ಗಣ : ಪರ್ಸೀಫಾರ್ಮಿಸ್ (Perciformes)
ಕುಟುಂಬ : ನಾಂಡಿಡೀ (Nandidae)
ಉದಾ : ಬಣ್ಣದ ನಾಂಡುಸ್
‌(Mottled nandus)
ಶಾಸ್ತ್ರೀಯನಾಮ : ನಾಂಡುಸ್
ನಾಂಡುಸ್‌(Nandus nandus)
ಕರ್ನಾಟಕದಲ್ಲಿ ಇದನ್ನು ಸೆಪ್ತಿ ಮೀನೆಂದು ಕರೆಯುತ್ತಾರೆ.

046_69_PP_KUH

ವಿತರಣೆ : ಭಾರತದ ಉಪಖಂಡ : ಸಿಹಿನೀರು ಮತ್ತು ಉಪ್ಪು ನೀರುಗಳೆರಡರಲ್ಲೂ ವಾಸಿಸುತ್ತದೆ.

ಗಾತ್ರ : ಇವು ೨೦ ಸೆಂ. ಮೀ. ಉದ್ದ ಬೆಳೆಯುತ್ತವೆ.

ಆಹಾರ : ಜಲಸಸ್ಯ ಮತ್ತು ತೇಲು ಜೀವಿಗಳು.

ಲಕ್ಷಣಗಳು : ದೇಹ ಅಸಮಚತುರಸ್ತ್ರಾಕಾರ ಮತ್ತು ಒತ್ತಿದಂತೆ ಚಪ್ಪಟೆಯಾಗಿದೆ. ತಲದಪ್ಪ ಮತ್ತು ಜಪ್ಪಟೆ. ದೊಡ್ಡಬಾಯಿ, ಮುಂದಕ್ಕೆ ಚಾಚಬಲ್ಲುದಾಗಿದೆ. ದವಡೆಗಳಲ್ಲಿ ಮೊಳಕೆಯಾಕಾರದ ಹಲ್ಲುಗಳಿವೆ. ಕಣ್ಣುಗಳು ದೊಡ್ಡವು. ಬಲವಾದ ಬೆನ್ನಿನ ಮುಳ್ಳುಗಳಿವೆ. ಆದರೆ ಗುದ ಮುಳ್ಳುಗಳಿವೆ ಮತ್ತು ಗುದ ಮುಳ್ಳು ತುಸು ಮೃದು ಮತ್ತು ಎರಡನೆಯ ಮುಳ್ಳು ಉದ್ದವಾಗಿದೆ. ಬಾಲದ ಈಜುರೆಕ್ಕೆ ತುಸು ದುಂಡಗಿದೆ. ಟೆನಾಯಿಡ್‌ಹುರುಪೆಗಳು, ಪರ್ಶ್ವ ಪಂಕ್ತಿಯ ೩೬ನೆ ಹುರುಪೆ ಮತ್ತು ೪೬ ರಿಂದ ೫೭ನೆ ಹುರುಪುಗಳ ಬಳಿ ಒಡೆದಂತಿದೆ.

ದೇಹ ಹಿಸಿರುಕಂದು. ತುಸು ಕಂದು ಮಿಶ್ರಿತ ಹೊಳಪೂ ಇದೆ. ನೇರವಾಗಿ ಮೇಲಿನಿಂದ (ಬೆನ್ನಿನಿಂದ) ಹೊಟ್ಟೆಯ ಕಡೆಗೆ ಹರಡಿದಂತೆ ಅಗಲವಾದ ಮೂರು ಪಟ್ಟಿ ಗುರುತುಗಳು ಇದ್ದು ಒಂದು ರೀತಿ ಬಣ್ಣ ವೈವಿಧ್ಯವಾಗಿದೆ. ಬಾಲದ ಈಜುರೆಕ್ಕೆ ಬುಡದಲ್ಲಿ ಕಪ್ಪು ಕಲೆ ಇದೆ. ಕಣ್ಣಿನಿಂದ ಕಿರಿದಾದ ಕಪ್ಪು ಪಟ್ಟಿಗಳು ಹೊರಕ್ಕೆ ಹರಡುತ್ತವೆ. ಈಜುರೆಕ್ಕೆಗಳು ಹಸಿರು ವರ್ಣ, ಬೆನ್ನಿನ, ಗುದ ಮತ್ತು ಬಾಲದ ಈಜುರೆಕ್ಕೆಗಳ ಮೇಲೆ ಹಳದಿ ಕಲೆಗಳ ಪಟ್ಟಿಗಳು ಮೃದು ಭಾಗದ ಮೇಲೆ ಹರಡಿವೆ.

ಸ್ವಭಾವ : ಈ ಮೀನು ನೀರು ಗುಂಡಿಗಳಲ್ಲಿ, ನೀರು ನಿಂತ ಗದ್ದೆಗಳಲ್ಲಿ ಸಾಮಾನ್ಯ. ಹೊಸದಾಗಿ ಹಿಡಿದು ಮೀನು ತುಂಬಾ ಜನಪ್ರಿಯ, ಮುಳ್ಳಿನ ಈಜುರೆಕ್ಕೆಗಳಿದ್ದರೂ ಇದನ್ನು ತಿನ್ನಲು ಆಶಿಸುತ್ತಾರೆ. ಬೇಸಿಗೆಯಲ್ಲಿ ಇದು ದೊರಕುತ್ತದೆ.

—-

ಗಣ : ಪರ್ಸೀಫಾರ್ಮಿಸ್ (Perciformes)

ಈ ಗಣಕ್ಕೆ ಸೇರಿದ ಮೀನುಗಳ ಸೊಂಟದ, ಬೆನ್ನಿನ ಮತ್ತು ಗುದ ಈಜುರೆಕ್ಕೆಗಳಿಗೆ ಮುಳ್ಳುಗಳಿಲ್ಲ.
ತಲೆಗೆ ಹುರುಪೆಗಳ ಹೊದಿಕೆಯುಂಟು.

ಕುಟುಂಬ : ಸಿಕ್ಲಿಡೀ (Cichlidae)

ಗುದ ಈಜುರೆಕ್ಕೆಯಲ್ಲಿ ೧೨ ರಿಂದ ೧೬ ಕಡ್ಡಿಗಳಿವೆ; ಆದರೆ ಈ ಜಾತಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಕಡ್ಡಿಗಳಿಲ್ಲ

ಉದಾ : ಪಟ್ಟಿ ಮುತ್ತು ಗುರುತು ಮೀನು (Banded Pearl spot)
ಶಾಸ್ತ್ರೀಯನಾಮ : ಎಟ್ಟ್ರೊಪ್ಲಸ್
ಸೂರಟೆನ್ಸಿಸ್ (Etroplus suratensis)
ಕರ್ನಾಟಕದಲ್ಲಿ ಕರೀಮೀನೆಂದು ಕರೆಯುತ್ತಾರೆ.

ವಿತರಣೆ : ಭಾರತದ ದಕ್ಷಿಣ ದ್ವೀಪಕಲ್ಪ, ಕಡಲ ಹಿನ್ನೀರು, ನದಿ ಮುಖಜಭೂಮಿ ಮತ್ತು ಕಡಲು.

ಗಾತ್ರ : ೧೦-೧೨ ಸೆಂ. ಮೀ. ಉದ್ದ ಬೆಳೆಯುತ್ತದೆ. ೧೦೦ ರಿಂದ ೧೫೦ ಗ್ರಾಂ. ತೂಗುತ್ತವೆ. ಹಿನ್ನೀರಿನಲ್ಲಿ ೪೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯ ಮತ್ತು ತೇಲು ಜೀವಿಗಳು.

ಲಕ್ಷಣಗಳು : ದೇಹ ದಪ್ಪ, ಮೋಟು, ಅಂಡಾಕಾರ ಮತ್ತು ಬಲವಾಗಿ ಒತ್ತಿದಂತೆ ಚಪ್ಪಟೆಯಾಗಿದೆ. ವಿಶಾಲವಾದ ಕಣ್ಣುಗಳಿವೆ. ಮೀನಿನ ವ್ಯಾಸ ತಲೆಯ ಉದ್ದದ ೩ ರಿಂದ ೪ ರಷ್ಟು ದೊಡ್ಡದಿದೆ. ಬಾಯಿ ಸಣ್ಣದು. ಮೊಳಕೆಯಾಕಾರದ ಹಲ್ಲುಗಳು, ಮುಂಭಾಗದಲ್ಲಿ ಒಂದು ಸಾಲು ಮತ್ತು ಹಿಂಭಾಗದಲ್ಲಿ ಒಂದು ಅಥವಾ ಎರಡು ಸಾಲುಗಳು ಎರಡೂ ದವಡೆಗಳಲ್ಲಿವೆ. ತುಸು ಬಿರಿದ ಅಂಚಿನ ಬಾಲದ ಈಜುರೆಕ್ಕೆ, ಉದ್ದ ಸಾಲಿನಲ್ಲಿ ೩೫ ರಿಂದ ೪೦ ಹುರುಪೆಗಳಿವೆ. ಪಾರ್ಶ್ವ ಪಂಕ್ತಿಯು ೧೬ ಅಥವಾ ೧೮ನೆ ಹುರುಪೆ ಬಳಿ ಒಡೆದಂತೆ ಕಾಣುತ್ತದೆ. ಹುರುಪೆಗಳು ಟೀನಾಯಿಡ್‌ರೀತಿಯವು.

ದೇಹ ತೆಳು ಹಸಿರು. ಆರರಿಂದ ಎಂಟು ಸ್ಪಷ್ಟ ನೇರ ಪಟ್ಟಿಗಳಿವೆ. ಮೊದಲನೆಯದು ಕತ್ತಿನ ಬಳಿ, ಕೊನೆಯದು ಬಾಲದ ಈಜುರೆಕ್ಕೆ ಬುಡದ ಬಳಿ ಇದೆ. ಉಳಿದ ಪಟ್ಟಿಗಳು ಇವುಗಳ ನಡುವೆ ಅಂತರದಲ್ಲಿ ಹರಡಿವೆ. ಪಾರ್ಶ್ವ ಪಂಕ್ತಿಯ ಮೇಲಿರುವ ಹುರುಪೆಗಳ ಮಧ್ಯಭಾಗದಲ್ಲಿ ಬಿಳಿ ಮುತ್ತು ಗುರುತಿದೆ. ಉದರ ಭಾಗದಲ್ಲಿ ಅವ್ಯವಸ್ಥಿತ ಕಪ್ಪು ಗುರುತುಗಳಿವೆ. ಬೆನ್ನಿನ, ಬಾಲದ, ಸೊಂಟದ ಮತ್ತು ಗುದ ಈಜರೆಕ್ಕೆಗಳು ನೀಲ ಅಥವಾ ಒತ್ತು ಹಸಿರು, ಭುಜದ ಈಜುರೆಕ್ಕೆಗಳು ಹಳದಿ, ಬುಡದ ಬಳಿ ಕಪ್ಪು ಕಲೆ ಇರುತ್ತದೆ.

ಸಂತಾನಾಭಿವೃದ್ಧಿ : ಮುಂಗಾರು ಕಾಲದಲ್ಲಿ ಮೊಟ್ಟೆ ಇಡುತ್ತವೆ.

ಸ್ವಭಾವ : ಉತ್ತಮವಾದ ರುಚಿಯಾದ ಮೀನು. ಕೆರೆ ಮತ್ತು ಕೊಳಗಳಲ್ಲಿ ಹೆಚ್ಚಾಗಿ ಸಾಕುತ್ತಾರೆ. ಎರಡನೆ ವರ್ಷಕ್ಕೆ ಲಿಂಗಪ್ರೌಢತನಗಳಿಸುತ್ತವೆ. ದೇಹದ ಮೇಲೆ ಮುಳ್ಳುಗಳಿರುವುದರಿಂದ ಚೆನ್ನ ಮೀನುಗಳು ಬಾಯಿಗೆ ಸುಲಭವಾಗಿ ಸುಗುವುದಿಲ್ಲ. ಆದ್ದರಿಂದ ಚೆನ್ನ ಮೀನಿನ ಜೊತೆಗೆ ಇದನ್ನು ಸಾಕಬಹುದು.

—-

ಗಣ : ಪರ್ಸೀಫಾರ್ಮಿಸ್ (Perciformes)
ಕುಟುಂಬ : ಸಿಕ್ಲಿಡೀ (Cichlidae)
ಉದಾ : ಕರಿಮೀನು (Banded perispot/striped chromide)
ಶಾಸ್ತ್ರೀಯನಾಮ : ಎಟ್ರೊಪ್ಲಸ್
ಸುರತೆನ್ಸಿಸ್‌(Etroplus surtensis)

047_69_PP_KUH

ವಿತರಣೆ : ಅಳಿವೆ ಮತ್ತು ಕ್ಷಾರ ನೀರುಗಳು ಮತ್ತು ಕಡಲಿನಲ್ಲಿಯೂ ವಾಸ.

ಗಾತ್ರ : ೪೦ ಸೆಂ. ಮೀ. ಉದ್ದ ಬೆಳೆಯುತ್ತವೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ದೇಹ ತುಸು ಗಾತ್ರವಾಗಿಯೂ, ಅಂಡಾಕಾರವಾಗಿಯೂ ಮತ್ತು ಚಪ್ಪಟೆಯಾಗಿಯೂ ಇದೆ. ಕಣ್ಣುಗಳು ದೊಡ್ಡವು. ಬಾಯಿ ಕಿರಿದು, ಮೊಳೆಯಾಕಾರದ ಹಲ್ಲುಗಳು ಎರಡೂ ದವಡೆಗಳಲ್ಲಿ ಮುಂತುದಿಯಲ್ಲಿ ಒಂದು ಸಾಲಿನಲ್ಲಿಯೂ, ಹಿಂಭಾಗದಲ್ಲಿ ೨ ಅಥವಾ ೩ ಸಾಲುಗಳಲ್ಲವೆ. ಅಂಚಿಲ್ಲದ ಬಾಲದ ಈಜುರೆಕ್ಕೆಗಳು. ಹುರುಪೆಗಳು ದುರ್ಬಲವಾಗಿ ಟೀನಾಯಿಡ್‌ರೀತಿಯವು. ಪಾರ್ಶ್ವ ಪಂಕ್ತಿಯು ೧೬ ಅಥವಾ ೧೮ನೆ ಹುರುಪೆಯ ಬಳಿ ಒಡೆದಂತೆ ಕಾಣುತ್ತದೆ. ದೇಹದ ಮೇಲೆ ಉದ್ದಕ್ಕೂ ಹರಡಿದಂತೆ ೩೫ ರಿಂದ ೪೦ ಹುರುಪೆ ಶ್ರೇಣಿಗಳಿವೆ.

ಜೀವಂತ ಮೀನಿನ ಬಣ್ಣ ತಿಳಿ ಹಳದಿ. ಕತ್ತಿನ ಭಾಗದಿಂದ ಬಾಲದ ಬುಡದವರೆಗೆ ಹರಡಿದಂತೆ ಮೇಲಿನಿಂದ ಕೆಳಕ್ಕೆ ಹರಡಿದ ೬ ರಿಂದ ೮ ಅಸ್ಪಷ್ಟ ಪಟ್ಟಿಗಳಿವೆ. ಪಾರ್ಶ್ವ ಪಂಕ್ತಿಯ ಸಾಲಿನ ಮೇಲಿರುವ ಹುರುಪೆಗಳ ನಡುವೆ ಬಿಳಿಯ ಗುರುತುಗಳಿರುತ್ತವೆ. ಉದರ ಭಾಗದಲ್ಲಿ ಅವ್ಯವಸ್ಥಿತ ಕೆಲವು ಕಪ್ಪು ಚುಕ್ಕಿಗಳಿವೆ. ಬೆನ್ನಿನ, ಬಾಲದ, ಸೊಂಟದ ಮತ್ತು ಗುದ ಈಜುರೆಕ್ಕೆಗಳು ನೀಲಿ ಅಥವಾ ಕೊಳಕು ಹಸಿರು. ಭುಜದ ಈಜುರೆಕ್ಕೆಯ ಬುಡದ ಬಳಿ ಕಪ್ಪು ಕಲೆಯಿದ್ದು ಹಳದಿ ಬಣ್ಣವಾಗಿರುತ್ತವೆ.

ಸಂತಾನಾಭಿವೃದ್ಧಿ : ವರ್ಷಾನುಕಾಲ ಸಂತಾನೋತ್ಪತ್ತಿ ಚಟುವಟಿಕೆ ಕಂಡುಬರುತ್ತದೆ. ಎರಡನೆಯ ವರ್ಷಕ್ಕೆ ಲಿಂಗ ಪ್ರೌಢತನಗಳಿಸುತ್ತವೆ. ಉಪ್ಪು ನೀರುವಾಸಿ ಮೀನುಗಳಲ್ಲಿ ಕಡು ಕೆಂಪು ಬಣ್ಣ ಮತ್ತು ಪಟ್ಟಿಗಳು ಕಪ್ಪಾಗಿರುತ್ತವೆ ಹಾಗೂ ಸ್ಪಷ್ಟವಾದ ಬಿಳಿ ಗುರುತುಗಳಿರುತ್ತವೆ. ಮುಂಗಾರು ಕಾಲದಲ್ಲಿ ಈ ಮೀನಿನ ಬಣ್ಣ ಬಹಳ ಅಂದವಾಗಿರುತ್ತದೆ. ಹೆಣ್ಣುಗಳು ಮೊಟ್ಟೆಗಳನ್ನು ಕಾದು ಕಾಪಾಡುತ್ತದೆ.

ಸ್ವಭಾವ : ಕ್ಷಾರ ನೀರುಗಳಲ್ಲಿ ಈ ಮೀನು ಬಹಳ ಸಾಮಾನ್ಯ. ಕೆರೆ ಮತ್ತು ಕೊಳಗಳಲ್ಲಿ ಇವನ್ನು ಹೆಚ್ಚಾಗಿ ಸಾಕುತ್ತಾರೆ. ಅಲ್ಲಿ ಅವು ಸ್ವಾಭಾವಿಕವಾಗಿಯೇ ಸಂತಾನೋತ್ಪತ್ತಿ ನಡೆಸುತ್ತವೆ. ಜಲಸಸ್ಯಗಳು ಹೆಚ್ಚಾಗಿ ಬೆಳೆಯುವಲ್ಲಿ ಇವು ಚೆನ್ನಾಗಿ ಬೆಳೆಯುತ್ತವೆ. ಅಗಲ ಹೆಚ್ಚು ಮತ್ತು ದಪ್ಪವಾಗಿರುವುದರಿಂದ ಇವು ಮುರ್ರೆಲ್‌ಮೀನುಗಳಿಗೆ ಸುಲಭವಾಗಿ ತುತ್ತಾಗುವುದಿಲ್ಲ. ಆದ್ದರಿಂದ ಇವುಗಳನ್ನು ಮುರ್ರೆಲ್‌ಗಳೊಂದಿಗೆ ಸಾಕಬಹುದು.

 

ಗಣ : ಪರ್ಸಿಫಾರ್ಮಿಸ್ (Perciformis)
ಕುಟುಂಬ : ಗೋಬಿಡೀ (Gobidae)
ಉದಾ : ಮಣ್ಣು ಮಿಣುಕ (Mud skipper)
ಶಾಸ್ತ್ರೀಯನಾಮ : ಸ್ಠೆನೋಗೋಬಿಯಸ್
ಮಲಬಾರಿಕಸ್ಪೆರಿಯಾಪ್ಥಾಲ್ಮಸ್ಕೋವಳಂ (Periopthalmus kovalum)

048_69_PP_KUH

ವಿತರಣೆ : ಕಡಲ ಜೌಗು ನೀರು, ಅಳವೆ, ಉಬ್ಬರ ಹಿನ್ನೀರುಗಳಲ್ಲಿ ಸಾಮಾನ್ಯ. ಉಬ್ಬರ ವಿಳಿತಗಳ ಬಂಡೆ ಸಾಲುಗಳ ಮಧ್ಯೆ ನಿಲ್ಲುವ ನೀರು. ಸಾಮಾನ್ಯವಾಗಿ ಕಡಲ ದಂಡೆ, ದಂಡೆಗೆ ಸನಿಹದಲ್ಲಿ ವಾಸ.

ಗಾತ್ರ : ಚಿಕ್ಕ ಗಾತ್ರದ ವಿಚಿತ್ರ ಮೀನು ೬- ೧೦ ಅಂಗುಲ ಉದ್ದ.

ಆಹಾರ : ಕೀಟಾಹಾರಿ.

ಲಕ್ಷಣಗಳು : ಟೀನಾಯಿಡ್‌ಹುರುಪೆಗಳ ಹೊದಿಕೆ. ಇದರ ವಿಶೇಷ ರಚನೆ ಎಂದರೆ ನೀರಿನ ಮೇಲ್ಮೈನಲ್ಲಿ ವಿರಮಿಸಿ ಏಕಾಲದಲ್ಲಿ ನೀರಿನ ಒಳಗೆ ಮತ್ತು ನೀರಿನ ಹೊರಗೂ ನೋಡುವುದಕ್ಕೂ ಹೊಂದಿಕೊಂಡ ಕಣ್ಣುಗಳು ಎರಡೂ ಕಣ್ಣುಗಳು ಪರಸ್ಪರ ಹತ್ತಿರದಲ್ಲಿವೆಯಲ್ಲದೆ ಉಬ್ಬಿದಂತೆ ತಲೆಯ ಮೇಲೆ ಪ್ರಧಾನವಾಗಿ ಕಾಣುತ್ತವೆ. ಕಪ್ಪೆಯ ಕಣ್ಣುಗಳಂತೆ ಹಿಂದಕ್ಕೂ ಮುಂದಕ್ಕೂ ಚಲಿಸಬಲ್ಲವು. ಬಂಡೆಗಳ ಮೇಲೆ ಕುಳಿತಾಗ ತಲೆ ಮತ್ತು ಮುಂಡಭಾಗ ನೀರಿನಿಂದ ಹೊರಗಿದ್ದು ಬಾಲ ನೀರಿನಲ್ಲಿ ಮುಳುಗಿರುತ್ತದೆ. ಬಾಲದ ಈಜುರೆಕ್ಕೆಗೆ ಹೆಚ್ಚಿನ ರಕ್ತ ಪರಿಚಲನೆಗೆ ಅವಕಾಶವಿರುವುದರಿಂದ ಉಸಿರಾಟದಲ್ಲಿ ನೆರವಾಗುತ್ತದೆಂಬ ಅಭಿಪ್ರಾಯ ಇದೆ. ಬಂಡೆಗಳ ಮೇಲೆ ಕುಳಿತಾಗ ಕಿವಿರು ರಂಧ್ರಗಳಿರುವ ಕುತ್ತಿಗೆಯ ಭಾಗ ನೀರಿನಿಂದ ಹೊರಗಿರುವುದರಿಂದ ನೀರಿನಲ್ಲಿ ಮುಳುಗಿರುವ ಬಾಲ ಉಸಿರಾಟಕ್ಕೆ ನೆರವಾಗುತ್ತದೆ ಎಂಬ ವಾದವನ್ನು ಒಪ್ಪ ಬೇಕಾಗುತ್ತದೆ. ಖಡಾಖಂಡಿತವಾಗಿ ಹೇಳುವಂತಿಲ್ಲ ಕಿವಿರು ಕೋಣೆಗಳು ದೊಡ್ಡವು ಮತ್ತು ಬಾಯಿಂದ ನುಂಗಿದ ಗಾಳಿಯಿಂದ ತುಂಬಿ ಗಾಳಿಯನ್ನು ಉಸಿರಾಡಲು ಮಾರ್ಪಟ್ಟಿವೆ.

ಈ ಮೀನಿನ ಕಣ್ಣುಗಳು ವಿಶೇಷವಾಗಿ ಮಾರ್ಪಟ್ಟಿವೆ. ತಲೆಯ ಗಾತ್ರಕ್ಕೆ ತುಸು ಹೆಚ್ಚು ಅನ್ನಿಸುವ ಕಣ್ಣುಗಳು ನೆತ್ತಿಯ ಮೇಲಿವೆ. ಪ್ರತಿಯೊಂದು ಕಣ್ಣು ಮೇಲಿನ ಅರ್ಧ ನೀರಿನಿಂದ ಹೊರಗೆ ನೋಡುವುದಕ್ಕೂ, ಕೆಳಗಿನ ಅರ್ಧ ನೀರಿನಲ್ಲಿ ನೋಡುವುದಕ್ಕೂ ಹೊಂದಿಕೊಂಡಿವೆ. ಹೀಗಾಗಿ ನೀರಿನಲ್ಲಿ ಅರ್ಧ ಮುಳುಗಿ ನೀರಿನ ಮೇಲೂ ಮತ್ತು ನೀರಿನ ಒಳಗೂ ಇದ್ದು ಎರಡೂ ಕಡೆ ನೋಡಬಹುದಾದ ಅನುಕೂಲ ಹೊಂದಿವೆ. ಕಣ್ಣುಗಳು ಹೊರಕ್ಕೆ ಉಬ್ಬಿದಂತೆ ಬಾಚಿ ಕೊಂಡಿರುವುದರಿಂದ ಪೆರಿಆಫ್ತಾಲ್ಮಸ್‌ಹೆಸರು ಬಂದಿದೆ.

ಈ ಎಲ್ಲ ಮಾರ್ಪಾಡುಗಳ ಸಹಾಯದಿಂದ, ಉಳಿದೆಲ್ಲ ಮೀನುಗಳು ನೀರಿನಿಂದ ಹೊರಗೆ ಬಹಳ ಕಾಲವಿದ್ದರೆ ಸಾಯಬಹುದಾದ ಪರಿಸ್ಥಿತಿಗಳಲ್ಲಿ ಈ ಮೀನು ಬದುಕಿರಬಲ್ಲದು. ನಿಜ ಹೇಳಬೇಕೆಂದರೆ ಇದು ಹೊರಬರದೆ ನೀರಿನಲ್ಲಿ ಹೆಚ್ಚು ಹೊತ್ತು ಇದ್ದರೆ ಉಸಿರುಕಟ್ಟಿ ಸಾಯುತ್ತದೆ.

ಭುಜದ ಈಜುರೆಕ್ಕೆಗಳು ನೆಲದ ಮೇಲೆ ನಡೆಯಬಹುದಾದಂತೆ ಊರಗೋಲುಗಳಂತಾಗಿವೆ. ಇವಕ್ಕೆ ಬಲವಾದ ಸ್ನಾಯುಗಳ ಆಧಾರವೂ ಇದೆ. ಕೆಸರಿನಲ್ಲಿ ಜಿಗಿದು ಓಡಾಡುತ್ತವೆ. ಅದರಿಂದ ಮಣ್ಣು ಮಿಣುಕ (ಮಡ್‌ಸ್ಕಿಪ್ಪರ್) ಎಂಬ ಹೆಸರು ಬಂದಿದೆ. ಇದು ಕೆಸರಿನಲ್ಲಿ ವಾಸ್ತವವಾಗಿ ಓಡಾಡಬಲ್ಲದು.

ಈ ಮೀನು ನೀರಿನಿಂದ ಹೊರಗೆ ಉಳಿಯಬಹುದು ಮತ್ತು ಭುಜದ ಈಜುರೆಕ್ಕೆಗಳ ಸಹಾಯದಿಂದ ಓಡಾಡಬಲ್ಲುದೆಂಬ ವಿಷಯ ಚತುಷ್ಪಾದಿ ಕಶೇರುಕಗಳ ಕಾಲುಗಳು ಮೀನುಗಳ ಜೋಡಿ ಈಜುರೆಕ್ಕೆಗಳಿಂದ ಉದ್ಭವಿಸಿರಬೇಕೆಂಬ ವಾದಕ್ಕೆ ಪುಷ್ಟಿಕೊಡುತ್ತದೆ.

—-

ಗಣ : ಪರ್ಸೀಫಾರ್ಮಿಸ್ (Perciformes)
ಕುಟುಂಬ : ಸಿಕ್ಲಿಡೀ (Cichlidae)
ಉದಾ : ಎಟ್ರೊಪ್ಲಸ್
ಮೀನು (Etroplus fish)
ಶಾಸ್ತ್ರೀಯನಾಮ : ಎಟ್ರೊಪ್ಲಸ್
ಕೆನರೆನ್ಸಿಸ್‌(Etroplus canarensis)

ಸಾಧಾರಣ ಉದ್ದದ ಚಪ್ಪಟೆ ದೇಹದ ಮೀನು. ಭುಜದ, ಸೊಂಟದ ಮತ್ತು ಗುದ ಈಜುರೆಕ್ಕೆಗಳಿಗೆ ಮುಳ್ಳುಗಳಿವೆ. ಸಾಮಾನ್ಯವಾಗಿ ಎರಡು ಬೆನ್ನು ಈಜುರೆಕ್ಕೆಗಳಿವೆ. ಮುಂದಿನ ಬೆನ್ನು ಈಜುರೆಕ್ಕೆಯಲ್ಲಿ ೨೧ ರಿಂದ ೨೨ ಮುಳ್ಳು ರೆಕ್ಕೆ ಕಡ್ಡಿಗಳಿದ್ದರೆ ಹಿಂದಿನ ಬೆನ್ನು ಈಜುರೆಕ್ಕೆಯಲ್ಲಿ ಮೃದುವಾದ ೬ ರಿಂದ ೭ ರೆಕ್ಕೆ ಕಡ್ಡಿಗಳಿವೆ. ಎರಡು ಬೆನ್ನು ಈಜುರೆಕ್ಕೆಗಳು ಅಂಟಿಕೊಂಡು ಒಂದೆ ಎನ್ನುವಂತೆ ಕಂಡರೂ ಪ್ರತ್ಯೇಕ ರಚನೆಗಳು, ತಲೆಗೂ ಹುರುಪೆಗಳ ಹೊದಿಕೆ ಉಂಟು.

049_69_PP_KUH

ಇದೇ ಗಣ, ಕುಟುಂಬಕ್ಕೆ ಇನ್ನೊಂದು ಉದಾಹರಣೆ
ಶಾಸ್ತ್ರೀಯ ನಾಮ : ಎಟ್ರೊಪ್ಲಸ್
ಮ್ಯಾಕುಲೇಟಸ್(Etroplus maculatar)

050_69_PP_KUH

ಇದರ ದೇಹ ಹೆಚ್ಚು ಕಡಿಮೆ ದುಂಡಗೆ ಚಪ್ಪಟೆಯಾಗಿದೆ. ಬಾಲದ ಈಜುರೆಕ್ಕೆ ಅರೆ ಚಂದ್ರಕಾರವಾಗಿದೆ ಮತ್ತು ಸ್ವಲ್ಪ ಕವಲೊಡೆದಿದೆ. ಪಾರ್ಶ್ವ ಪಂಕ್ತಿಯು ಅಸ್ಪಷ್ಟ ಪಾರ್ಶ್ವಪಂಕ್ತಿಯ ಮೇಲೆ ಬೆನ್ನಿನ ಕಡೆಗೆ ಮೂರು ಸುಮಾರು ಗಾತ್ರದ ಕಪ್ಪು ಕಲೆಗಳಿವೆ. ದೇಹದ ಮೇಲೆ ಅಡ್ಡ ಪಟ್ಟಿಗಳಿವೆ. ಬೆನ್ನು ಈಜು ರೆಕ್ಕೆಯಲ್ಲಿ ೧೨ ರಿಂದ ೨೦ ಮುಳ್ಳಿನಂತಹ ರೆಕ್ಕೆ ಕಡ್ಡಿಗಳಿವೆ.

ಇವೆರಡನ್ನೂ ಎಟ್ರೋಪ್ಲಸ್‌ಮೀನುಗಳೆಂದು ಕರೆಯುತ್ತಾರೆ.