ಸಣ್ಣ ರಾಜಹಂಸ (LESSER FLAMINGO)
ಫೊನಿಕೊಂನೆಯಸ್ ಮೈನರ‍್ (Phoeniconaias minor)

133_69_PP_KUH

ಗಾತ್ರ : ೦೦-೧೧೦ ಸೆಂ.ಮೀ.

ಆವಾಸ : ಚೌಳಿನ ಒಳನಾಡು ಸರೋವರ; ಕೆರೆ, ಉಪ್ಪು ಹಿನ್ನೀರು, ಇತ್ಯಾದಿ, ಕರ್ನಾಟಕಕ್ಕೆ ವಲಸೆ ಬರುತ್ತದೆ.

ಲಕ್ಷಣಗಳು : ಗುಲಾಬಿ ಗರಿಗಳು, ಬಾಗಿದ ದಪ್ಪ ಕೊಕ್ಕು, ತುದಿಯಲ್ಲಿ ಕಪ್ಪು; ಕೆಂಪು ಉದ್ದನೆಯ ಕಾಲುಗಳು ಮತ್ತು ಕುತ್ತಿಗೆ, ಹೆಣ್ಣು ಹಕ್ಕಿ ಗಂಡಿಗಿಂತ ತುಸು ಚಿಕ್ಕದು ಎದೆಯಲ್ಲಿ ಕೆಂಬಣ್ಣವಿಲ್ಲ, ಗಂಡು ಹಕ್ಕಿಯಲ್ಲಿ ಎದ್ದು ಕಾಣುತ್ತದೆ.

ಆಹಾರ : ಸೂಕ್ಷ್ಮಜೀವಿಗಳು, ಹಲ್ಲಿ, ಡಯಾಟಮ್ ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಜೂನಿನಿಂದ ಜುಲೈವರೆಗೆ. ನೀರಿನಲ್ಲಿ ಮಣ್ಣು ದಿಣ್ಣಿಯಂತಹ ಗೂಡು. ೧೫-೨೦ ಸೆಂ.ಮೀ ಎತ್ತರ. ಮಧ್ಯದಲ್ಲಿ ಮೊಟ್ಟೆಯಿಡಲು ಅನುಕೂಲವಾದ ಕುಳಿ. ಗುಜರಾತಿನ ಕಚ್ ಪ್ರದೇಶದಲ್ಲಿ ಸಂತಾನಾಭಿವೃದ್ಧಿ ೧-೩ ಬಿಳಿ ಮೊಟ್ಟೆಗಳು.

—- 

ಮರಬಾತು (TREE DUCK)
ಡೆಂಡ್ರೊಸಿಗ್ನಾ ಜವಾನಿಕ (Dendrocygma javanica)

134_69_PP_KUH

ಗಾತ್ರ : ೪೦-೪೫ ಸೆಂ.ಮೀ.

ಆವಾಸ : ಜೊಂಡು ತುಂಬಿದ ಕೆರೆ, ಸರೋವರ, ಹೆಚ್ಚು ಆಳವಿಲ್ಲದ ನಿಂತ ನೀರಿರುವ ಇತರೆ ಪ್ರದೇಶ, ನೀರಿನಾಶ್ರಯ ಅವಲಂಬಿಸಿ ಸ್ಥಳೀಯವಾಗಿ ವಲಸೆ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕೆಂಗೆಂದು-ಕಂದು ಬಣ್ಣದ ದೇಹ, ಕಂದು ಬಣ್ಣದ ತಲೆ, ಕಪ್ಪು ಚಪ್ಪಟೆ ಕೊಕ್ಕು, ಹಳದಿ ಕಂದು ಬಾಲದ ಗರಿಗಳು, ಗುಂಪಾಗಿ ವಾಸ.

ಆಹಾರ : ಎಳೆಯ ಕಾಂಡ, ಕಾಳು, ಮೀನು, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ ಮರಗಳ ಪೊಟರೆಯಲ್ಲಿ ಗೂಡು. ಒಳಗೆ ಹುಲ್ಲು, ಕಡ್ಡಿಗಳ ಹಾಸು, ೭-೧೨ ದಂತ ಬಿಳಿ ಮೊಟ್ಟೆಗಳೂ.

—- 

ಬ್ರಾಹ್ಮಿಣಿ ಡಕ್ (ಬಾತು) (BRAHMINI DUCK)
ಟಾರ್ಡೋರ್ ಫೆರ್ರು‍ಗಿನಿಯಾ (Tardorna ferruginea)

135_69_PP_KUH

ಗಾತ್ರ : ೬೫ ಸೆಂ.ಮೀ.

ಆವಾಸ : ಜೌಗು ಪ್ರದೇಶ, ನೀರಿನ ಬಳಿಯ ಮರಳು ಅಥವಾ ಮಣ್ಣಿನ ದಿಣ್ಣೆಯಲ್ಲಿ ಕಾಣಬಹುದು. ವಲಸೆ ಬರುವ ಹಕ್ಕಿ.

ಲಕ್ಷಣಗಳು : ದೊಡ್ಡ ಗಾತ್ರದ ಕಿತ್ತಲೆ ಕಂದು ಬಣ್ಣದ ಪಕ್ಷಿ. ತೆಲೆ ಮತ್ತು ಕುತ್ತಿಗೆ ಸ್ವಲ್ಪ ತಿಳಿ, ರೆಕ್ಕೆಗಳ ಮೇಲೆ ಬಿಳಿ, ಕಪ್ಪು ಮತ್ತು ಹಸಿರು ವಿನ್ಯಾಸ. ಬಾಲ ಕಪ್ಪು. ಹೆಣ್ಣು ಹಕ್ಕಿಗಳ ಲತೆ ಗಂಡಿಗಿಂತ ತಿಳಿ. ಕುತ್ತಿಗೆಯಲ್ಲಿ ಕಪ್ಪು ಪಟ್ಟಿ.

ಆಹಾರ : ಸಸ್ಯಜನ್ಯ ವಸ್ತು, ಮೃದ್ವಂಗಿ, ಕೀಟಗಳು ಮತ್ತು ಮೀನು.

ಸಂತಾನಾಭಿವೃದ್ಧಿ : ಟಿಬೇಟು, ನೇಪಾಳ ಲಡಾಕ್ ನಲ್ಲಿ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ.

—- 

ಸೂಜಿಬಾಲದ ಬಾತು (ಸೋಲರಿ ) (PINTAIL)
ಆನಾಸ್ ಅಕ್ಯೂಟ (Anas acuta)

136_69_PP_KUH

ಗಾತ್ರ : ಸೆಂ.ಮೀ.

ಆವಾಸ : ವಲಸೆ ಬರುವ ಹಕ್ಕಿಗಳಲ್ಲಿ ಅತಿ ಸಾಮಾನ್ಯವಾದುದು. ಕೆರೆಗಳಲ್ಲಿ ಜೌಗು ಪ್ರದೇಶಗಳಲ್ಲಿ ಗುಂಪಾಗಿರುತ್ತವೆ.

ಲಕ್ಷಣಗಳು : ತಲೆ ಚಾಕೊಲೇಟ್ ಕಂದು, ಕುತ್ತಿಗೆ ಇಕ್ಕೆಡೆ ಮತ್ತು ದೇಹದ ಕೆಳಭಾಗ ಬಿಳಿ. ಉದ್ದ ಸೂಜಿಯಂತಹ ಬಾಲ ಪ್ರಮುಖ ಲಕ್ಷಣ. ಹೆಣ್ಣು ಹಕ್ಕಿ ತುಸು ಮಾಸಲು.

ಆಹಾರ : ಜಲಚರ ಕೀಟಗಳು, ಕಪ್ಪೆ, ಮೀನು, ಸಸ್ಯಜನ್ಯ ವಸ್ತು.

ಸಂತಾನಾಭಿವೃದ್ಧಿ : ಉತ್ತರ ಯುರೋಪು, ಚಳಿಗಾಲದಲ್ಲಿ ವಲಸೆ.

—- 

ಸಾಮಾನ್ಯ ಸೋಲಾರಿ (COMMON TEAL)
ಅನಾಸ್ ಕ್ರೆಕ್ಕಾ (Anas crecca)

137_69_PP_KUH

ಗಾತ್ರ : ಸೆಂ.ಮೀ.

ಆವಾಸ : ಅತ್ಯಂತ ಸಾಮಾನ್ಯವಾದ ವಲಸೆ ಬರುವ ಹಕ್ಕಿ. ಬಂದೂಕು ಪ್ರಿಯರಿಗೆ ಅಚ್ಚುಮೆಚ್ಚು ಕೆರೆ, ಸರೋವರ, ಕೊಳ ಇತ್ಯಾದಿಗಳಲ್ಲಿ ಗುಂಪಾಗಿ ವಾಸ.

ಲಕ್ಷಣಗಳು : ಬೂದು ಬಣ್ಣ, ತೆಲೆ ಕೆಂಗಂದು. ಕಣ್ಣಿನ ಇಕ್ಕೆಡೆಗಳಲ್ಲಿ ಲೋಹ ಹಸಿರು ಪಟ್ಟಿ. ಹಸಿರು ಪಟ್ಟಿಗಳ ಮೇಲೆ ಬಿಳಿ ಗೆರೆಗಳು. ಮೂರು ಬಣ್ಣದ ರೆಕ್ಕೆ ಗರಿಗಳು. ಹೆಣ್ಣು-ತಿಳಿಗಂದು. ಕೆಳಭಾಗ ಮಾಸಲು ಜೊತೆಗೆ ಬಿಳಿ ರೇಖೆಗಳು.

ಆಹಾರ : ಬಹುತೇಕ ಸಸ್ಯಾಹಾರಿ. ಕಾಳು, ಕಂಡದ ಚಿಗುರು ಅಚ್ಚುಮೆಚ್ಚು

ಸಂತಾನಾಭಿವೃದ್ಧಿ : ಉತ್ತರ ಯುರೋಪು ಮತ್ತು ಸೈಬೀರಿಯ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ.