ಮುಳುಗು ಬಾತು (DABCHICK)
ಪೊಡಿಸೆಪ್ಸ ರುಫಿಕೊಲೊಸ್ (Podiceps ruficolis)

108_69_PP_KUH

ಗಾತ್ರ : ೨೦-೨೫ ಸೆಂ.ಮೀ. ಬಾತುಕೋಳಿಗಳ ಜಾತಿಯಲ್ಲಿ ಅತಿ ಚಿಕ್ಕದು.

ಆವಾಸ : ಕೆರೆ, ಜಲಾಶಯ, ಸರೋವರ ಮತ್ತಿತರ ಸಸ್ಯಗಳಿರುವ ನೀರಿನಾಶ್ರಯದ ಪ್ರದೇಶ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ರೇಶ್ಮೆಯಂತಹ ಗರಿಗಳು. ಮಸುಕಾದ ನಸುಕಂದು ಬಣ್ಣದ ಮೇಲ್ಭಾಗ ಗಲ್ಲಕಪ್ಪು, ಹೊಟ್ಟೆಯ ಭಾಗ ಬಿಳಿ. ಗಿಡ್ಡ ಆದರೂ ಚೂಪಾದ ಕೊಕ್ಕು. ಬಾಲವಿಲ್ಲ. ದೂರ ಹರಲಾರದ ಜಲಪಕ್ಷಿಯಿದು. ಸಂತಾನಾಭಿವೃದ್ಧಿ ಕಾಲದಲ್ಲಿ ಕುತ್ತಿಗೆ, ತಲೆ ಮತ್ತು ಗಂಟಲು ದಟ್ಟ ಕಂದು ಬಣ್ಣಕ್ಕೆ ತಿರುಗುತ್ತದೆ. ನೀರಿನಲ್ಲಿ ಮುಳುಗಿ ಬಲುದೂರ ಗೋಚರಿಸದಂತೆ ಈಜಿ ನಂತರ ಹೊರಬರುವುದು ಇದರ ಸ್ವಭಾವ.

ಆಹಾರ : ಮೀನು, ಸೀಗಡಿ, ಗೊದಮೊಟ್ಟೆ ಮತ್ತು ನೀರಿನಲ್ಲಿರುವ ಕೀಟಗಳು.

ಸಂತಾನಾಭಿವೃದ್ಧಿ : ಏಪ್ರಿಲಿನಿಂದ ಅಕ್ಟೋಬರವರೆಗೆ. ಸ್ಥಳೀಯವಾಗಿ ವ್ಯತ್ಯಾಸವಿರಬಹುದು. ನೀರಿನ ಮೇಲೆ ತೇಲುವ ತೆಪ್ಪದಂತಹ ಗೂಡು. ೩-೫ ಬಿಳಿ ಮೊಟ್ಟೆಗಳು. ಕ್ರಮೇಣ ಕಂದುಬಣ್ಣ.

—- 

ಬೂದು ಹೆಜ್ಜಾರ್ತಿ (SPOTBILLED PELICAN)
ಪೆಲಿಕನಸ್ ಫಿಲಿಪೆನ್ಸಿಸ್ (Pelecanus philippensis)

109_69_PP_KUH

ಗಾತ್ರ : ೧೫೦-೧೬೦ ಸೆಂ.ಮೀ.

ಆವಾಸ : ಕೆರೆ, ಕೊಳ, ಸರೋವರ, ಜಲಾಶಯ ಮತ್ತು ನದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಸುಲಭವಾಗಿ ಗುರುತಿಸಬಹುದಾದ ದೊಡ್ಡ ಗಾತ್ರದ ನೀರು ಹಕ್ಕಿ. ಬೂದು ಬಣ್ಣ. ಬೆನ್ನಿನ ಕೆಳಭಾಗದಲ್ಲಿ ನಸುಗಂದು. ದೊಡ್ಡದಾದ ಭಾರವಾದ ಮತ್ತು ಮೊನಚಾದ ಕೊಕ್ಕು. ಕೊಕ್ಕಿನ ಕೆಳಗೆ ಹಿಗ್ಗು ಚೀಲವಿರುವುದು ಪ್ರಮುಖ ಲಕ್ಷಣ. ಸಣ್ಣ ಕಾಲುಗಳು ಜಲಪಾದವಿರುವುದು ನೀರು ಹಕ್ಕಿಯ ದ್ಯೋತಕ. ಒಂಟಿಯಾಗಿ ಇಲ್ಲವೆ ಗುಂಪಾಗಿ ಮೀನುಗಳ ಬೇಟೆಯಾಡುತ್ತವೆ.

ಆಹಾರ : ಮೀನು ಪ್ರಮುಖ ಆಹಾರ. ಅವಸರದಲ್ಲಿ ಮೀನುಗಳನ್ನು ಹೆಕ್ಕಿ ಕುತ್ತಿಗೆ ಚೀಲದಲ್ಲಿ ತುಂಬಿಸಿಕೊಂಡು, ಅನಂತರ ನಿಧಾನವಾಗಿ ನುಂಗುತ್ತದೆ.

ಸಂತಾನಾಭಿವೃದ್ಧಿ : ನವಂಬರಿನಿಂದ ಏಪ್ರಿಲ್‌ವರೆಗೆ ಮಂಡ್ಯದ ಬಳಿಯ ಕೊಕ್ಕರೆ ಬೆಳ್ಳೂರಿನಲ್ಲಿ ಡಿಸೆಂಬರ್ ಜನವರಿ ತಿಂಗಳಲ್ಲಿ ಮರಗಳ ಮೇಲೆ ಕಡ್ಡಿ-ಟೊಂಗೆಗಳ ಅಟ್ಟಣಿಯ ಗೂಡು. ಅನೇಕ ಗೂಡುಗಳು ಒಂದೇ ಮರದಲ್ಲಿ ಕಾಣಬಹುದು. ೩ ಬಿಳಿ ಮೊಟ್ಟೆಗಳು ಕ್ರಮೇಣ ಮಾಸಲು ಬಣ್ಣಕ್ಕೆ ತಿರುಗುತ್ತವೆ.

 —-

ದೊಡ್ಡ ನೀರುಕಾಗೆ (LARGE CORMORANT)
ಫೆಲೆಕ್ರೊಕೊರಾಕ್ಸ್ ಕಾರ್ಬೊ (Phalacrocorax carbo)

110_69_PP_KUH

ಗಾತ್ರ : ೮೦-೮೫ ಸೆಂ.ಮೀ.
ಆವಾಸ : ಹಿನ್ನೀರು, ಜಲಾಶಯ, ಕೆರೆ, ನದಿ ಮತ್ತು ಸಮುದ್ರ ತೀರ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಾಗೆಯಂತಹ ಕಪ್ಪು ಜಲಪಕ್ಷಿ, ಲೇಹದಂತೆ ಹೊಳೆಯುತ್ತದೆ. ಹಳದಿ ಬಣ್ಣದ ಚಿಕ್ಕ ಕುತ್ತಿಗೆ ಚೀಲ. ತೊಡೆಯ ಮೇಲೆ ಬಿಳಿ ಗುರುತು. ಸಂತಾಭಿವೃದ್ಧಿಕಾಲದಲ್ಲಿ ತಲೆ ಮತ್ತು ಕುತ್ತಿಗೆ ಮೇಲೆ ಬಿಳಿ ಗುರುತು ತೊಡೆಯ ಮೇಲಿನ ಗುರುತು ಅಸ್ಪಷ್ಟ. ಬಿಸಿಲಿನಲ್ಲಿ ರೆಕ್ಕೆ ಬಿಚ್ಚಿ ಮೈ ಒಣಗಿಸಿ ಕೊಳ್ಳುವುದು ಸಾಮಾನ್ಯ.

ಆಹಾರ : ಮೀನು ಪ್ರಮುಖ ಆಹಾರ. ನೀರಿನಲ್ಲಿ ಮುಳುಗಿ ಅಟ್ಟಿಸಿಕೊಂಡು ಹೋಗಿ ಮೀನು ಹಿಡಿದು ತಿನ್ನುವುದು ಅದರ ಸ್ವಭಾವ.

ಸಂತಾನಾಭಿವೃದ್ಧಿ : ಸೆಪ್ಟೆಂಬರ‍್ನಿಂದ ಫೆಬ್ರವರಿವರೆಗೆ ಇತರೆ ಹಕ್ಕಿಗಳೊಂದಿಗೆ ಒಂದೇ ಮರದಲ್ಲಿ ವಾಸ. ಹಲವಾರು ಗೂಡುಗಳಿರಬಹುದು. ದೊಡ್ಡ ಗಾತ್ರದ ಕಡ್ಡಿಗಳ ಗೂಡು. ಸಾಮಾನ್ಯವಾಗಿ ನೀರಿನಾಶ್ರಯದ ಬಳಿ. ೩-೫ ತಿಳಿ ನೀಲಿ ಮೊಟ್ಟೆಗಳು.

—- 

ಚಿಕ್ಕ ನೀರ್ಕಾಗೆ (LITTLE CORMORANT)
ಫೆ. ನೈಗರ್ (P. niger)

111_69_PP_KUH

ಗಾತ್ರ : ೪೫-೫೦ ಸೆಂ.ಮೀ. ನೀರ್ಕಾಗೆಗಳ ಜಾತಿಯಲ್ಲಿ ಚಿಕ್ಕದು.

ಆವಾಸ : ಇತರೆ ನೀರ್ಕಾಗೆಗಳಿರುವೆಡೆ ಅಂದರೆ ಕೆರೆ, ಸರೋವರ, ಹಿನ್ನಿರು. ಜಲಾಶಯ ಮತ್ತು ನದಿ. ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೊಳೆಯುವ ಕಪ್ಪು ಬಣ್ಣ. ಕುತ್ತಿಗೆ ಪಟ್ಟಿಯಿಲ್ಲ. ನೆತ್ತಿ ಮತ್ತು ತಲೆಯ ಇಕ್ಕೆಡೆಗಳಲ್ಲಿ ರೇಶ್ಮೆಯಂತಹ ಬಿಳಿಗರಿಗಳು. ಬಾಲ ಉದ್ದ, ಕೊಕ್ಕು ಚೂಪು ಮತ್ತು ಬಾಗಿದೆ. ಬಿಳಿಗಲ್ಲ. ತಲೆ ಮಾತ್ರ ಮೇಲೆತ್ತಿಕೊಂಡು ಈಜುವುದು. ರೆಕ್ಕೆ ಬಿಚ್ಚಿ ಒಣಗಿಸಿಕೊಳ್ಳುವುದು ವಿಶೇಷ ಲಕ್ಷಣ.

ಆಹಾರ : ಮೀನು, ಏಡಿ, ಮತ್ತು ಗೊದಮೊಟ್ಟೆ.

ಸಂತಾನಾಭಿವೃದ್ಧಿ : ನವಂಬರಿನಿಂದ ಫೆಬ್ರವರಿವರೆಗೆ ಸ್ಥಳೀಯವಾಗಿ ವ್ಯತ್ಯಾಸವಿರಬಹುದು. ಕಾಗೆಯ ಗೂಡಿನಂತಹ ಗೂಡು. ಇತರೆ ಪಕ್ಷಿಗಳೊಂದಿಗೆ ಸಂತಾನಾಭಿವೃದ್ಧಿ. ೪-೫ ತಿಳಿ ಹಸಿರು ಮೊಟ್ಟೆಗಳು.

—- 

ನೀರು ಕಾಗೆ (INDIAN SHAG)
ಫೆಲಾಕ್ರೊಕೊರಾಕ್ಸ್ ಫ್ಯೂಸಿಕೊಲಿಸ್ (Phalacrocoras fuscicollis)

112_69_PP_KUH

ಗಾತ್ರ : ೬೫-೭೦ ಸೆಂ.ಮೀ.

ಆವಾಸ : ಇತರೆ ನೀರು ಕಾಗೆಗಳಂತೆ ಕೆರೆ, ಹಿನ್ನಿರು, ಸರೋವರ, ಜಲಾಶಯ ನದಿ ಇತ್ಯಾದಿಗಳು ಸ್ಥಳೀಯವಾಗಿ ವಲಸೆ ಹೋಗಬಹುದು.

ಲಕ್ಷಣಗಳು : ಹೊಳೆಯುವ ಹಿತ್ತಾಳೆ ಕಪ್ಪು. ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ತಲೆ ಮೇಲೆ ಬಿಳಿ ಚುಕ್ಕೆಗಳು. ಕೊಕ್ಕು ತೆಳ್ಳಗೆ ಮತ್ತು ಉದ್ದ. ಹಳದಿ ಕುತ್ತಿಗೆ ಚೀಲ. ಗುಂಪಾಗಿ ಇರುತ್ತವೆ; ಒಟ್ಟಿಗೆ ಆಹಾರ ಬೇಟೆ. ರೆಕ್ಕೆ ಮತ್ತು ಬಾಲ ಬಿಚ್ಚಿ ಮೈ ಒಣಗಿಸುವುದು ಸಾಮಾನ್ಯ.

ಆಹಾರ : ಹೆಚ್ಚು ಕಡಿಮೆ ಮೀನುಗಳು ಮಾತ್ರ.

ಸಂತಾನಾಭಿವೃದ್ಧಿ : ಜುಲೈ ತಿಂಗಳಿಂದ ಫೆಬ್ರವರಿವರೆಗೆ. ಸ್ಥಳೀಯವಾಗಿ ಬದಲಾಗಬಹುದು. ಕಾಗೆ ಗೂಡಿನಂತಹ ಕಡ್ಡಿಗಳ ಗೂಡು. ಬೆಳ್ಳಕ್ಕಿಗಳ ಗೂಡುಗಳಿರುವ ಮರಗಳಲ್ಲಿಯೇ ಗೂಡು ನಿರ್ಮಾಣ ಮಾಡುವುದು. ಸಾಮಾನ್ಯ. ೩-೬ ತಿಳಿ ಪಚ್ಚೆಯ ಮೊಟ್ಟೆಗಳು.