ಇಲ್ಲಿ ಸಂಗ್ರಹಿಸಲಾದ ಗಾಮೊಕ್ಕಲ ಮಹಾಭಾರತ ಅನೇಕ ಬಗೆಯಲ್ಲಿ ಮಹಾಭಾರತದಿಂದ ಭಿನ್ನವಾಗಿದೆ.ಇಲ್ಲಿಯ ಕಥಾವಸ್ತು ಮಹಾಭಾರತ ಕಥಾ-ವಸ್ತುವಿನ ಜೊತೆಗೆ ಸಾದೃಶ್ಯ ಪಡೆಯುವುದಕ್ಕಿಂತ ವೈದೃಶ್ಯ ತಡೆಯುವುದೆ ಹೆಚ್ಚು. ಪ್ರತಿ ಹಾಡಿನ ಆದಿಯಲ್ಲಿ ದೇವತಾ ಸ್ತುತಿ, ಅಂತ್ಯದಲ್ಲಿ ಕಾವ್ಯ ಫಲವಿದೆ. ಸ್ವಲ್ಪ ಹಚ್ಚು ಕಡಿಮೆ ಒಂದೇ ಬಗೆಯಲ್ಲಿರುವ ದೆವತಾ ಸ್ತುತಿ, ಮತ್ತು  ಕಾವ್ಯ ಫಲಗಳನ್ನು ಒಂದೆರಡು ಹಾಡುಗಳಲ್ಲಿ ಮಾತ್ರ ಉಳಿಸಿಕೊಂಡು , ಉಳಿದೆಡೆ ಈ ಸಂಗ್ರಹದಲ್ಲಿ ಕೈ ಬಿಡಲಾಗಿದೆ. ಇಲ್ಲಿಯ ಹಾಡುಗಳಲ್ಲಿ  ಅಲ್ಲಲ್ಲಿ ಪುರುರುಕ್ತಿ, ಭಾಷಾ ಶೈಥಿಲ್ಯ ಕಂಡು ಬಂದರೂ, ಈ ಹಾಡುಗಳು ಒಟ್ಟಂದದಲ್ಲಿ ಸತ್ತ್ವಯುತವಾಗಿವೆ. ಸುಂದರವಾಗಿವೆ. ಸಾಮಾನ್ಯ ಓದುಗರ ರಸಾಸ್ವಾಧನೆಗೆ ಅನುಕೂಲವಾಗಲು ಹಾಡುಗಳ ಸಿಂಹಾವಲೋಕನ ಮಾಡಲಾಗಿದೆ.

) ಧಮ್ಮರು :   

ಧರ್ಮರ ಜೊತೆಯಲ್ಲಿ ಪವಡಿಸಿದ ದ್ರೌಪದಿ ಕೆಟ್ಟ ಕನಸೊಂದನ್ನು ಕಂಡು ಎಚ್ಚೆತ್ತಳು. ಅತ್ತೆ ಕುಂತಿಯೆಡೆ ಹೋಗಿ, “ಸತ್ಯ ಕುಲದ ಪಾಂಡವರು, ತಮ್ಮ ಜೊತೆಯಲ್ಲಿ ಆಡುವಾಗ,ಧರ್ಮರ ತಲೆ ಸೋಲಲೆಂದು ಕುರುರಾಯ(ಗುರುರಾಯ) ನು ಬಯಸಿ ಪತ್ರವನ್ನು ಬರೆದ ಕನಸು ಕಂಡೆ” ಎಂದೊರೆಯುತ್ತಾಳೆ. ದುಸ್ವಪ್ನದ ಶಾಂತಿಗಾಗಿ ಬ್ರಾಹ್ಮಣರಿಗೆ ದಾನ ಮಾಡಬೇಕೆಂದು ಕುಂತಿ ದ್ರೌಪದಿಗೆ ನಿರ್ದೆಶಿಸುತ್ತಾಳೆ. ಅತ್ತೆಯ ಆದೇಶದಂತೆ ದ್ರೌಪಧಿ ಧರ್ಮರೊಡಗೂಡಿ ಬ್ರಾಹ್ಮಣರಿಗೆ ದಾನ, ಧರ್ಮಗಳನ್ನು ಮಾಡಿ, ಸ್ವಪ್ನ ದೋಷ ಪರಿಹಾರವಾಯಿತೆಂದು ನಿಶ್ಚಿಂತಳಾಗುತ್ತಾಳೆ. ಅದೇ ವೇಳೆಗೆ ಕುರುರಾಯನ ಓಲೆಕಾರರು ಧರ್ಮರೆಡೆಗೆ ಬರುತ್ತಾರೆ. ಧರ್ಮರು ಓಲೆಕಾರರು ಕೊಟ್ಟ ಓಲೆಯನ್ನು ಸಹದೇವನ ಹತ್ತಿರ ಓದಲು ಕೊಡುತ್ತಾರೆ. ಸಹದೇವನು ಓಲೆಯನ್ನೋದಿ ಕಣ್ಣೀರಿಡುತ್ತಾನೆ. ಕುಂತಿ, “ಓಲೆ ಹದುಳವೇ?” ಎಂದು ಪ್ರಶ್ನಿಸುತ್ತಾಳೆ. ಆಗ ಸಹದೇವ, “ಸತ್ಯನಿಷ್ಠರಾದ ಧರ್ಮರು ಹಾಗೂ ಕುಸುಮ ಕೋಮಲೆ ದ್ರೌಪದಿಯರು ತಮ್ಮ ಜೊತೆಯಲ್ಲಿ ಪಗಡೆಯಾಡಿ ಸೋಲುವುದನ್ನು ಬಯಸಿ, ಕುರುರಾಯ ಪತ್ರ ಬರೆದಿದ್ದಾನೆ” ಎನ್ನುತ್ತಾನೆ. ಈ ಮಾತು ಕೇಳೀದ ಧರ್ಮರು, “ಅಣ್ಣನು ಆಟಕ್ಕೆ ಕರೆದಾಗ, ಅದನ್ನು ಅಲಕ್ಷಿಸಬಾರದು” ಎಂದು ಕುರುರಾಯನೆಡೆ ಪಗಡೆಯಾಡಲು ಹೋಗುವ ಸಿದ್ಧತೆ ಮಾಡುತ್ತಾರೆ. ಅವನ ಜೊತೆಯಲ್ಲಿ ಭೀಮ ಅರ್ಜುನ ನಕಲು, ಸಹದೇವರೂ ಸಿದ್ಧರಾಗುತ್ತಾರೆ.  ಹೋಗುವ ಪೂರ್ವದಲ್ಲಿ ಧರ್ಮರು ಬಾಗಿಲು ಪೂಜೆ ಮಾಡಿ, ಬಾಗಿಲಿಗೆ ಕಾಯೊಡೆಯುವಾಗ ಒಡೆದ-ಕಾಯಿ ಕಡಿಯೊಂದು ಕವಚಿ ಬೀಳುತ್ತದೆ.  ಈ ಅಪಶಕುನವನ್ನು ಗಮನಿಸಿದ ಸಹದೇವ, “ಈ   ಹೊತ್ತು ನಾವು ಹೋದ ಕಾರ್ಯದಲ್ಲಿ ಜಯವಿಲ್ಲ. ಪ್ರಯಾಣ ಹೊರಡುವುದು ಬೇಡ” ಎನ್ನುತ್ತಾನೆ. ಆದರೆ ಧರ್ಮರು ಜಯ ಹಾರೈಸಿ ಕಾಯೊಡೆದು, ತಮ್ಮಂದಿರೊಡನೆ ಕುರುರಾಯನೊಡನೆ ಪಗಡೆಯಾಡಲು ಹೊರಟೇ ಬಿಡುತ್ತಾನೆ. ಹೋಗುವಾಗ ಅನೇಕ ಅಪಶಕುನಗಳನ್ನು ಕಂಡ ಸಹದೇವರು ಧರ್ಮರ ಗಮನವನ್ನು ಅತ್ತ ಸೆಳೆದರೂ, ಧರ್ಮರು ಆ ಕಡೆಗೆ ಚಿತ್ತಗೊಡದೇ ಕುರುರಾಯನೆಡೆಗೆ ಬಂದು ಪಗಡೆಯಾಡುತ್ತಾರೆ. ಮೊದಲಿನ ಎರಡು ಆಟಗಳಲ್ಲಿ ಧರ್ಮರೇ ಗೆಲ್ಲುತ್ತಾರೆ. ಆಗ ಕುರುರಾಯ ಆಟವನ್ನು ಮುರಿದು,  ಗಣನಾಥನಿಗೆ ಗೆಲುವಿನ ಹರಕೆಯನ್ನು ಕಟ್ಟಿ, ಪುನಃ ಆಟಕ್ಕೆ ಕುಳಿತು, ಕ್ರಮವಾಗಿ ಆಯ್ದು ಆಟಗಳನ್ನು ಆಡಿ, ಪಾಂಡವರೈವರನ್ನು ಅವರ ಛತ್ರ ಚಾಮರ ಸಹಿತವಾಗಿ ಗೆಲ್ಲುತ್ತಾನೆ. ಆಟದಲ್ಲಿ ಸೋತ ಧರ್ಮರ ತಲೆ ತಗ್ಗಿಸಿ ಕುಳಿತಾಗ ಕುರುರಾಯನು, “ಇದೇನು ಧರ್ಮರೇ ತಲೆ ತಗ್ಗಿಸಿ ಕುಳಿತಿರುವಿರಿ? ನಿಮ್ಮ ಅರಸಿಯನ್ನು ಕರೆತನ್ನಿ”. ಎನ್ನುತ್ತಾನೆ. ಉಪಾಯವಿಲ್ಲದೆ ಧರ್ಮರು ದ್ರೌಪದಿಯೆಡೆ ಹೋಗೆ, ತಮ್ಮ ಸೋಲಿನ ವಿಷಯವನ್ನು ತಿಳಿಸಿ, ಅವಳನ್ನು ಆಟಕ್ಕೆ ಆಹ್ವಾನಿಸುತ್ತಾರೆ. ಆಗ ದ್ರೌಪದಿ, “ನಾನು ಮುಟ್ಟಾಗಿ ಮೂರನೆಯ ದಿನದ ಸ್ನಾನ ಮಾಡಿಲ್ಲ. ತುಲಸಿಯ ಕದಿರನ್ನು ಮುಡಿದಿಲ್ಲ. ಈ ಸ್ಥಿತಿಯಲ್ಲಿ ನಾನ ಆಟಕ್ಕೆ ಬರಲಾರೆ” ಎನ್ನುತ್ತಾಳೆ. ಧರ್ಮರು ನಿರುಪಾಯರಾಗಿ ಕುರುರಾಯನೆಡೆ ಹೋಗಿ, ದ್ರೌಪದಿ ಆಟವಾಡಲು ಬರಲಾರದ ನಿರುಪಾಯ ಸ್ಥಿತಿಯನ್ನು ವಿವರಿಸುತ್ತಾರೆ. ರೂಪಸಿಯಾದ ದ್ರೌಪದಿಯೊಡನೆ ಪಗಡೆಯಾಡುವ ಅವಕಾಶ ತಪ್ಪಿದುದಕ್ಕಾಗಿ ಕುರುರಾಯ ಹಳಹಳಿಸುತ್ತಾನೆ. ದ್ರೌಪದಿಯನ್ನು ಕರೆ ತರುವ ತನ್ನ ಹಂಬಲವನ್ನು ಅಷ್ಟಕ್ಕೆ ಬಿಡದೆ, ಕರ್ಣನಿಗೆ ಅವಳನ್ನು ಕರೆತರಲು ಅಜ್ಞಾಪಿಸುತ್ತಾನೆ.  ಸಾತ್ವಿಕನಾದ ಕರ್ಣನು, “ಯಾರ ತಲೆಯ್ನಾದರೂ ಕತ್ತರಿಸಿ ತರುತ್ತೇನೆ. ಪರಸತಿಯನ್ನು ಮಾತ್ರ ತರಲಾರೆ ಎನ್ನುತ್ತಾನೆ.  ಆಗ ಕುರುರಾಯ, “ನನ್ನ ಅನ್ನವುಂಡು ನನ್ನ ಸುಣ್ಣ ತಿಂದು ನನ್ನ ಮಾತು ಸಲ್ಲಿಸುವುದಿಲ್ಲವೇ? ಎಲೈ ಕರ್ಣನೇ ನನ್ನಿಂದ  ಬೇರೆಯಾಗಿ ಪ್ರತ್ಯೇಕ ಪಂಜರದ ಅರಮನೆಯನ್ನು ಕಟ್ಟಿಕೋ” ಎಂದು ಗುಡುಗುತ್ತಾನೆ.  ಆಗ ಕರ್ಣನು, “ಊಳೀಗಲದಲ್ಲಿಇರುವುದು ಅತಿಕಷ್ಠ. ಹಾಗಿದ್ದ ಮೇಲೆ ಹೇಳಿದ ಕೆಲಸವನ್ನು ಮಾಡಬೇಕು: ಇಲ್ಲ ಅವರಿಂದ ದೂರವಾಗಬೇಕು”. ಎಂದುಕೊಂಡು ಕಣ್ಣೀರು ಮಿಡಿಯುತ್ತಾನೆ. ಕಿಂಕರ್ತವ್ಯ ಮೂಢನಾಗಿ  ಕರ್ಣ ತನ್ನ ತಂದೆ ಸೋರ್ಯನೆಡೆ ಹೋಗಿ, ತನ್ನ ಕಷ್ಟವನ್ನು  ನಿವೇದಿಸಿಕೊಳ್ಳೂತ್ತಾನೆ.  ಸೂರ್ಯದೇವನು “ಮಗನೇ ದ್ರೌಪದಿಯೆಡೆ ಹೋಗಿ ಅವಳ ಅಂಬೋಣ ತಿಳೀದು ಬಾ” ಎನ್ನುತ್ತಾನೆ. ತಂದೆಯ ಆದೇಶದಂತೆ ಕರ್ಣ ದ್ರೌಪದಿಯೆಡೆಗೆ ಹೋದಾಗ, ದ್ರೌಪದಿ ಕರ್ಣನನ್ನು ಆದರದಿಂದ ಉಪಚರಿಸಿ, “ಭಾವನವರೇ, ನನ್ನವರು ನನಗೆ ಸಣ್ಣ ಕಾಲಿನ ಮಂಚವನ್ನು ಕೊಟ್ಟಿದ್ದಾರೆ. ಅದರ ಮೇಲೆ ಇಬ್ಬರೂ ಕೂಡ್ರೊಲಾಗದು. ಅರ್ಜುನನ ಸೆಳಮಂಚನವನ್ನು ತರಲೋ” ಎನ್ನುತ್ತಾಳೆ. ಅದಕ್ಕೆ ಪ್ರತ್ಯುತ್ತರವಾಗಿ ಕರ್ಣ, “ನನ್ನ ತಮ್ಮಂದಿರು ಸೆರೆಯಲ್ಲಿರುವಾಗ ನನಗೇಕೆ ಸೆಳಮಂಚ? ನನಗೆ ಮಣೆಯೊಂದು ಸಾಕು. “ಎನ್ನುತ್ತಾನೆ. “ದ್ರೌಪದಿಯು ಕರ್ಣನಿಗೆ ತಾಂಬೂಲನ್ನು ಕೊಟ್ಟು ತಾನು ತಂಬೂಲ ಸೇವಿಸುತ್ತಾಳೆ. ತಾಂಬೂಲ ಸೇವಿಸುವಾಗ , ಅಡಿಕೆ “ತಲೆಗೆ ಹತ್ತಿ” ದ್ರೌಪದಿ ತಲೆ ತಿರುಗಿ ಬೀಳೂವುದನ್ನು  ಗಮನಿಸಿದ ಕರ್ಣ, ತನ್ನ ಹಚ್ಚಡ ಸೆರಗಿನಿಂದ ಅವಳನ್ನು ಹಿಡಿಯುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಎಚ್ಚೆತ್ತ ದ್ರೌಪದಿ ಕರ್ಣನನ್ನು ಕುರಿತು “ಇದೇನು ಭಾವನವರೇ ನೀವು ನನ್ನನ್ನು ಹಚ್ಚಡ ಸೆರಗಿನಿಂದ ಹಿಡಿದಿರಿ? ಗೋವಳ ವಂಶದವರಿಗೂ ನಿಮಗೂ ಹೊಲೆ ಮೈಲಿಗೆಯೇನು?” ಎಂದು ಕೇಳುತ್ತಾಳೆ. ಆ ಮಾತಿಗೆ ಕರ್ಣನು, ಭಾವ ಮೈದುನಿಯನ್ನು ಮುಟ್ಟಬಾರದೆಂದು. ನಿನ್ನನ್ನು ನಾನು ಹಚ್ಚಡದ ಸೆರಗಿನಲ್ಲಿ ಹಿಡಿದೇನು” ಎನ್ನುತ್ತಾನೆ. ಅನಂತರ ಕರ್ಣ ಪಗಡೆಯಾಟದ ಪಸ್ತಾಪವನ್ನು ತೆಗೆದು, “ಕುರುರಾಯನು ನಿನ್ನ ಆಟಕ್ಕೆ ಕರೆತರಲು ಆಜ್ಞಾಪಿಸಿ ನನ್ನ ಕಳೂಹಿಸಿದ್ದಾನೆ.” ಎಂದು ತಿಳಿಸುತ್ತಾನೆ. ಆಗ ದ್ರೌಪದಿ, “ನಾನು ನಿನ್ನ ಬೆನ್ನ ಹಿಂದೆ ಹೋದರೆ ನಿಮ್ಮ ಹೆಂಡತಿಯೆಂದು ಕರೆದಾರು : ನಿಮ್ಮ ಮುಂದೆ ನಡೆದರೆ ನಿಮ್ಮ ತಂಗಿಯೆಂದು ಕರೆದಾರು. ಆದ್ದರಿಂದ ನಾನು ನಿಮ್ಮ ಜೊತೆಗೆ ಬರುವುದಿಲ್ಲ. ಹೀಗೆಂದು ನಿಮ್ಮಣ್ಣ ಕುರುರಾಯನಿಗೆ ಹೇಳು” ಎನ್ನುತ್ತಾಳೆ.  ಆಗ ಕರ್ಣನು ರಹಸ್ಯವಾಗಿ ದ್ರೌಪದಿಗೆ ಹೇಳುತ್ತಾನೆ. “ಎಲೈ ದ್ರೌಪದಿಯೇ ನಾನು ಹೋದ ಮೇಲೆ ನನ್ನ ಬೆನ್ನಿಗೆ ದುಶ್ಯಾಸನ ಬರುತ್ತಾನೆ: ನೀನು ಮನೆಯ ಮೀಡವನ್ನು ಜಡಿದು, ಏಳು ಮಾಳೀಗೆಯ ಒಳಗಿರು. ಅವನಿಗೆ ಬಾಗಿಲು ತೆರೆಯಬೇಡ. ಆತ ನಿನ್ನ ಮಣಿಮಾಡನ್ನು ಮುರಿದು ಒಳಗೆ ಬಂದು, ನಿನ್ನ ಮೇಲು ಎಳೆಯುತ್ತಾನೆ. ತತ್‌ಕ್ಷಣದಲ್ಲಿ ನೀನು ಶ್ರೀ ಹರಿಯನ್ನು ನೆನೆದು ಕೋ; ನಿನ್ನ ಮೆಲು (ಮೇಲುದ) ಸೆರಗು ಸ್ಥಿರವಾಗುವುದು. ಆಗ ದುಶ್ಯಾಸನ ನಿನ್ನನ್ನು ಎಳೆದು  ರಾಜಬೀದಿಗೆ ತರುತ್ತಾನೆ. ಹೀಗೆ ಮುಂಜಾಗ್ರತೆ ಮಾತನ್ನಾಡಿ, ಕುರುರಾಯೆನೆಡೆ ಮರಳುತ್ತಾನೆ. ಕರ್ಣ ಸುಮ್ಮನೆ ತಿರುಗಿ ಬಂದುದನ್ನು ಕಂಡು, ಕುರುರಾಯ ಚಡಪಡಿಸುತ್ತಾನೆ. ಆದರೂ ಸುಮ್ಮನಾಗದೇ  ದುಶ್ಯಾಸನನ್ನು ಕರೆದು, ಪಾಂಡವರನ್ನು ಸೆರೆಯಲ್ಲಿಡಲು ಹೇಳುತ್ತಾನೆ. ಅಣ್ಣನೆಡೆಗೆ ಹೋಗುತ್ತಾನೆ. ಆಗ ಕುರುರಾಯ ಪಾಂಡವರರಸಿಯನ್ನು ಕರೆತರಲು  ದುಶ್ಯಾಸನಿಗೆ ಆಜ್ಞಾಪಿಸುತ್ತಾನೆ. ಅಣ್ಣನ ಮಾತು ಕೇಳಿದ ದುಶ್ಯಾಸನನಿಗೆ ಪರಮಾನಂದ. “ಹಿತ್ತಿಲ ಕಡೆಗೆ ಸವತೆಯನ್ನು ನೆಟ್ಟಿದ.  ಅದು ನೆಟ್ಟವರಿಗರ್ಧ ! ನೆರೆಯವರಿಗರ್ಧ. ಅಂತೆಯೇ ಅಣ್ಣ ತಂದ ಮಡದಿ ಅಣ್ಣನಿಗರ್ಧ ನನಗರ್ಧ! ಎಂದು ಮನದಲ್ಲಿ ಮೆಲುಕಡಿಸುತಾ ದ್ರೌಪದಿಯರ ಮನೆಗೆ ಧಾವಿಸುತ್ತಾನೆ. “ಅತ್ತಿಗೆ ಅತ್ತಿಗೆ” ಎಂದು ಕೂಗುತ್ತಾನೆ. ತನ್ನ ಮಾತಿನ ಓಗೊಡದ ಅತ್ತಿಗೆಯ ಮೇಲೆ  ರೋಷತಾಳಿ, ಅವಳ ಮಣಿ ಮಾಡನ್ನೆ ಮುರಿಯುತ್ತಾನೆ.  ದ್ರೌಪದಿಯ ಸೀರೆ ಸೆರಗು ಹಿಡಿದು ಜಗ್ಗುತ್ತಾನೆ.  ದ್ರೌಪದಿಯ ಶ್ರೀ ಹರಿಯನ್ನು ನೆನೆಯುತ್ತಾಳೆ.  ಆಗ ಅವಳ ಮೆದಲು ಸ್ಥಿರವಾಗುವುದು. ಆಗ ದುಶ್ಯಾಸನ ಸಿಟ್ಟಿನಿಂದ ದ್ರೌಪದಿಯನ್ನುರಾಜಂಗಳಕ್ಕೆ ಎಳೆ ತಂದು, “ಎಲೈ ಅತ್ತಿಗೇ ಬಿಚ್ಚಿ ಹೋದ ನಿನ ಸೀರೆಯನ್ನು ಉಟ್ಟುಕೋ: ಬಿಚ್ಚಿದ ಮುಡಿಯನ್ನು ಕಟ್ಟಿಕೋ: ನಿನ್ನನ್ನು ಈ ಸ್ಥತಿಯಲ್ಲಿ ನೋಡಿದರೆ ಹಾದಿಯಲ್ಲಿ ಹೋಗುವವರಿಗೆ ಅಪಶಕುನ ವಾಗುವುದು ” ಎನ್ನುತ್ತಾನೆ.

ದುಶ್ಯಾಸನನು ಮಾಡಿದ ಮಾನಭಂಗದಿಂದ ಕದ್ರುದ್ಧಳಾದ ದ್ರೌಪದಿ, “ಎಲೈ ಕಳ್ಳ ದುಶ್ಯಾಸನನೇ, ಭೀಮನು ಎದ್ದು ನಿನ್ನನ್ನು ಮುರಿಯಲಿ; ರಕ್ತದ ಕೋಡಿ ಹರಿಯಲಿ, ಅದರಲ್ಲಿ ನನ್ನ ದೆವಾಂತಗವನ್ನು ಅದ್ದಿಸಿ ಉಡುತ್ತೇನೆ. ನನ್ನ ಬಿಚ್ಚಿದ  ಮುಡಿಯನ್ನು ಕಟ್ಟುತ್ತೇನೆ: ಎಂದು ಪ್ರತಿಜ್ಞೆ ಮಾಡುತ್ತಾಳೆ. ಮತ್ತು ದುಶ್ಯಾಸನನ ಬೆನ್ನಿಗೆ ಕುರುರಾಯನ ಅರಮನೆಗೆ ಬರುತ್ತಾಳೆ. ದ್ರೌಪದಿಯನ್ನು ದೂರದಲ್ಲಿ ಕಂಡ ಕುರುರಾಯ ತಾಯಿ ಭೋಸ್ಪತಿ  (ಗಾಂಧಾರಿ?)ಯನ್ನು ಕುರಿತು, “ಅಮ್ಮ ನಿನ್ನ ಮನೆಗೆ ಸೊಸಿ ಬರುತ್ತಿದ್ದಾಳೆ. ಕೈ ಕಾಲು ಮುಖ ತೊಳೆಯಲು ಅವಳಿಗೆ ನೀರು ಕೊಡು, ಕೂಡ್ರಲು ಹೊನ್ನ ಮಣೆಕೊಡು” ಎನ್ನುತ್ತಾನೆ. ಆದರೆ ದ್ರೌಪದಿ ಬೋಸ್ಪತ್ತಿಯ ಅತಿಥ್ಯವನ್ನು ಸ್ವೀಕರಿಸುವುದಿಲ್ಲ. ಕುಕರುರಾಯ ತಾಂಬೂಲ  ನೀಡಿದರೆ ಅದನ್ನು ಮುಷ್ಟಿಯಲ್ಲಿ ಮುರಿದೊಗೆದು ಕರ್ಣನ ಕೈ ವೀಳ್ಯವನ್ನು ಮೇಲುತ್ತಾಳೆ. ಕುರುರಾಯ ದ್ರೌಪತಿಯನ್ನು ಕುರಿತು, “ಭೋಸ್ಪತಿಯ ಹತ್ತಿರ ಹೇಳಿ ಹೊನ್ನ ಹಸೆ ತಯಾರಿಸಿದ್ದೆ: ನಿನಗಾಗಿ ಹೊನ್ನ ಹಸೆ ಬಿಸಿದ್ದೇನೆ: ದ್ರೌಪದಿ ಒಂದು ರಾತ್ರಿ ನನ್ನ ಜೊತೆಯಲ್ಲಿ…..” ಎಂದು ಅಂಗಲಚುತ್ತಾನೆ.  ಈ ಮಾತಿನಿಂದ ಸಿಡಿದೆದ್ದ ದ್ರೌಪದಿ, “ಬೋಸ್ಪತ್ತಿಯ ಹತ್ತಿರ ಹೇಳೀ ಹೊನ್ನ ಹಸೆನೇಯಿಸಿದರೆ  ನೀನಿದ್ದಿಯಲ್ಲಾ. ಬೇಕಾದರೆ ನಿನ್ನ ತಾಯಿಯನ್ನು ತಂದು ಜೊತೆಯಲ್ಲಿಟ್ಟುಕೋ” ಎಂದು ಗುಡುಗುತ್ತಾಳೆ. ಇದರಿಂದ ಸಿಟ್ಟಿಗೆದ್ದ ಕುರುರಾಯ ಅವಳನ್ನು ಒಂಟಿಗಾಲಿನ ಮೇಲೆ ಉರಿ ಬಿಸಿಲಲ್ಲಿ ನಿಲ್ಲಿಸಲು ದುಶ್ಯಾಸನನಿಗೆ ಹೇಳುತ್ತಾನೆ. ದುಶ್ಯಾಸನ ದ್ರೌಪತಿಯನ್ನು ಚಿನ್ನದ (ಕೆಂಡದ?) ಕೋಟೆಯ ಹತ್ತಿರ ಉರಿಬಿಸಲಿನಲ್ಲಿ ನಿಲ್ಲಿಸುತ್ತಾನೆ.

ದ್ರೌಪದಿ ತನಗೆ ಕರುಣೆಯ ದೊರಬೇಕು ಗಂಡಂದಿರೆಡೆ ಕೈಚಾಚುತ್ತಾಳೆ. “ಅಯ್ವರು ಮಡದಿ ಕೈಸೆರೆ ಹೋಗುವಾಗ ನೀವಯ್ವರು ನೋಡಿ ಸಂತೋಷದಿಂದಿದ್ದೀರಾ? ಎಂದು ಗೋಳಿಡುತ್ತಾಳೆ. ದ್ರೌಪದಿಯ ಮಾತನ್ನು ಕೇಳೀದ ಭೀಮ ಮಣಿಮಾಡನ್ನು ಮೆಟ್ಟಿ ಮುರಿದನು. ಆಗ ಧರ್ಮರು ಭೀಮನನ್ನು ತಡೆದು, “ಸತ್ಯ ಕುಲದ ಹೆಣ್ಣು ತನ್ನ ಸತ್ಯದಲ್ಲಿರುತ್ತಾಳೆ. ಇನ್ನೊಂದು ತಾಸು ಸಿಟ್ಟನ್ನು ತಡೆದಿಟ್ಟುಕೋ” ಎಂದು ಸಂತೈಸುತ್ತಾನೆ.

ಈ ಕಡೆ ಕುರುರಾಯ ದುಶ್ಯಾಸನನ್ನು ದ್ರೌಪದಿಯೆಡೆ ಕಳಿಸಿ ಅವಳನ್ನು ಪಗಡೆಯಾಡಲು ಕರೆಸಿಕೊಳ್ಳುತ್ತಾನೆ. ದ್ರೌಪದಿಗೆ ಪಗಡೆಯಾಡಲು ಕುರುರಾಯ ಹೊಸ ಮಣೆಯನ್ನು ಕೊಟ್ಟರೆ, ಅದನ್ನು ದ್ರೌಪದಿ ಪುಡಿ ಪುಡಿ ಮಾಡಿ, “ಕಳ್ಳ ಹಲಿಗೆಯಿಂದ ಕಳ್ಳ ಪಗಡೆಯಾಟವಾಡಿ, ಎಲ್ಲರನ್ನು ಗೆದ್ದೆ” ಎಂದು ಬೀದಿಗೊಗೆದಳು. ಕರ್ಣನನ್ನು ಕರೆದು ಹೊಸ ಹಲಿಗೆಯನ್ನು ತರಲು ನಾರಾಯಣ ದೇವನೆಡೆ ಕಳಿಸುವಳು. ಕರ್ಣನಿಗೆ ನಾರಾಯಣದೇವನು ಹೊಸ ಹಲಿಗೆಯನ್ನು ಕೊಟ್ಟು, ಎಲೈ “ಕರ್ಣ ದೇವನೇ ತಂಗಿ ಪಗಡೆಯಾಡುವಾಗ, ತಂಗಾಳಿ  ಬೀಸಿ, ತಂಗಿಯ ಮೇಲುದ ಸರಗು ಮರಚಿ ಬೀಳುತ್ತದೆ. ಆಗ ಅವಳೆದೆಯ ಸೌಂದರ್ಯವನ್ನು ಕಂಡು ಗುಂಗಾದ ಕುರುರಾಯನು ಪಗಡೆಯಾಟ ಮೆರೆಯುತ್ತಾನೆ. ಆಗ ತಂಗಿ ಪಗಡೆಯಾಟ ಗೆಲ್ಲುತ್ತಾಳೆ.” ಎಂದು ಹೇಳಿ, ಹರಸಿ ಕರ್ಣನನ್ನು ಕಳಿಸಿಕೊಡುತ್ತಾನೆ.

ಕರ್ಣನು ತಂದು ಕೊಟ್ಟ ಪಗಡೆ ಹಲಿಗೆಯಿಂದ ದ್ರೌಪದಿ ಕುರುರಾಯನ ಜೊತೆಗೆ ಅಯ್ದು ಆಟವಾಡಿ ಪಾಂಡವರೈವರನ್ನೂ ಛತ್ರ ಚಾಮರ ಸಹಿತವಾಗಿ ಗೆಲ್ಲುತ್ತಾಳೆ. ಆಟದಲ್ಲಿ ಸೋತ ಕುರುರಾಯ ಪಾಂಡವರನ್ನು ಸೆರೆಮನೆಯಿಂದ ವಿಮುಕ್ತಿಗೊಳಿಸುತ್ತಾನೆ. ತಾಂಬೂಲವಿತ್ತು ಉಪಚರಿಸುತ್ತಾನೆ. ದ್ರೌಪದಿಮಾತ್ರ ಕುರುರಾಯವಿತ್ತ ತಾಂಬೂಲ ಪರಿಗ್ರಹಿಸದೆ ಕರ್ಣನ ಕೈವೀಳ್ಯವನ್ನು ತಿನ್ನುತ್ತಾಳೆ. ಇದನ್ನು ಸಹಿಸದ  ಕುರುರಾಯ “ಅಂಬಿಗರ ಕರ್ಣ ಕಡುಚೆಲುವನು ಅವನ ವಿಳ್ಯೆವನ್ನು ದ್ರೌಪತಿ ತಿನ್ನುವಳು” ಎಂದು ತುಂಬಿದ ಸಭೆಯಲ್ಲಿ ನುಡಿಯುತ್ತಾನೆ. ಈ ನುಡಿಯಿಂದ ಕೆರಳಿದ ಕರ್ಣನು, “ಅಂಬಿಗರು, ಅಂಬಿಗರು ಎಂದು ತುಚ್ಛಿಕರಿಸಿ ಮಾತನ್ನಾಡಬೇಡ. ಹಾಗೆ ಮಾತನ್ನಾಡುವ ನಿನ್ನನ್ನು ಮೊದಲು ಕೊಲ್ಲುತ್ತೇನೆ” ಎಂದು ಗರ್ಜಿಸುತ್ತಾನೆ. ತತ್‌ಕ್ಷಣದಲ್ಲಿ ಅರ್ಜೇರು ಇನ್ನೂರು ಕೋಟಿ, ಬಿಲ್ಲುಗಾರರು ಮುನ್ನೂರುಕೋಟಿಗೆ ಮೀರಿ ಇಂದ್ರಾಕ್ಷರು ಕರ್ಣನ ಬೆನ್ನಿಗೆ ನಡೆಯುತ್ತಾರೆ. ಇದರಿಂದ ಕರ್ಣನಿಗೆ ಬಯ್ದವರಾರು? ಅವನಿಲ್ಲದ ನಮ್ಮರಾಜಂಗಳಶುರವಲ್ಲ? ಎನ್ನುತ್ತಾಳೆ. ಆಗ ಕುರುರಾಯ ಕರ್ಣನನ್ನು ಸಮಾಧಾನಪಡಿಸಿ ಕರೆ ತರುತ್ತಾನೆ.

ಇತ್ತ ಧರ್ಮರು, “ನಾವು ಯೋಚಿಸಿದ ಮನಸ್ಸು ಯೋಚಿಸಿದಂತೆಯೆ ಇದ್ದರೆ ಹನ್ನೆರಡು ವರ್ಷ ವನವಾಸ ತಿರುಗಿ ಬರುತ್ತೇವೆ:” ಎಂದು ತಮ್ಮಂದಿರೊಡನೆ ವನವಾಸಕ್ಕೆ ಹೊರಡಲು ಅನುವಾಗುತ್ತಾರೆ. ಒಂದು ಆಲದ ಮರದೆಡೆ ಹೋಗಿ ತಮ್ಮ ಬಿಲ್ಲು ಬಾಣಗಳನ್ನೆಲ್ಲ ಅದರ ಮೇಲೆ ಹೇರಿ, “ನಮ್ಮ ಬಿಲ್ಲು ಬಾಣಗಳು ನರಮನುಷ್ಯರಿಗೆ ಸಿಗಕೂಡದು. ನರಮನುಷ್ಯರು ಅವನ್ನು ಮುಟ್ಟಿದರೆ ಅವುಸರ್ಪವಾಗಿ ಕಡಿಯಲಿ” ಎಂದು ಶಾಪವಿತ್ತು, ವನವಾಸಕ್ಕೆ ಹೋಗುತ್ತಾರೆ.

ಹನ್ನೆರಡು ವರ್ಷ ವನವಾಸ ಕಳೆದು ಆಲದ ಮರದೆಡೆ ಬಂದು ಕೂಡ್ರುತ್ತಾರೆ. ಆಗ ಧರ್ಮರು, “ನಮ್ಮ ತಾಯಿಗೆ ಒಂದು ಹೆಣ್ಣು ಮಗುವಿದ್ದರೆ, ಅವಳೆಡೆಗೆ ಹೋಗಿ ಒಂದು ತುತ್ತು ಉಂಡು ಬರಹಬಹುದಾಗಿತ್ತು. ಆದರೆ ಅವಳೀಗೆ ಹೆಣ್ಣೂ ಸಂತಾನವಿಲ್ಲ”ಎಂದು ಕಣ್ಣೀರಿಡುತ್ತಾಳೆ. ಆಗ ದ್ರೌಪದಿ ಕರ್ಣನನ್ನು ಕರೆದು, ತನ್ನ ಅಣ್ಣ ನಾರಾಯಣ ವೇವನೆಡೆ ಕಳಿಸಿ, ಪಾಂಡವರ ಹಸಿವು ನೀಗಿಸಲು ಭೂಮಿ ತೂಕದ ಹಲಸಿನ ಹಣ್ಣೊಂದನ್ನು ತರಿಸುತ್ತಾಳೆ. ಧರ್ಮರು ಹಣ್ಣನ್ನು ಬಿರಿದು ಅದರಲ್ಲಿ ಅರ್ಧಭಾಗವನ್ನು ಭೀಮನಿಗೆ, ಉಳಿದರ್ಧ ಭಾಗವನ್ನು ಉಳೀದವರಿಗೆ ಹಂಚುತ್ತಾನೆ. ಹಲಸಗಿನ ಹಣ್ಣಿನ ಚಾರಿ, ಗೊಂಚಲು ಸಹಿತವಾಗಿ ತಿಂದರೂ ಭೀಮನ ಕಿಬ್ಬೊಟೆಯೂ ತುಂಬಲಿಲ್ಲ.

ಅಲ್ಲಿಂದ ಪಾಂಡವರು ಕುರುರಾಯನ (ಇಲ್ಲಿ ಕುರುರಾಯನೆಂದರೆ ಧುರ್ಯೋಧನನಲ್ಲ. ವೀರಾಟರಾಯನ ಬೋಸ್ಪತಿ, ವೀರಾಟರಾಯನ ಹೆಂಡತಿ ಸುದೇಷ್ಣೇ ಎಂದು ಕೊಳ್ಳಬೇಕು. ಹಾಡುಗಾರ್ತಿಯ ಮರವೆಯಿಂದ ಹೆಸರು ಇನ್ನೊಬ್ಬರಿಗಾಗಿದೆ. ಅರಮನೆಯೆಡೆಗೆ ಹೋಗುತ್ತಾರೆ. ಧರ್ಮರು ದೇವರ  ಕೆಲಸಕ್ಕೆ , ಭೀಮನು ಅಡಿಗೆ ಮಾಡಲಿಕ್ಕೆ ಅರ್ಜುನನ್ನು ಮಕ್ಕಳೀಗೆ ಓದು ಬರೆಹ ಕಲಿಸಲಿಕ್ಕೆ, ನಕುಲನು ಸೊಪ್ಪುತರಲಿಕ್ಕೆ, ಸಹದೆವರು ದನಕಾಯಲಿಕ್ಕೆ, ದ್ರೌಪದಿಯು ಸುದೆಷ್ಣೇಗೆ ಹೂಮುಡಿಸಲಿಕ್ಕೆ ಉಳಿಯುತ್ತಾರೆ.

ಧರ್ಮದ ಹಾಡು. ಕ.ರಾ.ಕೃ ಅವರ “ಜನಪದ ಗೀತಗಳಲ್ಲಿ ಮಹಾಭಾರತ” ಎಂಬ ಗ್ರಂಥದಲ್ಲಿಯ “ದ್ರೌಪತಿ”

[1] ಹಾಡನ್ನು      ಸ್ವಲ್ಪ ಮಟಟಿಗೆ ಹೋಲುತ್ತದೆ. ಆ ಹೋಲಿಕೆಯಿರುವುದು ದ್ರೌಪದಿಗ ಕೆಟ್ಟ ಕನಸು ಬೀಳೂವುದು. ಪಾಂಡವರು ದುರ್ಯೊಧನನ ಜೊತೆಯಲ್ಲಿ ಪಗಡೆಯಾಡಿ ಸೋಲುವುದು, ಕೊನೆಗೆ ದ್ರೌಪದಿಯಲ್ಲಿ ದುರ್ಯೋಧಮನನನ್ನು ಗೆಲ್ಲುವುದು ಈ ಮೂರು ನಾಲ್ಕೂ ಅಂಶಗಳಲ್ಲಿ ಮಾತ್ರ. ಧರ್ಮರ ಕಥೆಯಲ್ಲಿಯ ಕರ್ಣ, ದುಶ್ಯಾಸನ, ನಾರಾಯಣಸ್ವಾಮಿ ಮುಂತಾದವರ ಪ್ರಸ್ತಾಪಗಳು. ಕ.ರಾ.ಕೃ. ಅವರ ದ್ರೌಪತಿ ಕಥೆಯಲ್ಲಿಲ್ಲ. ದುಶ್ಯಾಸನ ದ್ರೌಪದಿಯ ಸೀರೆ ಸೆಳೆಯುವ ವೃತ್ತಾಂತ ಶ್ರೀ,  ಕೃಷ್ಣ ಅವಳ ಸೆರಗು ಸ್ಥಿರ ವಾಗುವಂತೆ ಹರಸುವುದು, ದ್ರೌಪದಿ ದುರ್ಯೊಧನನ  ವಿಷಯದಲ್ಲಿ ತೊಟ್ಟ ಪ್ರತಿಜ್ಞೆ ಪಾಂಡವರ ಸೋಲಿಗೆ ಕಾರಣವಾದ ದುರ್ಯೊಧನನ ಕಳ್ಳ ಪಗಡೆ, ದ್ರೌಪದಿ ಕರ್ಣನ ಮೂಲಕ ನಾರಾಯಣ ದೇವನಿಂದ ಹೊಸ ಪಗಡೆ ಮಣಿಯನ್ನು ತರಿಸಿಕೊಳ್ಳುವುದು, ಪಗಡೆಯಾಡುವಾಗ ಗಾಳಿಯಿಂದ ದ್ರೌಪದಿಯ ಸೆರಗು ಜಾರಿ ಅವಳ ಬಾಹು ಮೂಲಗಳ  ದರ್ಶನವಾಗುವುದು, ಅವನನ್ನು ನೋಡುವುದರಲ್ಲಿ ದುರ್ಯೊಧನ ಮಗ್ನನಾದುದರಿಂದ ಪಗಡೆಯಾಟದಲ್ಲಿ ಸೋಲುವುದು,ಕರ್ಣನು ದ್ರೌಪದಿಯ ವಿಷಯದಲ್ಲಿ ತಾಳೀದ ಉನ್ನತ ಮನೋಭಾವನೆ, ಆತನ ಚಾರಿತ್ರಿಕ ಶುದ್ಧಿ, ಅವನು ದ್ರೌಪದಿಗೆ ಮುಂದೊದಬಹುದಾದ ಕೇಡಿನ ಸೂಚನೆ ನೀಡುವುದು ಈ ಮುಂತಾದ ಅನೇಕ ಹೊಸ ಅಶಯಗಳಿಂದ ಧರ್ಮರ ಕಥೆ ಕ.ರಾ.ಕೃ. ಅವರ “ದ್ರೌಪತಿ” ಕಥೆಯಿಂದ ಹಾಗೂ ವ್ಯಾಸಭಾರತ ಕಥೆಯಿಂದ ಭಿನ್ನವಾಗಿದೆ.

ಕ.ರಾ.ಕೃ. ಅವರ “ದ್ರೌಪತಿ” ಯ ಹಾಡಿನಲ್ಲಿ ದ್ರೌಪತಿ ಎಸೆದ ದಾಳದಿಂದ ದುರ್ಯೊಧನನ ಹಣೆ ಒಡೆದು, ಹರಿದು ಬಂದ ರಕ್ತದಿಂದ, ದ್ರೌಪತಿ ತನ್ನ ಗುರುಬನ್ನು ಅದ್ದಿಸಿ ಕಟ್ಟಿಕೊಂಡ ಅಪೂರ್ವ ವಿಚಾರವೊಂದನ್ನು ಬಿಟ್ಟರೆ, ಉಳಿದೆಲ್ಲ ಅಂಶಗಳಲ್ಲಿ ಧರ್ಮರ ಹಾಡು “ದ್ರೌಪತಿಯ ಹಾಡಿಗಿಂತ ಮಿಗಿಲಾಗಿದೆ. ಧರ್ಮ ಭಿರುತ್ವ, ಭ್ರಾತೃ ವಾತ್ಸಲ್ಯ, ಪರದಾರ ವಿರತಿ ನೀತಿ, ಅವನ ಸತ್ವಾತಿಶಯ ಧರ್ಮರ ಹಾಡಿನಲ್ಲಿ ಪಡಿಮೂಡಿವೆ. ದ್ರೌಪದಿ ತಲೆತಿರುಗಿ ಬಿದ್ದಾಗ ಅವಳನ್ನು ಮುಟ್ಟದೆ ತನ್ನ ಹಚ್ಚಡದ ಸೆರಗಿಹಿಂದ ಹಿಡಿದೆತ್ತುವಲ್ಲಿ ಅವನ ಚಾರಿತ್ರಿಕ ಔನ್ನತ್ಯವನ್ನು ಕುಲಹೀನನೆಂದು ಬೇರೆ ಬೇರೆ ಸಂದರ್ಭಗಳಲ್ಲಿ ಕರೆದು, ಕೆರಳಿಸಿದ ಅಂಶ ಉಕ್ತವಾಗಿದೆ. ಆದರೆ ಇಲ್ಲಿ ದುರ್ಯೊಧನನೇ ಕಳ್ಳನ ಘನತೆಗೆ ಮಾತ್ಸರ್ಯಪಟ್ಟು, ಅವನನ್ನು “ಅಂಬಿಗನೆಂದು” ಕರೆದು ಕರ್ಣನ ನಿಷ್ಠರ ಕಟ್ಟಿಕೊಳ್ಳುವ ಹೊಸ ಆಶಯ ಸೇರಿದೆ. ಕರ್ಣನ ತೆಜೋವಧೆಗಾಗಿ ದುರ್ಯೊಧನ ಈ ಮಾತನ್ನು ಆಡಿದರೂ, ಈ ಪ್ರಸಂಗದಿಂದ ಕರ್ಣನ ಜನಪ್ರೀಯತೆ ಎದ್ದು ಕಾಣುವಂತಾಗಿದೆ. ಹೀಗೆ ಮಹಾಭಾರತದ ಖಳಚತುಷ್ಟಯಗಳಲ್ಲಿ ಒಬ್ಬನಾದ ಕರ್ಣನು ಧರ್ಮರ ಹಾಡಿನಲ್ಲಿ ಉದಾತ್ತೀಕರಣಗೊಂಡು ಸಾತ್ವಿಕ ತೇಜದಿಂದ ಕಳಕಳಿಸಿದ್ದಾನೆ.

ಧರ್ಮರ ಹಾಡಿನ ಕೆಂದ್ರ ವ್ಯಕ್ತಿ ದ್ರೌಪದಿ. ಕಥೆ ಆರಂಭವಾಗುವುದು ಕನಸಿನಿಂದ. ಅವಳ ಕನಸಿನ ರುಜುವಾತಿಗಾಗಿಯೇ, ಕಥೆಯ ಬೆಳವಣಿಗೆಯಾದಂತಿದೆ. ಧರ್ಮರ ಹಾಡಿನಲ್ಲಿ ದ್ರೌಪದಿ ವ್ಯಾಸಭಾರತ ದ್ರೌಪದಿಗಿಂತ ಗಟ್ಟಿಗಳು. ಗಂಡಂದಿರು ಪಗಡೆಯಲ್ಲಿ ಸೋತು ಸೆರೆಯಾಳಾದರೂ, ಅವಳು ಅಪ್ರತಿಭಳಾಗಲಿಲ್ಲ. ದುಶ್ಯಾಸನನ್ನು ಅಪಮಾನ ಮಾಡಿದ ಪ್ರಸಂಗದಲ್ಲಿ ಅಸಹಾಯಕ ಸ್ತ್ರೀಯಂತೆ ಗೋಗರೆಯದೆ ಸಿಟ್ಟಿ ನಿಂದ, ದುಶ್ಯಾಸನನ ರಕ್ತದಿಂದ ತನ್ನ ದೇವಾಂಗವನ್ನು ಅದ್ದಿಸಿ ಉಡುವು, ತನ್ನ ಬಿಚ್ಚಿದ ಮುಡಿಕಟ್ಟುವ ಪ್ರತಿಜ್ಞೆಯನ್ನು ಮಾಡುತ್ತಾಳೆ. ಈ ವಿನೂತನ ಬದಲಾವಣೆ ಧರ್ಮರ ಹಾಡಿನಲ್ಲಿ ಅಗ್ಗಳಿಕೆ ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣವು ಅವಳ ಪತಿಗಳೆದುರಿನಲ್ಲಿ, ಭೀಷ್ಮ ದ್ರೋಣ ಮುಂತಾದ ಧರ್ಮಿಷ್ಟರ ಸಮ್ಮುಖದಲ್ಲಿ ತುಂಬಿದ ಸಭೆಯಲ್ಲಾಗುತ್ತದೆ. ಆಗ ಅವರೆಲ್ಲ ಈ ಅನೀತಿಯುಕ್ತ ಕೃತಿಯನ್ನು ಪ್ರತಿಭಟಿಸದೇ ನಿಷ್ಕ್ರಿಯೆರಾಗಿ ಕುಳಿತ್ತದ್ದು, ವಿಚಿತ್ರವೆನಿಸುತ್ತದೆ.  ಇದನ್ನು ಗಮನಿಸಿದ ಸೂಕ್ಷ್ಮ ಪ್ರಕೃತಿಯ ಜಾನಪದ ಕವಿ, ಆ ಪ್ರಸಂಗವನ್ನೇ ಬದಲು ಮಾಡುವಲ್ಲಿ ತನ್ನ ಔಚಿತ್ಯ ಪ್ರಜ್ಞೆಯನ್ನು ತೋರಿದ್ದಾನೆ. ಈ ಬದಲಾವಣೆಯಲ್ಲಿ ಜಾನಪದ ಕವಿಯ ಉನ್ನತ ಮಟ್ಟದ ಸಾಂಸ್ಕೃತಿಕ ಹಿನ್ನಲೆಯ ದರ್ಶನವಾಗದಿರದು. ದ್ರೌಪದಿಯದು ಪಾದರಸದಂತಹ ಬುದ್ಧಿ.  ಕುರುರಾಯ ಕಟಪ ಪಗಡೆಯ ಮಣಿಯನ್ನು ಉಪಯೋಗಿಸಿ, ತನ್ನ ಪತಿಗಳನ್ನು ಸೋಲಿಸಿದ್ದನ್ನು ದ್ರೌಪದಿ ಬೇಗನೆ ಅರಿತಳೂ. ಅದಕ್ಕಾಗಿಯೇ ಅವಳು ನಾರಾಯಣ ದೇವನಿಂದ ಹೊಸಮಣಿಯನ್ನು ತರಿಸಿಕೊಂಡಿದ್ದು, ತನ್ನ ಗಂಡಂದಿರು ಸೆರೆಯಲ್ಲಿರುವಾಗಲೂ ದುರ್ಯೊಧನ ದುಶ್ಯಾಸನರಿಗೆ ಹೆದರೆದೆ ದಿಟ್ಟತನದ ಉತ್ತರ ಕೊಡುವಲ್ಲಿ ದ್ರೌಪದಿಯ ಕಲಿತನ ವ್ಯಕ್ತವಾಗುತ್ತದೆ.

ದ್ರೌಪದಿ ದುರ್ಯೊದನನ ಜೊತೆಯಲ್ಲಿ ಪಗಡೆಯಾಡಿ ಸೋಲಿಸಿದ ಅಂಶಜಾನಪದ ಭಾರತದಲ್ಲಿ ಮಾತ್ರ ಬರುತ್ತದೆ. ಧರ್ಮದ ಹಾಡಿನಲ್ಲಿ ದುರ್ಯೊಧನನ ಸೋಲಿಗೆ ಕಾರಣ ದ್ರೌಪದಿಯ ಬಾಹುಮೂಲಗಳ ದರ್ಶನದಿಂದ ದುರ್ಯೊಧನನಿಗುಂಟಾದ ಚಿತ್ತ ಚಾಂಚಲ್ಯ,ನನಗೆ ದೊರೆತ ಮಹಾಭಾರತದ ಇನ್ನೊಂದು ಪಾಠದಲ್ಲಿ ದ್ರೌಪದಿಯು ಪಾರದರ್ಶಕ ಸೀರೆಯನ್ನುಟ್ಟು ತನ್ನ ಅಂಗಾಂಗಳನ್ನು ದುರ್ಯೊಧನನಿಗೆ ಪ್ರದರ್ಶಿಸುತ್ತಾ, ಆಟವಾಡಿ ಅವನ ಚಿತ್ತ ಚಂಚಲನಗೊಳಿಸಿ ಆಟವನ್ನು ಗೆದ್ದ ಪ್ರಸ್ತಾಪ ಬರುತದೆ.  ಇಲ್ಲಿ ದ್ರೌಪದಿಯ ವರ್ತನೆ, ಸತಿಗೆ ಒಗ್ಗುವ  ವರ್ತನೆಯಾಗಿ ತೋರುವುದಿಲ್ಲ. ಧರ್ಮದ ಹಾಡಿನಲ್ಲಿ ದ್ರೌಪದಿಯ ಎದೆಯ ಸೆರಗು ಗಾಳಿಯಿಂದ ಹಾರಿದ ಪ್ರಯುಕ್ತ ದುರ್ಯೊಧನನಿಗೆ ದ್ರೌಪದಿಯ ವಕ್ಷಸ್ಥಳದ ದರ್ಶನವಾದದದ್ದು. ಈ ಬದಲಾವಣೆ ದ್ರೌಪದಿಯ ಶೀಲಕ್ಕೆ ಮಾರಕವಲ್ಲ. ಹೀಗೆ ಧರ್ಮದ ಹಾಡಿನಲ್ಲಿ ದ್ರೌಪದಿಯ ಪಾತ್ರ ತೇಜಸ್ಸು. ಅವಳ ಜಾಣ್ಮೆ, ಸತೀತ್ವಗಳು ಹೊಡೆದು ಕಾಣುವಂತೆ ಚಿತ್ರಿತವಾಗಿವೆ.

ಕಥೆಯಲ್ಲಿಯ ಒಂದು ಪುಟ್ಟ ದೋಷವೆಂದರೆ ಪಾಂಡವರು ದ್ಯೂತವನ್ನು ದ್ರೌಪದಿಯ ಮೂಲಕ ಗೆದ್ದವರೂ ಮತ್ತೇ ಪುನಃ ವನವಾಸಕ್ಕೆ ಹೋಗಲು ಕಾರಣವಾದ ಹಿನ್ನೆಲೆ ಉಕ್ತವಾಗಿಲ್ಲ. ಹಾಲಕ್ಕಿ ಒಗ್ಗಲಿಗರ ಮಹಾಭಾರತ ಕಥೆಯಲ್ಲಿ “ಹೆಂಗಸರು ಗೆದ್ದ ರಾಜ್ಯದಲ್ಲಿ ಉಳಿಯುವುದು ಸರಿಯಲ್ಲ” ಎಂದುಕೊಂಡು ಪಾಂಡವರು ಹನ್ನೆರಡು ವರ್ಷ ವನವಾಸಕ್ಕೆ ಹೋದಂತಿದೆ.


[1]     ಕ.ರಾ.ಕೃ. ಜನಪದ ಗೀತಗಳಲ್ಲಿ ಮಹಾಭಾರತ ಪು.೬೫-೯೧