ಕೆಸ್ಟ್ರಲ್ (ಕಿರುಡೇಗೆ) (KESRTEL)
ಫಾಲ್ಕೊ ಟಿನಂಕುಲಸ್ (Falco tinnunculus)

163_69_PP_KUH

ಗಾತ್ರ : ೩೫-೪೦ ಸೆಂ.ಮೀ.

ಆವಾಸ : ಹುಲ್ಲುಗಾವಲು, ವ್ಯವಸಾಯ ಭೂಮಿ.

ಲಕ್ಷಣಗಳು : ಗಂಡು-ಕಪ್ಪು ಗೆರೆಗಳ ಬೂದು ತಲೆ, ಹಣೆ-ಇಟ್ಟಿಗೆ ಕೆಂಪು ಮೇಲ್ಭಾಗ ದುಂಡನೆಯ ಬೂದುಬಾಲ, ಹಾರುವಾಗ ಮೊನಚಾದ ಕಪ್ಪು ರೆಕ್ಕೆ ಗುರುತಿಸುವುದು ಸುಲಭ, ಹೆಣ್ಣು ಕಂಗೆಂದು ಮೇಲ್ಭಾಗ. ತಲೆ ಅಡ್ಡ ಕಪ್ಪು ಗೆರೆಗಳು, ಕೆಳಭಾಗ ದಪ್ಪವಾದ ಗೆರೆಗಳು.

ಆಹಾರ : ಕೀಟ, ಓತಿ, ಇಲಿ ಇತ್ಯಾದಿ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರಿಲ್, ಅಚ್ಚುಕಟ್ಟಿಲ್ಲದ ಕಸದಡ್ಡಿಗಳು ಸೇರಿಸಲ್ಪಟ್ಟ ಪೊಟರೆ ಅಥವಾ ಸಂದಿಗಳು, ೩-೬ ತಿಳಿಗೆಂಪು ಮೊಟ್ಟೆಗಳು.

 —

ಬಣ್ಣದ ಗೌಜಲ ಹಕ್ಕಿ (PAINTED PARTRIDGE)
ಫ್ರಾಂಕೋಲಿನಸ್ ಪಿಕ್ಟಸ್ (Francolinus pictus)

164_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಕುರುಚಲು ಕಾಡು ಮತ್ತು ಹುಲ್ಲುಗಾವಲು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಕಂದು ಮಿಶ್ರಿತ ಕಪ್ಪು ಬಣ್ಣ. ಸಾಕಷ್ಟು ಬಿಳಿ ಚುಕ್ಕೆಗಳು. ತಿಳಿಗಂದು ತಲೆ, ಮುಖ ಮತ್ತು ಗಂಟಲು, ತಳ ಭಾಗ ಕಪ್ಪು ಆದರೆ ದಟ್ಟವಾದ ಬಿಳಿ ಚುಕ್ಕೆಗಳು ಹೆಣ್ಣು ಗಂಡನ್ನು ಹೋಲುತ್ತದೆ. ಆದರೆ ಗಂಟಲು ಭಾಗ ಮಾಸಲು ಬಿಳಿ. ದೊಡ್ಡ ದೇಹ ಸಣ್ಣ ತಲೆ. ಗಿಡ್ಡ ಕಾಲುಗಳು ಮತ್ತು ಬಾಲ.

ಆಹಾರ : ಹುಲ್ಲು, ಕಾಳು ಮತ್ತಿತರ ಬೀಜಗಳು.

ಸಂತಾನಾಭಿವೃದ್ಧಿ : ಜೂನ್ ನಿಂದ ಸೆಪ್ಟೆಂಬರ‍್ವರೆಗೆ ಬೇಸಯದ ಗದ್ದೆಗಳಲ್ಲಿ ಆಲವಿಲ್ಲದ ಹುಲ್ಲು ಹಾಸಿನ ಗೂಡು. ೬-೮ ತಿಳಿ ಚಾಕೋಲೇಟ್ ಕಂದು ಬಣ್ಣದ ಮೊಟ್ಟೆಗಳು.

—- 

ಹಳದಿ ಕಾಲಿನ ಲಾವಕ್ಕಿ (YELLOWLEGGED BUTTON QUALI)
ಟರ್ಮಿಕ್ಸ್ ಟಾಂಕಿ (Turmix tanki)

165_69_PP_KUH

ಗಾತ್ರ : ೧೪-೧೮ ಸೆಂ.ಮೀ.

ಆವಾಸ : ತೇವವಿರುವ ಹುಲ್ಲುಗಾವಲು, ಕುರುಚಲು ಕಡು, ಭತ್ತದ ಗದ್ದೆ.

ಲಕ್ಷಣಗಳು : ೩ ಬೆರಳಿನ ಲಾವಕ್ಕಿ, ಹೆಣ್ಣು ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಹಳದಿ ಕಾಲು, ಹಳದಿ ಕೊಕ್ಕು, ವಿಶೇಷ ಲಕ್ಷಣ. ಗಂಡು-ನೆತ್ತಿ ಕಪ್ಪು, ತಿಳಿಯಾದ ಗೆರೆಗಳು ಬಿಳಿಗಲ್ಲ, ಮಾಸಲು ಕೆಳಭಾಗ ಎದೆಯ ಮೇಲೆ ಕಪ್ಪು ಚುಕ್ಕೆಗಳು. ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆಗಳು ಎದ್ದು ಕಾಣುತ್ತವೆ. ಹೆಣ್ಣು-ಕೆಂಗಂದು ಕುತ್ತಿಗೆ ಪಟ್ಟಿ.

ಆಹಾರ : ಕೀಟ, ಕಾಳು ಮತ್ತು ಎಲೆಯ ಕಾಂಡ.

ಸಂತಾನಾಭಿವೃದ್ಧಿ : ನಿರ್ದಿಷ್ಟ ಕಾಲವಿಲ್ಲ. ಸ್ಥಳೀಯವಾಗಿ ವ್ಯತ್ಯಾಸವಾಗಬಹುದು. ಹುಲ್ಲುಗಾವಲಿನಲ್ಲಿ, ಎಲೆಗಳ ಹೊದಿಕೆಯ ಕುಳಿಗಳಲ್ಲಿ ೪ ಮೊಟ್ಟೆಗಳು ಎದ್ದು ಕಾಣುವ ಬಣ್ಣ.

—- 

ಕೆಂಪು ಮುಳ್ಳುಕೋಳಿ (RED SPURFOWL)
ಗ್ಯಾಲ್ಲೋಪರ್ಡಿಕ್ಸ್ ಸ್ಪಡಿಸಿಯ (Galloperdix spadicia)

166_69_PP_KUH

ಗಾತ್ರ : ೩೦-೩೪ ಸೆಂ.ಮೀ.

ಆವಾಸ : ಕುರುಚಲು ಕಾಡು, ಗುಡ್ಡಗಾಡು ಪ್ರದೇಶ.

ಲಕ್ಷಣಗಳು : ಗಂಡು-ನೆತ್ತಿ ಕಡು ಕಂದು, ಕಣ್ಣಿನ ಸುತ್ತು ಇಟ್ಟಿಗೆ ಕೆಂಪು, ಕೆಂಪು ಕಂದು ಗರಿಗಳು, ಕೆಳಭಾಗ ಬೂದು ಕಂದು, ಹೆಣ್ಣು- ಮರಳು ಕೆಂಗಂದು, ಸಣ್ಣ ಅಡ್ಡ ಪಟ್ಟಿಗಳು, ಕೆಂಪು ಕಾಲುಗಳು, ಗಂಡಿನ ಕಾಲಿನಲ್ಲಿ ೨-೪ ಮೊನಚಾದ ಮುಳ್ಳುಗಳು. ಹೆಣ್ಣು ಹಕ್ಕಿಯ ಕಾಲಿನಲ್ಲಿ ೧ ಅಥವಾ ೩ ಮುಳ್ಳುಗಳು.

ಆವಾಸ : ಕಾಳು, ಹಣ್ಣು ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಜನೇವರಿಯಿಂದ-ಜೂನ್‌‌ವರೆಗೆ, ನೆಲದ ಮೇಲೆ ಕುರುಚಲು ಕಾಡಿನಲ್ಲಿ ಹುಲ್ಲು ಹಾಸಿದ ಗುಳಿ. ೩-೫ ಮಾಸಿದ ಬಣ್ಣದ ಮೊಟ್ಟೆಗಳು.

—- 

ಬಣ್ಣದ ಮುಳ್ಳು ಕೋಳಿ (PAINTED SPURFOWL)
ಗಾ. ಲ್ಯುನುಲೇಟ (Galloperdix lunulate)

167_69_PP_KUH

ಗಾತ್ರ : ೩೦-೩೫ ಸೆಂ.ಮೀ.

ಆವಾಸ : ಬಿದಿರು ಕಾಡು, ಮುಳ್ಳು ಕುರುಚಲು ಕಾಡು ಇತ್ಯಾದಿ.

ಲಕ್ಷಣಗಳು : ಗಂಡು ಲೋಹದ ಹಸಿರು-ಕಪ್ಪು ನೆತ್ತಿ, ತಿಳಿಯಾದ ಬಿಳಿ ರೇಖೆಗಳು. ತಲೆಯ ಇಕ್ಕೆಡೆ, ಕುತ್ತಿಗೆ ಕಪ್ಪಾಗಿದ್ದು ಬಿಳಿಯ ಚುಕ್ಕೆಗಳಿವೆ. ಲೋಹದ ಹಿತ್ತಾಳೆ-ಹಸಿರು ರೆಕ್ಕೆ ಮತ್ತು ಬಾಲ. ಹೆಣ್ನು ಸಾಮಾನ್ಯ ಕೆಂಗೆಂದು ಗರಿಗಳಲ್ಲಿ ಬಿಳಿ ಚುಕ್ಕೆಗಳು, ನೆತ್ತಿ ಕಪ್ಪು.

ಆಹಾರ : ಕಾಳು, ಹಣ್ಣು ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮೇವರೆಗೆ. ನೆಲದಲ್ಲಿ ಗುಳಿ. ಹುಲ್ಲು ಎಲೆಗಳ ಹಾಸು ೩-೪ ತಿಳಿ ಮಾಸಲು ಮೊಟ್ಟೆಗಳು.