ಹಾವು ಹಕ್ಕಿ (DARTER)
ಅನ್ ಹಿಂಗ ರೂಫ (Anhinga rufa)

113_69_PP_KUH

ಗಾತ್ರ : ೮೫-೯೦ ಸೆಂ.ಮೀ.

ಆವಾಸ : ಸಿಹಿನೀರಿನ ಕೆರೆ, ಜಲಾಶಯ, ನದಿ, ಇತ್ಯಾದಿ. ನೀರ್ಕಾಗೆಯ ಸಹವರ್ತಿ, ಆದರೆ ಬಹುತೇಕ ಒಂಟಿಜೀವಿ. ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹಾವಿನಂತೆ ಕಾಣುವ ಉದ್ದನೆಯ ಕುತ್ತಿಗೆ. ಉದ್ದನೆಯ ಮೊನಚಾದ ಕೊಕ್ಕು. ಬಹುತೇಕ ಕಪ್ಪು ಬಣ್ಣ. ರೆಕ್ಕೆಯ ಹಿಂಭಾಗದಲ್ಲಿ ಬೆಳ್ಳಿ ಗೆರೆಗಳು. ಬಿಳಿಗಲ್ಲ ಮತ್ತು ಗಂಡಲು. ಉಳಿದಂತೆ ಕೆಳಭಾಗ ಕಪ್ಪು. ನೀರಿನಲ್ಲಿ ಮುಳುಗಿ ಮೀನು ಹಿಡಿಯುವುದರಲ್ಲಿ ನಿಸ್ಸೀಮ. ನೀರಿನಲ್ಲಿ ಈಜುವಾಗ ಕುತ್ತಿಗೆ ಮತ್ತು ತಲೆ ಮಾತ್ರ ಗೋಚರ. ದೂರದಿಂದ ನೋಡುವಾಗ ಹಾವಿನಂತೆ ಕಾಣಬಹುದು.

ಆಹಾರ : ಮುಖ್ಯವಾಗಿ ಮೀನು.

ಸಂತಾನಾಭಿವೃದ್ಧಿ : ನವಂಬರಿನಿಂದ ಫೆಬ್ರವರಿವರೆಗೆ. ಸ್ಥಳೀಯವಾಗಿ ಬದಲಾಗಬಹುದು. ಕಾಗೆ ಗೂಡಿನಂತಹ ಗೂಡು. ನೀರ್ಕಾಗೆ ಬೆಳ್ಳಕ್ಕಿಗಳ ಜೊತೆಗೆ ಸಂತಾನಾಭಿವೃದ್ಧಿ. ೩-೪ ತಿಳಿ ಪಚ್ಚೆ ಮೊಟ್ಟೆಗಳು.

—- 

ಬೂದು ಕೊಕ್ಕರೆ (GREY HERON)
ಆರ್ಡಿಯ ಸಿನೇರಿಯಾ (Ardea cineria)

114_69_PP_KUH

ಗಾತ್ರ : ೧೦೦ ಸೆಂ.ಮೀ. ಉದ್ದಕಾಲಿನ ದೊಡ್ಡ ಹಕ್ಕಿ.

ಆವಾಸ : ಜವುಗು ಪ್ರದೇಶ, ಕೆರೆ, ಆಲವಿಲ್ಲದೆ ವಿಧಾನ ಹರಿಯುವ ನದಿ ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ನಮ್ಮ ಸುತ್ತಮುತ್ತಲಿನ ಎತ್ತರದಲ್ಲಿ ವಾಸಿಸುವ ಹಕ್ಕಿಗಳಲ್ಲಿ ಒಂದು. ಬೂದು ಬಣ್ಣ ಎದ್ದು ಕಾಣುವ ಮೈಮಾಟ. ನೆತ್ತಿ ಕುತ್ತಿಗೆ, ಕೆಳಭಾಗ ಬಿಳಿ. ಕೊಕ್ಕು ಮೇಲೆ ಕಪ್ಪು ಪಟ್ಟಿ ಹೊಳೆಯುವ ಹಳದಿ ಕಣ್ಣುಗಳು. Sಆಕೃತಿಯ ಕುತ್ತಿಗೆ. ಅರೆ ಜಾಗರೂಕತೆಯ ಹಕ್ಕಿ. ನೀರಿನ ಮಧ್ಯದ ಮಣ್ಣಿನ ದಿಣ್ಣೆಯ ಮೇಲೆ ದೀರ್ಘಕಾಲ ನಿಂತಿರುವುದು ಸಾಮಾನ್ಯ. ಚೂಪು ಹಾಗೂ ಮೊನಚಾದ ಕೊಕ್ಕು.

ಆಹಾರ : ಹುಳು, ಮೀನು, ಮೃದ್ವಂಗಿ, ಕಪ್ಪೆ, ಗೊದಮೊಟ್ಟೆ ಇತ್ಯಾದಿ.

ಸಂತಾನಾಭಿವೃದ್ಧಿ : ನವಂಬರಿನಿಂದ ಮಾರ್ಚ್‌ವರೆಗೆ. ಕಡ್ಡಿಗಳ ಗೂಡು. ಎತ್ತರದ ಮರಗಳಲ್ಲಿ ೩-೬ ಹಸಿರು ಮೊಟ್ಟೆಗಳು.

—- 

ಕೆನ್ನೀಲಿ ಕೊಕ್ಕರೆ (PURPLE HERON)
ಆ. ಪುರ‍್ಪುರಿಯ (Ardea purpurea)

115_69_PP_KUH

ಗಾತ್ರ : ಸುಮಾರು ೧೦೦ ಸೆಂ.ಮಿ.

ಆವಾಸ : ಹೊಳೆಯ ಬದಿ, ಕೆರೆ, ಆಳವಿಲ್ಲದ ನಿಂತ ನೀರಿನ ಪ್ರದೇಶಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕೆನ್ನೀಲಿ ಕಲೆ ಮತ್ತು ಕುತ್ತಿಗೆ. ದಟ್ಟ ಕಂದು ಬಣ್ಣ ಕೆಳಭಾಗ. ಬೂದು ಕಂದು ಮೇಲ್ಭಾಗ. ಬಿಸಿಲಿನಲ್ಲಿ ಕಂದು ಬಣ್ಣ ಹೊಳೆಯುತ್ತದೆ. ಕುತ್ತಿಗೆ ಮೇಲೆ ಕಪ್ಪು ಪಟ್ಟಿ, ಗಲ್ಲ, ಗಂಟಲು, ರೆಕ್ಕೆ ಮತ್ತು ಬಾಲ ಬಹುತೇಕ ಕಪ್ಪು, ಸದ್ದುಗದ್ದಲ ಮಾಡದ ‘ನಾಚಿಕೆ’ ಪ್ರವೃತ್ತಿಯ ಹಕ್ಕಿ.

ಆಹಾರ : ಕಪ್ಪೆ ಮೀನು, ಗೊದಮೊಟ್ಟೆ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ಜೂನ್ ತಿಂಗಳನಿಂದ ಮಾರ್ಚ್‌ವರೆಗೆ. ಸ್ಥಳೀಯವಾಗಿ ಸಂತಾನಾಭಿವೃದ್ಧಿ ಕಾಲ ಸ್ವಲ್ಪ ಬದಲಾಗಬಹುದು. ಕಳೆಗಳ ಒಳಹಾಸಿನ ಕಡ್ಡಿಗಳ ಗೂಡು. ೩-೫ ತಿಳಿ ಹಸಿರು ಮೊಟ್ಟೆಗಳು.

—- 

ದೊಡ್ಡ ತುಪ್ಪಳ (LARGE EGRET)
ಆ. ಆಲ್ಬ (Ardeo alba)

116_69_PP_KUH

ಗಾತ್ರ : ೯೦-೯೫ ಸೆಂ.ಮೀ.

ಆವಾಸ : ಜೌಗು ಪ್ರದೇಶ, ನದಿ ತೀರ, ಭತ್ತದ ಗದ್ದೆ, ಆಳವಿಲ್ಲದ ಕೆರೆ ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಅಚ್ಚ ಬಿಳುಪಿನ ರುಧ್ರಪಕ್ಷಿ. ಹೆಣ್ಣ ಗಂಡುಗಳ ನಡುವೆ ವ್ಯತ್ಯಾಸವಲ್ಲ. ಹಳದಿ- ಕಪ್ಪು ಕೊಕ್ಕು, ಉದ್ದನೆಯ ಕಪ್ಪು ಕಾಲುಗಳು, ಸಂತಾನಭಿವೃದ್ಧಿ ಕಾಲದಲ್ಲಿ ಬೆನ್ನು ಮತ್ತು ಎದೆಯ ಮೇಲೆ ಬಿಳಿ ಗರಿ ಗುಚ್ಚ ಬೆಳೆಯುತ್ತದೆ. ಸಾಮಾನ್ಯವಾಗಿ ಒಂಟಿ ಜೀವಿ.

ಆಹಾರ : ಕಪ್ಪೆ, ಮೀನು, ಹುಳು, ಕೀಟ, ಮೃದ್ವಂಗಿ ಇತ್ಯಾದಿ. ನೀರಿನ ಬಳಿ ಅಲುಗಾಡದೆ ನಿಂತು ಹೊಂಚು ಹಾಕಿ ಮೀನು ಹಿಡಿಯುವುದು ಲಕ್ಷಣ.

ಸಂತಾನಾಭಿವೃದ್ಧಿ : ಜುಲೈ ತಿಂಗಳಿನಿಂದ ಫೆಬ್ರವರಿವರೆಗೆ. ಸ್ಥಳೀಯವಾಗಿ ಸ್ವಲ್ಪ ಬದಲಾಗಬಹುದು. ಇತರೆ ಬೆಳ್ಳಕ್ಕಿಯೊಂದಿಗೆ ಸಮೂಹ ಜೀವನ. ಕಡ್ಡಿಗಳ ಅಟ್ಟಣೆಯಂತಹ ಗೂಡು. ೩-೪ ತಿಳಿ ಹಸಿರು ಮೊಟ್ಟೆಗಳು.

—- 

ಪುಟ್ಟ ತುಪ್ಪಳ (LITTLE EGRET)
ಇಗ್ರೆಟ್ಟ ಗಾರ್ಜೆಟ್ಟ (Egretta garzete)

117_69_PP_KUH

ಗಾತ್ರ : ೬೦-೬೫ ಸೆಂ.ಮೀ.

ಆವಾಸ : ನೀರಿರುವ ಭತ್ತದ ಗದ್ದೆ, ಕೊಳ, ನದಿ ತೀರ, ಕಾಂಡ್ಲಕಾಡು. ಸಮುದ್ರ ತೀರ ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಶುದ್ಧ ಬೆಳ್ಳಕ್ಕಿ. ಕಾಲುಗಳು ಮತ್ತು ಕೊಕ್ಕು ಮಾತ್ರ ಕಪ್ಪು. ಪಾದ ಹಳದಿ. ಸಂತಾನಾಭಿವೃದ್ಧಿ ಕಾಲದ್ಲಲಿ ಬೆನ್ನು ಮತ್ತು ಎದೆಯ ಮೇಲೆ ಬಿಳಿ ಗರಿ ಗುಚ್ಚ ಎದ್ದು ಕಾಣುತ್ತದೆ.

ಆಹಾರ : ಕಪ್ಪೆ, ಹಾವು, ಕೀಟ, ಮೀನು ಇತ್ಯಾದಿ.

ಸಂತಾನಾಭಿವೃದ್ಧಿ : ಜೂನ್ ತಿಂಗಳಿನಿಂದ ನವಂಬರ‍್ವರೆಗೆ, ಮರಗಳ ಮೇಲೆ ಕಾಗೆ ಗೂಡಿನಂತಹ ಗೂಡು. ಬಿಳಿಪಟ್ಟೆ ಮೊಟ್ಟೆಗಳು.