ಬಣ್ಣದ ಕೊಕ್ಕರೆ (PAINTED STORK)
ಮಿಕ್ಟೀರಿಯ ಲ್ಯುಕೊಸಿಫಾಲ (Mycteria leucocephala)

123_69_PP_KUH

ಗಾತ್ರ : ೯೦ – ೯೫ ಸೆಂ.ಮೀ.

ಆವಾಸ : ಜೌವುಗು ಪ್ರದೇಶ, ನದಿ ತೀರ, ಕೊಳ ಇತ್ಯಾದಿ ನೀರಿರುವ ಪ್ರದೇಶ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದೊಡ್ಡ ಗಾತ್ರದ ಎದ್ದು ಕಾಣುವ ಸುಂದರ ಪಕ್ಷಿ. ಬಿಳಿ ಬಣ್ಣ ರೆಕ್ಕೆ ಕಪ್ಪು-ಬಿಳಿ ಮಿಶ್ರಿತ. ಕಿತ್ತಳೆ ಮುಖ. ಭುಜ ಮತ್ತು ರೆಕ್ಕೆಗಳ ಮೇಲೆ ಗುಲಾಬಿ ಬಣ್ಣ. ದೊಡ್ಡ, ಬಲಿಷ್ಠ, ಉದ್ದ ಮತ್ತು ಭಾರದ ಕೊಕ್ಕು, ಬಾಲದ ಗರಿಗಳು ಕಪ್ಪು.

ಆಹಾರ : ಕಪ್ಪೆ, ಮೀನು, ಏಡಿ ಸೀಗಡಿ ಇತ್ಯಾದಿ.

ಸಂತಾನಾಭಿವೃದ್ಧಿ : ಮುಖ್ಯವಾಗಿ ಜನವರಿ ಫೆಬ್ರವರಿ ತಿಂಗಳುಗಳಲ್ಲಿ. ಕಡ್ಡಿಗಳು, ಹಸಿರು ಟೊಂಗೆಗಳ ದೊಡ್ಡ ಗೂಡು. ಒಳಗೆ ಎಲೆ-ಹುಲ್ಲುಗಳ ಹಾಸು. ೧೦-೧೩ ಗೂಡುಗಳು ಒಂದೇ ಮರದಲ್ಲಿರಬಹುದು. ೩-೫ ಕಂದು ಚುಕ್ಕೆಗಳ ಬಿಳಿ ಮೊಟ್ಟೆಗಳು.

 —-

ಕೆಂಗಂದು ನಾರಾಯಿಣಿ (CHESTNUT BITTERN)
ಇಕ್ಸೊಬ್ರೈಕಸ್ ಸಿನ್ನಮೊನಿಯಸ್ (Ixobrychus cinnamoneus)

124_69_PP_KUH

ಗಾತ್ರ : ೩೫-೪೦ ಸೆಂ.ಮೀ.

ಆವಾಸ : ಜನಸಸ್ಯವಿರುವ ಕೆರೆ, ಕೊಳಗಳಲ್ಲಿ, ನದಿ-ತೊರೆಗಳ ದಡದಲ್ಲಿ, ಸದಿಲ್ಲದ ಓಡಾಟ, ಸ್ಥಳೀಯವಾಗಿ ವಲಸೆ ಪಕ್ಷಿ.

ಲಕ್ಷಣಗಳು : ಮೇಲುಭಾಗ ದಟ್ಟ ಕೆಂಗದ್ದು ತಿಳಿ, ಕೆಳಭಾಗ-ಗಲ್ಲ ಬಿಳಿ, ಹಣೆ ಹೆಚ್ಚು ದಟ್ಟ ಕಂಗೆಂದು. ತಳಭಾಗ ಕಂದು. ಅಪಾಯದ ಸೂಚನೆ ಸಿಕ್ಕಾಗ ಹೆಪ್ಪು ಗಟ್ಟಿ ನಿಲ್ಲುತ್ತದೆ. ಮಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಬಹುದು.

ಆಹಾರ : ಕೀಟ, ಮೀನು ಮತ್ತು ಕಪ್ಪೆಗಳು.

ಸಂತಾನಾಭಿವೃದ್ಧಿ : ಜೂನ್ ನಿಂದ ಆಗಸ್ಟ್ ವರೆಗೆ. ನೀರಿನಲ್ಲಿ ಬೆಳೆದ ಜೊಂಡುಗಳ ನಡುವೆ ಗೂಡು. ೩-೪ ಬಿಳಿ ಮೊಟ್ಟೆಗಳು.

—- 

ತೆರೆದ ಕೊಕ್ಕಿನ ಕೊಕ್ಕರೆ (OPENBILLED STORK)
ಅನಸ್ಟೋಮಸ್ ಓಸಿಯೇಟಸ್ (Anastomus osciatus)

125_69_PP_KUH

ಗಾತ್ರ : ೮೦-೮೫ ಸೆಂ.ಮಿ.

ಆವಾಸ : ಜೌಗು ಪ್ರದೇಶ, ಕೆರೆ, ನದಿ ತೀರ, ಹಳ್ಳ ಇತ್ಯಾದಿ. ಸ್ಥಳೀಯ ಹಕ್ಕಿಗಳು.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಸ್ಟೋರ್ಕ್ ಜಾತಿಯಲ್ಲಿ ಅತಿ ಚಿಕ್ಕದು. ಕಪ್ಪು-ಬಿಳಿ ಹಕ್ಕಿ. ಸ್ವಲ್ಪ ಬೂದು ಛಾಯೆ ಬಿಳಿಯ ಮೈ. ಕಪ್ಪು ಬಾಲ ಮತ್ತು ರೆಕ್ಕೆಯ ತುದಿ. ದೊಡ್ಡ ಬಲಿಷ್ಠ ಕೊಕ್ಕು. ಕೊಕ್ಕಿನ ಮಧ್ಯ ಸ್ವಲ್ಪ ಜಾಗ. ಆದ್ದರಿಂದಲೇ ತೆರೆದ- ಕೊಕ್ಕಿನ ಎಂದು ಹೆಸರು. ಮೃದ್ವಂಗಿಗಳ ಚಿಪ್ಪು ಒಡೆಯಲು ಅನುಕೂಲ (ಅಡ್ಡ ಕತ್ತರಿಯಂತೆ)

ಆಹಾರ : ಮೃದ್ವಂಗಿ, ಕಪ್ಪೆ – ಮೀನು

ಸಂತಾನಾಭಿವೃದ್ಧಿ : ನವಂಬರಿನಿಂದ ಫೆಬ್ರವರಿವರೆಗೆ. ಇತರೆ ಕೊಕ್ಕರೆಗಳ ಜೊತೆಗೆ ಸಂತಾನಾಭಿವೃದ್ಧಿ. ಕಡ್ಡಿಗಳ ಗೂಡು. ೨-೪ ಬಿಳಿ ಮೊಟ್ಟೆಗಳು.

—- 

ಬಿಳಿ ಕತ್ತಿನ ಕೊಕ್ಕರೆ (WHITENECKED STORK)
ಸಿಕೋನಿಯ ಎಪಿಸ್ಕೊಪಸ್ (Ciconia episcopus)

126_69_PP_KUH

ಗಾತ್ರ : ೯೦-೧೦೦ ಸೆಂ.ಮೀ.

ಆವಾಸ : ಜೌಗು ಪ್ರದೇಶ, ಭತ್ತದ ಗದ್ದೆ, ಮೈದಾನದ ನೀರಿನಾಶ್ರಯ.

ಲಕ್ಷಣಗಳು : ಗಂಡು ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ದೊಡ್ಡ ಗಾತ್ರ ಬಿಳಿ ಕುತ್ತಿಗೆಯ ಕಪ್ಪು ಕೊಕ್ಕರೆ. ಕಾಲುಗಳು ಕೆಂಪು, ನೆತ್ತಿ ಹೊಳೆಯುವ ಕಪ್ಪು. ಹೊಟ್ಟೆಯ ಕೆಳಭಾಗ ಕೂಡಬಿಳಿ. ದೊಡ್ಡ ಬಲಿಷ್ಠವಾದ ಕೆಂಪು ಛಾಯೆಯ ಕಪ್ಪು ಕೊಕ್ಕು.

ಆಹಾರ : ಕಪ್ಪೆ, ಹಾವು, ಹರಣೆ, ಏಡಿ, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ಕಡ್ಡಿಗಳ ದಿಣ್ಣೆಯ ಗೂಡು ದೊಡ್ಡ ಮರಗಳ ಮೇಲೆ. ೩-೪ ಬಿಳಿ ಮೊಟ್ಟೆಗಳು.

—- 

ಕಪ್ಪು ಕತ್ತಿನ ಕೊಕ್ಕರೆ (BLACKNECKED STORK)
ಎಪಿಪ್ಪಿನೊ ಏಷಿಯಾಟಿಕಸ್ (Ephippino asiaticus)

127_69_PP_KUH

ಗಾತ್ರ : ೧೨೫-೧೩೦ ಸೆಂ.ಮೀ.

ಆವಾಸ : ದೊಡ್ಡನದಿಗಳು, ಜೌಗು ಪ್ರದೇಶ, ಮೈದಾನದ ನೀರಿನಾಶ್ರಯ ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ಭಾರತದ ಅತಿ ದೊಡ್ಡ ಸ್ಟೋರ್ಕ್, ತಲೆ ಮತ್ತು ಕತ್ತು ಹೊಳೆಯುವ ನೀಲಿ ಕಪ್ಪು. ಉಳಿದಂತೆ ಬಿಳಿ ದೇಹ, ರೆಕ್ಕೆಗಳ ಮೇಲೆ ಕಪ್ಪು ಪಟ್ಟಿ ಕಾಲುಗಳು ಕೆಂಪು. ಒಂಟಿಯಾಗಿ ಇಲ್ಲವೆ ಜೊತೆಯಾಗಿರಬಹುದು. ತಿಳಿ ಹಳದಿ ಕಣ್ಣು.

ಆಹಾರ : ಮೀನು, ಕಪ್ಪೆ, ಹಲ್ಲಿ, ಹಾವು, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ಆಗಸ್ಟ್ ನಿಂದ ಜನವರಿವರೆಗೆ. ಗುಂಪಾಗಿ ಸಂತಾನಾಭಿವೃದ್ಧಿ ಮರಗಳ ಮೇಲೆ ಕಡ್ಡಿಗಳ ದೊಡ್ಡ ಗಾತ್ರದ ಗೂಡು. ೨-೪ ಬಿಳಿ ಮೊಟ್ಟೆಗಳು.