ಸಂಗೊಳ್ಳಿಯ ರಾಯಣ್ಣ ವೀರ-ಶೂರ-ಧೀರ, ಕ್ರಾಂತಿವೀರ, ರಾಷ್ಟ್ರವೀರ ಇತ್ಯಾದಿ ಹೆಸರುಗಳಿಂದ ಕರ್ನಾಟಕದ ಚರಿತ್ರೆಯಲ್ಲಿ ಅಮರನಾಗಿರುವನು. ಹಾಗೆ ನೋಡಿದರೆ ಕಿತ್ತೂರ ಸಂಸ್ಥಾನದ ಮೂಲಕ ಭಾರತದಲ್ಲಿ ಬ್ರಿಟೀಶರ ವಿರುದ್ಧ ಹೋರಾಡಿದ ಭಾರತ ಸ್ವಾತಂತ್ಯ್ರದ ಬೆಳ್ಳಿ ಚುಕ್ಕಿಗಳಾಗಿ ಕಿತ್ತೂರರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲಿಗರಾಗಿ ಶೋಭಿಸಿದ್ದಾರೆ.

೧೭೯೯ರ ಟೀಪು ಸುಲ್ತಾನನು ಬ್ರಿಟೀಶರ ಜೊತೆ ಯುದ್ಧವನ್ನು ನಡೆಯಿಸಿದನು. ಟೀಪು ಸುಲ್ತಾನ ಕನ್ನಡಿಗರನ್ನೂ ಶ್ರೀರಂಗ ದೇವರನ್ನು ಹುರದುಂಬಿಸುವ ಜೊತೆ ನೆನೆಯುತ್ತಾನೆ. ಆತ ಆಗಲೇ ಅರಸನಾಗಿದ್ದನು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರಿನ ಅರಸನಾಗಿರಲಿಲ್ಲ! ಕಿತ್ತೂರ ಸಂಸ್ಥಾನದ ವಾಲೀಕಾರ ಮನೆತನದವನು. ಅವನ ಅಜ್ಜ ರಾಗಣ್ಣ ತಂದೆ ದೊಡ್ಡಭರಮಪ್ಪ ತಾಯಿ ಕೆಂಚವ್ವ ಇವರೆಲ್ಲ ವೀರವೃತ್ತ ಜನರಾಗಿದ್ದರು, ಸಂಗೊಳ್ಳಿ ಕಿತ್ತೂರ ಸಂಸ್ಥಾನದ ಮಲಪ್ರಭಾ ದಡದಲ್ಲಿರುವ ಒಂದು ಹಳ್ಳಿಯಾಗಿತ್ತು. (ಈಗ ನವೀಲು ತೀರ್ಥದ ಆನೆಕಟ್ಟಿನಿಂದ ಮುಳುಗಿದೆ.) ಸಮೀಪ ಹೊಸ ಸಂಗೊಳ್ಳಿ ಊರಾಗಿದೆ. ರಾಯಣ್ಣನ ಸ್ಮಾರಕವೂ ಅಲ್ಲಿದೆ.

ರಾಯಣ್ಣನ ಅಜ್ಜ ರಾಗಣ್ಣ ರೋಗ-ರುಜಿಗಳಿಗೆ ನಾಟಿ ವೈದ್ಯನಾಗಿದ್ದನು. ರೋಗಗಳನ್ನು ಓಡಿಸುವುದರಿಂದ ಅವನಿಗೆ ಜನತೆ ಪ್ರೀತಿಯಿಂದ ರೋಗಣ್ಣನವರ ರಾಗಣ್ಣ, ರೋಗಣ್ಣವರ ಈ ಹೆಸರು ಪ್ರಾಪ್ತವಾಯಿತೆಂದು ಹೆಳವರು ಮತ್ತು ಜನಪದರು ತಿಳಿಸುತ್ತಿದ್ದಾರೆ. ಆದುದರಿಂದ ಬ್ರಿಟೀಶರು ತಮ್ಮ ವರದಿಗಳಲ್ಲಿ ‘ಕುರುಬರ ರಾಯಣ್ಣ ರೋಗಣ್ಣವರ’ ಎಂದು ದಾಖಲಾಯಿಸಿರುವರು.

ವೀರ ಸಂಗೊಳ್ಳಿ ರಾಯಣ್ಣ ಕಿತ್ತೂರ ಚನ್ನಮ್ಮ ಸೇನೆಯಲ್ಲಿ ಯೋಧನಾಗಿ ಸೇರ್ಪಡೆಯಾದನು. ೧೮ ೨೪ರಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರು ಮನೆಮಾತಾಯಿತು. ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟೀಶರ ಮೇಲೆ ಯುದ್ಧಸಾರಿದಾಗ, ಪ್ರಾಣ ಪಣಕ್ಕೆ ಹಚ್ಚಿ ವೀರವೇಶದಿಂದ ಹೋರಾಡಿದ ಮಹಾವೀರ ಸಂಗೊಳ್ಳಿ ರಾಯಣ್ಣನು ಕನ್ನಡಿಗರಿಗೆ ಭಾರತೀಯರಿಗೆ ರಾಷ್ಟ್ರವೀರನಾಗಿ ತೋರುತ್ತಿದ್ದಾನೆ.

ಚನ್ನಮ್ಮ ರಾಣಿ ಬ್ರಿಟೀಶರ ಸೆರಯಾಳಾದಾಗ ಭೂಗತನಾಗಿ ಸ್ಥಾನಿಕ ವೀರಸೇನೆ ಸಜ್ಜುಗೊಳಿಸಿದನು. ಒಟ್ಟಾರೆ ಐತಿಹಾಸಿಕ ಸಂಶೋಧನೆಗಳಿಂದ ತಿಳಿದು ನೋಡಿದಾಗ ಬ್ರಿಟಈಶರ ಹಾಗೂ ಬ್ರಿಟೀಶ ಸೈನಿಕರ ಜೊತೆ ಹನ್ನೆರಡು (೧೨) ಸಲ ಯುದ್ಧ ಮಾಡಿರುವುದು ತಿಳಿದು ಬರುತ್ತಿದೆ.

ಸುರಪುರ ನಾಯಕರ ನೆರವನ್ನು ಪಡೆದು ಸೈನ್ಯಬಲ ಹೆಚ್ಚಿಸಿಕೊಂಡನು. ೪೦೦ ಸೈನಿಕರಿಂದ ೩೦೦೦ ಸೈನಿಕರನ್ನು ಕೂಡಿಸಿದನು.

೧೮೨೯ರಲ್ಲಿ ರಾಣಿ ಚೆನ್ನಮ್ಮ ಮರಣಾನಂತರ ಕಿತ್ತೂರು ಸ್ವಾತಂತ್ಯ್ರಕ್ಕಾಗಿ ಸಂಗೊಳ್ಳಿ ರಾಯಣ್ಣನಿಂದ ಎರಡನೆಯ ಹಂತದ ಹೋರಾಟ ಪ್ರಾರಂಭವಾಯಿತು. ಬ್ರಿಟೀಶ ಹಾಗೂ ಅವರ ಕೈಕೆಳಗಿನ ಅಧಿಕಾರಿಗಳೊಂದಿಗೆ ಅಸಹಕಾರ ಆಂದೋಲನ ನಡೆಯಿತು.

೯.೧.೧೮೩೦ ರಂದು ಮೇಜರ ಫಿಕರಿಂಗನ ದಂಡಿನ ಮೇಲೆ ದಾಳಿ ಮಾಡಿದನು ರಾಯಣ್ಣ. ಕಛೇರಿಗಳ ಮೇಲೆ ದಾಳಿ ಖಜಾನೆಗಳ ಕೈವಶ ಹಾಗೂ ಬ್ರಿಟೀಶ ಕಡತಗಳ ದಹನ ಹೀಗೆ ಆಂಗ್ಲರಿಗೆ ವೈರಿಯಾಗಿ ಕಂಡನು ರಾಯಣ್ಣ.

೧೨.೧.೧೮೩೦ ಚಂಪಕದಾವಿ (ಸಂಪಗಾವಿ) ಮಾಮಲೇದಾರ ಕಛೇರಿಯ ಮೇಲೆ ದಾಳಿ ಮತ್ತು ದಹನ ಕಾರ್ಯಗಳನ್ನು ಸಂಗೊಳ್ಳಿ ರಾಯಣ್ಣ ತನ್ನ ದಂಡಿನೊಂದಿಗೆ ನಡೆಯಿಸಿದನು.

೧೮.೪.೧೮೩೦ ಬೆಳಗಾವಿಯ ಕೋಟೆಯನ್ನು ವಶಪಡಿಯಿಸಿಕೊಳ್ಳಲು ಪ್ರಯತ್ನಪಟ್ಟನು.

[1]

೦೮.೪.೧೮೩೦ ದೇಶದ್ರೋಹಿಗಳ ಕುತಂತ್ರ ಜಾಲದಲ್ಲಿ ಸಿಲುಕಿ ಬ್ರಿಟೀಶರ ಬಂಧನಕ್ಕೊಳಗಾದನು.[2]

೨೮.೧೨.೧೮೩೦ ಧಾರವಾಡ ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.[3]

೨೬.೧.೧೮೩೧ ರಲ್ಲಿ ನಂದಗಡದ (ಈಗಿನ ಖಾನಾಪೂರ ತಾಲೂಕಿನ) ಆಲದ ಮರವೊಂದರ ಮೇಲೆ ಗಲ್ಲಿಗೇರಿಸಲ್ಪಟ್ಟು ಹುತಾತ್ಮನಾದನು.[4]

ಭಾರತದ ಇತಿಹಾಸದಲ್ಲಿ ೧೯೪೨ರ ಚಲೇಜಾವ ಚಳುವಳಿ ನಡೆಯಿತು. ಆ ದಿನಗಳಲ್ಲಿ ನಡೆದ ಬ್ರಿಟೀಶರ ವಿರುದ್ಧದ ಕಾರ್ಯಚಟುವಟಿಕೆಗಳಿಗೆಲ್ಲ ಸಂಗೊಳ್ಳಿಯ ರಾಯಣ್ಣನ ಹೋರಾಟವೇ ಜನತೆಗೆ ಸ್ಪೂರ್ತಿದಾಯಕವಾಗಿತು. ಕ್ರಾಂತಿಕಾರಿ ಭಾರತ ಸ್ವಾತಂತ್ಯ್ರದ ಸೇವಾನಿ ಸಂಗೊಳ್ಳಿ ರಾಯಣ್ಣನಿಗೂ ಭಾರತ ಸ್ವಾತಂತ್ಯ್ರ ಹೋರಾಟಕ್ಕೂ ಏನೋ ಒಂದು ರೀತಿಯ ಸಂಬಂಧವಿದೆ. ರಾಯಣ್ಣ ಗಲ್ಲಿಗೇರುವಾಗ ‘ಒಬ್ಬ ರಾಯಣ್ಣ ಗಲ್ಲಿಗೇರಿದರೇನಂತೆ ಇನ್ನು ಮನೆ ಮನೆಗೂ ರಾಯಣ್ಣನಂತೆ ಗಂಡುಗಲಿಗಳು ಹುಟ್ಟುತ್ತಾರೆ’ ಎಂಬ ವೀರವಾಣಿಯನ್ನು ಗರ್ಜಿಸಿದನೆಂದು ಜನಪದ ಹಾಡುಕಾರರೂ, ಕನ್ನಡ ನಾಟಕಕಾರರೂ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ೧೫.೮.೧೭೯೬. ಅವನು ಕ್ರಾಂತಿಕಾರಿಯಾಗಿ ಹೋರಾಟ ಮಾಡಿ, ಭಾರತ ಸ್ವಾತಂತ್ಯ್ರದ ಅರಿವು ಮೂಡಿಸಿ, ಗಲ್ಲಿಗೇರಿಸಲ್ಪಟ್ಟು ಹುತಾತ್ಮನಾದುದು ೨೬.೧.೧೮೩೧. ವೀರರಾಯಣ್ಣ ಯಾರಿಂದಲೂ ಟೀಕೆಗೊಳಗಾಗಲಿಲ್ಲ. ಅವನಿರುವಾಗಲೇ ಜನಪದ ಕವಿಗಳು, ಗರತಿಯರು ಹಾಡುಕಟ್ಟಿ ಹಾಡಿದರು. ಅಂತಹ ಮಕ್ಕಳು ತಮಗೂ ಆಗಲಿ (ಹುಟ್ಟಲಿ) ಎಂದು ಆತ ಹುತಾತ್ಮನಾದ ಗಿಡಕ್ಕೆ ಭಕ್ತಿಯಿಂದ ತೊಟ್ಟಿಲು ಕಟ್ಟಿ ಬೇಡಿಕೊಂಡರು, ಪ್ರಾರ್ಥಿಸಿದರು, ಪ್ರಾರ್ಥಸುತ್ತಿದ್ದಾರೆ. ಈ ಹರವಿನಲ್ಲಿ ಈ ಸಣ್ಣ ಕೃತಿ ವಿವರಗಳೊಂದಿಗೆ ಸಾಕ್ಷಿ ನುಡಿಯುತ್ತಿದೆ.[1]     ಈ ಸಂಗತಿಗಳ ಶಿಲಾಶಾಸನವನ್ನು ಸಂಗೊಳ್ಳಿ ರಾಯಣ್ಣ ಸರ್ಕಲ್‌, ಬೆಳಗಾವಿಯಲ್ಲಿ ನೆಡಲಾಗಿದೆ

[2]                                               ”

[3]                                               ”

[4]                                               ”