ಚುಕ್ಕೆ ಕೊಕ್ಕು ಬಾತು (SPOTBILL)
ಅ. ಪೊಸಿಲೊರ್ಹಿಂಕ (Anas poecilorhoghcha)

138_69_PP_KUH

ಗಾತ್ರ : ಸೆಂ.ಮೀ.

ಆವಾಸ : ಸಾಮಾನ್ಯವಾಗಿ ಕಂಡುಬರುವ ಸ್ಥಳೀಯ ಪಕ್ಷಿ. ಕೆರೆ, ಸರೋವರ, ಕೊಳ ಇತ್ಯಾದಿಗಳಲ್ಲಿ ಕಾಣಬಹುದು. ಸ್ಥಳೀಯವಾಗಿ ವಲಸೆ ಹೋಗಬಹುದು.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದೊಡ್ಡ ಗಾತ್ರದ ಬಾತುಕೋಳಿ. ತಿಳಿ-ದಟ್ಟ ಬಣ್ಣಗಳ ಹುರುಪೆಯಂತಹ ಮೈ. ರೆಕ್ಕೆಯ ಮೇಲೆ ಹೊಳೆಯುವ ಹಸಿರು ಗುರುತು. ಬಾಲದ ಇಕ್ಕೆಡೆ ಬಿಳಿ. ಕೊಕ್ಕಿನ ಬಳಿ ತುದಿ ಹಳದಿ; ಬುಡದಲ್ಲಿ ಹಳದಿ ಚುಕ್ಕೆ. ಕಿತ್ತಳೆ ಬಣ್ಣದ ಕಾಲುಗಳು ಸಣ್ಣ ಗುಂಪುಗಳಲ್ಲಿ ಕಾಣಬಹುದು.

ಆಹಾರ : ಸಸ್ಯಜನ್ಯ ವಸ್ತುಗಳು-ಕಾಳು, ಕಾಂಡ ಇತ್ಯಾದಿ.

ಸಂತಾನಾಭಿವೃದ್ಧಿ : ಜುಲೈಯಿಂದ ಸೆಪ್ಟಂಬರ‍್ವರೆಗೆ. ಕೆರೆಯ ಅಂಚಿನ ಜೊಂಡುಗಳ ನಡುವೆ ಹುಲ್ಲು ಜೊಂಡುಗಳ ಗೂಡು. ೬-೧೨ ತಿಳಿ ಹಸಿರು ಮೊಟ್ಟೆಗಳು.

 —-

ಶೊವೆಲ್ಲಾರ್ ಬಾತುಕೋಲಿ (SHOVELLER)
ಅ. ಕ್ಲೈಪಿಯೇಟ (Anas clypeata)

139_69_PP_KUH

ಗಾತ್ರ : ೫೦ ಸೆಂ.ಮೀ.

ಆವಾಸ : ವಲಸೆ ಬರುವ ಜಲಪಕ್ಷಿ ನೀರಿನಾಶ್ರಯವಿರುವೆಡೆ ಸಾಮಾನ್ಯ ಕೆರೆ, ಸರೋವರಗಳಲ್ಲಿ ಈಜುತ್ತಿರುತ್ತವೆ.

ಲಕ್ಷಣಗಳು : ಉದ್ದ, ಸ್ಪಾತುಲಾದಂತಹ ಕೊಕ್ಕು. ತಲೆ ಮತ್ತು ಕುತ್ತಿಗೆ ಹೊಳೆಯುವ ಕಡು ಹಸಿರು. ರೆಕ್ಕೆಯ ಮುಂಭಾಗದಲ್ಲಿ ತಿಳಿನೀಲಿ. ಎದೆ ಬಿಳಿ. ಹೆಣ್ಣು ಹಕ್ಕಿಗೆ ಚುಕ್ಕೆ ಮಿಶ್ರಿತ ಕಡು ಕಂದು ಬಣ್ಣ; ರೆಕ್ಕೆಗಳ ಮೇಲೆ ಪಟ್ಟಿ, ಎದ್ದು ಕಾಣುವ ಕಿತ್ತಳೆ ಕೊಕ್ಕು.

ಆಹಾರ : ಪ್ರಾಣಿಗಳು, ಚಿಕ್ಕಪುಟ್ಟ ಎಲ್ಲಾ ತರದ ಪ್ರಾಣಿಗಳು ಆಹಾರ.

ಸಂತಾನಾಭಿವೃದ್ಧಿ : ಉತ್ತರ ಯುರೋಪಿನಲ್ಲಿ ಚಳಿಗಾಲದಲ್ಲಿ ವಲಸೆ.

—- 

ಹತ್ತಿ ಸೋಲರಿ ಹಕ್ಕಿ (COTTON TEAL)
ನೆಟ್ಟ ಪಸ್ ಕೊರಮಂಡೆಲಿಯನಸ್ (Nettapus cormandelianus)

140_69_PP_KUH

ಗಾತ್ರ : ೩೦-೩೫ ಸೆಂ.ಮೀ.

ಆವಾಸ : ಎಲ್ಲ ತರಹದ ನೀರಿರುವ ಪ್ರದೇಶ ; ಕೆರೆ, ಕೊಳ್ಳ, ಭತ್ತದ ಗದ್ದೆ, ಸರೋವರ, ಜೌಗು ಪ್ರದೇಶ ಇತ್ಯಾದಿ. ಬಾತುಕೋಳಿಗಳಲ್ಲಿ ಚಿಕ್ಕದು. ಸ್ಥಳೀಯವಾಗಿ ವಲಸೆ ಹೋಗಬಹುದು.

ಲಕ್ಷಣಗಳು : ಗಂಡು ಹಕ್ಕಿಯ ಮೇಲ್ಭಾಗ ಹೊಳಪು ಕರಿಬಣ್ಣ. ಬಿಳಿ ತಲೆ, ಕುತ್ತಿಗೆ ಮತ್ತು ಕೆಳಭಾಗ ಕುತ್ತಿಗೆ ಪಟ್ಟಿ ಎದ್ದು ಕಾಣುತ್ತದೆ. ಹೆಣ್ಣು ಹಕ್ಕಿಗೆ ತಿಳಿ ಬಣ್ಣ ಕುತ್ತಿಗೆ ಪಟ್ಟಿ ಇಲ್ಲ.

ಆಹಾರ : ಕಾಳು ಮತ್ತು ಚಿಗುರು ಕಾಂಡ ಮುಖ್ಯ. ಕೀಟಗಳನ್ನು ತಿನ್ನುವುದು ಉಂಟು.

ಸಂತಾನಾಭಿವೃದ್ಧಿ : ಜುಲೈನಿಂದ ಸೆಪ್ಟೆಂಬರವರೆಗೆ. ಮರದಪೊಟರೆ ಗೂಡು. ೬-೧೨ ದಂತ ಬಿಳಿ ಮೊಟ್ಟೆಗಳು.

—- 

ದೊಡ್ಡ ಸರಳೆ ಹಕ್ಕಿ (NAKTA)SARKIDIORNIS
ಸಾರ್ಕಿಡಿಯಾರ್ನಿಸ್ ಮೆಲಂಟೋಸ್ (S. melanotos)

141_69_PP_KUH

ಗಾತ್ರ : ೬೦ ಸೆಂ.ಮೀ.

ಆವಾಸ : ಮರ ಮಟ್ಟು ಇರುವ ಕೆರೆ, ಕೊಳ ಇತ್ಯಧಿ ನೀರಿರುವ ಪ್ರದೇಶ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಕಪ್ಪು-ಬಿಳಿ ಹಕ್ಕಿ. ಬೆನ್ನು ರೆಕ್ಕೆ ಕಪ್ಪು ಕುತ್ತಿಗೆ, ಎದೆ ಮತ್ತು ಹೊಟ್ಟೆ ಬಳಿ. ತಲೆ ಮತ್ತು ಕುತ್ತಿಗೆ ಮೇಲೆ ಕಪ್ಪು ಚುಕ್ಕೆಗಳು. ಕೊಕ್ಕಿನ ಬುಡದಲ್ಲಿ ಹೆಣಿಗೆಯಂತಹ ರಚನೆ ಪ್ರಮುಖ ಲಕ್ಷಣ, ಹೆಣ್ಣು ಹಕ್ಕಿ ಗಾತ್ರದಲ್ಲಿ ಚಿಕ್ಕದು. ಕೊಕ್ಕಿನ ‘ಹೆಣಿಗೆ’ ಇಲ್ಲ. ಉಳಿದಂತೆ ಗಂಡನ್ನು ಹೋಲುತ್ತದೆ.

ಆಹಾರ : ಕಾಳು ಮತ್ತು ಚಿಗುರು ಕಾಂಡ.

ಸಂತಾನಾಭಿವೃದ್ಧಿ : ಜುಲೈನಿಂದ ಸೆಪ್ಟಂಬರ‍್ವರೆಗೆ. ನೀರಿನ ಬಳಿ ಇರುವ ಮರದ ಪೊಟರೆಯಲ್ಲಿ ಗೂಡು. ಕೆಲಮೊಮ್ಮೆ ಗೂಡಿಗೆ ಒಳ ಹಾಸಿದೆ. ೮-೧೨ ಕೆನೆ ಬಣ್ಣದ ಮೊಟ್ಟೆಗಳು.

 —-

ಕಪ್ಪು ರೆಕ್ಕೆಯ ಗಿಡುಗ (BLACKWINGED KITE)
ಇಲಾನಸ್ ಸೆರುಲಿಯಸ್ (Elanus caeruleus)

142_69_PP_KUH

ಗಾತ್ರ : ೩೫ ಸೆಂ.ಮೀ.

ಆವಾಸ : ಹುಲ್ಲುಗಾವಲು, ವ್ಯವಸಾಯ ಪ್ರದೇಶ ಮತ್ತು ತೆರೆದ ಕುರುಚಲು ಕಾಡು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರ. ಬೂದು ಮತ್ತು ಬಿಳಿ ಹಕ್ಕಿ. ರೆಕ್ಕೆಯ ಮೇಲೆ ಕರಿ ತೇಪೆ. ರೆಕ್ಕೆಗಳು ಮಡಚಿದಾಗ ಬಾಲದಿಂದ ಹೊರಚಾಚುತ್ತವೆ. ಎದೆ, ಹೊಟ್ಟೆ ಬಿಳಿ. ಮೇಲ್ಭಾಗ ಬೂದು.

ಆಹಾರ : ಕೀಟಗಳು, ಇಲಿ, ಓತಿ ಇತ್ಯಾದಿ.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡಿ. ಅಷ್ಟೊಂದು ಚೆಂದವಲ್ಲದ ಕಡಿಗಳ ದಿಣ್ಣೆಯಂತಹ ಗೂಡು. ಒಳಗೆ ಹುಲ್ಲು, ಎಳೆಗಳ ಹಸು. ೩-೪ ಹಳದಿ ಬಿಳಿ ಮೊಟ್ಟೆಗಳು. ಅವುಗಳ ಮೇಲೆ ಕಂದು ಚುಕ್ಕೆಗಳಿರಬಹುದು.