ಬಿಳಿ ಬೆನ್ನಿನ ರಣಹದ್ದು (WHITEBACKED VULTURE)
ಜಿಪ್ಸ್ ಬೆಂಗಾಲೆನಸಿಸ್ (Gyps bemgalensis)

158_69_PP_KUH

ಗಾತ್ರ : ೮೫-೯೦ ಸೆಂ.ಮೀ.

ಆವಾಸ : ತೆರೆದ ಕಾಡು, ಹಳ್ಳಿಗಳ ಸುತ್ತ ಮುತ್ತ ಕಂಡುಬರುವ ಅತ್ಯಂತ ಸಾಮಾನ್ಯ ರಣಹದ್ದು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ಕಪ್ಪು ಒತ್ತಿನ ಕಂದು ಬಣ್ಣದ ಗರಿಗಳು. ಹೆಚ್ಚು ಕಡಿಮೆ ಸಣ್ಣ ತಲೆ-ಕುತ್ತಿಗೆ. ಕುಳಿತಾಗ ಬೆನ್ನಿನ ಮೇಲಿನ ಬಿಳಿ ಪ್ರಮುಖ ಲಕ್ಷಣ. ದಪ್ಪ ಬಾಗಿದ, ಮೊನಚಾದ ಕೊಕ್ಕು, ಅಸಹ್ಯ ನೋಟದ ದೊಡ್ಡ ಪಕ್ಷಿ.

ಆಹಾರ : ಸತ್ತ ಪ್ರಾಣಿಗಳನ್ನು ಕ್ಷಣ ಮಾತ್ರದಲ್ಲಿ ತಿಂದು ತೇಗುವ ಜಾಡಮಾಲಿ. ಸಾಮೂಹಿಕ ಆಹಾರ ಸೇವನೆ.

ಸಂತಾನಾಭಿವೃದ್ಧಿ : ಅಕ್ಟೋಬರ‍್ನಿಂದ ಮಾರ್ಚವರೆಗೆ, ಎತ್ತರದ (ಹುಣಸೆ ಅಥವಾ ಆಲದ) ಮರದ ಮೇಲೆ ಕಡ್ಡಿಗಳ ಗೂಡು. ಒಂದು ಮೊಟ್ಟೆ. ಬಿಳಿ ಬಣ್ಣ. ಕೆಲವೊಮ್ಮೆ ಕೆಂಚು ಚುಕ್ಕೆಗಳಿರಬಹುದು.

 —-

ಜವುಗು ಡೇಗೆ (MARSH HARRIER)
ಸರ್ಕಸ್ ಆರುಗಿನೋಸಸ್ (Circus aeruginosus)

159_69_PP_KUH

ಗಾತ್ರ : ೫೦-೫೫ ಸೆಂ.ಮೀ.

ಆವಾಸ : ಜೌಗು (ಜವುಳು) ಪ್ರದೇಶ, ಭತ್ತದ ಗದ್ದೆ, ಮುಂತಾದೆಡೆ, ಚಳಿಗಾಲದಲ್ಲಿ ವಲಸೆ ಬರುತ್ತದೆ.

ಲಕ್ಷಣಗಳು : ಗಂಡು ದಟ್ಟ ಕಂದು ಬಣ್ಣ. ತಿಳಿ ಕೆಂಗಂದು, ತಲೆ, ಕುತ್ತಿಗೆ ಮತ್ತು ಎದೆ, ಬಿಳಿ ಬೂದು ರೆಕ್ಕೆ ಮತ್ತು ಬಾಲ. ಹೆಣ್ಣು ದಟ್ಟ ಚಾಕೊ ಈಟೆ ಕಂದ ಬಣ್ಣ. ಕೆನೆ ಬಣ್ಣದ ತಲೆ, ಬಾಲ ದುಂಡಗೆ, ಒಂಟಿ ಅಥವಾ ಜೊತೆಯಾಗಿ.

ಆಹಾರ : ಇಲಿ, ಕಪ್ಪೆ, ಮೀನು, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ವಲಸೆ ಹಕ್ಕಿ, ಸಂತಾನಾಭಿವೃದ್ಧಿ ದೇಶದಿಂದ ಹೊರಗೆ.

—- 

ಜಾಡಮಾಲಿ ರಣಹದ್ದು (SCAVENGER VULTURE)
ನಿಯೋಫ್ರಾನ್ ಪರ್ಕ್ನೊಪ್ಟಸ್(Neophron perchnopterus)

160_69_PP_KUH

ಗಾತ್ರ : ೬೦-೬೫ ಸೆಂ.ಮೀ.

ಆವಾಸ : ಹಳ್ಳಿ ಪಕ್ಕದ ತೆರೆದ ಕಾಡು; ಮನುಷ್ಯ ವಾಸ ಪ್ರದೇಶ, ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಇದನ್ನು ಇಜಿಪ್ಸಿಯನ್ ರಣಹದ್ದು ಎಂತಲೂ ಕರೆಯುತ್ತಾರೆ. ಬಿಳಿ ಗರಿ. ರೆಕ್ಕೆಗಳಲ್ಲಿ ಕಪ್ಪು ಗರಿಗಳು. ಹಳದಿ ತಲೆ ಕುತ್ತಿಗೆ ಮತ್ತು ಗಂಟಲು; ಹಳದಿ ಕೊಕ್ಕು-ಚೂಪು ಮತ್ತು ಮೊನಚು.

ಆಹಾರ : ಇದೊಂದು ಪ್ರಮುಖ ಜಾಡಮಾಲಿ ಹಕ್ಕಿ. ನಗರಗಳ ಕಸದ ರಾಶಿಯಲ್ಲಿ ತಿನ್ನುತ್ತಿರುವುದು ಸಾಮಾನ್ಯ. ಸತ್ತ ಪ್ರಾಣಿ, ಕೀಟ, ಇತರೆ ಚಿಕ್ಕ ಪ್ರಾಣಿಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರಿಲ್‌ವರೆಗೆ, ಕಸ ಕಡ್ಡಿ ತ್ಯಾಜ್ಯ ವಸ್ತುಗಳಿಂದ ಕೂಡಿದ ಕಡ್ಡಿಗಳ ಗೂಡು. ೨ ಬಿಳಿ ಅಥವಾ ತಿಳಿ ಕೆಂಪು ಮೊಟ್ಟೆಗಳು.

—- 

ಜುಟ್ಟಳ್ಳ ಹಾವು ಗಿಡುಗ (CRESTED SERPENT EAGLE)
ಸ್ಪೈಲೊರ‍್ನ್ನಿಸ್ ಕೀಲ(Spilornis cheela)

161_69_PP_KUH

ಗಾತ್ರ : ೭೦-೭೫ ಸೆಂ.ಮೀ.

ಆವಾಸ : ಕಾಡು, ತೆರೆದ ಹಳ್ಳಿ ಬದಿಯ ವನ. ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತರ. ಹೆಣ್ಣು ಗಾತ್ರದಲ್ಲಿ ದೊಡ್ಡದು. ದಟ್ಟ ಕಂದು ಬಣ್ಣದ ಗರಿಗಳು. ಕಪ್ಪು-ಬಿಳಿ ಜುಟ್ಟು, ಕೆಳಭಾಗ ತಿಳಿ ಕಂದು. ಸೂಕ್ಷ್ಮ ಬಿಳಿ ಚುಕ್ಕೆಗಳು. ಹಾರಾಡುವಾಗ ದುಂಡನೆಯ ಬಾಲದ ಮೇಲೆ ಎರಡು ಅಡ್ಡ ಪಟ್ಟಿಗಳು ಗಮನಾರ್ಹ.

ಆಹಾರ : ಹಾವು, ಓತಿ, ಹಕ್ಕಿ, ಇಲಿ, ಅಳಿಲು ಇತ್ಯಾದಿ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಮಾರ್ಚ್‌ವರೆಗೆ. ಕಡ್ಡಿಗಳ ದೊಡ್ಡ ಗೂಡು. ಒಳಗೆ ಎಲೆಗಳ ಹಾಸು. ಬಿಳಿಯ ಒಂದೇ ಮೊಟ್ಟೆ

—- 

ಆಸ್ಫ್ರೆ (OSPREY)
ಪಾಂಡಿಯೋನ್ ಹೇಲಿಯಾಕ್ಟಸ್ (Pandion haliactus)

162_69_PP_KUH

ಗಾತ್ರ : ೫೫-೬೦ ಸೆಂ.ಮೀ

ಆವಾಸ : ಸಮುದ್ರ ತೀರ, ಸರೋವರ, ಹೊಳೆ ಬಳಿ.

ಲಕ್ಷಣಗಳು : ಹೆಣ್ಣು ಗಂಡಿಗಿಂತ ತುಸು ದೊಡ್ಡದು. ಉಳಿದಂತೆ ವ್ಯತ್ಯಾಸವಿಲ್ಲ. ದಟ್ಟ ಕಂದು ಬಣ್ಣದ ಮೇಲ್ಭಾಗ, ತಲೆ ಮೇಲೆ ಸ್ವಲ್ಪ ಬಿಳಿ. ಕೆಳಭಾಗ ಬಿಳಿ, ಕಂದು ಎದೆ ಪಟ್ಟಿ ಒಂಟಿಯಾಗಿರುತ್ತದೆ.

ಆಹಾರ : ದೊಡ್ಡ ಗಾತ್ರದ ಮೀನು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ ಕರ್ನಾಟಕಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತದೆ.