ಕೊಳದ ಬಕ (POND HERON)
ಆ. ಗ್ರೆಯಿ (Ardeoca grayii)

118_69_PP_KUH

ಗಾತ್ರ : ೪೫ ಸೆಂ.ಮೀ.

ಆವಾಸ : ಭತ್ತದ ಗದ್ದೆ, ಕೊಳ, ನದಿ ತೀರ, ಕಾಂಡ್ಲವನ, ಹಿನ್ನೀರು, ರಸ್ತೆಯ ಬದಿ ಚರಂಡಿ, ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ನಾಡಿನಾದ್ಯಂತ ಕಂಡು ಬರುವ ಅತ್ಯಂತ ಸಾಮಾನ್ಯ ಬಕ. ಕರಿದು ಬಣ್ಣ, ಮಾಸಿದ ಹಸಿರು ಕಾಲುಗಳು, ಕೊಕ್ಕಿನ ಬುಡ ಹಳದಿ, ಕಾಲು ಮತ್ತು ಕುತ್ತಿಗೆ ಕೊಕ್ಕರೆಗಳಿಗಿಂತ ಚಿಕ್ಕವು. ಸಂತಾನಾಭಿವೃದ್ಧಿ ಕಾಲದಲ್ಲಿ ದಟ್ಟಕಂದು. ಗಲ್ಲ ಮತ್ತು ಗಂಟಲು ಮೇಲ್ಭಾಗ ಬಿಳಿ. ಹಾರುವಾಗತ ಬಿಳಿ ಬಣ್ಣ ಎದ್ದು ಕಾಣುತ್ತದೆ. ಸಂತಾನಾಭಿವೃದ್ಧಿ ಕಾಲದಲ್ಲಿ ಹಿಂತಲೆಯಲ್ಲಿ ಜುಟ್ಟು.

ಆಹಾರ : ಕಪ್ಪೆ, ಮೀನು, ಹುಳು, ಮೃದ್ವಂಗಿ, ಹಾವಿನ ಮರಿ, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ಮಳೆಗಾಲದ್ಲಲಿ ಮೇಯಿಂದ ಆಗಸ್ಟವರೆಗೆ, ಕಾಗೆ ಗೂಡಿನಂತಹ ಕಡ್ಡಿಗಳ ಗೂಡು. ಮರ ಅಥವಾ ಕೇದಿಗೆ ವನದಲ್ಲಿ ಗೂಡು. ೩-೫ ಪಚ್ಚೆ ಮೊಟ್ಟೆಗಳು.

—- 

ಗೋವಕ್ಕಿ (CATTLE EGRET)
ಬುಬುಲ್ಕಸ್ ಐಬಿಸ್ (Bubulcus ibis)

119_69_PP_KUH

ಗಾತ್ರ : ೫೦ಸೆಂ.ಮೀ.

ಆವಾಸ : ನಾಡಿನಾದ್ಯಂತ ಕಂಡು ಬರುವ ಸರ್ವೆ ಸಾಮಾನ್ಯಹಕ್ಕಿ. ಬೆಟ್ಟಗುಡ್ಡಗಳಿಂದ ಹಿಡಿದು ಭತ್ತದ ಗದ್ದೆಗಳವರೆಗೆ ನೋಡಬಹುದು. ದನಕರುಗಳ ನಡುವೆ ಓಡಾಡುತ್ತಿರುವುದು ಸಾಮಾನ್ಯ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಇದೊಂದು ಬೆಳ್ಳಕ್ಕಿ, ಕೊಕ್ಕು ಹಳದಿ. ಆದರೆ ಸಂತಾನಾಭಿವೃದ್ಧಿ ಕಾಲದಲ್ಲಿ ತಲೆ ಮತ್ತು ಬೆನ್ನು ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಉಳಿದಂತೆ ಬಿಳಿ. ಗುಂಪಾಗಿ ಕಂಡು ಬರುತ್ತವೆ.

ಆಹಾರ : ಕೀಟಗಳು, ಹಾವು, ಹಲ್ಲಿ, ಮೀನು, ಕಪ್ಪೆ ಇತ್ಯಾದಿ.

ಸಂತಾನಾಭಿವೃದ್ಧಿ : ಮಾರ್ಚನಿಂದ ಜೂನ್‌ವರೆಗೆ. ಮರಗಳ ಮೇಲೆ ಕಾಗೆ ಗೂಡಿನಂತಹ ಗೂಡು. ಇತರೆ ಹಕ್ಕಿಗಳ ನಡುವೆ ಸಮೂಹ ಜೀವನ. ೩-೫ ತಿಳಿ ನೀಲಿ ಮೊಟ್ಟೆಗಳು.

—- 

ಪುಟ್ಟ ಹಸಿರುಬಕ (LITTLE GREEN HERON)
ಆರ್ಡಿಯೋಲಾ ಸ್ಟ್ರೈಯೇಟಸ್ (Ardeola striatus)

120_69_PP_KUH

ಗಾತ್ರ : ೪೫-೫೦ ಸೆಂ.ಮೀ.

ಆವಾಸ : ಕೆರೆ, ಕೊಳ, ತೊರೆಗಳ ದಡದಲ್ಲಿ ಕಾಂಡ್ಲವನದಲ್ಲೂ ಕಾಣ ಸಿಗಬಹುದು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ಬೂದು, ಕಪ್ಪು ಮತ್ತು ಲೋಹ ಹಸಿರು ಮೈಬಣ್ಣ. ಬೂದು ಹಿನ್ನೆಲೆಯಲ್ಲಿ ಹೊಳೆಯುವ ಹಸಿರಿನ ಮೆರಗು. ಗಂಟಲು ಮತ್ತು ದವಡೆ ಬಿಳಿ ಹಣೆ-ನೆತ್ತಿ ದಟ್ಟ ಹಸಿರು. ರೆಕ್ಕೆಗಳನ್ನು ಬಿಳಿ ಪಟ್ಟಿ, ಕೆಳಭಾಗ ಬೂದು ಬಿಳಿ. ಒಂಟಿ ಹಕ್ಕಿ. ನೀರಿನ ಬಳಿ ತಾಳ್ಮೆಯಿಂದ ಕಾದುಕೂತು ಮೀನು ಹಿಡಿಯುವ ಸ್ವಭಾವ. ಅಳುಕಿನ ಪಕ್ಷಿ.

ಆಹಾರ : ಏಡಿ, ಶಿಗಡಿ, ಮೀನು, ಕೀಟ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಆಗಸ್ಟ್‌ವರೆಗೆ, ನೀರಿನ ಬಳಿಯ ಮರಗಳ ಮೇಲೆ ಕಡ್ಡಿಗಳ ಗೂಡು. ೩-೫ ತಿಳಿ ಪಟ್ಟೆ ಮೊಟ್ಟೆಗಳು.

—- 

ಬಂಡೆ ಬಕ (REEF HERON)
ಇ. ಗ್ಯುಲಾರಿಸ್ (Egretta gularis)

121_69_PP_KUH

ಗಾತ್ರ : ೬೦-೬೫ ಸೆಂ.ಮೀ.

ಆವಾಸ : ಸಮುದ್ರ ತೀರದ ಬಂಡೆ ಕಲ್ಲುಗಳ ಮೇಲೆ, ಮರಳ ದಿಣ್ಣೆಯ ಮೇಲೆ, ಇದೊಂದು ಸಮುದ್ರ ತೀರದ ಬೆಳ್ಳಕ್ಕಿ, ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಆದರೆ ಜೀವನದಲ್ಲಿ ಎರಡು ಮಜಲುಗಳಿವೆ. ಮೊದಲನೆಯದು ದಟ್ಟವರ್ಣದ ಹಂಪ. ಕಪ್ಪು ಮಿಶ್ರಿತ ನೀಲಿ ಬಣ್ಣ; ಬಿಳಿ ಗಂಟಲು ಮತ್ತು ಕುತ್ತಿಗೆ ಮುಂಭಾಗ. ಎರಡನೆಯದು-ತಿಳಿ ಬಣ್ಣದ ಬಿಳಿ ಹಂತ. ಚಿಕ್ಕ ಬೆಳಕ್ಕಿಯನ್ನು ಎಲ್ಲ ದೃಷ್ಟಿಯಲ್ಲೂ ಹೋಲುತ್ತದೆ. ಆದರೆ ಬಂಡೆ ಬಕ ಬಹುತೇಕ ಬಂಡೆ ಮತ್ತು ಸಮುದ್ರತೀರಕ್ಕೆ ಮಾತ್ರ ಸೀಮಿತ.

ಆಹಾರ : ಮೃದ್ವಂಗಿ, ಮೀನು, ಏಡಿ ಇತ್ಯಾದಿ.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಜುಲೈವರೆಗೆ. ಕಾಗೆ ಗೂಡಿ ನಂತಹ ಗೂಡು. ೩-೪ ತಿಳಿ ಪಟ್ಟೆಯ ಮೊಟ್ಟೆಗಳು.

—- 

ರಾತ್ರಿ ಬಕ (NIGHT HERON)
ನಿಕ್ಟಿಕೊರಾಕ್ಸ್ ನಿಕ್ಟಿಕೊರಾಕ್ಸ್ (Nycticorax nycticorax)

122_69_PP_KUH

ಗಾತ್ರ : ೬೦-೬೫ ಸೆಂ.ಮೀ.

ಆವಾಸ : ಕೆರೆ, ತೊರೆ, ನದಿತೀರ, ಜಲಾಶ, ಸಮುದ್ರ ತೀರ, ಕಾಂಡ್ಲಕಾಡು ಇತ್ಯಾದಿ.

ಲಕ್ಷಣಗಳು : ಬೂದು, ಕಪ್ಪು ಮತ್ತು ಬಿಳಿ ಗರಿಗಳ ಚೆಂದದ ಹಕ್ಕಿ. ಕಪ್ಪು ತಲೆ ಮತ್ತು ಬೆನ್ನು ಬಿಳಿ ಹಣೆ, ಕಣ್ಣಿಗೊಂದು ಪಟ್ಟಿ ಕೆಂಪುಕಣ್ಣುಗಳು. ಇದೊಂದು ’ಕರಿ ಉಡುಗೆಯ ಮಹಾಶಯ’. ಸಂತಾನಾಭಿವೃದ್ಧಿ ಕಾಲದಲ್ಲಿ ತಲೆಯ ಮೇಲೆ ಉದ್ದನೆಯ ಬಿಳಿ ಗರಿಗಳು.

ಆಹಾರ : ಮೀನು, ಏಡಿ, ಕಪ್ಪೆ, ಸೀಗಡಿ, ಹುಳು ಕೀಟ, ಇತ್ಯಾದಿಗಳು.

ಸಂತಾನಾಭಿವೃದ್ಧಿ : ಡಿಸೆಂಬರ ತಿಂಗಳಿನಿಂದ ಫೆಬ್ರವರಿವರೆಗೆ. ಇತರೆ ಬಕಗಳಂತೆ ಕಡ್ಡಿಗಳ ಗೂಡು. ೪-೫ ತಿಳಿ ಹಸಿರು ಮೊಟ್ಟೆ