ಗಣ : ಅಪೋಡ

ಉಷ್ಣವಲಯದಲ್ಲಿರುವ (ಕೇಂದ್ರ ಮತ್ತು ದಕ್ಷಿಣ ಅಮೇರಿಕ, ಸಮಭಾಜಕ ವೃತ್ತದ ಸನಿಹದ ಆಫ್ರಿಕ, ಭಾರತ ಮತ್ತು ಮಲಯ ಪರ್ಯಾಯ ದ್ವೀಪಗಳು) ಸಿಸೀಲಿಯನ್‌ಗಳು ಈ ಗಣಕ್ಕೆ ಸೇರುತ್ತವೆ. ಕಾಲುಗಳಿಲ್ಲದ ಈ ಪ್ರಾಣಿಗಳು ಹುಳುವಿನಂತಿರುವ ಉಭಯಚರಿಗಳು. ಒದ್ದೆ ಭೂಮಿ, ಝರಿಗಳು, ಹಳ್ಳಗಳ ಬದಿಯಲ್ಲಿ ಮೇಲ್ಮಟ್ಟದಲ್ಲಿರುವ ಬಿಲಗಳಲ್ಲಿ ವಾಸ. ಆಹಾರ ಸಾಮಾನ್ಯವಾಗಿ ಹುಳುಗಳು.

ದೇಹದ ಮೇಲಿನ ಚರ್ಮವು ಅಡ್ಡ ಸುಕ್ಕುಗಳನ್ನು ತೋರುತ್ತದೆ ಮತ್ತು ಲೋಳೆ ಭರಿತವಾಗಿವೆ. ಮೂಳೆ ಘಟಕಗಳಂತಹ ಹುರುಪೆಗಳು ಚರ್ಮದಲ್ಲಿ ಹುದುಗಿವೆ. ಈ ಹುರುಪೆಗಳು ಉಭಯಚರಿಗಳ ಪುರಾತನರ ಗಟ್ಟಿಯಾದ ಬಹಿರ್ ಅಸ್ಥಿಪಂಜರದ ಉಳಿಕೆಗಳು ಎಂದು ಊಹಿಸುತ್ತಾರೆ. ಕಣ್ಣುಗಳು ತುಂಬ ಚಿಕ್ಕವು, ನೋಟಕ್ರಿಯಾರಹಿತ ರಚನೆಗಳು, ಚರ್ಮದಿಂದ ಮುಚ್ಚಿವೆ. ನಾಸಿಕಗಳ ಹಿಂದೆ ಇರುವ ಮ್ಯಾಕ್ಸಿಲರಿ ಮೂಳೆಗಳಲ್ಲಿ ತೂತುಗಳ ರೂಪದ ಕುಳಿಗಳಿವೆ. ಈ ಕುಳಿಗಳಿಂದ ಹೊರಕ್ಕೆ ಚಾಚಿ ಒಳಕ್ಕೆಳೆದು ಕೊಳ್ಳಬಹುದಾದ ಒಂದು ಜೊತೆ ಕುಳ್ಳು ಕರಬಳ್ಳಿಗಳಿವೆ. ಕಿವಿ ತಗ್ಗಾಗಲಿ, ಕಿವಿ ತಮಟೆಯಾಗಲಿ ಇಲ. ಬಾಲ ಇಲ್ಲ. ಇದ್ದರೂ ಕ್ಷಯಿಸಿ ಉಳಿದ ಮೋಟು ಬಾಲ.

ನೋಟೊಕಾರ್ಡ ಭ್ರೂಣಾವಸ್ಥೆಯನಂತರವೂ ಪ್ರಬುದ್ಧಾವಸ್ಥೆಯವರೆಗೆ ಉಳಿಯುತ್ತದೆ. ಕಶೇರು ಮಣಿಗಳು ಆಂಫಿಸೀಲಸ್ ವಿಧಾನದ ರಚನೆಗಳು. ಪಕ್ಕೆಲಬುಗಳಿವೆ. ಆದರೆ ಅವು ಊರೋಸ್ಥಿ (ಸ್ಟರ್ನಂ) ಯನ್ನು ತಲುಪುವುದಿಲ್ಲ. ಕಾಲುಗಳು ಇಲ್ಲದಿರುವುದರಿಂದ ಕಾಲಿನ ಮೂಳೆಗಳಾಗಲಿ ಅಥವಾ ಅವಕ್ಕೆ ಆಧಾರ ಒದಗಿಸುವ ಭುಜ, ನಡುಪಟ್ಟಿಗಳು ಇಲ್ಲ.

ತಲೆ ಬುರುಡೆಯು ಅಡಕವಾದ ರಚನೆಯಾಗಿದ್ದು ಅವುಗಳ ಬಿಲವಾಸಕ್ಕೆ ಅನುವಾಗಿದೆ. ತಲೆ ಬುರುಡೆಯ ಮೇಲ್ಭಾಗದಲ್ಲಿ ಪೂರ್ಣ ಮೂಳೆಗಳ ಹೊದಿಕೆ ಇದೆ. ಇದರ ಅನೇಕ ಮೂಳೆಗಳು ಕೂಡಿವೆ. ಮೇಲಿನ ದವಡೆಯಲ್ಲಿ ಹಲ್ಲುಗಳಿಲ್ಲ. ಕೆಳ ದವಡೆಯಲ್ಲಿ ಎರಡು ಸಾಲು ಮೂಳೆಗಳಿವೆ.

ಕ್ಲೋಯಕದ ಭಿತ್ತಿಯು ಹೊರಚಾಚಬಹುದಾಗಿದ್ದು ಅದು ಆಲಿಂಗನಾಂಗವಾಗಿ ವರ್ತಿಸುತ್ತದೆ. ಸಾಮಾನ್ಯವಾಗಿ ಮತ್ತಾವ ಉಭಯ ಚರಿ ಗುಂಪುಗಳಲ್ಲಿಯೂ ಆಲಿಂಗನಾಂಗಗಳಿಲ್ಲ. ಅಂತಹುದರಲ್ಲಿ ಇವುಗಳಲ್ಲಿ ಆಲಿಂಗನಾಂಗಗಳಿರುವುದು ಅಪರೂಪದ ವಿಷಯ. ಅಂತರ ನಿಷಚನ ನಡೆಯುತ್ತದೆ. ಸರದಂತೆ ಮೊಟ್ಟೆಗಳನ್ನು ಮಣ್ಣಿನಲ್ಲಿ ಹುದಿಗಿಡುತ್ತವೆ ಮತ್ತು ಹೆಣ್ಣು ಪ್ರಾಣಿ ಮೊಟ್ಟೆಗಳು ಒಡೆದು ಮರಿಗಳು ಹೊರ ಬರುವವರೆಗೆ ಅವುಗಳ ಸುತ್ತ ಸುತ್ತಿಕೊಂಡು ರಕ್ಷಿಸುತ್ತದೆ. ಮೊಟ್ಟೆಗಳು ಬಂಡಾರವನ್ನೊಳಗೊಂಡು ದೊಡ್ಡವಾಗಿರುತ್ತವೆ. ಈ ಬಂಡಾರವನ್ನು ಬಳಸಿಕೊಂಡು ಬೆಳವಣಿಗೆಯ ಆದಿ ಹಂತಗಳನ್ನು ದಾಟಿ ಮರಿ ಹೊರಬರುತ್ತದೆ. ಬೆಳವಣಿಗೆಯ ಈ ಕಾಲದಲ್ಲಿ ಮೂರು ಜೊತೆ ಹೊರಕಿವಿರುಗಳು ಕಾಣಿಸಿಕೊಳ್ಳುತ್ತವೆ. ಅದರೆ ಮೊಟ್ಟೆ ಒಡೆದು ಹೊರಬರುವ ಮರಿಗೆ ಕೇವಲ ಒಂದು ಜೊತೆ ಕಿವಿರು ರಂಧ್ರಗಳಿರುತ್ತವೆಯಾದರೂ ಹೊರಕಿವಿರುಗಳಿರುವುದಿಲ್ಲ. ಚೆನ್ನಾಗಿ ರೂಪುಗೊಂಡ ಬಾಲ, ಬಾಲದ ಈಜುರೆಕ್ಕೆ ಇರುತ್ತದೆ. ಇವುಗಳ ನೆರವಿನಿಂದ ಈ ಮರಿಲಾರ್ವ ಸಾಕಷ್ಟು ಕಾಲ ಹಾವು ಮೀನಿನಂತೆ ಈಜಾಡಿ ಜೀವಿಸುತ್ತದೆ ಮತ್ತು ಸಾಕಷ್ಟು ಕಾಲ ಲಾರ್ವ ಅವಸ್ಥೆಯಲ್ಲಿ ಕಳೆಯುತ್ತದೆ. ಅನಂತರ ರೂಪಪರಿವರ್ತನೆಗೊಂಡು ಪ್ರಬುದ್ಧಾಸ್ಥೆಯನ್ನು ತಲುಪುತ್ತದೆ. ರೂಪಪರಿವರ್ತನೆಯ ಕಾಲದಲ್ಲಿ ಕಿವಿರು ರಂಧ್ರಗಳು ಮತ್ತು ಬಾಲದ ಈಜುರೆಕ್ಕೆ ಕಳೆದು ಹೋಗುತ್ತವೆ. ಇದೇ ರೀತಿ ಗಾಳಿಯನ್ನು ಉಸಿರಾಡುವ ಶ್ವಾಸ ಕೋಶ ಮತ್ತು ಅದಕ್ಕೆ ಸಂಬಂಧಿಸಿದಂತೆ ರಕ್ತಪರಿಚಲನಾ ಮಂಡಲವೂ ಮಾರ್ಪಟ್ಟು ಪ್ರಬುದ್ಧಾವಸ್ಥೆಯನ್ನು ತಲುಪುತ್ತವೆ.

ಚರ್ಮದಲ್ಲಿ ಹುದುಗಿರುವ ಹುರುಪೆಗಳು, ಲಾರ್ವವಸ್ಥೆಯಲ್ಲಿ ಕಿವಿರುಗಳಿರುವುದು. ಮತ್ತು ಇವುಗಳಲ್ಲಿ ಆಲಿಂಗನಾಂಗಗಳಿರುವ ಲಕ್ಷಣಗಳಲ್ಲಿ ಈ ಗಣದ ಪ್ರಾಣಿಗಳು ಇತರ ಉಭಯಚರಿಗಳಿಂದ ಭಿನ್ನವಾಗಿದ್ದರೂ ಉಳಿದ ಲಕ್ಷಣಗಳಲ್ಲಿ ಅವು ಉಭಯಚರಿಗಳನ್ನು ಹೋಲುತ್ತದೆ.

ಕರ್ನಾಟಕದಲ್ಲಿ ಈ ಗಣದ ಮೂರು ಜಾತಿಯಾ ಪ್ರಾಣಿಗಳು ದೊರಕುತ್ತವೆ.

. ಇಕ್ತಿಯಾಫಿಸ್ : ಚರ್ಮದಲ್ಲಿ ಸೈಕ್ಲಾಯಿಡ್ ಹುರುಪೆಗಳಿವೆ. ಸ್ಟಷ್ಟವಾದ ಕಣ್ಣುಗಳು, ಕೆಳದವಡೆಯಲ್ಲಿ ಎರಡು ಸಾಲು ಹಲ್ಲುಗಳಿವೆ.
ಉದಾ : ಇ.ಗ್ಲುಟಿನೋಸಸ್, ಇ. ಮಾನೋಕೋರಸ್

.ಯೂರಿಯೊಟಿಫ್ಲಸ್ : ಇಕ್ತಿಯೋಫಿಸ್ ನಂತೆಯೇ ಇವುಗಳಲ್ಲಿಯೂ ಹುರುಪೆಗಳು, ಕಣ್ಣುಗಳು ಮತ್ತು ಹಲ್ಲುಗಳಿವೆಯಾದರೂ ತಲೆ ಬುರುಡೆಯ ಮೂಳೆಗಳು ವ್ಯವಸ್ಥೆಯಲ್ಲಿ ತುಸು ವ್ಯತ್ಯಾಸ ತೋರುತ್ತವೆ.
ಉದಾ : ಯೂ. ಮೆನೊನಿ, ಯೂ. ಆಕ್ಸಿಯೂರಿಸ್

. ಜಿಜಿನೊಫಿಸ್ : ಇವುಗಳಲ್ಲಿ ಹುರುಪೆಗಳು ಇಲ್ಲ.
ಉದಾ : ಜಿ. ಕಾರ್ನೋಸಸ್ ಇವೆಲ್ಲವೂ ಕೊಡಗು, ದಕ್ಷಿಣ ಕನ್ನಡ ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಪಶ್ಚಿಮಘಟ್ಟ ಭಾಗದಲ್ಲಿ ದೊರಕುತ್ತವೆ.

 —-

ಗಣ : ಅಪೋಡ
ಕುಟುಂಬ : ಇಕ್ತಿಯಾಫಿಡೀ (Ichtyophidae)
ಉದಾ : ಇತ್ತಲೆ ಮಂಡಲ (ಇಕ್ತಿಯಾಫಿಸ್, ಸಿಸೀಲಿಯನ್ )
ಶಾಸ್ತ್ರೀಯನಾಮ : ಇಕ್ತಿಯಾಫಿಸ್ ಗ್ಲುಟಿನೋಸಸ್ (Iehtyophis glutinosus)

ವಿತರಣೆ : ಪ್ರಪಂಚದ ಉಷ್ಣವಲಯ ಪ್ರದೇಶಗಳಿಗೆ ಸೀಮಿತವಾದ ಈ ಪ್ರಾಣಿಗಳು ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾತ್ರದೊರಕುವುದೊಂದು ವಿಶೇಷ. ಇವು ಸಂಪೂರ್ಣವಾಗಿ ಬಿಲವಾಸಿಗಳು.

ಗಾತ್ರ : ೮ ರಿಂದ ೧೨ ಅಂಗುಲ ಉದ್ದ ಕೆಲವು ಗ್ರಾಂಗಳ ತೂಕ.

ಆಹಾರ : ಮಣ್ಣಿನಲ್ಲಿ ವಾಸಿಸುವ ಸಣ್ಣ ಪುಟ್ಟ ಹುಳ ಹುಪ್ಪಡಿಗಳು.

ಲಕ್ಷಣಗಳು : ತೆಳುವಾದ ಉದ್ದನೆಯ ಹುಳುವಿನಂತಹ ದೇಹ. ತುಂಬಾ ಇಂಗಿ ಮೋಟಾದ ಬಾಲ, ಇದರಿಂದಾಗಿ ಕ್ಲೋಯಕ ಹೆಚ್ಚು ಕಡಿಮೆ ಹಿಂದಿನ ತುದಿಯಲ್ಲಿ ತೆರೆಯುತ್ತದೆ. ಕಾಲುಗಳಿಲ್ಲ. ಆದ್ದರಿಂದ ಕಾಲಿನ ಮೂಳೆಗಳಾಗಲಿ, ಅದಕ್ಕೆ ಆಧಾರವಾಗುವ ಭುಜ, ನಡುಪಟ್ಟಿ ಮೂಳೆಗಳೂ ಇಲ್ಲ. ಕೆಲವು ಡರ್ಮಲ್ ಹುರುಪೆಗಳು ಚರ್ಮದಲ್ಲಿ ಹುದುಗಿರುವುದು ಕಂಡುಬರುತ್ತದೆ. ಇವುಗಳ ಕಶೇರುಸ್ತಂಭ (ಬೆನ್ನು ಮೂಳೆ )ದಲ್ಲಿ ೨೫೦ಕ್ಕೂ ಮಿಕ್ಕು ಕಶೇರುಮಣಿ (ವರ್ಟಿಬ್ರ) ಗಳಿರಬಹುದು. ತೀರಾ ಕ್ಷೀಣಿಸಿದ ಕಣ್ಣುಗಳಿಂದಾಗಿ ಕೆಲವೊಮ್ಮೆ ಇವುಗಳನ್ನು ಕುರುಡು ಹುಳುಗಳೆಂದು ಕರೆಯುವುದುಂಟು. ಮೂಗು ಮತ್ತು ಕಣ್ಣಿನ ನಡುವೆ ಒಂದು ಜಾಡು ಇದ್ದು ಇದರಿಂದ ಚಾಚಿ ಹಿಂದಕ್ಕೆಳೆದುಕೊಳ್ಳಬಹುದಾದ ಸಂವೇದನೆ ಶಕ್ತಿ ಇರುವ ಒಂದು ಜೊತೆ ಕರಬಳ್ಳಿಗಳಿವೆ. ಇದರ ನೆರವಿನಿಂದ ದಾರಿಯನ್ನು ತಿಳಿದುಕೊಂಡು ಓಡಾಡುತ್ತವೆ.

ಸಂತಾನಾಭಿವೃದ್ಧಿ : ಗಂಡಿನ ಕ್ಲೋಯಕದ ಅಂಚಿನ ಭಿತ್ತಿಯು ಚಾಚಬಹುದಾಗಿ ಸಂಭೋಗ ಕಾಲದಲ್ಲಿ ಆಲಿಂಗನಾಂಗವಾಗಿ ವರ್ತಿಸುತ್ತದೆ. ಅಂತರ ನಿಷೇಚನ. ಹೆಣ್ಣು ಇತ್ತಲೆ ಮಂಡಲ ಒದ್ದೆ ಮಣ್ಣಿನಲ್ಲಿ ದೊಡ್ಡ ಗಾತ್ರದ ಮೊಟ್ಟೆಗಳನಿಡುತ್ತದೆ. ಮೊಟ್ಟೆಗಳು ಒಡೆಯುವವರೆಗೆ ಹೆಣ್ಣು ಇತ್ತಲೆ ಮಂಡಲ ಅವುಗಳ ಸುತ್ತ ಸುತ್ತಿಕೊಂಡು ರಕ್ಷಿಸುತ್ತದೆ. ಮೊಟ್ಟೆಯೊಳಗೆ ಲಾರ್ವ ಅವಸ್ಥೆಯ ಬಹುಕಾಲ ಕಳೆದು ಬಲಿತ ಲಾರ್ವ ಮೊಟ್ಟೆ ಒಡೆದು ಹೊರಬರುತ್ತದೆ, ಮೊಟ್ಟೆಯೊಳಗಿನ ಬೆಳವಣಿಗೆಯ ಕಾಲದಲ್ಲಿ ೩ ಜೊತೆ ಹೊರಕಿವಿಗಳು ಕಾಣಿಸಿಕೊಳ್ಳುತ್ತವೆ. ಮೊಟ್ಟೆಯಿಂದ ಹೊರ ಬರುವಾಗ ಅವು ಕಳೆದು ಹೋಗಿರುತ್ತವೆ.

ಸ್ವಭಾವ : ಗಟ್ಟಿಯಾದ ತಲೆಯನ್ನು ಬಳಸಿ ಒದ್ದೆ ಮಣ್ಣಿನಲ್ಲಿ ಬಿಲ ತೋಡಿ ಅದರಲ್ಲಿ ವಾಸಿಸುತ್ತವೆ.

 

ಕರ್ನಾಟಕದಲ್ಲಿ ದೊರಕುವ ಉಭಯ ಚರಿ ಪ್ರಭೇಧಗಳು
ಗಣ : ಅನೂರ
೧. ಕುಟುಂಬ : ಬ್ಯೂಪೊನಿಡೀ (Bufonidai)
ನೆಲಗಪ್ಪೆ ಜಾತಿಗಳು :

ಅನ್‌ಸೋನಿಯ ಓರ್ನೇಟ
ಬ್ಯೂಫೊ ಬ್ರಿವಿರೋಸ್ಟ್ರಿಸ್‌
ಬ್ಯೂ. ಫರ್ ಗುಸೋನಿ
ಬ್ಯೂ. ಹೋಲೊಲಿಯಸ್‌
ಬ್ಯೂ. ಮೆಲನೊಸ್ಟಿಕ್ಟಸ್‌
ಬ್ಯೂ. ಮೈಕ್ರೊಟಿಂಪೆನಮ್‌
ಬ್ಯೂ. ಪೆರೈಟೀಲಿಸ್‌
ಬ್ಯೂ. ಸೊಮ್ಯಾಟಿಕಸ್‌

. ಕುಟುಂಬ : ಮೈಕ್ರೊಹೈಲಿಡೀ (Microhylidae)

ಕಲೌಲ ಪುಲ್‌ಕ್ರ
ಮೈಕ್ರೊಹೈಲ ಓರ್ನೇಟ
ಮೈ. ರೂಬ್ರ
ರಾಮನೆಲ್ಲ ಮೈನರ್
ರಾ. ಮೇರ್ ಮರೇಟ
ರಾ. ಟ್ರೈಯೊಂಗುಲೇರಿಸ್‌
ರಾ. ವೆರಿಗೇಟ
ಯುಪೆರೊಡಾನ್‌ಗ್ಲೊಬುಲೋಸಸ್‌
ಯು. ಸಿಸ್ಟೊಮ

. ಕುಟುಂಬ : ರಾನಿಡೀ (Ranidae)
ಮೈಕ್ರಿಕ್ಯಾಲಸ್‌ಸಾಕ್ಸಿಕೋಲ
ನಾನ್ನೊಬಟ್ರಾಕಸ್‌ಕೆಂಫೋಲೆಯೆನ್ಸಿಸ್‌
ನಿಕ್ಟೆಬಟ್ರಾಕಸ್‌ಸಿಲ್ವಾಟಿಕಸ್‌
ರಾನ ಆರಾಂಟಿಕ/ ಭಾಗಮೆಂಡಲೆನ್ಸಿಸ್‌
ರಾನ ಬೆಡ್ಡೊಮಿ
ರಾನ ಕುರ್ಟಿಪೆಸ್‌
ರಾನ ಸೆಯನೊಫ್ಲಿಕ್ಟಿಸ್‌(ಜಿಗಿ ಕಪ್ಪೆ)
ರಾನ ಹೆಕ್ಸಡ್ಯಾಕ್ಟೈಲ (ಹಸಿರು ಕಪ್ಪೆ)
ರಾನ ಇಂಟರ್ ಮೀಡಿಯಸ್‌
ರಾನ ಕೇರಲೆನ್ಸಿಸ್‌/ ವೆರೈಕೋಸ
ರಾನ ಲೈತೀ
ರಾನ ಲಿಮ್ನೊಕೇರಿಸ್‌
ರಾನ ಮಲಬಾರಿಕ
ರಾನ ಸಾರಿಸೆಪ್ಸ್‌
ರಾನ ಟೆಂಪೊರಾಲಿಸ್‌
ರಾನ ಟೆನುಯಿಲಿಗುಯ
ರಾನ ಟೈಗರಿನ (ಗೂಳಿ ಕಪ್ಪೆ)
ರಾನಿಕ್ಯಾಲಸ್‌ಗುಂಡಿಯ
ಟೊಮೊಪ್ಪರ್ನ ಬ್ರೆವಿಸೆಪ್ಸ
ಟೊ. ದೊಬ್ಬೊನೀ
ಟೊ. ಲ್ಯೂಕೊರ್ಹಿಂಸ್‌

. ಕುಟುಂಬ : ರ್ಹ್ಯಾಕೊಫೋರಿಡೀ (Rhacophoridae)
ಫಿಲಾಟಸ್‌ಕೇರಿಯಸ್‌
ಫಿ. ಕ್ರೆರ್ನಿ
ಫಿ. ಎಲಿಗನ್ಸ್
ಫಿ. ಫೆಮೊರಾಲಿಸ್‌
ಫಿ. ಹೆಸ್ಸೆನೆನ್ಸಿಸ್‌
ಫಿ. ಕೊಟ್ಟಿಗೆಹಾರೆನ್ಸಿಸ್‌
ಫಿ. ಲಾಂಗಿಯೊರಸ್‌
ಫಿ. ಮೆಲನೆನ್ಸಿಸ್‌
ಫಿ. ಮಾಂಟನಸ್‌
ಫಿ. ನಾರಿಯೆನ್ಸಿಸ್‌
ಫಿ. ಸ್ವಾಮಿಯನಸ್‌
ಫಿ. ಟೆಂಪೋರಾಲಿಸ್‌
ಪಾಲಿಪೆಡೇಟಸ್‌ಮ್ಯಾಕುಲೇಟಸ್‌
ಪಾಲಿಪೆಡೇಟಸ್‌ಕ್ರೂಸಿಗರ್
ರ್ಹಾಕೊಫೋರಸ್‌ಮಲಬಾರಿಕಸ್‌

ಗಣ : ಅಪೋಡ
ಕುಟುಂಬ : ಇಕ್ತಿಯಾಫಿಡೀ
ಇ. ಗ್ಲೂಟಿನೊಸಸ್ಸ್‌
ಇ. ಯೂನೊಕೋರಸ್‌
ಇ. ಬೆಡ್ಡೋಮಿ

ಕುಟುಂಬ : ಯೂರಿಯೊಟಿಪ್ಲಿಡೀ
ಯೂರಿಯೊಟಿಪ್ಲಸ್‌ಮೆನೊನಿ
ಯೂ. ಆಕ್ಸಿಯೂರಿಸ್‌

ಕುಟುಂಬ : ಜಿಜಿನೋಫಿಡೀ
ಜಿಜಿನೊಫಸ್‌ಕಾರ್ನೊಸಸ್‌.

ಪಶ್ಚಿಮದ ಘಟ್ಟ ಮತ್ತು ಕರ್ನಾಟಕದಲ್ಲಿ ದೊರಕುವ ಉಭಯಚರಿಗಳು ವಿತರಣೆ ವಿಧಾನದ ಒಂದು ಇಣಕು ನೋಟ

ಗಣ

ಕುಟುಂಬ

ಜಾತಿ ಪಶ್ಚಿಮ ಘಟ್ಟ (ಪ್ರಭೇಧಗಳ) ಕರ್ನಾಟಕ ಸಂಖ್ಯೆ
ಅನ್ಯೂರ (ಕಪ್ಪೆಗಳು) ಬ್ಯೂಫೋನಿಡೀ ಅನ್‌ಸೋನಿಯ ೦೨ ೦೧
ಬುಫೊ ೧೦ ೦೭
ಪೆಡೊಸ್ಟೆಪಿಸ್‌ ೦೧
ಮೈಕ್ರೊಹೈಲಿಡೀ ಕಪಿಲ ೦೧ ೦೧
ಮೆಲನೊಬೆಟ್ರಾಕಸ್‌ ೦೧
ಮೈಕ್ರೊಹೈಲ ೦೨ ೦೨
ರಾಮನೆಲ್ಲ ೦೬ ೦೪
ಯುಪೆರೊಡಾನ್‌ ೦೨ ೦೨
ರಾನಿಡೀ ಮಿಕ್ರಿಕ್ಸಾಲಸ್‌ ೦೬ ೦೧
ನಾನ್ನೊಬೆಟ್ರಾಕಸ್‌ ೦೨ ೦೧
ನಿಕ್ಟಿಬೆಟ್ರಾಕಸ್‌ ೦೮ ೦೫
ರಾನ ೨೫ ೧೪
ರಾನಿಕ್ಯಾಲಸ್‌ ೦೧ ೦೧
ಟೊಮೊಪ್ಟೆರ್ನೆ ೦೬ ೦೩
ರ್ಹಾಕೊಫೋರಿಡೀ ಫಿಲಾಟಸ್‌ ೦೧ ೦೧
ಪಾಲಿಪಿಡೇಟಸ್‌ ೦೨ ೦೨
ರ್ಹಾಕೊಫೋರಸ್‌ ೦೪ ೦೧
ಅಪೋಡ (ಜಿಮ್ನೊಫಿಯಾನ) ಇಕ್ತಿಯಫಿಡೀ ಇಕ್ತಿಯೊಫಿಸ್‌ ೦೭ ೦೧
ಯೂರಿಯೊಟಿಪ್ಲಸ್‌ ೦೪ ೦೧
ಸಿಸಿಲ್ಲಿಡೀ ಜಿಜಿನೊಫಿಸ್‌ ೦೨ ೦೧
ಇಂಡೊಟಿಪಫ್ಲಿಸ್‌ ೦೧
ಒಟ್ಟು ೦೬ ೨೧ ೧೧೭ ೫೮