ಕಪ್ಪು ಜುಟ್ಟಿನ ಗೂದ್ರ (BLACKCRESTED BAZA)
ಅವಿಸಿಡಾ ಲ್ಯೂಪೋಟೆಸ್ (Avecida leuphotes)

143_69_PP_KUH

ಗಾತ್ರ : ೩೩ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಕಾಡುಗಳಲ್ಲಿ ವಾಸ. ಚಳಿಗಾಲದಲ್ಲಿ ಪೂರ್ವ ಕರಾವಳಿಯಲ್ಲಿ ವಲಸೆ ಹೋಗುವುದನ್ನು ದಾಖಲಿಸಲಾಗಿದೆ.

ಲಕ್ಷಣಗಳು : ಬಹುತೇಕ ಕಪ್ಪು ಬಿಳಿ ಪಕ್ಷಿ. ತಲೆಯ ಮೇಲಿನ ಕಪ್ಪು ಜುಟ್ಟು ಪ್ರಮುಖ ಲಕ್ಷಣ. ಎದೆಯ ಮೇಲೆ ಬಿಳಿ. ರೆಕ್ಕೆಗಳ ಕೆಂಗಂದು ಮತ್ತು ಬಿಳಿ ತೇಪೆಗಳು. ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ.

ಆಹಾರ : ಕೀಟಗಳು ಮತ್ತು ಚಿಕ್ಕ ಪುಟ್ಟ ಇತರೆ ಪ್ರಾಣಿಗಳು.

ಸಂತಾನಾಭಿವೃದ್ಧಿ : ಮಾರ್ಚ್ ಎಪ್ರಿಲ್ ತಿಂಗಳುಗಳಲ್ಲಿ. ಕಡ್ಡಿಗಳ ದಿಣ್ಣೆಯಂತಹ ಗೂಡು, ಒಳಗೆ ಹುಲ್ಲು ಮತ್ತು ಎಲೆಗಳ ಹಾಸು. ೨-೩ ತಿಳಿ ಬೂದು ಬಿಳಿಮೊಟ್ಟೆಗಳು.

 —-

ಓತಿ ಗಿಡುಗ (BLYTH’S BAZA)
ಅವಿಸೆಡಾ ಜೆರ್ಡೋನಿ(Aviceda jerdoni)

144_69_PP_KUH

ಗಾತ್ರ : ೪೫ ಸೆಂ.ಮೀ.

ಆವಾಸ : ನಿತ್ಯಹರಿದ್ವರ್ಣ ಕಾಡು ಅಥವಾ ತೆರೆದ ಕಾಡು. ಮಸ್ಸಂಜೆ ವೇಳೆ ಚಟುವಟಿಕೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಬಿಳಿ ತುದಿಯಿರುವ ಕಪ್ಪು ಜುಟ್ಟು ಪ್ರಮುಖ ಲಕ್ಷಣ. ಹೆಚ್ಚು ಕಡಿಮೆ ಕಂದುಬಣ್ಣ, ತಲೆ ಕೆಂಗಂದು ಮತ್ತು ಕಪ್ಪು ಗಲ್ಲ ಮತ್ತು ಗಂಟಲ ಮೇಲೆ ಕೆಂಗಂದು ಮತ್ತು ಬಿಳಿ. ಎದೆ ಕೆಂಗಂದು. ಉದ್ದ ಹಾಗೂ ದೊಡ್ಡ ರೆಕ್ಕೆಗಳು.

ಆಹಾರ : ಕಪ್ಪೆ, ಇಲಿ, ಓತಿ ಇತ್ಯಾದಿ ಸಣ್ಣ ಪ್ರಾಣಿಗಳು ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರಿಲ್. ಎಲೆಗಳುಳ್ಳ ಟೊಂಗೆಗಳಿಂದ ರಚಿತವಾದ ಸುಂದರ ಗೂಡು. ೨-೩ ತಿಳಿ ಹಸಿರು-ಬಿಳಿ ಮೊಟ್ಟೆಗಳು.

—- 

 ಮಧು ಗಿಡುಗ (HONEY BUZZARD)
ಟಿಲೋರ್ಹಿಂಕಸ್ (Pernis ptilorhynchus)

145_69_PP_KUH

ಗಾತ್ರ : ೫೭-೬೦ ಸೆಂ.ಮೀ.

ಆವಾಸ : ತೋಪು, ತೆರೆದ ಕಾಡು, ಹಕ್ಕಿ ಗಂಡು ಇತ್ಯಾದಿ.

ಲಕ್ಷಣಗಳು : ಗಂಡು ಹೆಣ್ಣುಗಳು ನಡುವೆ ವ್ಯತ್ಯಸವಿಲ್ಲ. ಬೂದು ಕೆಂಗಂದು ಮೆಲ್ಭಾಗ, ತಲೆ ಬೂದು. ತಿಳಿ ಕಂದು ಕೆಳಭಾಗ ಜೊತೆಗೆ ಬಿಳಿ ಅಡ್ಡ ಪಟ್ಟಿಗಳು. ಬೆಳ್ಳಿ ಬೂದು ಗರಿಗಳು, ರೆಕ್ಕೆಗಳ ಕೆಳಭಾಗದಲ್ಲಿ ಅಡ್ಡ ಗೆರೆಗಳು.

ಆಹಾರ : ಜೇನು, ಜೇನು ಮರಿಗಳು. ಕಪ್ಪೆ, ಚಿಕ್ಕ ಹಕ್ಕಿ ಇತ್ಯಾದಿಗಳನ್ನು ತಿನ್ನಬಹುದು.

ಸಂತಾನಾಭಿವೃದ್ಧಿ : ಏಪ್ರಿಲ್‌ನಿಂದ ಜೂನ್ ವರೆಗೆ, ಕಡ್ಡಿಗಳ ದಿಣ್ಣೆಯಂತಹ ಗೂಡು, ೩ ಬಿಳಿ ಕೆನೆ ಬಣ್ಣದ ಮೊಟ್ಟೆಗಳು.

—- 

ಗುಬ್ಬಚ್ಚಿ ಗಿಡುಗ (SPARROW HAWK)
ಅಸ್ಸಿಪಿಟರ್ ನಿಸಸ್ (Accipiter nisus)

146_69_PP_KUH

ಗಾತ್ರ : ೩೧-೩೬ ಸೆಂ.ಮೀ.

ಆವಾಸ : ದಡ್ಡ ಕಾಡು, ತೆರದ ಅರಣ್ಯ. ಸ್ಥಳೀಯ ಹಾಗೂ ವಲಸೆ ಪಕ್ಷಿ.

ಲಕ್ಷಣಗಳು : ಚಿಕ್ಕ ರೆಕ್ಕೆಗಳ ಮಧ್ಯಮ ಗಾತ್ರದ ಪಕ್ಷಿ. ಶಿಕ್ರವನ್ನು ಹೋಲುತ್ತದೆ. ಗಂಡು ಹಕ್ಕಿ ಕೆಳಭಾಗ ಶಿಕ್ರಾಕ್ರಿಂತ ಕಡು ಬರಜ ಕಾಲುಗಳು ಕೂಡಾ ಉದ್ದ ಬಾಲದ ಮೇಲೆ ೪೫ ಕರಿಯ ಪಟ್ಟಿಗಳು. ಹೆಣ್ಣು ಗಂಡಿಗಿಂತ ತುಸು ದೊಡ್ಡದು, ಮತ್ತು ಹೆಚ್ಚು ಕಂದು.

ಆಹಾರ : ಹೆಚ್ಚು ಕಡಿಮೆ ಇತರೆ ಹಕ್ಕಿಗಳು.

ಸಂತಾನಾಭಿವೃದ್ಧಿ : ಎಪ್ರೀಲಿನಿಂದ ಜೂನ್ ವರೆಗೆ. ಕಾಡಿನ ಕಾಗೆಗಳು ಬಿಟ್ಟುಹೋದ ಗೂಡು. ೪-೬ ನೀಲಿ ಬಿಳಿ ಮೊಟ್ಟೆಗಳು.

—- 

ಜಾಡಮಾಲಿ ಗರುಡ (PARIAH KITE)
ಮಿಲ್ವಸ್ ಮೈಗ್ರೆನ್ಸ್ (Milvus migrans)

147_69_PP_KUH

ಗಾತ್ರ : ೫೫-೬೫ ಸೆಂ.ಮೀ.

ಆವಾಸ : ಅತೀ ಸಾಮಾನ್ಯವಾಗಿ ಕಂಡುಬರುವ ಹಿಂಸಕ ಪಕ್ಷಿ. ಸ್ಥಳೀಯ ಪಕ್ಷಿ ಮನುಷ್ಯರ ಆವಾಸದ ಸುತ್ತು ಮತ್ತು ಮೀನು-ಮಾಂಸದಂಡಗಿನ ಬಳಿ ಇತ್ಯಾದಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದಟ್ಟ ಕಂದು ಬಣ್ಣ ಗಿಡ್ಡ ಬಾಗಿದ, ಮೊನಚಾದ ಕೊಕ್ಕು. ಬಾಲ ಕತ್ತರಿಯಂತೆ ಇರುವುದು ಮುಖ್ಯ ಲಕ್ಷಣ. ಕಣ್ಣಿನ ಕೆಳಗೆ, ಕೊಕ್ಕಿನ ಬುಡದಿಂದ ಚಿಕ್ಕ ಹಳದಿ ಗೆರೆ, ಬಾಲದ ಮೇಲೆ ಕಂದು ಅಡ್ಡ ಪಟ್ಟಿಗಳು.

ಆಹಾರ : ಹುಳು ಹುಪ್ಪಟೆ ಸತ್ವ ಪ್ರಾಣಿಗಳು, ಎರೆಹುಳು, ಗೆದ್ದಲು ಇತ್ಯಾದಿ.

ಸಂತಾನಾಭಿವೃದ್ಧಿ : ಕಡ್ಡಿಗಳ ಜೊತೆಗೆ ತಂತಿಗಳು ಸೇರಿಸಿದ ಎತ್ತರ ಮರದ ಮೇಲೆ ದಿಣ್ಣೆಯಂತಹ ಗೂಡು. ೩-೪ ತಿಳಿ ಗುಲಾಬಿ ಬಿಳಿ ಮೊಟ್ಟೆಗಳು.