ಬಿಳಿ ಐಬಿಸ್ (WHITE IBIS)
ತ್ರಿಸ್ಕಿಯಾರ‍್ನಿಸ್ ಎತಿಯೋಪಿಕ (Threskiornis aethiopica)

128_69_PP_KUH

ಗಾತ್ರ : ೭೦-೭೫ ಸೆಂ.ಮೀ.

ಆವಾಸ : ಗದ್ದೆ, ಕೊಳ, ನದಿತೀರ ಮತ್ತು ಜಲಾಶಯಗಳಲ್ಲಿ ಗುಂಪಾಗಿರುತ್ತವೆ. ಸ್ಥಳೀಯವಾಗಿ ವಲಸೆ ಹೋಗಬಹುದು.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಬಿಳಿ ದೇಹ; ಕಪ್ಪು ಕೊಕ್ಕು ಮತ್ತು ತಲೆ. ರೆಕ್ಕೆಗಳ ಕೆಳಗೆ ಕೆಂಪು ತೇಪೆ. ಉದ್ದನೇಯ ಬಾಗಿದ, ಚೂಪಾದ ಕೊಕ್ಕು. ಸಂತಾನಾಭಿವೃದ್ಧಿ ಕಾಲದಲ್ಲಿ ಕುತ್ತಿಗೆಯ ಮೇಲೆ ಉದ್ದನೆಯ ಬಿಳಿಗರಿಗಳು. ರೆಕ್ಕೆ ಸ್ವಲ್ಪ ಬೂದು ಬಣ್ಣ.

ಆಹಾರ : ಮೃದ್ವಂಗಿ, ಕೀಟ, ಮೀನು, ಕಪ್ಪೆ ಇತ್ಯಾದಿ

ಸಂತಾನಾಭಿವೃದ್ಧಿ : ನವಂಬರಿನಿಂದ ಫೆಬ್ರವರಿವರೆಗೆ ನೀರಿನ ಬಳಿ ಇರುವ ಮರಗಳ ಮೇಲೆ ಕಡ್ಡಿಗಳ ದಿಣ್ಣೆಯಂತಹ ಗೂಡು. ೩-೪ ತಿಳಿ ನೀಲಿ ಮೊಟ್ಟೆಗಳು. ಕೆಲವೊಮ್ಮೆ ಕಂದು ಹಳದಿ ಚುಕ್ಕೆಗಳಿರಬಹುದು.

—- 

ಹೆಬ್ಬಕ (ADJUTANT STORK)
ಲೆಪ್ಟೋಟಿಲಾಸ್ ಜವಾನಿಯಸ್ (Leptoptilos javanius)

129_69_PP_KUH

ಗಾತ್ರ : ೧೦೦ ಸೆಂ.ಮೀ.

ಆವಾಸ : ನೀರಿನಾಶ್ರಯ. ಮರಮುಟ್ಟಗಳಿರುವ ಪ್ರದೇಶ.

ಲಕ್ಷಣಗಳು : ಎತ್ತರದ ಎದ್ದು ಕಾಣುವ ದೇಹ. ಬಲಿಷ್ಠ. ಮೊನಚಾದ ಕೊಕ್ಕು. ದೇಹ ಕಪ್ಪು. ಬೆನ್ನು ಮತ್ತು ರೆಕ್ಕೆ ಕೆಳಭಾಗ ಬಿಳಿ, ತಲೆ, ಕುತ್ತಿಗೆ, ಬೆತ್ತಲೆ, ಕುತ್ತಿಗೆ ಚೀಲವಿಲ್ಲ. ಗಂಡು ಹೆಣ್ಣು ಒಂದೇ ತರಹ.

ಆಹಾರ : ಮೀನು, ಕಪ್ಪೆ, ಸರೀಸೃಪ ಮತ್ತು ಇತರೆ ಚಿಕ್ಕ ಪ್ರಾಣಿಗಳು.

ಸಂತಾನಾಭಿವೃದ್ಧಿ : ನವೆಂಬರಿನಿಂದ ಜನವರಿವರೆಗೆ. ದೊಡ್ಡ ಮರಗಳ ಮೇಲೆ ಕಡ್ಡಿಗಳಿಂದ ಕೂಡಿದ ದೊಡ್ಡಗಾತ್ರದ ಗೂಡು. ೩-೪ ಬಿಳಿ ಮೊಟ್ಟೆಗಳು.

 —-

ಕಪ್ಪು ಐಬಿಸ್ (BLACK IBIS
ಸೂಡಿಬಿಸ್ ಪಾಪಿಲ್ಲೋಸ (Pseudibis popillosa)

130_69_PP_KUH

ಗಾತ್ರ : ೬೫-೭೦ ಸೆಂ.ಮೀ.

ಆವಾಸ : ಬೇಸಾಯದ ಭೂಮಿ, ಕೊಳ, ಕೆರೆ, ನದಿ ತೀರ, ಸಣ್ಣ ಗುಂಪುಗಳಲ್ಲಿ ವಾಸ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೊಳೆಯುವ ಕಪ್ಪು ಬಣ್ಣ. ಚೂಪಾದ, ಉದ್ದನೆಯ ಬಾಗಿದ ಕಪ್ಪು ಕೊಕ್ಕು. ತಲೆ ಹಿಂಬದಿಯಲ್ಲಿ ಕೆಂಪು ಛಾಯೆ. ಹೆಗಲ ಮೇಲೆ ಬಿಳಿ ಪಟ್ಟಿ. ಕೆಂಪು ಕಾಲುಗಳು.

ಆಹಾರ : ಕಾಳು, ಕೀಟ, ಹುಳು. ಮೀನು ಇತ್ಯಾದಿ.

ಸಂತಾನಾಭಿವೃದ್ಧಿ : ನವೆಂಬರ್, ಡಿಸೆಂಬರ್, ತಿಂಗಳಲ್ಲಿ. ದೊಡ್ಡ ಬಟ್ಟಲಿನಂತಹ ಕಡ್ಡಿಗಳ ಗೂಡು. ಒಳಗೆ ಹುಲ್ಲುಗರಿಗಳ ಹಾಸು. ಎತ್ತರ ಮರದ ಮೇಲೆ ಒಂಟಿ ಸಂಸಾರ. ಇತರ ಪಕ್ಷಿಗಳೊಂದಿಗೆ ಗೂಡುಕಟ್ಟುವುದಿಲ್ಲ. ೨-೪ ತಿಳಿ ಹಸಿರು ಮೊಟ್ಟೆಗಳು, ಕೆಲವೊಮ್ಮೆ ಕಂದು ಚುಕ್ಕೆಗಳಿರಬಹುದು.

—- 

ಚಮಚ ಕೊಕ್ಕಿನ ಹಕ್ಕಿ (SPOONBILL) (ಚಮಚಮುಖಿ)
ಪ್ಲೆಟಾಲಿಯ ಬುಕೊರೂಡಿಯ (Platalea bucorodia)

131_69_PP_KUH

ಗಾತ್ರ : ೬೫-೭೦ ಸೆಂ.ಮೀ.

ಆವಾಸ : ನೀರಿನ ಮಧ್ಯದ ಮಣ್ಣಿನ ದಿಣ್ಣಿ, ಹಿನ್ನೀರು, ಕಾಂಡ್ಲವನ, ಕೆರೆ, ಜೌಗು ಪ್ರದೇಶ, ನದಿ ತೀರ ಇತ್ಯಾದಿ, ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಬಿಳಿ ಹಕ್ಕಿ, ಚಪ್ಪಟೆ ಚಮಚದಂತಹ ಕೊಕ್ಕು. ತುದಿಯಲ್ಲಿ ಹಳದಿ. ಕಪ್ಪು ಕಾಲುಗಳು, ಕುತ್ತಿಗೆಯಲ್ಲಿ ಕೆಂಬಣ್ಣದ ತೇಪೆ. ಸಂತಾನಾಭಿವೃದ್ಧಿ ಕಾಲದಲ್ಲಿ ಬಿಳಿಯ ಗರಿಗಳ ಗುಚ್ಛ ಎದ್ದು ಕಾಣುತ್ತದೆ. ಸದ್ದುಗದ್ದಲವಿಲ್ಲದ ಹಕ್ಕಿ.

ಆಹಾರ : ಮೀನು, ಕಪ್ಪೆ, ಹುಳು-ಹುಪ್ಪಟೆ.

ಸಂತಾನಾಭಿವೃದ್ಧಿ : ನವೆಂಬರ ತಿಂಗಳ ನಂತರ ಮುಂಗಾರು ಆಧರಿಸಿ. ವ್ಯತ್ಯಾಸವಾಗಬಹುದು. ಕಡ್ಡಿಗಳ ಕಾಗೆ ಗೂಡಿ ನಂತರ ದೊಡ್ಡ ಗೂಡು. ಸಾಮಾನ್ಯವಾಗಿ ನೀರಿರುವೆಡೆ. ೪ ಬಿಳಿ ಮೊಟ್ಟೆಗಳು. ಕೆಂಚು ಚುಕ್ಕೆಗಳಿರಬಹುದು.

—- 

ಪಟ್ಟೆ ತೆಲೆಬಾತು (BARHEADED GOOSE)
ಆಂಸರ್ ಇಂಡಿಕಸ್ (Anser indicus)

132_69_PP_KUH

ಗಾತ್ರ : ೭೦-೭೪ ಸೆಂ.ಮೀ.

ಆವಾಸ : ಕೆರೆ, ಸರೋವರಗಳಲ್ಲಿ ಗುಂಪಾಗಿರುತ್ತವೆ. ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿಗಳು, ಹಗಲು ನೀರಿನ ನಡುವೆ ಮಣ್ಣಿನ ದಿಣ್ಣೆಯ ಮೇಲೆ ಕುಳಿತಿರಬಹುದು.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಬಿಳಿ ತಲೆಯ ಇಕ್ಕೆಡೆಗಳಲ್ಲಿ ಕಪ್ಪು ಪಟ್ಟಿ ಪ್ರಮುಖ ಲಕ್ಷಣ. ಕಂದು ಬಣ್ಣದ ಕುತ್ತಿಗೆ ಉಳಿದಂತೆ ಬೂದು-ಬಿಳಿ ಬಣ್ಣ; ಹಳದಿ ಕಾಲುಗಳು. ಕೊಕ್ಕಿನ ತುದಿ ಕಪ್ಪು, ಗುಂಪಾಗಿ ಹಾರುತ್ತವೆ.

ಆಹಾರ : ಭತ್ತ, ಧಾನ್ಯ ಮತ್ತು ಗಡ್ಡೆ ಗೆಣಸುಗಳ ಎಳೆಯ ಕಾಂಡ.

ಸಂತಾನಾಭಿವೃದ್ಧಿ : ಲಡಾಕ್ ಮತ್ತು ಟಿಬೆಟ್ ನಲ್ಲಿ.