಸಿಕ್ಕಿದಾಗಲೇ ಅದನ್ನು ತಳೆದುಕೊಂಡೆ” ಎನ್ನುತ್ತಾನೆ.  ಮಾದೇವಿಗೆ “ಚಿಗುರು” ತಿಕ್ಕುತ್ತಾರೆ. ಆಗ ಜೋಗಿ ತಾನೂ ಚಿಗುರು ತಿಕ್ಕಿ ಕೊಳ್ಳುತ್ತಾನೆ.  ಮಾದೇವಿಗೆ ಪನ್ನೆ ಮಾಡುವಾಗ, ತಾನೂ ಪನ್ನೆ ಮಾಡಿಕೊಳ್ಳುತ್ತಾಳೆ.  ಅವಳೀಗೆ ಕಲಶದ ನೀರು ಸ್ನಾನ ಮಾಡಿಸುವಾಗ, ತಾನು ಕಲಶ ನೀರಿನಿಂದ ಸ್ನಾನ ಮಾಡುತ್ತಾನೆ.

ಕಲಶ ನೀರು ಮಿಂದು ಮಾದೇವಿಯ ಪಾದವುದ್ದಿ ಗರತಿಯರು ಪಟ್ಟೆ ಉಡಿಸುತ್ತಾರೆ.  ಮಂಡೆ ಬಾಚಿ ಸೋರ್ಮುಡಿ ಯಿಡುತ್ತಾರೆ. ಸಿಂಗಾರಾಧಿ ಹೂಗಳನ್ನು ಮುಡಿಸುತ್ತಾರೆ. ಹಣೆಗೆ ತಿಲಕವಿಡುತ್ತಾರೆ. ಹೀಗೆ ಸಿಂಗರಿಸಿದ ಮಾದೇವಿಯನ್ನು ತುಲಸಿಯಂತೆ ಕರೆತರುತ್ತಾರೆ. ಇಸರರು ತುಲಸಿಯನ್ನು ಪೂಜಿಸಿ, ಮಾದೇವಿಗೆ  ಪ್ರಸಾದ ಕೊಡುತ್ತಾನೆ. ಮಾದೇವಿ  ತುಲಸಿಗೆ ಕೈ ಮುಗಿದು, ಪ್ರಸಾದ ಸೂಡಿ, ಹಸಗರಕ್ಕೆ ಹೋಗಿ ಕೂಡ್ರುತ್ತಾಳೆ.

ಇತ್ತ ಕೌರವವ ದಿಬ್ಬಣ ಬಂದು ಬಾಳೆಯ ಬನದಲ್ಲಿ ನಿಲ್ಲುತ್ತದೆ. ಈಸರರು ಅವರನ್ನು  ಎದುರು ಗೊಂಡು ಚಪ್ಪರಕ್ಕೆ ಕರೆತರುತ್ತಾರೆ. ಕವ್ಲರು (ಕೌರವರು)  ಹೆಣ್ಣೀಗೆ ಸಿಂಗರಿಸಲು ತಂದ ವಸ್ತುಗಳು ಒಡವೆಗಳನ್ನು   ತೆರೆಯುತ್ತಾರೆ. ತೆಗೆದು ನೋಡಿದರೆ ಅವೆಲ್ಲ ಪುಡಿ ಪುಡಿಯಾಗಿ ಹೋಗಿವೆ. ಇದನ್ನು ನೋಡಿ ಕವ್ಲರು ತಲೆ ತಗ್ಗಿಸುತ್ತಾರೆ. ಆಗ ಜೋಗಿ, “ಇದೇನು ಕವ್ಲರೇ ತಲೆ ತಗ್ಗಿಸಿದ್ದೀರಿ: ಚಿಂತಿಸಬೇಡಿ: ನಾನು ತಂದ ಪಟ್ಟಿಯಿದೆ, ಚಿನ್ನವಿದೆ, ಹೂವು ತೊಂಡಿಲ  ಎಲ್ಲಾ ಇವೆ. ಅವನ್ನು ಹೆಣ್ಣಿಗೆ ತೊಡಿಸಿ ಧಾರೆಯೆರೆಸಿಕೊಳ್ಳಿ” ಎಂದು ಅವೆಲ್ಲವನ್ನೂ ಕವ್ಲರಿಗೆ ಕೊಡುತ್ತಾನೆ. ಅವನ್ನು ಕವ್ಲರು ಮಾದೇವಿಗೆ ತೊಡಿಸಿ ಧಾರೆಗೆ ಸಿದ್ಧವಾಗುತ್ತಾರೆ. ಆಗ ನೆರೆದವರು, ಧಾರೆಯೆರೆಯುವಾಗ ಜೋಗಿಯನ್ನು ಮುಂದಿಟ್ಟುಕೊಳ್ಳಬಾರದು. ಅವನಿಗೆ ಪಡಿಕೊಟ್ಟು ಕಳಿಸಿಬಿಡಿ”- ಎನ್ನುತ್ತಾರೆ. ಇಸರರು ಪಡಿಯನ್ನು ಕಳಿಸಿಬಿಡಿ”- ಎನ್ನುತ್ತಾರೆ.  ಇಸರರು ಪಡಿಯನ್ನು ತೆಗೆದುಕೊಂಡು ಜೋಗಿಗೆ ಕೊಡ ಹೋದಾಗ ಜೋಗಿ, “ನಿಮ್ಮ ಕೈಪಡಿಯನ್ನು ಮುಟ್ಟುವ ಜೋಗಿ ನಾನಲ್ಲ. ಮಾದೇವಿಯೆ ಕೈಪಡಿಯೇ ಬರಬೇಕು.” ಎಂದು ಹಠ ಹಿಡಿಯತ್ತಾನೆ. ಉಪಾಯಗಾಣದ ಇಸರರು ಮಾದೇವಿಯನ್ನೇ ಕಳಿಸುತ್ತಾರೆ.  ಮಾದೇವಿ ಪಡಿತೆಗೆದುಕೊಂಡು ಬಂದಾಗ, ಜೋಗಿ ಹಗಲನ್ನು ಇರುಳಿ ಮಾಡಿ, ಮಾದೇವಿಯನ್ನು ಎತ್ತಿಕೊಂಡು ಬಾಳೆಬನಕ್ಕೆ ಹೋಗುತ್ತಾನೆ.

ಇತ್ತ ತಲೆ ತಗ್ಗಿಸಿಕೊಂಡು ನಿಂತ ಕವ್ಲರನ್ನು ನೋಡಿ ಇಸರರು, “ಇದು ಲಕ್ಷ್ಮಣನ ಮಾಯಿಕ ” ಎಂದು ಹೇಳೀ ಆಡಲು ಹೋದ ಪಾರ್ವತಿಯನ್ನು ಕರೆಯುತ್ತಾರೆ. ಅವಳನ್ನು ಸಿಂಗರಿಸಿ ಕವ್ಲರಿಗೆ ಧಾರೆಯರೆಯುತ್ತಾರೆ. ಕವ್ಲರ ದಿಬ್ಬಣ ಪಾರ್ವತಿಯೊಡನೆ ಹೊರಡುತ್ತದೆ.

ಜೋಗಿ ಮಾದೇವಿಯೊಡನೆ ಕೇದಿಗೆ ವನಕ್ಕೆ ಬಂದು, “ಜೋಗಿಯ ವೇಷ ಹೋಗಿ ಲಕ್ಷ್ಮಣನ ರೂಪ ಬರಲಿ ” ಎನ್ನುತ್ತಾನೆ. ಕೇದಗೆಯ ಗರಿಯೊಂದನ್ನು ಕಿತ್ತು ಕೊಂಡು ಮಾವನಿಗೆ ಓಲೆ ಬರೆಯುತ್ತಾನೆ. “ಜೀವಕ್ಕೆ ರೋಗವಾದರೆ ಬಾಯಿ ರುಚಿಸುವಿಲ್ಲ. ಬಾಡಿ ಹೋಗುವ ಎಳೆ ಎಲೆ, ಹಣ್ಣಡಿಕೆಯನ್ನು ನೀಡಲಿಕ್ಕೇನು? ಮಾವನೇ ಮಾದೇವಿಯನ್ನು ಧಾರೆಯೆರೆದು ಹೋಗು” ಎಂದು ಪತ್ರ ಬರೆದು ಗಿಳಿಗಳ ಹತ್ತಿರ ಕಳಿಸುತ್ತಾನೆ. ಗಿಳಿಗಳು ತಂದು ಮುಟ್ಟಿಸಿದ ಓಲೆಯನ್ನು ಇಸರರು ಓದಿ, ಉಗುಳು ನಕ್ಕು ಲಕ್ಷ್ಮಣನೆಡೆಗೆ ಹೋಗುತ್ತಾರೆ. ಅವನನ್ನೂ ಮಾದೇವಿಯನ್ನೂ ಮನೆಗೆ ಕರೆ ತಂದು ಮದುವೆ ಮಾಡಿ ಮುಗಿಸುತ್ತಾರೆ.

ಲಕ್ಷ್ಮಣನ ಹಾಡು ಸುಭದ್ರೆಯ ಹಾಡನ್ನು ಹೊಲುತ್ತದೆ. ಎರಡೂ ಹಾಡು-ಗಳಲ್ಲಿ ಜೋಗಿಯ ವೇಷವು ಸಾಮಾನ್ಯವಾಗಿದ್ದರೂ, ಆ ವೇಷಗಳ ಉದ್ದೇಶ ಮಾತ್ರ ಬೇರೆ ಬೇರೆ, ಸುಭದ್ರೆಯ ಹಾಡಿನಲ್ಲಿ ಜೋಗಿಯ ವೇಷ, ಸುಭದ್ರೆಯ ಪ್ರೀತಿಯ ಆಳ ಅಗಲಗಳ ಪರೀಕ್ಷೆಗಾಗಿ ಬಂದಿದ್ದರೆ, ಲಕ್ಷ್ಮಣನ ಹಾಡಿನಲ್ಲಿ ಜೋಗಿಯ ವೇಷವು, ತನಗೆ ಹಣ್ಣು ಕೊಡಲು ಒಪ್ಪದ ಸೋದರ ಮಾವನ ಕಣ್ಣೀಗೆ ಮಣ್ಣೆರಚಿ, ಬಯಸಿದ ಹೆಣ್ಣನ್ನು ಅಪಹರಿಸಲು ಬರುತ್ತದೆ.  ಜೋಗಿ ವೇಷದ ಚಟುವಟಿಕೆಗಳು ಎರಡೂ ಹಾಡುಗಳಲ್ಲಿ ತೀರ ಭಿನ್ನವಾಗಿವೆ.

ಸುಭದ್ರೆಯ ಹಾಡಿನ ಅನೇಕ ಆಶಯಗಳು ಲಕ್ಷ್ಮಣನ ಹಾಡಿನಲ್ಲಿಲ್ಲ.

[1] ಲಕ್ಷ್ಮಣನ ಮಾವ ಇಸರರು ಕೌಲರಿಗೆ ತನ್ನಮಗಳನ್ನು ಮದುವೆಯಾಗಲು ಕೇಳಲು ಹೋಗುವುದು, ಇದನ್ನರಿತ ಲಕ್ಷ್ಮಣ ಮಾವನಮಗಳಿಗಾಗಿ ಶಪಥ ತೊಡುವುದು,ಜೋಗಿ ವೇಷ ತೊಟ್ಟು, ಲಕ್ಷ್ಮಣ ತನ್ನ ಮಾವನಮಗಳ ಮದುವೆಗೆ ಹೋಗುವುದು, ಅಲ್ಲಿ ಮದುಮಕ್ಕಳ ಸೇಸೆ  ತಿಳಿದುಕೊಳ್ಳುವುದು, ಚಿಗುರು ತಿಕ್ಕಿಕೊಳ್ಳುವುದು, ಕೌಲರ ದಿಬ್ಬಣ ಧರೆಗೆ ಬರುವುದು. ಅವರು ಮದುಮಗಳಿಗೆ ತಂದ ವಸ್ತ್ರಾಭರಣ, ತೊಂಡಿಲುಗಳೆಲ್ಲ ಪುಡಿ ಪುಡಿಯಾಗುವುದು, ಆಗ ಲಕ್ಷ್ಮಣನು ತಾನು ತಂದ ವಸ್ತ್ರಾಭರಣ ತೊಂಡಿಲುಗಳನ್ನು ಕೌಲಿರಿಗೆ ಕೊಡುವುದು, ಜೋಗಿಯನ್ನು ಪಡಿಕೊಟ್ಟು ಹೊರಗಟ್ಟಲು ನೆರೆದ ಜನ ಹೇಳೂವುದು, ಮಾದೇವಿ ಪಡಿಕೊಡಲು ಬಂದಾಗ ಲಕ್ಷ್ಮಣ ಅವಳನ್ನು ಅಪಹರಿಸುವುದು, ಇಸರರು ಚಿಕ್ಕ ಮಗಳನ್ನು ಕೌಲರಿಗೆ ಧಾರೆ ಯೆರೆಯುವುದು , ಕೊನೆಯಲ್ಲಿ ಲಕ್ಷ್ಮಣ ತನ್ನ ಮಾವನಿಂದ ಮಾದೇವಿಯ ಧಾರೆ ಯೆರೆಸಿಕೊಳ್ಳುವುದು, ಈ ಮುಂತಾದ ಹೊಸ ಆಶಯಗಳು ಲಕ್ಷ್ಮಣನ ಹಾಡಿನಲ್ಲಿ ಸೇರಿಕೊಂಡು ಲಕ್ಷ್ಮಣನ ಹಾಡು ಸುಭದ್ರೆಯ ಹಾಡಿನಿಂದ ಭಿನ್ನವಾಗಿ ನಿಲ್ಲುತ್ತದೆ.

ಇಲ್ಲಿ ಅರ್ಜುನನ ಹೆಸರು ಲಕ್ಷ್ಮಣ, ಸುಭದ್ರೆ ಹೆಸರು ಮಾದೇವಿ, ವಸುದೇವನ ಹೆಸರು ಇಸರ ಎಂದು ಮಾರ್ಪಾಟಾಗಿದೆ. ಜಾನಪದರಲ್ಲಿ ಹೀಗೆ ಹೆಸರುಗಳ ವ್ಯತ್ಯಾಸವಾಗುವುದು ಸಾಮಾನ್ಯವಾಗಿದೆ.

. ಅರ್ಜುನ :
ಅರ್ಜುನ ಗಿಳಿಗಳನ್ನು ಕರೆದು, ದ್ರೌಪದಿಯ ಪುರಕ್ಕೆ ಹೋಗಿ ತನ್ನ ಮಡದಿಯನ್ನು ಕರೆತರಲು ತಿಳಿಸುತ್ತಾನೆ. ಅರ್ಜುನನ ಸಂದೇಶವನ್ನು ಹೊತ್ತ ಗಿಳಿಗಳು ದ್ರೌಪದಿಯಡೆಗೆ ಹೋಗಿ, “ಹಾಲನ್ನು ಕುಡಿಯುವಾಗ ಹಣ್ಣನ್ನು ತಿನ್ನುವಾಗ ಬರುತ್ತೇನೆಂಬ ಸತ್ಯವಚನ (ಜುತ್ವ?)ವನ್ನು ನುಡಿಬೇಕು” ಎಂದು ಅರ್ಜುನನು ಹೇಳಿ ಕಳಿಸಿದ ಸಂದೇಶವನ್ನು ಮುಟ್ಟಿಸುತ್ತದೆ. ಅದಕ್ಕೆ ದ್ರೌಪದಿಯು, “ನನ್ನ ಕೈಯ್ದಾರಿ ಎರೆಯುವಾಗ ನಾನು ಮೂರು ವರ್ಷದ ಶಿಶು. ಅರ್ಜುನ ದೇವನು ಕಾನಲ್ಲಿ ಮನೆಕಟ್ಟಿ ನಾಗಣಿಯ ಜೊತೆ ಇದ್ದಾನೆ. ನನ್ನ ಒಡಲಿನ ತಾಪವನ್ನು ಏನೆಂದು ಹೇಳಲಿ? ಈ ತಾಪ ಹೋಗಿ ನಾಗಕನ್ನೆ[ನಾಗಿಣಿ] ಗೆ ಅರಗಲಿ, ಗಿಳಿಗಳೇ ನಾನು ಬರುತ್ತೇನೆಂಬ ಜುತ್ವ [ಸತ್ಯ]ವನ್ನು  ಅರ್ಜುನನಿಗೆ ಹೇಳಿರಿ” ಎನ್ನುತ್ತಾಳೆ.

ದ್ರೌಪದಿ ಅಲಂಕಾರ ಭೂಷಿತೆಯಾಗಿ, ಅರ್ಜುನನ ಕಾನ ಮನೆಗೆ ಬಂದು ನೋಡಿದರೆ ಅವಳ ಸುಳಿವಿಲ್ಲ. “ನಾನು ಬರುವುದಿಲ್ಲವೆಂದರೂ ಓಲೆಯನ್ನು ಕಳೂಹಿದ್ದಾನೆ. ಸತ್ಯವಚನಿಯಾದ ತಾನೆಲ್ಲಿ ಹೋದ” ಎಂದು ಸಿಟ್ಟಿನಿಂದ ತನ್ನ ಮನೆಗೆ ತಿರುತ್ತಾಳೆ. ಅವಳು ಮನೆಗೆ ಹೋದ ಮೇಲೆ ನಾಗಕನ್ನೆಯ [ನಾಗಣಿ]ಯು ಅರ್ಜುನನ ಸುಮನಿದ್ರೆಯಿಂದ ಎಚ್ಚರವಾಗಲಿ” ಎಂದು ಶಾಪವಿಡುತ್ತಾಳೆ. ಆಗ ಅರ್ಜುನ ನಿದೆದಯಿಂದೆಚ್ಚತ್ತು ಕುಳಿತುಕೊಳ್ಳುತ್ತಾನೆ. ತನ್ನ ಪೋಷಾಕು ತೊಟ್ಟು ಕೊಂಡು ಮಾಳಿಗೆಯಿಂದ ಹೊರಬಂದು, “ಹಗಲು ರಾತ್ರಿಯಾಗಲಿ ನಾಗಕನ್ನೆಗೆ ಸುಮನಿದ್ರೆ ಕವಿಯಲಿ: ಎಂದು ಶಾಪವಿತ್ತು ಮನೆಯಿಂದ ರಾಜಮಾರ್ಗಕ್ಕೆ ಬರುತ್ತಾನೆ. ಅಲ್ಲಿ ಬಂದು, “ನಾಗಕನ್ನೆಯ ನಿದ್ದೆಯಿಂದ ಎಚ್ಚರಾಗಲಿ” ಎಂದು ಮತ್ತೇ ಶಾಪ ಹಾಕುತ್ತಾನೆ. ನಿದ್ದೆಯಿಂದ  ಎಚೆತ್ತ ನಾಗಕನ್ನೆಯ, ಅರ್ಜುನನ ಸುಳಿವಿಲ್ಲವೆಂದು ಮನೆಯಿಂದ ಹೊರಕ್ಕೆ ಬರುತ್ತಾಳೆ. ಅರ್ಜುನನು ಎದುರಿಸಿ, “ಮೋಜುಗಾರ ಗಂಡನಿಗೆ ಎಷ್ಟು ಮೋಜು” ಎಂದು ಅವನ ಬೆರಳಿನುಂಗುರ, ಉಟ್ಟ ಪಟ್ಟೆ ಕಸಿದುಕೊಂಡು, ಅವನ ಜೀವವೊಂದನ್ನು ಬಿಟ್ಟು ತನ್ನ ಅರಮನೆಗೆ ಹಿಂತಿರುಗುತ್ತಾಳೆ. ಆಗ ಅರ್ಜುನ ತನ್ನ ಮನೆಕೂಸನ್ನು ಕರೆದು, “ನನ್ನಲ್ಲಿ ಇದ್ದು ಬಿದ್ದುದನ್ನೆಲ್ಲ ನಾಗಕನ್ಯೆ ಕಸಿದುಕೊಂಡು ಹೋದಳು. “ನೀನು ಕುಸುಮಾಲಿಯೆಡೆ ಹೋಗಿ  ಈ ವಿಷಯವನ್ನು ತಿಳಿಸಿ ಬಾ” ಎನ್ನುತ್ತಾನೆ.

ಅರ್ಜುನನ ಮನೆಕೂಸನು ಕುಸುಮಾಲಿಯಿದ್ದೆಡೆ ಬಂದು, “ಅರ್ಜುನನ ಹತ್ತಿರಿದುದೆಲ್ಲವನ್ನೂ ನಾಗಕನ್ಯೆ ಸೆಳೇದುಕೊಂಡು, ಅವನ ಜೀವ ಮಾತ್ರ ಉಳೀಸಿಹೊಗಿದ್ದಾಳೆ. ಆದ್ದರಿಂದ ಅರ್ಜುನದೇವನ ಉಡಿಗೆ ತೊಡಿಗೆ [ಮಸ್ತದಿ]ಯನ್ನು ಕೊಡಬೇಕು” ಎಂದು ಹೇಳುತ್ತಾನೆ.

ಕುಸುಮಾಲಿ ನಾಗಕನ್ನೆಯ ಮನೆಗೆ ಬಂದು, “ನಾಗಕನ್ನೆಯ ಯಾವ ಊರಿಗೆ ಹೋಗಿದ್ದೆ? ಯಾರ ಒಡವೆಯನ್ನು ಕಸಿದಿರುವೆ?ನೀನು ಕಸಿದು ತಂದ ಒಡವೆಯನ್ನು ಬೇಗನೆ ತಂದು ಕೊಡಬೇಕು. ಕೊಡದೆಯಿದ್ದಲ್ಲಿ ಮುಂಗುಸಿಯನ್ನು ತಂದು ನಿನ್ನನ್ನು ಮುಂಸುತ್ತೇನೆ. ಗಿಡಗನನ್ನು ತಂದು ನಿನ್ನನ್ನು ಒದೆಸುತ್ತೇನೆ”. ಎಂದು ಬೆದರಿಸುತ್ತಾಳೆ. ನಾಗ ಕನ್ನೆ ತಾನು ಸಂದೊಡವೆಯನ್ನು ಹಿಂತಿರುಗಿ ತಂದು, ಕುಸುಮಾಲಿಯ ಕೈಗೊಪ್ಪಿಸುವಳು. ಆಗ ಕುಸುಮಾಲಿ ಅರ್ಜುನನ ಆ ವಸ್ತು ಒಡವೆಯನ್ನೆಲ್ಲ ಅರ್ಜುನನ ಮನೆಕೂಸಿನ ಕೈಗೊಪ್ಪಿಸುವಳು. ಆತ ಅದನ್ನು ತಂದು ಅರ್ಜುನನಿಗೊಪ್ಪಿಸುತ್ತಾನೆ.

ಅರ್ಜುನ ಆ ವಸ್ತ್ರಾಭರಣಗಳನ್ನು ತೊಟ್ಟುಕೊಂಡು ದ್ರೌಪದಿಯರ ಮನೆಗೆ ಬರುತ್ತಾನೆ. ಬಹುದಿನಕ್ಕೆ ತನ್ನರಮನೆಗೆ ಬಂದ ಪತಿಯನ್ನು ದ್ರೌಪದಿ ಅದರದಿಂದ ಸತ್ಕರಿಸುತ್ತಾಳೆ. ಗಂಡ ಹೆಂಡಿರು ಉಂಡು ತಾಂಬೂಲು ಸೇವಿಸಿ, ಹಾಸಿಗೆಯ ಮೇಲೆ ಒರಗುತ್ತಾರೆ.

ಅರ್ಜುನ ದ್ರೌಪದಿಯರು ಹಾಸಿಗೆಯ ಮೇಲೊರಗಿ ಸುಖನಿದ್ದೆ ಮಾಡಿದ ಕನಸನ್ನು ಕಾಣುತ್ತಾಳೆ ನಾಗಕನ್ನೆ. ಈಗ ಅವಳು ನೇರವಾಗಿ ದ್ರೌಪದಿಯರ ಮನೆಗೆ ಬರುತ್ತಳೆ. ಅರ್ಜುನ ದ್ರೌಪದಿಯರು ಮುಸುಕಿಟ್ಟು ಮಲಗಿದ್ದುದನ್ನು ನೋಡುತ್ತಾಳೆ. ಅರ್ಜುನನ ಮುಸುಕು   ತೆಗೆದು ನೋಡುತ್ತಾಳೆ. ಅವನನ್ನು ಕಡಿದರೆ ತನ್ನ ಮುತ್ತೈದಿತನ ಹೋಗುವುದೆಂದು, ಸಾವಕಾಶವಾಗಿ ದ್ರೌಪದಿಯ ಮುಸುಕನ್ನು ತೆರೆಯುತ್ತಾಳೆ. ಆವಳ ಮೇಲೆ ವಷವನ್ನು ಕಾರಿ, ಮನೆಯ ಮಾಡು ಹತ್ತಿಅಲ್ಲಿಂದ ಪಾರಾಗಿ ತನ್ನರಮನಿಗೆ ಬರುತ್ತಾಳೆ ನಾಗಕನ್ಯೆ.

ಮುಂಜಾನೆ ಅರ್ಜುನನು ಮೈಮುರಿದೆದ್ದು ಕೈ ಖಾಲು ಮುಖವನ್ನು ತೊಳೆಯುತ್ತಾನೆ. ದ್ರೌಪದಿಯ ಹತ್ತರಿ ಹೋಗಿ” ಸುತ್ತಮುತ್ತಲಿನ ಗರತಿಯರು, ಎಸರೆತ್ತಿ  ಜೊಸರು ಕಡೆದು, ಜೋಡು ಕೊಡ ಹಿಡಿದು ನೀರಿಗೆ ಹೊರಟರು. ನಮ್ಮನೆಯ “ನಿದ್ಗೇಡಿ”ಗೆ ಮಾತ್ರ ಇನ್ನೂ ನಿದ್ರೆ ಮುಗಿಯಲಿಲ್ಲ” ಎಂದು ಮುಸುಕನ್ನು ತೆರೆಯುತ್ತಾನೆ. ದ್ರೌಪತಿ ಸತ್ತು ಹೋಗಿದ್ದಾಳೆ. ಇದನ್ನ ನೋಡಿದ ಅರ್ಜುನ ವ್ಯಥೆಯಿಂದ “ಕಾಡಿನ ಹೆಣ್ಣು ಮಕ್ಕಳು ಕಾಡಿನಲ್ಲಿಯೇ ಇರುತ್ತಿದ್ದರು. ನಾನು ಇವಳಲ್ಲಿಗೆ ಬಂದು ಇವಳ ಗೋಳಿಗೆ ಕಾರಣನಾದೆ” ಎಂದು ಮರಗುತ್ತಾನೆ.  ಪುನಃ ತನ್ನ ಮನೆಕೂಸನ್ನು ರೆದುಕುಸುಮಾಲಿಯೆಡೆಗೆ ಕಳಿಸುತ್ತಾನೆ.

ಮನೆಕೂಸನು ಕುಸುಮಾಲಿಯೆಡೆ ಬಂದು ನಾಗಕನ್ನೆಯ ದ್ರೌಪತಿಯನ್ನು ಕಚ್ಚಿ ಸಾಯಿಸಿದ ವಿಚಾರವನ್ನು ತಿಳಿಸುತ್ತಾನೆ. ಕುಸುಮಾಲಿ ತತಕ್ಷಣದಲ್ಲಿ ನಾಗಕನ್ನೆಯೆಡೆ  ಬಂದು, ದ್ರೌಪದಿಗೆ ಅವಳೂ ಉಣಿಸಿದ ವಿಷವನ್ನು ಹಿಂದಕ್ಕೆ ತೆಗೆದುಕೊಳ್ಳಲು ತಿಳಿಸುತ್ತಾಳೆ. ನಾಗಕನ್ನೆಯ ಕುಸುಮಾಲಿಯ ಅದೇಶದಂತೆ , ದ್ರೌಪದಿಗಿಟ್ಟ ವಿಷನ್ನು ಹಿಂತೆಗೆದುಕೊಳ್ಳುತ್ತಾಳೆ. ದ್ರೌಪದಿ ಮೈಮುರಿದೆದ್ದು ಕುಳ್ಳುತ್ತಾಳೆ. ಎದ್ದು ಅಕ್ಕನ ಜೊತೆಗೆ ಹೋಗಿ ಕೂಡ್ರುತ್ತಾಳೆ. ಅಕ್ಕ ಕುಸುಮಾಲಿ ತಂಗಿ ದ್ರೌಪದಿಗೆ ತಾಂಬೂಲು ನೀಡುತ್ತಾಳೆ. ದ್ರೌಪತಿ ಅಕ್ಕನಿಗೆ ನಮಸ್ಕರಸಿ, ಅಕ್ಕ ನನ್ನ ಹೊಟ್ಟೆಯಲ್ಲಿ ಹೆಣ್ಣೊಂದು ಹುಟ್ಟಿದರೆ ನಿನ್ನ ಹೆಸರನ್ನು ಇಡುತ್ತಿದ್ದೆ. ಆದರೆ ನನಗೆ ಹೆಣ್ಣೂಸಂತಾನವೇ ಇಲ್ಲ” ಎಂದು ಮರಗುತ್ತಾಳೆ.

ಈ ಕಥೆಗೂ ಮಹಾಭಾರತ ಕಥೆಗೂ ಸಂಬಮಧ ಜೋಡಿಸುವುದು ಪ್ರಯಾಸ. ಈ ಹಾಡಿನ “ನಾಗಾಣಿ” ಅರ್ಜುನ ತೀರ್ಥಯಾತ್ರೆಗೆ ಹೋದಾಗ ಅವನ ಕೈಹಿಡಿದ ನಾಗಕನ್ನೆ ಉಲೂಪಿಯಾಗಿರಬೇಕು. ಕುಸುಮಾಲಿ ಚಿತ್ರಾಂಗದೆಯಿರಬೇಕು. ದ್ರೌಪದಿ ನಾಗಾಣಿ (ಉಲೂಪಿ)ಯರ ಸವತಿಮಾತ್ಸರ್ಯ ಕುಸುಮಲಿ (ಚಿತ್ರಾಂಗದೆ)ಯ ಔದಾರ್ಯ, ಅನುಕಂಪೆ ಈ ಹಾಡಿನ ತಿರುಳು.

ಈ ಹಾಡಿನ ಇನ್ನೂ ಒಂದು ಪಾಠಾವಿದ್ದು, ಅದರಲ್ಲಿ ಅರ್ಜುನನ ಸ್ಥಾನದಲ್ಲಿ ಸೂಲಿದೇವ ಬರುತ್ತಾನೆ. ಉಳಿದೆಲ್ಲ ಅಂಶಗಳಲ್ಲಿ ಆಪಾಠ ಈ ಹಾಡಿನಿಂದ ಭಿನ್ನವಾಗಿಲ್ಲ.

. ಕುಸುಮಾಲಿ :        

ದ್ರೌಪದಿಯು ಪಟ್ಟ ಮಂಚದಲ್ಲಿ ಕುಳಿತು, ತಾಂಬೂಲ ಸೇವಿಸುವಾಗ, ಅರ್ಜುನನ್ನನ್ನು ಕುರಿತು, “ಯಾವ ನಾರಿ ಚಂದ, ಯಾವ ನಾರಿ ಅಂದ; ಯಾವ ನಾರಿಯ ಮೇಲೆ ನಿಮಗೆ ಕಡುಮೋಹ?” ಎಂದು ಪ್ರಶ್ನಿಸುತ್ತಾಳೆ. ಪ್ರತ್ಯುತ್ತರವಾಗಿ ಅರ್ಜುನ, “ಅಂದಕ್ಕೆ ದ್ರೌಪದಿ ಚೆಂದಕ್ಕೆ ಕುಸುಮಾಲಿ, ಅ ಕುಸುಮಾಲಿಯ ಮೇಲೆ ನನಗೆ ಕಡುಮೋಹ” ಎನ್ನುತ್ತಾನೆ. ಈ ಉತ್ತರದಿಂದ ಕಸಿವಿಸಿಗೊಂಡ ದ್ರೌಪದಿ, “ಕುಸುಮಾಲಿ ತೋಟದಲ್ಲಿರುವ ತಾಟಗಿತ್ತಿ. ಅವಳ ಮೇಲೆ ಜೋಗಿ ಜಂಗಮರ ಒಲುಮೆಯೆ?” ಎನ್ನುತ್ತಾಳೆ. ದ್ರೌಪದಿಯ ಮಾತನ್ನು ಕೇಳಿದ ಅರ್ಜುನ ಕೂಡಲೇ ಅಲ್ಲಿಂದ ಹೊರಟೇ ಬಿಡುತ್ತಾನೆ. ಅರ್ಜುನನು ವೇಷ ಮರೆಸಿಕೊಂಡು ಜೋಗಿಯ ವೇಷ ತೊಟ್ಟು, ತಂಬೂರಿ ಹಿಡಿದು ತಾಯಿ ಕುಂತಿಯ ಮನೆಗೆ ಬಂದು, ತಂಬೂರಿ ಬಾರಿಸಿ ಕುಣೀಯುತ್ತಾನೆ. ಅಲ್ಲಿಂದ ಧರ್ಮರ ಮನೆಗೆ ಬಂದು ಕುಣಿದು ಕುಸುಮಲಿಯ ಮನೆಗೆ ಹೋಗುತ್ತಾನೆ.

ಕುಸುಮಾಲಿ ಹೂವಿನ ಹಕ್ಕಲಲ್ಲಿ ಮಲ್ಲಿಗೆ ಕೊಯ್ಯುವಾಗ, ಅವಳೆಡೆ ಬೈರಾಗಿ ಬರುತ್ತಿರುವುದನ್ನು  ಕಂಡು ಹೌಹಾರುತ್ತಾಳೆ. ಕೊಯ್ದು ಹೂವನ್ನೆಲ್ಲ ಬದಿಗೊಗೆದು ತನ್ನರಮನೆಗೆ ಬಂದು, ಬಾಗಿಲು ಕಾಯುವವರನ್ನು ಕೂಗಿ, “ಎಂದೂ ಬರದೆಯಿದ್ದ ಜೋಗಿಯೊಬ್ಬ ಬಂದಿದ್ದಾನೆ. ಆ ಜೋಗಿಯ ಲೂಟಿಹಿರಿದಾಗಿದೆ. ಅವನಿಗೆ ಪ್ರವೇಶವನ್ನು ನೀಡಕೂಡದು”.ಎಂದು ಮಾಳಿಗೆಗೆ ಹೋಗುತ್ತಾಳೆ.

ಇತ್ತ ಬೈರಾಗಿ ಕುಸುಮಾಲಿಯ ಮನೆಗೆ ಬಂದು ತಡೆದ ಬಾಗಿಲನ್ನು ಬಿಡಬೇಕೆನ್ನುತ್ತಾನೆ. ಬಾಗಿಲ ಕಾಯುವವರು, “ಬಾಗಿಲು ಬಿಡಲಿಕ್ಕೆ ಅಮ್ಮನಪ್ಪಣೆ ಬೇಕು.” ಆಗ ಜೋಗಿ, “ನಾನಉ ನಿಮಗೂ, ನಿಮ್ಮಮ್ಮನಿಗೂ ಹಾಗೂ ನಿಮ್ಮ ಸಂಬಳ ಎಲ್ಲದಕ್ಕೂ ಕರ್ತನು” ಎಂದು  ಒಳ ಪ್ರವೇಶಿಸಿ ಚಕ್ರಪಡಿ ಹೊಯ್ದು ಕೂಡ್ರುತ್ತಾನೆ. ಆಗ ಕುಸುಮಾಲಿ ಹಿಂಬಾಗಿಲಿನಿಂದ ದಾಸಿಯರನ್ನು ಕರೆದು, “ಜೋಗಿಯ ಲೂಟಿ ಆತಿಯಾಗಿದೆ: ಅವನಿಗೆ ಪಡಿಕೊಟ್ಟು ಕಳಿಸಿಬಿಡಿ” ಎನ್ನುತ್ತಾಳೆ. ದಾಸಿಯರು ಪಡಿಕೊಡ ಹೋದರೆ, “ನಿಮ್ಮ ಕೈ ಪಡಿಯನ್ನು ಮುಟ್ಟುವ ಜೋಗಿಯು ನಾನಲ್ಲ: ನಿಮ್ಮಕ್ಕನ ಕೈಪಡಿಯೇ ಬೇಕು”ಎನ್ನುತ್ತಾನೆ. ಅದಕ್ಕೆ ದಾಸಿಯರು, “ನಮ್ಮಕ್ಕನು ಮಠದಲ್ಲಿರುವ ಹಿರಿಯಗುರುಗಳಿಗಲ್ಲದೇ ನಿಮ್ಮಂಥವರಿಗೆ ಪಡಿ ಕೊಡುವುದಿಲ್ಲ” ಎನ್ನುತ್ತಾರೆ. ಜೋಗಿ ತನ್ನ ಹಠ ಬಿಡಲಿಲ್ಲ. ಈ ವಿಷಯವನ್ನು ದಾಸರಿಯರು ಕುಸುಮಾಲಿಗೆ ತಿಳಿಸುತ್ತಾರೆ. ಇದನ್ನು ತಿಳೀದ ಕುಸುಮಾಲಿ ಕಣ್ಣಿರಿಡುತ್ತಾಳೆ. ತಾನುಟ್ಟ ತಟ್ಟೆ ಬಿಟ್ಟು, ಸಾದಾ ಹುಡುಪು ತೊಟ್ಟು, ಕಟ್ಟಿದ ಮಂಡೆ ಬಿಚ್ಚಿ, ಅಂದ  ಕೆಡಿಸಿಕೊಂಡು ಹೋಗಿ, “ಇಕ್ಕೊಳೆ ಜೋಗಿ ಪಡಿದಾನ” ಎನ್ನುತ್ತಾಳೆ. ಜೋಗಿ, “ಇನ್ನೊಂದು ಮೆಟ್ಟಿಲಿಳಿದು,  ಒಂದು ಪಡಿಕೊಟ್ಟರೆ, ನಿನ್ನ ಮುತ್ತೈದೆತನಕ್ಕೆ ಹರಸುತ್ತೇನೆ” ಎನ್ನುತ್ತಾನೆ. ಅದಕ್ಕೆ ಕುಸುಮಾಲಿ, “ಎಲೇ ಜೋಗಿ ನನ್ನ ಮುತ್ತೈದಿತನಕ್ಕೆ ನೀನೇನು ಹರಸುತ್ತೀಯೆ? ನನ್ನ ಮಾವನ ಮಗನು ಸುಖಬಾಳಿ ಇದ್ದರೆ, ನನ್ನ ಮುತ್ತೈದಿತನಕ್ಕೆ ಕಡಿಮೆಯಿಲ್ಲ” ಎಂದು ಇನ್ನೊಂದು ಮೆಟ್ಟೆಲಿಳಿದು ಪಡಿಕೊಂಡು ಕೊಳ್ಳಲು ಹೇಳುವಳು. ಆಗ ಜೋಗಿ,  “ಮತ್ತೊಂದು ಮೆಟ್ಟಿಲಿಳಿದರೆ ನಿನ್ನ ಪುತ್ರ ಸಂತಾನಕ್ಕೆ ಹರಸುತ್ತೇನೆ ” ಎನ್ನುತ್ತಾನೆ. ಕುಸುಮಾಲಿ ಇನ್ನೊಂದು ಮೆಟ್ಟಿಲಿಳಿದು ಪಡಿಕೊಡ ಹೋದಾಗ ಜೋಗಿ, “ಅಕ್ಕಿ ತೆಗೆದುಕೊಳ್ಳಲಿಕ್ಕೆ ಜೋಳಿಗೆಯಿಲ್ಲ. ನೀನೇ ಎಸರಿಗೆತ್ತು” ಎನ್ನುತ್ತಾನೆ.  “ಎಸರೆತ್ತಲಿಕ್ಕೆ ಮನೆಯಲ್ಲಿ ಅತ್ತೇ-ಮಾವನಿಲ್ಲ: ಕೈ  ಹಿಡಿದ ಗಂಡನೂ ಇಲ್ಲ: ಮಠದ ಜಗಲಿಗೆ ಹೋಗು” ಎನ್ನುತ್ತಾಳೆ ಕುಸುಮಾಲಿ.  ಜೋಗಿ ಹಠ ಬಿಡುವುದಿಲ್ಲ. ಕುಸುಮಾಲಿಯನ್ನು ಕುರಿತು, “ಗೋವೆಗೆ ಹೋಗೋಣ ಬರುತ್ತೀಯೆನು? ಹದಿನಾರು ಗೋವೆಯ ದಂಡೆಯನ್ನು ಮುಡಿಸುತ್ತೇನೆ ಎಂದು ಕೇಳುತ್ತಾನೆ. ಅದಕ್ಕುತ್ತರವಾಗಿ ಕುಸುಮಾಲಿ, “ತನ್ನ ಮಾವನ ಮಗ ಬದುಕಿದ್ದರೆ, ಅದಕ್ಕೇನು ಬರಗಾಲ” ಎನ್ನುತ್ತಾಳೆ. “ಆಡಾಡಿದ ಮಾತನ್ನು ಗೆಲ್ಲುತ್ತೀಯೆ. ಆದರೆ ಹಳ್ಳದಾಟುವಾಗ ನನ್ನನ್ನು ನೆನೆದುಕೊಳ್ಳುವೆ” ಎನ್ನುತ್ತಾನೆ ಸನ್ಯಾಸಿ. “ಹಳ್ಳದಾಟುವಾಗ ಅತ್ತೆ ಮಾವನನ್ನು ನೆನೆಯುತ್ತೇನೆ. ಕೈ ಹಿಡಿದ ಪುರುಷನನ್ನು ನೆನೆಯುತ್ತೇನೆ. ಎಲೆ “ಸೋರೆ ಬುರುಡಿ ” ನಿನ್ನನ್ನಾರು ನೆನೆಯುತ್ತಾರೋ” ಎಂದು ಕುಸುಮಾಲಿ, ಮಾಳಿಗೆಯಿಂದ ಅಮೃತಗಿಂಡಿ ತಂದು ಜೋಗಿಯ ಮೇಲೆ ತಳೆಯುತ್ತಾಳೆ. ಜೋಗಿಗೆ “ಸುಮ್ ನಿದ್ರೆ; ಕವಿಯುತ್ತದೆ.

ಹಿಂಬಾಗಿಲಿನಿಂದ ಕುಸುಮಾಲಿ ಕುಂತಿಯ ಮನೆಗೆ ಹೋಗಿ, “ಎಂದೂ ಇಲ್ಲದ ಜೋಗಿಯೊಬ್ಬ ಬಂದಿದ್ದಾನೆ. ಅವನ ಲೂಟಿ ಅತಿಯಾಗಿದೆ; ಅವನಿಗೇನು ಮಾಡಿ ಕಳಿಸಲಿ? ಹೊಡೆದು ಬಡಿದು ಕಳಿಸಲೇ?” ಎಂದು  ಕೇಳುತ್ತಾಳೆ. ಕುಂತಿ, “ಹೊಡೆದು ಬಡಿದು ಕಳಿಸಿದರೆ, ನಿನ್ನಣ್ಣ ಸೂಳಿಸುಕ್ರನಿಗೆ ಕುಂದುಬರುವುದು. ಅವನಿಗೆ ಅಡಿಗೆಯಿಟ್ಟು ಬಡಿಸಿ ಕಳಿಸು” ಎನ್ನುತ್ತಾಳೆ. ಆಗ ಕುಸುಮಾಲಿ, “ಗಂಡು ರೂಪದಲ್ಲಿ ಚೆಲುವನಾದ ಪುಂಡುಗಾರನಾದ ನಿಮ್ಮ ಮಗ ಹೆಂಡಿರನ್ನು ಅಸಮಾನವಾಗಿ ಬಳಸುತ್ತಿದ್ದಾನೆ” ಎಂದು ಸಿಟ್ಟಿನಿಂದ ಹೇಳಿ ಧರ್ಮರೆಡೆ ಬರುತ್ತಾಳೆ. ಅವನಿಂದಲೂ ಕುಂತಿಯಿಂದ ಬಂದ ಉತ್ತರವನ್ನೇ ಪಡೆಯುತ್ತಾಳೆ. ಆಗ ಕುಸುಮಲಿ ಕೇದಿಗೆ ಗರಿಯೊಂದನ್ನು ತೆಗೆದುಕೊಂಡು, “ಇಬ್ಬರ ಮಧ್ಯದಲ್ಲಿ ನಾನೊಬ್ಬಳೆ ತಂಗಿ  ನಿಮಗೆ. ಈ ಹೊತ್ತು ಮಧ್ಯಾಹ್ನದೊಳಗೆ ನೀವಿಲ್ಲಿಗೆ ಬರದಿದ್ದಲ್ಲಿ ನಾನು ಪ್ರಾಣ ತೆಗೆದುಕೊಳ್ಳುತ್ತೇನೆ”. ಎಂದು ಓಲೆಬರೆದು ಗಿಳಿಗಳ ಹತ್ತಿರ ಕಳಿಸುತ್ತಾಳೆ. ಸೂಲಿಸುಕ್ರ ಪತ್ರವನ್ನೋದಿ ತನ್ನ ತಾಯಿಯ ಹತ್ತಿರ ಪತ್ರದ ಪ್ರಸ್ತಾಪ ಮಾಡುತ್ತಾನೆ. “ಹೆಣ್ಣು ಮಕ್ಕಳು ಹೊತ್ತಿಗೆ ಹನ್ನೆರಡು ನೆನಸುತ್ತಾರೆ ಅವರ ಮಾತು ಹೂತುಕೊಂಡು ಹೋಗಬಾರದು” ಎನ್ನುತ್ತಾಳೆ. ಆಗ ಸೂಲಿಸುಕ್ರ “ತಂಗಿ ಮನೆಗೆ ಹೊದ ಹೊರತು, ನನ್ನ ಕಣ್ಮನಗಳು ತುಂಬವು. ತಂಗಿಯ ಮನೆಗೆ ಹೋಗಿ ಬರುತ್ತೇನೆ. ಎಂದು ಕೈಯಲ್ಲಿ ಬೆಳ್ಳಿ ಖಡ್ಗ ಹಿಡಿದು,  ಆನೆಯೇರಿ  ತಂಗಿಯರಮನೆಗೆ ಹೋಗುತ್ತಾನೆ. ಆಗ ಕುಸುಮಾಲಿ , ಅಮೃತ ನೀರು ಚಿಮುಕಿಸಿ ಜೋಗಿಯನ್ನು ಎಚ್ಚರಿಸುತ್ತಾಳೆ. ಜೋಗಿ ಹಳ್ಳದೆಡೆ ಹೋಗಿ, ತನ್ನ ಜೋಗಿ ವೇಷವನ್ನು ಕಳಚಿ ನೀರಿನಲ್ಲಿ ಬಿಟ್ಟು, ಅರ್ಜುನನ ರೂಪದಲ್ಲಿ ಕುಸುಮಾಲಿಯೆಡೆಗೆ ಬರುತ್ತಾನೆ. ಅಗಸೂಲಿ   ಸುಕ್ರನು ಅರ್ಜುನನ್ನು ಕುರಿತು, “ಹೆಂಡಿರನ್ನು ಆಳುವ ಗಂಡರಲ್ಲಿ ಚೆಲುವನೇ, ನನ್ನ ತಂಗಿ ನಿ ನಿನಗೆ ಬೇಡವಾದರೆ ಬಿಡಬಹುದು.” ಎನ್ನುತ್ತಾನೆ. ಆಗ ಅರ್ಜುನ “ಭಾವಾ ನೀನು ನಿನ್ನ ಹೆಂಡತಿಯಿನ್ನು ಬಿಟ್ಟರೆ, ನಾನು ನಿನ್ನ ತಂಗಿಯನ್ನು ಬಿಡುತ್ತೇನೆ” ಎನ್ನುತ್ತಾನೆ.  ಈ ಮಾತಿನಿಂದ ಸಿಟ್ಟಿಗೆದ್ದ ಸೂಲು ಸುಕ್ರನು ತನ್ನ ಬೆಳ್ಳಿಯ ಖಡ್ಗವನ್ನು ಹಿರಿದನು. ಆಗ ಕುಸುಮಾಲಿ ಅಣ್ಣನನ್ನು ತಡೆದು, “ಅಣ್ಣ ಸಿಟ್ಟನ್ನು ಸಹಿಸಿಕೋ. ನಿನ್ನ ಸಿಟ್ಟಿನಿಂದ ನನ್ನ ಮುತೈದಿತನ ಅಳಿಯುತ್ತದೆ  ಎನ್ನುತ್ತಾಳೆ. ಆಗ ಸೂಲಿಸುಕ್ರ ತನ್ನಲ್ಲಿಯೇ “ತಾಯಿ ಹೆಣ್ಣು ಮಕ್ಕಳ ಮಾತನ್ನು ಹೊರಬಾರದೆಂದಿದ್ದಳು” ಎಂದು ಕೊಂಡು, ಹಿರಿದ ಖಡ್ಗವನ್ನು ಹಾಗೆಯೇ ಒರೆಯಲ್ಲಿಡಬಾರದೆಂದು ಖಡ್ಗಕ್ಕೊಂದು ಆಲದ ಮರವನ್ನು ಆಹುತಿ ಕೊಟ್ಟು ಒರೆಗೆ ಸೇರಿಸುತ್ತಾನೆ, ಕುಸುಮಾಲಿ ಆರತಿ ಬೆಳಗುತ್ತಾಳೆ. ಸೂಲಿಸುಕ್ರನ ದಂಡು ಹಿಂದಿರುಗುತ್ತದೆ.

ಇತ್ತ ಕುಸುಮಾಲಿ ಹಲವು ಬಗೆಯ ಮೇಲೊಗರ ಮಾಡಿ, ಅರ್ಜುನನಿಗೆ ಬಡಿಸುತ್ತಾಳೆ. ಉಣ್ಣುವಾಗ ಅರ್ಜುನ “ಅನ್ನ ಬಡಿಸುವಾಗ ಯಾರನ್ನು ನೆನಸಿದೆ? ನನಗೆ ಬಡಿಸಿದ ಅನ್ನ ಹೆಚ್ಚಾಗಿದೆ. ಇಬ್ಬರೂ ಕುಳಿತು ಒಟ್ಟಿಗೆ ಉಣ್ಣೋಣ” ಎಂದು ಕುಸುಮಾಲಿಯ ನಳಿತೋಳು ಹಿಡಿಯುತ್ತಾನೆ. ಕುಸ್ಮಾಲಿ ಉಪ್ಪು ತರುವ ನೆಪಹೆಳಿ ಅವನಿಂದ ಬಿಡಿಸಿಕೊಂಡು ಬಸ್ತಿಯೆಡೆಗೆ ಹೋಗುತ್ತಾಳೆ. ಬಸ್ತಿಯನ್ನು ಪೂಜಿಸಿ, “ಬಸ್ತಿ ನಾನು ನಿನ್ನ ಒಡನಲ್ಲಿ ಬರುತ್ತೇನೆ” ಎನ್ನುತ್ತಾಳೆ.  ಬಸ್ತಿ ಹತ್ತಿದ ಮೇಲೆ  ಬಲಿ ಕೂಳೂ ತಿಂದ ಮೇಲೆ ಬಸ್ತಿಯಿಂದ ಕೆಳಗಿಳಿಯ ಕೂಡದು ನೀನು ನಿನ್ನ ಮನೆಗೆ ಹೋಗು” ಎನ್ನುತ್ತವೆ ಬಸ್ತಿಯು ಮೇಲ್ಗಡೆಯ ಗಿಳಿಗಳು. ಕುಸುಮಾಲಿ ಬಸ್ತಿಯ ಜೊತೆಯಲ್ಲಿಯೇ ಬರುತ್ತೇನೆನ್ನುತ್ತಾಳೆ. ಕುಸುಮಾಲಿಯ ಈ ಮಾತುಗಳನ್ನು ಆಲಿಸಿದ ಗಿಳಿಗಳು ಅರ್ಜುನನನಿಗೆ ಈ ವಿಷಯ ತಿಳಿಸುತ್ತವೆ. ಆಗ ಅರ್ಜುನ ಬಸ್ತಿಯೆಡಗೆ ಹೋಗಿ ಬಸ್ತಿಗೆ ಕೈಮುಗಿಯುತ್ತಾನೆ.  ಕುಸುಮಾಲಿಯನ್ನು ಕುರಿತು, “ಕುಸುಮಾಲಿಯ ಮೈ ವರ್ಣವು ನಿಂಬಿಯ ಹಣ್ಣಿನಂತೆ, ಮೈ ಮೇಲೆ ಒಂದೂ ಕಲೆಯಿಲ್ಲ. ನೀನು ಹೀಗಿರುವಯೆಂದು ನಾನರಿಯಲಿಲ್ಲ ಕುಸುಮಾಲಿ ಮನೆಗೆ ಬಂದು ಬಿಡು ಹೋಗೋಣ ಎನ್ನುತ್ತಾನೆ.”ಬಸ್ತಿಗೆ ಬಂದು ಬಲಿ ಕೂಳು ತಿಂದ ಮೇಲೆ ಬಸ್ತಿಯಿಂದ ಕೆಳಗಿಳಿಯುವುದಿಲ್ಲ.  ನೀವು ನಿಮ್ಮರಮನೆಗೆ ಹೋಗಿ, ನಿಮಗೆ ಕಟ್ಟಿದ ಮನೆಯಿದೆ: ಹೂಡಿದ ಒಲೆಯಿದೆ: ಕೂಡಿ ಆಡೋಣವೆಂದರೆ ಮತ್ತೇ ಹೆಂಡಿರಿದ್ದಾರೆ” ಎನ್ನುತ್ತಾಳೆ ಕುಸುಮಾಲಿ. ಅರ್ಜುನ “ಮನೆಗೆ- ಹೋಗೋಣ” ಎಂದು ಕುಸುಮಾಲಿಯ ರಟ್ಟೆ ಎಳೆಯುತ್ತಾನೆ. ಕುಸುಮಾಲಿ ಅರಿಸಿಣ ಎಲೆಯಾಗಿ ಹುಸಿದು ಬಂದಳು. ಅರ್ಜುನನನ್ನು ಕುರಿತು, “ವರ್ಷಕ್ಕೊಮ್ಮೆ ಸೂರ್ಯೊದಯವಾಗುವಾಗ ಸುರಗಿಯ ಹೂವಾಗಿ ಬರುತ್ತೇನೆ. ಹೆಣ್ಣಿನ ಮುಡಿಯ ಮೇಲೆ ಮೆರೆಯುತ್ತೇನೆ. ಆಗ ನನ್ನನ್ನು ನೋಡಿ ನೀವು ಸಂತೋಷ ಪಟ್ಟರಾಯ್ತು. ನೀವೀಗ ಅರಮನೆಗೆ ಹೋಗಿ “ಎನ್ನುತ್ತಾಳೆ. ಅರ್ಜುನ ನಿರುಪಾಯನಾಬಿ ಒಬ್ಬನೆ ಮನೆಗೆ ಹಿಂದಿರುಗುತ್ತಾನೆ.

ಡಾ|| ಬಿ.ಎಸ್. ಗದ್ದಗಿಮಠರ ಅರ್ಜುನ ಜೋಗಿಯ ಹಾಡುಗಬ್ಬ[2]ದಲ್ಲಿ ಅರ್ಜುನನು ಚದುರಂಗಿ ಕುಸುಮಾಲಿಯರನ್ನು ಮದುವೆಯಾದ ಮೇಲೆ ಹನ್ನೆರಡು ವರ್ಷ ಬಿಟ್ಟಿದ್ದು, ಆಮೇಲೆ ಜೋಗಿಯ ವೇಷವನ್ನು ಧರಿಸಿ, ಅವನು ಅವನಲ್ಲಿಟ್ಟಿರುವ ನಿರ್ವ್ಯಾಜ್ಯ ಪ್ರೇಮವನ್ನು ಪರೀಕ್ಷಿಸಿ, ಅವರನ್ನು ಕರೆ ತರುವ ವಿಷಯ ಕಾವ್ಯಮಯವಾಗಿ ವರ್ಣಿತವಾಗಿದೆ. ಆ ಹಾಡುಗಬ್ಬದಲ್ಲಿ ಚದುರಂಗಿ ಕುಸುಮಾಲೆಯರ ವಿರಹ ವರ್ಣಿತವಾಗಿದೆ. ಆ ಹಾಡುಗಬ್ಬದಲ್ಲಿ ಚದುರಂಗಿ ಕುಸುಮಾಲೆಯರ ವಿರಹ ವರ್ಣನೆ ಹಾಡಿನ ಸ್ವಾರಸ್ಯಕರ ಅಂಶಗಳಲ್ಲೊಂದು. ತಾಯಿ ಅಣ್ಣ ತಮ್ಮಂದಿರನ್ನೆಲ್ಲ ಮರೆತು ದ್ರೌಪತಿಯ ಮೋಹಪಾಶದಲ್ಲಿ ಅರ್ಜುನನಿಗೆ ಗಿಳಿಗಳಿಂದ ಚದುರಂಗಿ ಕುಸುಮಾಲೆಯರ ವಿರಹ ವಿಷಯ ತಿಳೀದು, ಅವರನ್ನು ಕಾಣಲು ಜೋಗಿಯ ವೇಷ ಧರಿಸಿ ಅವರ ಪ್ರೀತಿ ವಿಶ್ವಾಸಗಳನ್ನರಿತು ಅವರನ್ನು ಹಸ್ತಿನಾಪೂರಕ್ಕೆ ಅರ್ಜುನ ಕರೆತರುತ್ತಾನೆ. ಆದರೆ ಇಲ್ಲಿಯ ಕುಸುಮಾಲಿಯ ಹಾಡು ಭಿನ್ನ ಅಶಯಗಳಿಂದ ಅರ್ಜುನ ಜೋಗಿಯ ಹಾಡುಗಬ್ಬದಿಂದ ಬೇರೆಯಾಗಿ ನಿಲ್ಲುತ್ತದೆ.

ಕುಸುಮಾಲಿಯ ಹಾಡಿನಲ್ಲಿ, ಅರ್ಜುನ ಕುಸುಮಾಲೆಯನ್ನು ಮದುವೆಯಾಗಿ ಹನ್ನೆರಡು ವರ್ಷಗಳವರೆಗೆ ಬಿಟ್ಟ ಪ್ರಸ್ಥಾಪವಿಲ್ಲ. ಚದುರಂಗಿಯ ಪ್ರವೇಶವೂ ಇಲ್ಲ. ಚದುರಂಗಿ ಕುಸುಮಾಲೆಯರ ವಿರಹ ಪ್ರಸ್ತಾಪವರ್ಣನೆಯನ್ನು ಅರ್ಜುನ ಗಿಳಿಗಳ ಮೂಲಕ ಕೇಳುವ ಘಟನೆ ಮಾಯವಾಗಿದೆ. ಕುಸುಮಾಲಿ ಅರ್ಜುನ ಜೋಗಿಗೆ ಸುಮ್ಮನಿದ್ರೆ ಕಲಿಸುವುದು, ತನ್ನಣ್ಣ ಸೂಲಿ ಸುಕ್ರನನ್ನು ಕರೆಯಿಸುವುದು, ಸೂಲಿಸುಕ್ರ ಅರ್ಜುನನ ವಿಷಯದಲ್ಲಿ ಅಸಮಾಧಾನ ತಾಳುವುದು.  ಕುಸುಮಲಿ ಬಸ್ತಿಯೇರಿ, ಬಲಿಗೂಳೂ ತಿಂದು ಅರ್ಜುನನಿಗೆ ದಕ್ಕದೇ ಹೋಗುವುದು, ಅವಳು ಅರಿಸಿಣ, ಸುರಗಿಯ ಹೂವಾಗಿ ಕಣ್ಮರೆಯಾಗುವುದು. ಈ ಮುಂತಾದ ಹೊಸ ಅಶಯಗಳಿಂದ ಕುಸುಮಾಲಿಯ ಹಾಡು ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಂಡಿದೆ ಇವೆರಡು ಹಾಡುಗಳನ್ನು ಅಮುಲಾಗ್ರವಾಗಿ ಪರಿಶೀಲಿಸಿದಾಗ ನಮಗನಿಸುವುದು.

ಈ ಸಂಕಲನದ ಸುಭದ್ರೆಯ ಹಾಡಿನಲ್ಲಿಯೂ ಅರ್ಜುನ ಜೋಗಿಯ ವೇಷ ತೊಡುತ್ತಾನೆ. ಅರ್ಜುನನ ಈ ವೇಷ ಪರಿವರ್ತನೆಗೆ  ಕಾರಣ ಸುಭದ್ರೆಯ ಪ್ರೀತಿಯ ಅಗಾಧತೆಯನ್ನು ಅರಿತು ಅವಳನ್ನು ವರಿಸುವುದು.  ಆದರೆ ಕುಸುಮಾಲಿಯ ಹಾಡಿನಲ್ಲಿ ಈ ಮೊದಲೇ ಕೈ ಹಿಡಿದ ನೆಚ್ಚಿನ ಮಡದಿಯ ಪ್ರಮಾತಿಶಯವನ್ನು ಪರೀಕ್ಷಿಸಿ, ತನ್ನ ಮಡದಿ ದ್ರೌಪದಿಗೆ ತೋರಿಸಲು ಅರ್ಜುನ ಸಂನ್ಯಾಸಿಯಾಗುತ್ತಾನೆ.  ಸುಭದ್ರೆಯ ಹಾಡಿನಲ್ಲಿ ಅರ್ಜುನನು ಸಂನ್ಯಾಸಿಯಾಗಿ, ಇನ್ನೂ ಕೈಹಿಡಿಯದ ಸುಭದ್ರೆಯನ್ನು ಪರೀಕ್ಷಿಸಿ ಕೈಹಿಡಿದರೆ, ಕುಸುಮಾಲಿಯ ಹಾಡಿನಲ್ಲಿ ಅರ್ಜುನನು ಈ ಮೊದಲೇ ಕೈ ಹಿಡಿದ ಮಡದಿಯ  ಪ್ರೇಮ ಪರೀಕ್ಷೆಗೆ ಹೊರಟು, ಅವಳು ಕೈ ತಪ್ಪಿಹೋಗುವ ಪ್ರಸಂಗವನ್ನು ತಂದುಕೊಳ್ಳುತ್ತಾನೆ. ಡಾ|| ಗದ್ಗೀಮಠರ ಅರ್ಜುನ ಜೋಗಿಯ ಹಾಡುಗಬ್ಬದಲ್ಲಿ ಅರ್ಜುನ ಕೊನೆಯಲ್ಲಿ ವಿರಹದಿಂದ ಬೆಂದ ಚದುರಂಗಿ ಕುಸುಮಾಲೆ-ಯರನ್ನು ತನ್ನೆಡೆ ಕರೆಸಿಕೊಳ್ಳುತ್ತಾನೆ.

ಕ.ರಾ.ಕೃ. ಅವರ “ಜೋಗಯ್ಯ” ಹಾಡು ಕುಸುಮಾಲಿ, ಅರ್ಜುನ ಜೋಗಿಯ ಹಾಡುಗಬ್ಬ, ಹಾಗು ಸುಭದ್ರೆಯ ಹಾಡುಗಳಿಂದ ಭಿನ್ನವಾಗಿದೆ: , ಹನ್ನೆರಡು  ವರ್ಷ ಊರು ಬಿಟ್ಟಿದ ಅರ್ಜುನ ಹಸ್ತಿನಾಪೂರಕ್ಕೆ ಬರುತ್ತಾನೆ. ಆದರೆ ಯಾವ ಘನ ಉದ್ದೇಶದಿಂದ ಅಲ್ಲಿಗೆ ಬರುತ್ತಾನೆನ್ನುವುದು ಸ್ಪಷ್ಟವಾಗುವುದಿಲ್ಲ. ಅರ್ಜುನ ಜೋಗಿಯ ಸುಂದರ ರೂಪಿಗೆ ಮರುಳಾದ ಬಾಲೆಯರ, ಗಂಡುಳ್ಳ ಗರತಿಯರ ಮನ ಚಂಚಲವಾದ ಅಂಶ ಈ ಹಾಡಿನಲ್ಲಿ ಸೊಗಸಾಗಿ ವ್ಯಕ್ತವಾಗಿದೆ. ಅರ್ಜುನ ಜೋಗಿ ತನ್ನ ತಾಯಿಯ ಹತ್ತಿರವೆ ಭಿಕ್ಷೆ ಕೇಳುವುದು. ಜೊತೆಗೆ ಹೆಣ್ಣು ಬೇಡುವುದು, ತಾಯಿ ಕುಂತಿ ದ್ರೌಪದಿಯಿಂದ ಜೋಗಿಗೆ ಶಾಪಕೊಡುವ ಬೆದರಿಕೆ ಹಾಕುವುದು, ದ್ರೌಪದಿಗೌಡರನ್ನು ಕಳೂಹಿಸಿ ತನ್ನನ್ನು ಕರೆಯಿಸಿಕೊಂಡಳೆಂದು ಜೋಗಿ ಕುಂತಿಗೆ ಹೇಳುವುದು. ಕೊನೆಗೆ ಕುಂತಿ ಅಡಿಗೆ ಮಾಡಿ ನಾಲ್ವರ ಜೊತೆಯಲ್ಲಿ ಜೋಗಿಗೆ ಬಡಿಸುವುದು, ಜೋಗಿ ಇನ್ನೊಬ್ಬನೆಲ್ಲಿ ಎಂದು ಕೇಳಿದಾಗ ದ್ರೌಪದಿಯ ಮನೆಯಲ್ಲಿಯ ಅರ್ಜುನನ್ನು ಕರೆತರಲು ಕಳಿಸುವುದು. ಅರ್ಜುನದ್ರೌಪದಿಯಿಂದ ಪಗಡೆಯಲ್ಲಿ ಸೋತು  ಹನ್ನೆರಡು ವರ್ಷ ಜೋಗಿಯಾಗಿ ಹೋದನೆಂದು ತಿಳಿದುಬರುವುದು. ಅನಂತರ ಶ್ರೀ ಕೃಷ್ಣ ಅರ್ಜುನ ಜೋಗಿಯ ವೇಷದ ತೆರೆಯ ಮರೆಯನ್ನು ಸರಿಸುವುದು ಈ ಮುಂತಾದ ಹೊಸ ಆಶಯಗಳಂದ ಈ ಹಾಡು ಭಿನ್ನ ಜಾಡು ಹಿಡಿಯುತ್ತದೆ.[3] ಈ ಕಥೆ ಅರ್ಜುನ ಜೋಗಿಯ  ಹಾಡುಗಬ್ಬ ಹಾಗೂ ಕುಸುಮಾಲಿ ಕಥೆಗಿಂತ ನಿಸ್ಸತ್ವವಾಗಿದೆ. ಕಥೆಯಲ್ಲಿ ಅರ್ಜುನ ಜೋಗಿಯಾದ ಹಿನ್ನಲೆಯಲ್ಲಿ ಸೊಗಸಾಗಿಲ್ಲ. ದ್ರೌಪದಿಯೊಡನೆ ಪಗಡೆಯಲ್ಲಿ ಸೋತದ್ದೆ ಅವನು ಜೋಗಿ ಯಾಗಲು ಕಾರಣ. ಪಗಡೆಯ ಪಣ ಅವಾಗಿರಬೇಕು. ಇದನ್ನು ಬಿಟ್ಟರೆ ಅವನ ಜೋಗಿಯ ವೇಷಕ್ಕೆ ಯಾವುದೇ. ಗಟ್ಟಿಯಾದ ಉದ್ದೇಶವಿದ್ದಂತೆ ತೋರುವುದಿಲ್ಲ.

ಕುಸುಮಾಲಿಯ ಕಥೆ ಮಹಾಭಾರತದಲ್ಲಿ ದೊರೆಯದು. ಈ ಹಾಡಿನಲ್ಲಿ ಬರುವ ಬಸ್ತಿಯ ಪ್ರಸ್ಥಾಪವು ಈ ಹಾಡು ಜೈನ ಪರಂಪರೆಯಿಂದ ಬಂದಿರಬೇಕೆಂಬ ಅನುಮಾನವನ್ನು ಮುಟ್ಟಿಸುತ್ತದೆ. ಗಂಡ ಹೆಂಡತಿಗೆ ತೊಂದರೆ ಕೊಟ್ಟ ಪ್ರಸಂಗದಲ್ಲಿ ಹೆಂಡತಿ ಬಸ್ತಿಗೆ ಹೋಗಿ, ದೀಕ್ಷೆ ತೊಟ್ಟು, ಸಂಸಾರದಿಂದ ವಿರಕ್ತಿ ಪಡೆಯುವ ಸಂಪ್ರದಾಯವಿದೆ. ಜೈನರಲ್ಲಿ, ಕುಸುಮಾಲಿ ದೀಕ್ಷಾ ಬದ್ಧಳಾಗಿ ಅರ್ಜುನನಿಗೆ ದಕ್ಕದೆ ಹೋದುದನ್ನು ಈ ಹಾಡಿನಲ್ಲಿ ಸೂಚಿಸಲಾಗಿದೆ.

) ನಾಲ್ವರು ಹೆಂಡಿರು

ಮೆತ್ತನೆ ಹಾಸಿಗೆಯ ಮೆಲೊರಗಿದ ದ್ರೌಪದಿ, “ನಾಲ್ಕು ಕಳಸ, ನಾಲ್ಕು ಕನ್ನಡಿ, ನೀಲ ಕುದುರೆಗಳನ್ನು”ಕನಸಿನಲ್ಲಿ ಕಾಣುತ್ತಾಳೆ. ತನ್ನ ಕನಸಿನ ವೃತ್ತಾಂತ ವನ್ನು ಅತ್ತೆ ಕುಂತಿಗೆ ವಿವರಿಸಿದಾಗ, ಕುಂತಿ, “ನಾಲ್ಕು ಕಳಸವೆನ್ನವುದು ನಾಲ್ಕು ತಂಗಿಯರು: ನೀಲ ಕುದುರೆಯೆಂದರೆ ನಿನ್ನಪತಿ. ನೀನು ಕಂಡ ಕನಸು ಹುಸಿಯಾಗದು” ಎನ್ನುತ್ತಾಳೆ. “ಮದುವೆ ಮಾಡಿಕೊಂಡು ಬಂದ ಹೆಂಡಿರಿರುವಾಗ ನಿಮ್ಮ ಮಗನಿಗೆ ಮತ್ತೆಂತಹ ಮದುವೆ? “ಎಂದು ದ್ರೌಪದಿ ವ್ಯಂಗ ನುಡಿಯುತ್ತಾಳೆ. ಅದಕ್ಕೆ ಕುಂತಿ  “ಮಾತು ಕಲಿತ ಅರ್ಜುನನು ಬೇಕಾದರೆ, ಮತ್ತೇ ಹತ್ತು ಹೆಣ್ಣನ್ನು ತಂದಾನು,ಅವನಿಗೆ ಕಳಂಕವೆನ್ನುವುದೇಇಲ್ಲ” ಎನ್ನುತ್ತಾಳೆ.  ದ್ರೌಪದಿ ಧರ್ಮರೆಡೆ ಹೋಗಿ, ಕನಸಿನ ವೃತ್ತಾಂತವನ್ನೊರೆದಾಗ ಅವರೂ ಕುಂತಿಯಂತೆಯೇ  ಉತ್ತರಿಸುತ್ತಾರೆ. ಸಿಟ್ಟಿಹಿಂದ ದ್ರೌಪದಿ ದಡದಡನೆ ಸಹದೇವನ ಮನೆಗೆ ಬಂದು ಶಕುನ ನೋಡಿಸುತ್ತಾಳೆ. ಆತನೂ, “ಅಣ್ಣನು ನಾಲ್ವರನ್ನು ಮದುವೆ ಮಾಡಿ ಕೊಂಡು ಬರುತ್ತಾನೆ. ನೀನು  ಬೆಟ್ಟ ನೆಲ್ಲೀಕಾಯನ್ನು ಚಪ್ಪರದಲ್ಲಿ ಒಪ್ಪಾಗಿ ಹರಿಗಿಸು” ಎನ್ನುತ್ತಾನೆ.

ಇದೆಲ್ಲವನ್ನೂ ಕೇಳಿದ ಅರ್ಜುನ ಚೆನ್ನಾಗಿ ಸಿಂಗರಿಸಿಕೊಂಡು, ಒಂದು ಬಾಸಿಂಗ ನಾಲ್ಕು ಮಂಗಲ ಸೂತ್ರಗಳನ್ನು ಗೌಪ್ಯವಾಗಿ ತೆಗೆದುಕೊಂಡು, ಗೌಪ್ಯವಾಗಿ  ಮೂಡನ ರಾಜ್ಯಕ್ಕೆ ಹೋಗುತ್ತಾನೆ. ಅಲ್ಲಿಯ ಜನರ ಭಾಷೆಯನ್ನು ಕಲಿತು, ಅವರ ಉಡಿಗೆ ತೊಡಿಗೆ ತೊಟ್ಟು, ಮೂಡಣ ರಾಜ್ಯದ ರಾಜನ ಮಗಳನ್ನು ಪಡೆಯುತ್ತಾನೆ. ಅನಂತರ ತೆಂಕಣ, ಬಡಗಣ, ಪಡುಗಣ, ರಾಜ್ಯಗಳಿಗೆ ಹೋಗಿ ಆಯಾ ದೇಶ ಭಾಷೆಗಳನ್ನು ಕಲಿತು, ಅಲ್ಲಿಯ ವೇಷ- ಭೂಷಣಗಳನ್ನು ತೊಟ್ಟು, ಆಯಾ ದೇಶಗಳ ದೊರೆಗಳ ಮನಸ್ಸನ್ನು ಸೊರೆಗೊಂಡು ಅವರ ಮಕ್ಕಳನ್ನು ಮದುವೆಯಾಗಿ ತನ್ನ ನಾಡಿಗೆ ಹಿಂತಿರುಗುತ್ತಾನೆ. ತಾನು ಮದುವೆ ಮಾಡಿಒಕೊಂಡು ಬಂದ ಮಡದಿಯರನ್ನು, ಈಳೆ, ಬಾಳೆ, ಕಂಚಿ,ನಿಂಬೆ ಮುಂತಾದ ಒಂದೊಂದು ಬನದಲ್ಲಿ ಒಬ್ಬೊಬ್ಬರನ್ನು ನಿಲ್ಲಿಸಿ ಮನೆಗೆ ಬರುತ್ತಾನೆ. “ಈ ಮನೆಯಲ್ಲಿ ಅಕ್ಕ-ತಂಗಿಯರು ಯಾರಿದ್ದಾರೆ: ಹಿರಿಯರು ಯಾರಿದ್ದಾರೆ? ಎಲೇ ದ್ರೌಪದಿ ತಂಬಿಗೆಯಲ್ಲಿ ಉದಕವನ್ನು ತೆಗೆದುಕೊಂಡು ಬಾ” ಎನ್ನುತ್ತಾನೆ. ಅದಕ್ಕೆ ದ್ರೌಪದಿ “ನಿಮಗೊಂದು ತಂಬಿಗೆ ಉದಕ ಕೊಡಲಿಕ್ಕೆ ಇಲ್ಲಾರಿದ್ದಾರೆ. ನೀವು ಬಾಳಿ, ಈಳೆ, ಕಂಚಿ, ನಿಂಬೇಬನಕ್ಕೆ ಹೋಗಿ, ಅಲ್ಲಿ  ನಿಮಗೆ ಉದಕ ಕೊಡುವವರಿದ್ದಾರೆ” ಎಂದು ಕಟೂಕ್ತಿಯ ನ್ನಾಡುವಳೂ.

ಈ ಮಾತು ಕೇಳಿದ  ಅರ್ಜುನ ಕಲ್ಲಿಯ ಕೊಟ್ಟಗೆಗೆ ನಡೆದು, ಕವ್ಲಿಯನ್ನು ಬಿಟ್ಟು ದ್ರೌಪದಿಯ  ಬೆಳೆಸಿದಹೂಬನಕ್ಕೆ ಬಿಡುತ್ತಾನೆ. ಮನೆಯ ಬಾಗಿಲಿಲ್ಲಿ ನಿಂತು, “ಈ ಮನೆಯಲ್ಲಿ ಹಿರಿಯರಿದ್ದಾರೆ. ದ್ರೌಪದಿಯ ಹೂವಿನ ತೋಟವನ್ನು ದನಮೆಂದಿತು” ಎನ್ನುತ್ತಾನೆ. ದ್ರೌಪದಿ ಮಾಳಿಗೆಯಿಂದಿಳಿದು ಬಂದು ಕವ್ಲಿಯನ್ನು ಕೊಟ್ಟಿಗೆಗೆ ಹೊಡೆಯುತ್ತಾಳೆ. ಆಗ ಅರ್ಜುನ ಬಾಳೆ, ಈಳೆ, ಕಂಚಿ, ನಿಂಬೆ ಬನಗಳಲ್ಲಿ ತಾನು ನಿಲ್ಲಿಸಿ, ಬಂದ ಮಡದಿಯರನ್ನು ಕರೆದುಕೊಂಡು ಬರುತ್ತಾಳೆ. ಎಲ್ಲರೂ ಕೈ ಕಾಲು ಮುಖ ತೊಳೆದು ಒಳಗೆ ಹೋಗುತ್ತಾರೆ, ದ್ರೌಪದಿ ಎಲ್ಲರಿಗೂ ಹಾಲ್ಗಂಜಿಬಡಿಸುತ್ತಾಳೆ. ಅರ್ಜುನ ಊಟವನ್ನು ಮುಗಿಸಿ ತಾಂಬೂಲ ಮೆಲ್ಲುತ್ತ, “ನೀವಯ್ವರು ಕೊಟ್ಟ ತಾಂಬೂಲ ಮೆಲ್ಲುವ ನಾನೊಬ್ಬ ಬಡವನಾದೆ” ಎನ್ನುತ್ತಾನೆ. ಹೆಂಡಂದಿರನ್ನು ಕುರಿತು ಮತ್ತೇ ಹೇಳುತ್ತಾನೆ. “ತಂದ ಹೆಂಡಿರಾದ ನೀವು ಹೀಗೆ ಕೂಡ್ರುವುದು ಸರಿಯಲ್ಲ.ಬಾಗಿಲಸೆದೆ ತೆರೆಯಿರಿ: ಕೊಟ್ಟಿಗೆ ಸಗಣಿಯನ್ನು ತೆಗೆಯಿರಿ. ಪಾತ್ರೆಯನ್ನು ತೊಳೆಯಿರಿ.” ದೊಡ್ಡಸ್ತನದಲ್ಲಿ ಬೆಳೆದ ನಾರಿಯರು ಅರ್ಜುನನ ಈ ಮಾತನ್ನು ಒಪದೆ ಗಂಡನನ್ನು ಕುರಿತು, “ನಿಮಗೆ ನಾವು ಸರಿಯಾಗಿ ತೋರದಿದ್ದಲ್ಲಿ ನಮ್ಮನ್ನು ನಮ್ಮ ತವರಿಗಾದರೂ ಕಳಿಸಿಬಿಡಿ” ಎನ್ನುತ್ತಾರೆ.

ಈ ಕಥೆಗೆ ಯಾವುದೇ ನಿಶ್ಚಿತ ಉದ್ದೇಶವಿದ್ದಂತಿಲ್ಲ. ದ್ರೌಪದಿಯ ಕನಸಿನ ರುಜುವಾತಿಗಾಗಿಯೇ ಕಥೆ ಬೆಳೆದಂತಿದೆ. ಕಥಾವಸ್ತು ಅದರ ಬೆಳವಣಿಗೆಗ ಹಾಗೂ ಪಾತ್ರ ಪೋಷಣೆ ಸಡಿಲಾಗಿದೆ. ಕಥೆಯಲ್ಲಿ ಕುತೂಹಲ ಕೆರಳಿಸುವ ಅಂಸವಾಗಲೀ, ಕಥಾನಿರೂಪಣೆಯ ಸೊಗಸಾಗಲೀ ಇಲ್ಲದ ಪ್ರಯುಕ್ತ ಕಥೆ ಸಪ್ಪೆಯಾಗಿದೆ. ಈ ಕಥೆಯ ಪಾತ್ರಗಳ ಹೆಸರಿನ ಸಂಬಂಧವೊಂದನ್ನು ಬಿಟ್ಟರೆ, ಉಳಿದ ವಿಷಯದಲ್ಲಿ ಈ ಕಥೆಗೂ ಭಾರತ ಕಥೆಗೂ ಹೊಂದಿಕೆಯಿಲ್ಲ.

. ಕನಕಾಂಗಿ ಕಲ್ಯಾಣ

ಅಣ್ಣನ ಮನೆಯ ಬಣ್ಣದ ಜಗುಲಿಯ ಮೇಲೆ ಕುಳಿತ ತಂಗಿ ಸುಭದ್ರೆಯನ್ನು ಕುರಿತು, ಅಣ್ಣನು, “ಎಂದೂ ಬರದಿದ್ದ ತಂಗಿ ಇಂದೇನು ಅಪರೂಪಕ್ಕೆ ಬಂದಿದ್ದಿಯಲ್ಲ. ರಾಜ್ಯಬೇಕಾದರೆ ಬರೆದುಕೋ” ಎನ್ನುತ್ತಾನೆ. “ಅಣ್ಣಾ ರಾಜ್ಯವನ್ನು ನೀನೇ ಆಳಿಕೋ: ನಾನು ಬಂದದ್ದು ನಿನ್ನ ಮಗಳಿಗಾಗಿ” ಎನ್ನುತ್ತಾಳೆ ಸುಭದ್ರೆ ಅಣ್ಣ ಹೆಣ್ಣಿಗಾಗಿ ಅತ್ತಿಗೆಯನ್ನು ವಿಚಾರಿಸಲು ಹೇಳುತ್ತಾನೆ. ಸುಭದ್ರೆ ಅತ್ತಿಗೆಯ ಹತ್ತಿರ ಹೆಣ್ಣು ಕೊಡಲು ಕೇಳಿದಾಗ, ಅತ್ತಿಗೆ ನಕರಾತ್ಮಕ ಉತ್ತಮವನ್ನೀಯುತ್ತಾಳೆ. ಅತ್ತಿಗೆಯ ಮಾತಿನಿಂದ ಸಿಡಿಮಿಡಿಗೊಂಡ ಸುಭದ್ರೆ ಅಣ್ಣನ ಮನೆಯಿಂದ ಹಿಂದಿರುಗುತ್ತಾಳೆ.

ಸುಭದ್ರೆ ಮನೆಗೆ ಬಂದು ಮಗನನ್ನು ಕುರಿತು, “ನಿನ್ನ ಮಾವ ಸೊಕ್ಕಿದ್ದಾನೆ” ಎಂದು ಮಗನ ಪೌರುಷವನ್ನು ಕೆಣಕಿ ನುಡಿಯುತ್ತಾಳೆ. ಆಗ ಅಭಿಮನ್ಯು, “ಮಾವನ ಮಗಳನ್ನು ತಾರದಿದ್ದರೆ ನಾನು ಅಚ್ಚ ಪಾಂಡವರ ಮಗನಲ್ಲ” ಎಂದು ಪ್ರತಿಜ್ಞೆ ಮಾಡುತ್ತಾನೆ. ಸುಂದರವಾದ ಪೋಷಾಕನ್ನು ಧರಿಸಿ, ಬಾಸಿಂಗ ತೊಂಡಿಲುಗಳನ್ನು ತೆಗೆದುಒಂಡು ತಾಯಿಯ ಪಾದಗಳಿಗೆ ನಮಸ್ಕರಿಸಿ, ಅವಳ ಹರಕೆಯನ್ನು ಮುಡಿಯಲ್ಲಿ  ಹೊತ್ತು,ಆನೆಯೇರಿ ಮಾವನರಮನೆಗೆ ನಡೆಯುತ್ತಾನೆ.

ಮಾವನನ್ನು ಕಂಡು ಅವನ ಪಾದಗಳಿಗೆರಗುತ್ತಾನೆ. ಮಾವ, “ಆಯುಷ್ಯವಂತ ನಾಗು,ಬಲವಂತನಾಗು, ನೀನು ಕಟ್ಟಿದ ಮುಂಡಾಸಸ್ಥಿರವಾಗಲಿ” ಎಂದು ಹರಸುತ್ತಾನೆ. ಆಗ ಅಭಿಮನ್ಯು ಮಾವನನ್ನು  ಕುರಿತು, “ಹೀಗೆ ಎಲ್ಲರೂ ಹರಸುತ್ತಾರೆ.  ಈಗ ನಾನು  ಬಂದದ್ದು ನಿನ್ನ ಮಗಳಿಗಾಗಿ ” ಎಂದು ತಿಳಿಸುತ್ತಾನೆ. ಮಾವ, “ಆಕಳ ಹಾಲು  ಹೊಯ್ದು ಸಾಕಿದ ಮುದ್ದು ಮಗಳನ್ನು ಸೋದಕ್ಕೆ ಕೊಡುವುದಿಲ್ಲ”. ಎನ್ನುತ್ತಾನೆ. ಅತ್ತೆಯನ್ನು ಮಾತಾಡಿಸಿದರೆ ಅವಳು ಅಳಿಯನಿಗೆ ಮರುವುತ್ತರ ನೀಡದೇ ಒಳಗೆ ಹೋಗುತ್ತಾಳೆ.

ಇತ್ತ ಅತ್ತೆ ಮಗಳು ದುರ್ಗವನ್ನೇರಿ, ಅಭಿಮನ್ಯುವನ್ನು ನೋಡಿ, ಊರಿಗೆ ಚೆಲುವನೆಂದು ಅವಳಿಗೆ ಮನಸೋತಳು. ಪಟ್ಟಿಯನ್ನುಟ್ಟು, ಚಿನ್ನತೊಟ್ಟಳು, ಸಿಂಗಾರ ಮುಡಿದುಕೊಂಡಳೂ. ಇದನ್ನು ಗಮನಿಸಿದ ಅಭಿಮನ್ಯು. “ಚಪ್ಪರದಲ್ಲಿ ಸುಳಿದಾಡುವ ಕನಕಾಂಗಿ ಚಿನ್ನದ ವೀಳ್ಯವನ್ನು ತೆಗೆದುಕೋ ಬಾ” ಎಂದು ಅಲ್ಲಿದ್ದ ನಾರಿಯರ ಕೈಗೆ ಚಿನ್ನದ ವೀಳ್ಯ, ಚಿನ್ನದ ತೊಂಡಿಲುಗಳನ್ನು ಕೊಡುತ್ತಾನೆ. ನೋಡಿದ ಕನಕಾಂಗಿಗೆ ಮುತ್ತಿನತೊಂಡಿಲನ್ನು ಮುಡಿಸುತ್ತಾರೆ. ಇದೆಲ್ಲವನ್ನೂ ನೋಡಿದ ಕನಕಾಂಗಿಯ ತಂದೆ ನಿರುಪಾಯನಾಗಿ ಕನಕಾಂಗಿಯರ ದಿಬ್ಬಣ ಅರಮನೆಗೆ ಬರುತ್ತದೆ.

ಕನಕಾಂಗಿ ಕಲ್ಯಾಣದಲ್ಲಿ ಸುಭದ್ರೆ ತನ್ನ ಸಹೋದರನ ಕುವರಿಯನ್ನು ತನ್ನ ಅಭಿಮನ್ಯುವಿಗೆ ಮದುವೆ ಮಾಡಿಕೊಂಡ ಅಂಶ ಸರಳ ರೀತಿಯಲ್ಲಿ ನೀರೂಪಿತವಾಗಿದೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಪ್ರಚಲಿತವಿರುವ ಸೋದರ ಹೆಣ್ಣನ್ನು ಮದುವೆಯಾಗುವ ಸಂಪ್ರದಾಯದ ಸ್ಥಿರೀಕರಣಕ್ಕಾಗಿ ಕನಕಾಂಗಿ ಕಲ್ಯಾಣ ನಿರೂಪಿತ ವಾದಂತಿದೆ. ಈ ಬಗೆಯ ಅನೇಕ ಹಾಡುಗಳು ನಮ್ಮ ಜಿಲ್ಲೆಯ ತುಂಬ ವಿವಿಧ ಪಾಠಾಂತರಗಳಿಂದ ದೊರೆಯುತ್ತವೆ. ಸೋದರ ಹಣ್ಣನ್ನು ತಂದುಕೊಳ್ಳುವ ಈ ಜನಪ್ರೀಯ ಸಂಪ್ರದಾಯ, ಉತ್ತರ ಕನ್ನಡ ಜಿಲ್ಹೆಯಲ್ಲಿ ಕನ್ನಡ ಮಾತನ್ನಾಡುವ ಎಲ್ಲಾ ಜನಾಂಗಗಳಲ್ಲಿಯೂ ಇಂದೂ ಪ್ರಚಲಿತವಿದೆ.

) ಅಭಿಮನ್ಯು:
ಅರ್ಜುನನು ಗಂಗೆಗೆ ಯಾತ್ರೆ ಹೋಗಲಿಕ್ಕೆ ಸಿದ್ಧನಾಗುತ್ತಾನೆ. ಹೋಗುವ ಪೂರ್ವದಲ್ಲಿ ದೇವಲೋಕ, ಇಂದ್ರಲೋಕಗಳ ಅಂಗಡಿಗೆ ಹೋಗಿ, ಪಟ್ಟೆಗಳನ್ನು ತಂದು, ತನ್ನ ಮಗ ಅಭಿಮನ್ಯುವಿಗೆ ಉಡಿಸುತ್ತಾನೆ. “ಈ ಪಟ್ಟೆಯುಟ್ಟಾಗ ನೀನು ಸೂರ್ಯ ಚಂದ್ರರಂತೆ ಕಾಣುವಿ.  ಈ ಪಟ್ಟೆಯನ್ನು ಯಾರೂ ಬೇಕಾದರೂ ಕೋಡಬೇಡ. ಕೊಟ್ಟಲ್ಲಿ ನಿನ್ನ ಆಯುಷ್ಯದ ಸೀರಿಯೇ ಹೋಗಿ ಬಿಡುತ್ತದೆ.” ಎಂದು ಅಭಿಮನ್ಯುವಿನ ತಲೆಯ ಮೇಲೆ ಕೈಯಾಡಿಸಿ ಗಂಗೆಗೆ ಹೋಗಲು ಸಿದ್ಧನಾಗುತ್ತಾನೆ. ಹೋಗುವ ಪೂರ್ವದಲ್ಲಿ ಅರ್ಜುನ ತನ್ನ ಹೆಂಡತಿಯನ್ನು ಕರೆದು, “ಬಾಲ ಅಭಿಮನ್ಯುವನ್ನು ಬಾಗಿಲಿಂದ ಹೊರಕ್ಕೆ ಕಳಿಸಬೇಡಿರಿ: ಕಾಳಗಕ್ಕೂ ಕಳಿಸಬೇಡಿರಿ” ಎಂದು ಕಟ್ಟಪ್ಪಣೆ ಮಾಡಿ  ಹೊರಡುತ್ತಾನೆ. ಗಂಗೆಗೆ ಹೋಗುವಾಗ ನಾರಾಯಣ ದೇವನೂ ಅರ್ಜುನನ ಜೊತೆಗೆ ಹೋಗುತ್ತಾನೆ.

ಗಂಗೆಯಲ್ಲಿ ಸ್ನಾನಕ್ಕಾಗಿ ಅರ್ಜುನ ಮುಳುಗಿದಾಗ ನಾರಾಯಣದೇವ ಅವನನ್ನು ನೀರಿನಲ್ಲಿ ಮುಳುಗಿಸಿ, ಅವನನ್ನು ಅಲ್ಲಿಯೇ ಬಿಟ್ಟು, ತಂಗಿಯೆಡೆ ಬರುತ್ತಾನೆ. ಅಣ್ಣನೊಬ್ಬನೇ ಬರುವುದನ್ನು ನೋಡಿ ತಂದಿ, “ಇನ್ನೊಬ್ಬರನ್ನೆಲ್ಲಿ ಬಿಟ್ಟು ಬಂದೆ” ಎಂದು ಅಣ್ಣನನ್ನು ಪ್ರಶ್ನಿಸುತ್ತಾಳೆ. ಆಗ ನಾರಾಯಣದೇವ, “ಗಂಗೆಗೆ ಹೋದವರು ಒಟ್ಟಿಗೇ ಬರಬಾರದು. ಅದರಲ್ಲಿಯೂ ನಿನ್ನ ಗಂಡನಿಗೆ ನಾಡೇ ನೆಂಟರು: ಇನ್ನೊಂದು ಗಳಿಗೆಯಲ್ಲಿ  ಆತ ಬರುತ್ತಾನೆ. ಈಗ  ನಿನ್ನ ಮಗನನ್ನು ಕಾಳಗಕ್ಕೆ ಕಲಿಮಾಡು” ಎನ್ನುತ್ತಾನೆ. ಅದಕ್ಕೆ ನಾರಾಯಣ ದೇವನ ಸೋದರಿ, “ನಿನ್ನ ಮಗ ಇನ್ನೂ ಚಿಕ್ಕವನು ನೆತ್ತಿಯ ಸುಳಿಯೂ ಬರಲಿಯಲಿಲ್ಲ ಅವನು ಕಾಳಗವನ್ನು ಕಲಿಯಲಿಲ್ಲ” ಎನ್ನುತ್ತಾಳೆ. ಆಗ ನಾರಾಯಣ ದೇವ, “ಅರಸರ ಮಕ್ಕಳು ಗರ್ಭದಲ್ಲಿರುವಾಗಲೇ ಕಾಳಗವನ್ನು ಕಲಿತಿರುತ್ತಾರೆ, ಯುದ್ಧವನ್ನುಗೆಲ್ಲಲೇಬೇಕು” ಎನ್ನುತ್ತಾನೆ. ಅದಕ್ಕೆ ಸೋದರಿ, ನೀನೀದ್ದೂ, ನನ್ನಮಗನನ್ನು ಕೊಲ್ಲುವಾಗ, ನಾನು ಯಾರಿಗೆ  ಹೇಳಿ ಮರುಗಲಿ? ” ಎನ್ನುತ್ತಾಳೆ. “ನಿನ್ನ ಮಗನಿಗೆ ನನ್ನ ಮಗಳನ್ನು ಕೊಟ್ಟಿದ್ದೇನೆ. ನಿನ್ನ ದುಃಖ ನನಗೂ ಉಂಟು: ಚಿಂತಿಸಬೇಡ ಮಗನನ್ನು ಕಾಳಗಕ್ಕೆ  ಕಲಿ ಮಾಡು “. ಎನ್ನುತ್ತಾನೆ ನಾರಾಯಣದೇವ. ಸೋದರಿ ಅಭಿಮನ್ಯುವನ್ನು ಕರೆದು, ಮಾವನ ಇಂಗಿತವನ್ನು ತಿಳಿಸುತ್ತಾಳೆ. ಆಗ ಅಭಿಮನ್ಯು, “ಬಡವರ ಮಕ್ಕಳನ್ನು ಹೊಗೆ ಹಾಕಿ ಕೊಂದು. ಮಣ್ಣು ಮಾಡುವವ ನೀನು” ಎಂದು  ನಾರಾಯಣದೇವನಿಗೆ ಕೆಡೆನುಡಿಯುತ್ತಾನೆ.

ನಾರಾಯಣದೇವ ಅಭಿಮನ್ಯುವಿನ ಮಾತಿಗೆ ಗಮನ ಕೊಡದೇ ಅಲ್ಲಿಂದ ಹೊರಡುತ್ತಾನೆ. ತನ್ನ ಬಾಗಿಲ ಕಾಯುವವರೆಡೆ ಹೋಗಿ “ನನ್ನ ಹಿಂದಿನಿಂದ ಅಭಿಮನ್ನಯು ಬರುತ್ತಾನೆ. ಅವನು ಉಟ್ಟ ಪಟ್ಟೆಯನ್ನುಕೊಟ್ಟ ಹೊರತು ಅವನಿಗೆ ಬಾಗಿಲು ಬಿಡಬೇಡಿರಿ. ಅವನು ತಾನು ನಾರಾಯಣದೇವನ ಅಳಿಯ, ಮುಂದುವರಿಯ ಪತಿ, ಊರ ಆಳೂವ ಅಭಿಮನ್ಯು ಎಂದು ಹೇಳಬಹುದು. ನೀವು ನಾರಾಯಣದೇವನ ಅಳಿಯನಾದರೇನು? ಮಂದುರಿಯ ಪತಿಯಾದರೇನು? ನೀನುಟ್ಟ ಪಟ್ಟೆಯನ್ನು ತೊಟ್ಟ ಹೊರತು ಬಾಗಿಲನ್ನು ಬಿಡುವುದಿಲ್ಲವೆಂದು ಹೇಳಬೇಕು” ಎಂದು ನಿರ್ದೆಶನ ನೀಡಿ,ತನ್ನರಮನೆಯ ಒಳಗೆ ಹೋಗುತ್ತಾನೆ. ಅಲ್ಲಿ ತನ್ನ ಮಗಳು ಮಂದುರಿಯನ್ನು ಕುರಿತು, “ಪಟ್ಟೆ ಉಟ್ಟುಕೋ, ಮಲ್ಲುಗಿ ಮುಡಿದುಕೋ, ಪಚ್ಚದ ಕಂಬ ಸೇರಿ ನಿಂತುಕೋ” ಎನ್ನುತ್ತಾನೆ. ಮಂದುರಿ ಹಾಗೆಯೇ ನಿಂತಾಗ, “ನಿನ್ನ ನಡು ನಾಲಿಗೆಯು ಮುರುಟಿ, ನಿನಗೆ ಮಾತು ಬರದೇ ಹೋಗಲಿ” ಎಂದು ಶಾಪ ಕೊಡುತ್ತಾನೆ.

ಈ ಕಡೆ ಅಭಿಮನ್ಯುವಿನ ತಾಯಿ ಮಗನನ್ನು ಕುರಿತ, “ನೀನು ಕಾಳಗಕ್ಕೆ ಸಿದ್ಧನಾದೆ: ಅದರೆ ಅಲ್ಲಿ  ನಿನ್ನ ಹೆಂಡತಿ ಋತುಮತಿಯಾಗಿದ್ದಾಳೆ. ಎನ್ನುತ್ತಾಳೆ. ಆಗ ಅಭಿಮನ್ಯು, “ಹೆಂಡತಿ ಋತುವಾದರೆ ಅವಳನ್ನು ಭೋಗಿಸಬರುತ್ತೇನೆ. ನೀನು ದಂಡಿನೂಟಕ್ಕೆ ಸಿದ್ಧಮಾಡು. ನಾನು ಕಂಚಿಯ ಹುಳಿಯಲ್ಲಿ ಕತ್ತಿ ಮಸೆದು ಬರುತ್ತೇನೆ, ವೈರಿ ತಲೆ ಚಂಡಾಡುತ್ತೇನೆ” ಎನ್ನುತ್ತಾನೆ, ತಾಯಿ ಮಗನಿಗಾಗಿ ಹಲವು ಬಗೆಯ ಅಡಿಗೆ ಸಿದ್ಧಗೊಳಿಸುತ್ತಾಳೆ.

ಇತ್ತ ಅಭಿಮನ್ಯು ತನ್ನ ಅಕ್ಕ ತಂಗಿಯರ ಮಕ್ಕಳಿಗೆ ಕತ್ತಿ ಕಾಳಗಕ್ಕೆ ಸಿದ್ಧರಾಗಿ ಬರಲು ತಿಳಿಸುತ್ತಾನೆ. ಊರಲ್ಲಿ ಡಂಗುರು  ಹೊಡೆಸುತ್ತಾನೆ. ಅನಂತರ ಮನೆಗೆ ಬಂದು ದಂಡಿನೂಟ ಮುಗಿಸಿ, ತಾಯಿಯ ಹತ್ತಿರ, “ಉತ್ತರ ಮಂದುಕಿಯರ ಚಿಂತೆ ನನಗಿಲ್ಲ. ರಸಾಳಿಯ ಮಗಳೂ ಚಿಕ್ಕವಳು. ಅವಳಿಗೆ ಅರ್ಧಹಿತ್ತಿಲ್ಲ ಕೊಡು. ಬದುಕು ಭಂಡಾರ ಕೊಟ್ಟು ಅವಳನ್ನು ತವರು ಮನೆಗೆ ಕಳೂಹಿಸಿಕೊಡು” ಎನ್ನುತ್ತಾನೆ. ತಾಯಿ ಮಗನ ಹೇಳಿಕೆಯಂತೆ ಅವಳನ್ನು ತವರು ಮನೆಗೆ ಕಳಿಸುತ್ತಾಳೆ. ಮಗ ಈ ಕಡೆ ಕಾಳಗಕ್ಕೆ ಸಿದ್ಧನಾಗುತ್ತಾನೆ. ತಾಯಿ ಮುತ್ತಿನಾರತಿ ಬೆಳಗಿ, “ವೀರ ಶೂರರಿಂದ ಹೆಚ್ಚಿನ ಕಲಿಯಾಗು, ನೂರಾಳುಗಳನ್ನು ಸೋಲಿಸಿ ತಲೆ ತೆಗೆದುಕೊಂಡು ಬಾ” ಎಂದು ಹರಸುತ್ತಾಳೆ.

ಅಭಿಮನ್ಯು ಆನೆ, ಕುದುರೆ, ಮಂದಿ, ಮಾರ್ಬಲ ಸಹಿತವಾಗಿ ಕಾಳಗಕ್ಕೆ ಹೋಗುತ್ತಾನೆ. ಹೋಗುವಾಗ ರಸರಾಳಿಯ ಮಗಳಿಗೆ ಭೇಟಿಯಿತ್ತು, ನಾರಾಯಣ ದೇವನ ಮನೆಗೆ ಹೋಗುತ್ತಾನೆ. ಅಭಿಮನ್ಯುವನ್ನು ಬಾಗಿಲು ಕಾಯುವವರು ತಡೆದು, ಅವನುಟ್ಟ ಪಟ್ಟೆಯನ್ನು ಕೊಟ್ಟ ಹೊರತು ಅವನಿಗೆ ಒಳಗೆ ಹೋಗಗೊಡುವುದಿಲ್ಲ. ಆಗ ಅಭಿಮನ್ಯು ನಿರುಪಾಯನಾಗಿ, “ತನ್ನ ಆಯುಷ್ಯದ ಸಿರಿಯೇ ತೊಲಗಿತು” ಎಂದು ಪಟ್ಟಿಯನ್ನೆ ಬಾಗಿಲು ಕಾಯುವವರಿಗೆ ದಾನ ಮಾಡಿ ಒಳ ಪ್ರವೇಶಿಸಿ, ಕೊಲ್ಕರರೆಡೆಗೆ ಹೋಗುತ್ತಾನೆ. ಆಗಲೇ ಅಭಿಮನ್ಯುವಿಗೆ ಕಣ್ಣಿಗೆ ಕತ್ತಲು ಕವಿದು ಬೀಳುತ್ತಾನೆ. ಆಗ ಅರಮನೆಯ ಗಿಂಡಿಕಾಲ್ ಸಣ್ಣಕ್ಕ ಬಂದು, ಅಭಿಮನ್ಯುವಿನ ಮೇಲೆ ಅಮೃತ ಚಿಮುಕಿಸಿ ಅವನನ್ನು ಎಚ್ಚರಿಸುತ್ತಾಳೆ. ಎಚ್ಚರ ಗೊಂಡ ಅಭಿಮನ್ಯು ಅರಮನೆಯಲ್ಲಿ ಮತ್ತೂ ಮುಂದಕ್ಕೆ ಹೋಗುತ್ತಾನೆ. ಆಗ ಅವನಿಗೆದುರಾದ ಅವನ ಭಾವ ಮದಣಯ್ಯನನ್ನು ಕುರಿತು, “ಭಾವಾ ನಿನ್ನ ಮನೆಯಲ್ಲಿ ಸಾವಿರಾರು ಜನ, ನಿನ್ನ ಕಿರಿ ತಂಗಿ ಯಾರು? ” ಎಂದು ವಿಚಾರಿಸುತ್ತಾನೆ. “ಪಟ್ಟೆಯುಟ್ಟು, ಮುತ್ತಿನ ಬಟ್ಟಿಟ್ಟು, ಬೆಳ್ಳಿಯ ತಟ್ಟೆಯನ್ನು ಹಿಡಿದು, ಪಚ್ಚದ ಕಂಬಿಗೆ ಮರೆಯಾಗಿ  ನಿಂತಿದ್ದಾಳೆ. ಅವಳ ಸೆರಗನ್ನು  ಎಳೆ” ಎಂದು ಮದಣಯ್ಯ ಉತ್ತರಿಸುತ್ತಾನೆ.

ಅಭಿಮನ್ಯು ಮಂದ್ರಿಯೆಡೆ ಬಂದು, “ನಿನ್ನ ತಂದೆ ನಾರಾಯಣದೇವ ನಾಡಿಗೇ ಅಪ್ಪಂತ ವ್ಯಕ್ತಿ. ನಿನ್ನನ್ನು ಪಚ್ಚ ಕಂಬಿಗೆ ಧಾರೆಯೆರೆದಿದ್ದಾನೇನು? ಎಲೆ ಹೆಣ್ಣೆ, ನಗೆಯನ್ನೇಕೆ ಆಡುವೆ? ನಿನ್ನ ನಗೆಯಲ್ಲಿ ಮುತ್ತು ಒಡೆಯುವುದು “ಎನ್ನುತ್ತಾನೆ. ಅಳಿಯನ ಮಾತು ಕೇಳಿದ ನಾರಾಯಣದೇವ ಮಂದ್ರಿಗಿಟ್ಟಿ ಶಾಪವನ್ನು ಹಿಂತೆಗೆದುಕೊಳ್ಳುವನು. ಅವಳ ಕಿರುನಾಲಿಗೆ ಸರಿಯಾಗಲಿ ಎಂದು ಹರಸುವನು. ಆಗ ಮಂದ್ರಿ ಅಭಿಮನ್ಯುವಿನ ಹತ್ತಿರ ನಕ್ಕು ನಲಿದು, ಮಧುರೋಕ್ತಿಗಳಿಂದ ತಾಂಬೂಲ ನೀಡುವಳು. ಅಭಿಮನ್ಯು ತಾಂಬೂಲ ಸೇವಿಸಿ, ಅವಳೊಡನೆ ಒಂದುರಾತ್ರಿ ಕಳೆಯಲು ಹಾಸಿಗೆಯನ್ನೇರುವಾಗ ಮತ್ತೇ ಪೋಣಿಸುವಾಗ ಅಭಿಮನ್ಯು, “ಚೆಲ್ಲಿದ ಮಣಿಗಳನ್ನು ಗರತಿಯರು ಮತ್ತೇಪೊಣಿಸಬಾರದು.  ಗರತಿಯರ ಲಕ್ಷಣಕ್ಕದು ಸಲ್ಲದು” ಎನ್ನುತ್ತಾನೆ. ಮಂದ್ರಿ ಮಂಚದ ಮೇಲೆ ಮತ್ತೇ ಹಾಸಿಗೆ ಗಂಡನ ಜೊತೆಯಲ್ಲಿ ಒರಗುತ್ತಾಳೆ. ಆಗ ನಾರಾಯಣದೇವ ಕಲ್ಲಕೋಳಿಯಾಗಿ ಸೆರಗೆಯ್ಯುತ್ತಾನೆ. ಆಗ ಅಭಿಮನ್ಯು, ಕೋಳಿ ಕೂಗಿದ ಮೇಲೆ ಹೆಂಗಸರ ಜೊತೆಗೆ ಹಾಸಿಗೆಯಲ್ಲಿ ಮಲಗುವುದು ಸಲ್ಲದು, ಊರ ಕೋಳಿ ಸರಗಯ್ದರೆ ಇಷ್ಟರಲ್ಲಿ ಬೆಳಗಾಗುತ್ತಿತ್ತು. ಇದು  ಊರ ಕೋಳೀಯಲ್ಲ: ನಿನ್ನ ಅಪ್ಪ ಸಿಂಹ ಕೋಳಿ. ಈದುಷ್ಟ ಒಂದು ದಿನ ನಿನ್ನ ಜೊತೆಯಲ್ಲಿ ಇರುವೆನೆಂದರೂ ನನಗೆ ಇರಗೊಡುವುದಿಲ್ಲ: ನನಗಾತ ವೈರಿ. ನನಗೆ ದಂಡಿಗೆ ಹೋಗಲು ಅಪ್ಪಣೆಯನ್ನು ಕೊಡು” ಎನ್ನುತ್ತಾನೆ.

ಮಂದುರಿ, “ಈ ರಕ್ಕಸಗೋಟೆಯ ಕಾಳಗಕ್ಕೆ ಹೋದವರು ತಿರುಗಿ ಬರುವುದಿಲ್ಲ. ನಿಮ್ಮ ಹಗೆಗೆ ದಂಡವನ್ನಾದರೂ ನೀಡೋಣ” ಎನ್ನುತ್ತಾಳೆ. “ದಂಡ ಕೊಟ್ಟರೆ ಹಗೆ ನಕ್ಕಾನು. ಬಂದದ್ದು ಬರಲಿ; ನನ್ನನ್ನು ನೀನು ಕೋಟೆ ಕಾಳಗಕ್ಕೆ ಕಳಿಸು” ಎನ್ನುತ್ತಾನೆ ಅಭಿಮನ್ಯು. ನಿರುತ್ತರಳಾದ ಮಂದುರಿ ಮುತ್ತಿನ ಕಣ್ಣೀರನ್ನು ಸುರಿಸಿ, ಗಂಡನನ್ನು ಕಾಳಗಕ್ಕೆ ಕಳಿಸುತ್ತಾಳೆ. ಅಭಿಮನ್ಯು ಆನೆಯೇರಿ ಮಂದಿ ಮಾರ್ಬಲ ಸಹಿತ ಕೆಂಡದ ಕೋಟೆಗೆ ನಡೆಯುತ್ತಾನೆ. ಅಲ್ಲಿಯ ಸೈನಿಕರನ್ನು ತನ್ನಹರಿತ ಕತ್ತಿಯಿಂದ ಎರಡು ಮೂರು ಸುತ್ತಿನಲ್ಲಿ ಸವರಿ ಹಾಕುತ್ತಾನೆ.

ಇದನ್ನು ನೋಡಿದ ನಾರಾಯಣದೇವನು ಕರ್ಣನಿಗೆ ತನ್ನಪಟ್ಟಣ ಹಾಳಾದ ಸುದ್ಧಿ ತಿಳಿಸಿ, ಕಡ ಚಕ್ರ ಕೋವಿಯನ್ನು ತೆಗೆದುಕೊಂಡು ಮರೆಯಲ್ಲಿ ಬಂದು, ವೈರಿಯನ್ನು  ಹೊಡೆಯಬೇಕೆಂದು ಓಲೆ ಬರೆದು, ಗಿಳಿಗಳ ಹತ್ತಿರ ಕಳಿಸುತ್ತಾನೆ. ಕರ್ಣನು ಪತ್ರದಲ್ಲಿ ನಾರಾಯಣದೇವ ತಿಳಿಸಿದಂತೆ, ಕಡಚಕ್ರ ಕೋವಿಯನ್ನು ಗುಟ್ಟಾಗಿ ತಂದು ತಾನು ಕೋಟೆಯ ಮರೆ ಸೇರಿ ಅಭಿಮನ್ಯುವಿಗೆ ಬಾಣ ಬಿಡುತ್ತಾನೆ. ಬಾಣದ ಹೊಡೆತಕ್ಕೆ, ಅಭಿಮನ್ಯುವಿನ ಪ್ರಮುಖ ರಕ್ತನಾಳ ಕಡಿದು, “ನೆಲಕ್ಕುರುಳುತ್ತಾನೆ.  ಅಭಿಮನ್ಯು ತನ್ನನ್ನು ನೆಲಕ್ಕುರುಳಿಸಿದ ಕರ್ಣನನ್ನು ನೋಡಿ, “ಅಯ್ಯೋ ದೊಡ್ಡಪ್ಪ ನನ್ನನ್ನು ಮೋಸದಲ್ಲಿ ಕೊಲ್ಲಂಬದೆಯ? ನನ್ನನ್ನು ನೀನು ಎದುರಿಸಬಂದರೆ ನಿನ್ನ ಸಾಹಸವನ್ನು ನೋಡುತ್ತಿದ್ದೆ” ಎನ್ನುತ್ತಾನೆ.

ಅಭಿಮನ್ಯುವನ್ನು ಮೊಸದಿಂದ ಕೊಂದುದಕ್ಕಾಗಿ ಕರ್ಣನಿಗೆ ಪಶ್ಚಾತ್ತಾಪ ವಾಯ್ತು, “ಕಳ್ಳ ನಾರಾಯಣದೇವ, ಸುಳ್ಳು ಹೇಳಿ, ಮೋಸದಿಂದ ನಿನ್ನನ್ನು ಹೊಡೆಸಿದ. ಈಗ ಏನು ಮಾಡಿದರೆ ನೀನು ಬದುಕುವೆ? ” ಎಂದು ವ್ಯಥ್ಯೆಯಿಂದ ಕೇಳುತ್ತಾನೆ. ಆಗ ಅಭಿಮನ್ಯು ಕರ್ಣನನ್ನು ಕುರಿತು, “ಎಳ್ಳು ಕಾಳಿನಷ್ಟು ಕಲೆಯು ನನಗಾದರೂ, ನಾನು ಬದುಕಲಾರೆ. ನನ್ನ ಜೊತೆಗಾರರನ್ನು ಕೂಡಿಕೊಂಡು ನಾನು ಪಗಡೆಯಾಡುವಾಗ, ಅವರು ನನ್ನ ತೋಳ ಮೇಲೆತ್ತರ ಕಲೆಯೆಂದು ನನ್ನನ್ನು ಕೇಳಿದರೆ, ನನಗೆ ಸತ್ತಂತಾಗುವುದು ” ಎಂದು ವಿರೋಚಿತವಾಗಿ  ನುಡಿಯುತ್ತಾನೆ. ಅಭಿಮನ್ಯುವಿನ ಸಿಂಹವಾಣಿಯನ್ನು ಕೇಳಿ, ಕರ್ಣನ ಎದೆದುಂಬಿ ಬಂದು, “ಅಭಿಮನ್ಯು ಬಿದ್ದಲ್ಲಿ ಹನ್ನೆರಡು ಸುತ್ತಿನ ಕೋಟೆಯಾಗಲಿ” ಎಂದು ಹರಸುತ್ತಾನೆ.

ಇತ್ತ ಅಭಿಮನ್ಯು ತನ್ನ ಹೆಂಡಿರನ್ನು ಕುರಿತು “ನಿಮ್ಮ ಗಂಡ ಕಾಳಗದಲ್ಲಿ ಮಡಿದನು” ಎಂದು ಓಲೆ ಬರೆದು ಮುಟ್ಟಿಸುತ್ತಾನೆ. ಅಭಿಮನ್ಯುವಿನೊಲೆಯನ್ನು ಅವನ ಹೆಂಡತಿ ಉತ್ತರೆ ಮೌನವಾಗಿ ಓದಿಕೊಂಡು, ತನ್ನನ್ನು ತಾನು ಸಿಂಗರಿಸಿ ಕೊಳ್ಳುತ್ತಾಳೆ. ತೊಟ್ಟಿಲ ಕಂದನಿಗೆ ಮೊಲೆಯುಣಿಸಿ, ಅವನನ್ನು ಸಾಕಿ ಸಲುಹುಲು ಅತ್ತೆಯ ಕೈಗೊಪ್ಪಿಸಿ, ತಾನು ಕೆಂಡದ ಕೋಟೆಗೆ ಅಭಿಮನ್ಯು ಬಿದ್ದೆಡೆಗೆ ಹೋಗಿ ಅವನ ಜೊತೆಯಾಗುತ್ತಾಳೆ.

ಈ ಕಡೆ ನಾರಾಯಣದೇವ ತನ್ನರಮನೆಗೆ ಬಂದು, ಮಗಳನ್ನು ಕುರಿತು, “ದಟ್ಟಿ ಬಿಡು ಪಟ್ಟೆ ಉಡು, ಕಾಜಿನ ಬಳೆಯನ್ನೊಡೆದು ಹಾಕಿ, ಬೋಳ ಮೇಲೆ ಸೆರಗನ್ನು ಹಾಕಿಕೋ ಮಗಳೆ, ನಮ್ಮನೆಯ ಆಕಗಳಿಗೆ ಹುಲ್ಲನ್ನು ಹೊರು. ನಿನ್ನ ಗಂಡಕಾಳಗದಲ್ಲಿ ಮಡಿದ” ಎನ್ನುತ್ತಾನೆ. ತಂದೆಯ  ಮಾತನ್ನು ಕೇಳಿ ಮಂದ್ರಿ ವ್ಯಥೆಯಿಂದ ಗೋಳಿಡುತ್ತಾಳೆ. ಅವಳ ಅತ್ತಿಗೆಯರು, “ಹಾದಿಯಲ್ಲಿಯ ದೊಂಬನಿಗಾಗಿ ಯಾಕಿಟ್ಟು ಅಳುವೆ” ಎಂದು ಚುಚ್ಚಿ ಮಾತನಾಡುತ್ತಾರೆ.   ಮಂದ್ರಿಯ ತಾಯಿಗೆ ಮಗಳ ಅಳಲನ್ನು ಕಂಡು ದುಃಖ ಒತ್ತರಿಸಿಬರುತ್ತದೆ. ಆಗ ನಾರಾಯಣದೇವನ ಕಿರಿಯ ಹೆಂಡಿರು ಬಂದು, “ಈ ನಾರಿ ನಿಮಗೆ ಮುದ್ದಿನ ಮಗಳು. ಇವಳು ಇಲ್ಲಿದ್ದರೆ ನಮಗೆ ಸುಖವಾಗಿರಗೊಡಳು. ಇವಳನ್ನು ಇವಳ ಗಂಡನ ಜೊತೆಯಲ್ಲಿಯೇ, ಸುರಲೋಕದಲ್ಲಿ ಬಿಟ್ಟು ಬನ್ನಿ” ಎನ್ನತ್ತಾರೆ. ನಾರಾಯಣ ದೇವ ಕಿರಿಯ ಹೆಂಡಿರ ಹೇಳಿಕೆಯಂತೆ ಮಂದುರಿಯನ್ನೊಯ್ಯುತ್ತಾನೆ. ಒಯ್ಯುವಾಗ ಅವಳಕಿವಿಯ ಒಂದು ಓಲೆ ಕಳಚಿ, ತೆಂಗಿನ ಗರಿಯ ಓಲೆ ತೊಡಿಸುತ್ತಾನೆ. ಹೋಗುವಾಗ ಸಿಗ್ರರೆಡೆ ಹೋಗಿ, ಓಲೆಯಿಲ್ಲದೆ ಅತ್ತಿಗೆ ಬರುತ್ತಾಳೆ. ಇವಳನ್ನು ನೀವು ಕೂಡಿಕೊಳ್ಳುವಿರೇನು? ಎಂದು ಪ್ರಶ್ನಿಸುತ್ತಾನೆ. ಈ ಮೇಲೆ ಅಭಿಮನ್ಯುವಿನೆಡೆ ಕರೆದುಕೊಂಡು ಹೋಗುತ್ತಾನೆ. ಅಭಿಮನ್ಯು ಮಂದಿಯ ಕಿವಿಯೋಲೆ ಕಳೆದುದನ್ನು ನೋಡಿ, “ಒಂದು ಓಲೆಯಿಟ್ಟು ಬಂದಿರುವೆ,  ಇನ್ನೊಂದನ್ನು ನಿನ್ನಪ್ಪನಿಗಾಗಿ ಕಳೆದೆಯೆನು?” ಎನ್ನುತ್ತಾನೆ.

ಆಗ ನಾರಾಯಣದೇವ ಮಂದ್ರಿಯನ್ನು ಅಲ್ಲಿಂದ ತಿರುಗಿ ಕರೆದುಕೊಂಡು ಬರುತ್ತಾನೆ. ಮಂದ್ರಿ ತನ್ನ ತಾಯಿಯ ಹತ್ತಿರ ದಂಡಿನೂಟಕ್ಕೆ ಅನುಮಾಡ ಹೇಳುತ್ತಾಳೆ. ತಾನು ಸ್ನಾನ ಮಾಡಿ, ಊಟ ಮುಗಿಸಿ, ತಾಂಬೂಲ ಸೇವಿಸಿ, ಮಂಡೆ ಬಾಚಿ ಹೂ ಮುಡಿದುಕೊಂಡು, ಚಿನ್ನ ಬಣ್ಣ ತೊಡುತ್ತಾಳೆ. ಆನೆ ಕುದುರೆ ದನ, ಕರುಗಳು, ದ್ರವ್ಯ ಇವೆಲ್ಲವುಗಳೊಡನೆ ಮಂದುರಿ ಅಭಿಮನ್ಯು ಬಿದ್ದ ಕೆಂಡದ ಕೋಟೆಯೆಡೆ ಹೋಗುತ್ತಾಳೆ. ಕೆಂಡದ ಕೋಟೆಯೆಡೆ ಅಭಿಮನ್ಯುವಿನೊಡನೆ ನಿಲ್ಲುತ್ತಾಳೆ.

ಮಹಾಭಾರತದಲ್ಲಿ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹ ಭೇದಿಸಿ, ಒಳ ನುಗ್ಗಿದ ಅಭಿಮನ್ಯುವನ್ನು ಕರ್ಣ ಮೋಸದಿಂದ ಕೊಂದ ವೃತ್ತಾಂತವಿದೆ. ಆದರೆ ಇಲ್ಲಿ ಅಭಿಮನ್ಯು” ಕಡಚಕ್ರ” ಕಾಳಗದಲ್ಲಿ ಅವನ ಮಾವ ನಾರಾಯಣದೇವನಿಂದ ಪ್ರೇರಣೆಗೊಂಡ ಕರ್ಣನಿಂದ ಹತನಾಗುತ್ತಾನೆ. ಕರ್ಣ ಅಭಿಮನ್ಯುವನ್ನು ವಂಚನೆಯಿಂದ ವಧಿಸಿದ್ದು, ಎರಡು ಕಡೆಯಲ್ಲಿ ಸಾಮಾನ್ಯವಾದರೂ, ಜನಪದ ಭಾರತದಲ್ಲಿ ಕರ್ಣನು ಮೋಸದಿಂದ ಅಭಿಮನ್ಯುವನ್ನು ಹೊಡೆದುದಕ್ಕಾಗಿ ವ್ಯಥ್ಯೆಗೊಳ್ಳುತ್ತಾನೆ. ತನ್ನನ್ನು ವಂಚಿಸಿ, ಅಭಿಮನ್ಯುವನ್ನೇ ಕೊಲ್ಲಿಸಿದ ನಾರಾಯಣದೇವನ ಮೇಲೆ ಕೋಪಕಾರುತ್ತಾನೆ. ಅಷ್ಟೇ ಅಲ್ಲ. ಅಭಿಮನ್ಯುವನ್ನು ಬದುಕಿಸುವ ಯೋಚನೆಯನ್ನೂ ಮಾಡುತ್ತಾನೆ. ಆದರೆ ಅಭಿಮನ್ಯು ವೀರೋಚಿತ ಮರಣವನ್ನು ಬಯಸಿದಾಗ, ಅಭಿಮನ್ಯು ಮಡಿದಲ್ಲಿ ಹನ್ನೆರಡು ಸುತ್ತಿನ ಕೋಟೆಯಾಗಲೆಂದು ಹರಸಿ ಅವನ ಶೌರ್ಯ ಸ್ಮಾರಕದ ತಳಪಾಯಹಾಕುತ್ತಾನೆ. ಮಹಾಭಾರತದ ಕರ್ಣನ ದುಷ್ಟ ವ್ಯಕ್ತಿತ್ವ ಸರ್ವರಿಗೂ ವಿಧಿತವೇ ಆಗಿದೆ. ಒಟ್ಟಿನಲ್ಲಿ ಧರ್ಮರ ಹಾಡಿನಲ್ಲಿಯ ಕರ್ಣನಂತೆ ಇಲ್ಲಿ ಪಡಿಮೂಡಿದ ಕರ್ಣನ ವ್ಯಕ್ತಿತ್ವವೂ ಸಾತ್ವಿಕ ತೇಜದಿಂದ ಕಳೆಗೊಂಡಿದೆ.

ಈ ಹಾಡಿನಲ್ಲಿ ಅಭಿಮನ್ಯುವಿನ ಸಾಹಸದ ಕಥೆ ಚೆನ್ನಾಗಿ ಪಡಮೂಡಿವೆ. ಮಾವ ನಾರಾಯಣದೇವನಿಂದ ತಾನು ವಂಚಿತನಗುವ ಸುಳಿವು ಸಿಕ್ಕರೂ, ಅಭಿಮನ್ಯು ಕಾಳಗಕ್ಕೆ ಅಂಜುವ ಹೇಡಿಯಾಗದೆ, ತನ್ನ ಸತ್ತಾತಿಶಯವನ್ನು ತೊರಿಸಿ ವೀರ ಮರಣವನ್ನಪ್ಪಿದ ಕಲಿ. ನರಸುತ್ತ ಹೇಡಿಯಾಗಿ ನೂರು ವರ್ಷ ಬಾಳುವುದಕ್ಕಿಂತ ನರ ಕೇಸರಿಯಾಗಿ ಮೂರು ದಿನ ಬಾಳುವುದು ಲೇಸೆಂಬ ಜೀವನಾದರ್ಶವುಳ್ಳ ಕಲಿಯಾತ, ಕರ್ಣ, “ನೀನು ಏನು ಗೆಯ್ದರೆ ಬದುಕಿಯೇ” ಎಂದು ಅಭಿಮನ್ಯುವನ್ನು ಬದುಕಿಸಲು ತವಕಪಟ್ಟಾಗ ಅಭಿಮನ್ಯು, “ನನ್ನ ಜೊತೆಗಾರರು ಕೂಡಿ ಪಗಡೆಯಾಡುವಾಗ ತೋಳ ಮೇಲೆತ್ತರ ಕಲೆಯೆಂದು ನನ್ನನ್ನು ಕೇಳಿದರೆ ನನಗೆ ಸತ್ತಂಗಾಗುವುದು,” ಎಂದು ಆತ ಕೊಟ್ಟ ಉತ್ತರ ಅವನ ಕಳಂಕ ರಹಿತ ತೋಳ್ಬಲಕ್ಕೆ ಅಮರ ದಾಖಲೆಯಾಗಿದೆ.

ಈ ಹಾಡಿನಲ್ಲಿ ನಾರಾಯಣದೇವ ಹಾಗೂ ಅವನ ಅಳಿಯ ಅಭಿಮನ್ಯು ಇವರಲ್ಲಿ ವೈರತ್ವವುಂಟಾಗಲು ಕಾರಣವೇನು ಎಂಬುವುದರ ಹಿನ್ನೆಯಲ್ಲಿ ಉಕ್ತವಾಗಿಲ್ಲ. ಇದೆ ಬಗೆಯಲ್ಲಿ ಅಭಿಮನ್ಯು ಮತ್ತು ಅವರ ಮಾವ ನಾರಾಯಣದೇವ ಇವರಲ್ಲಿ ಸಾಮರಸ್ಯವಿಲ್ಲದಿರುವ ಉಲ್ಲೆಖ ಜನಪದ ಭಾರತದಲ್ಲಿ ಅನೇಕ ಕಡೆಗಿದೆ. ಇದಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿಯೂ ಬೇರೆಡೆಯಿದೆ.  ಸಧ್ಯ ನಮಗಿಲ್ಲ ಅದು ಅಪ್ರಕೃತಿ. ಈ ಹಾಡಿನಲ್ಲಿ ಬರುವ ನಾರಾಯಣದೇವ ಕುತಂತ್ರಿಯೂ, ವಂಚಕನೂ ಸ್ವಾರ್ಥಪರನೂ ಆಗಿದ್ದಾನೆ. ತನ್ನ ಸುಖಕ್ಕಾಗಿ ಅಳಿಯ ಹಾಗೂ ಮಗಳ ಬಲಿ ತೆಗೆದುಕೊಳ್ಳುವ ಕ್ರೂರಿಯಾಗಿ ತೋರುತ್ತಾನೆ.[1]     ಸುಭದ್ರೆಯ ಹಾಡು ಮಹಾಭಾರತದಿಂದ ಹೇಗೆ ಭಿನ್ನವಾಗಿದೆ, ಎಂಬಲ್ಲಿ ಸುಭದ್ರೆಯ ಹಾಡಿನ ಹೊಸ ಆಶಯಗಳ ಪ್ರಸ್ತಾಪವಿದೆ.

[2]     ಡಾ.ಬಿ.ಎಸ್. ಗದ್ದಿಮಠ: ಕರ್ನಾಟಕ ಜಾನಪದ ಗೀತಗಳು: ಅಜುನಜೋಗಿಯ ಹಾಡುಗಬ್ಬ ಪು. ೩೨೩-೩೯೨

[3]      ಕೃ.ರಾ.ಕೃ.ಜನಪದ ಗೀತೆಗಳಲ್ಲಿ ಮಹಾ ಭಾರತ: ಜೋಗಯ್ಯ, ಪು.೯೫-೧೦೯