ಕಾಡುಕೋಳಿ (GREY JUNGLEFOWL)
ಗ್ಯಾಲಸ್ ಸೊನ್ನೆರಟಿ (Gallus sonnerati)

168_69_PP_KUH

ಗಾತ್ರ : ೭೫-೮೦ ಸೆಂ.ಮೀ.

ಆವಾಸ : ಕಾಡು, ಕಾಡಿನಂಚು, ಕಾಫಿ-ಟಿ ತೋಟಗಳು.

ಲಕ್ಷಣಗಳು : ಗಂಡು-ಕಪ್ಪೊತ್ತಿನ ಬೂದು ಬಣ್ಣ. ಲೋಹದ ಹೊಳಪಿನ ಕಪ್ಪು, ಕತ್ತಿಯಂತಹ ಬಾಲ, ನೆತ್ತಿಕುತ್ತಿಗೆ ಕಪ್ಪು ಜೊತೆಗೆ ಬಿಳಿ ಚುಕ್ಕೆಗಳು. ನೆತ್ತಿನ ಮೇಲೆ ಕೆಂಪು ಕೀರಿಟ. ಹೆಣ್ಣು-ಗಾತ್ರದಲ್ಲಿ ಚಿಕ್ಕದು. ಹೆಚ್ಚು ಕಡಿಮೆ ಕಂದು ಬಣ್ಣ. ಬಿಳಿಗಲ್ಲ ಮತ್ತು ಗಂಟಲು.

ಆಹಾರ : ಕಾಳುಗಳು, ಎಳೆಯ ಕಂಡ, ಗದ್ದೆ, ಕೀಟ ಇತ್ಯಾದಿ ಸಂತಾನಾಭಿವೃದ್ಧಿ : ಫೆಬ್ರವರಿಯಿಂದ-ಮೇವರೆಗೆ. ಪೊದೆಯಲ್ಲಿ ನೆಲದ ಮೇಲೆ ಗೂಡು, ಹಲ್ಲು-ಎಲೆ ಹಾಸು, ೪-೭ ಮಾಸಲು ಮೊಟ್ಟೆಗಳು.

—- 

ನವಿಲು (PEAFOWL)
ಪೇವೋಕ್ರಿಸ್ಟೇಟಸ್ (Pavocristatus)

169_69_PP_KUH

ಗಾತ್ರ : ೧೦೦ ಸೆಂ.ಮೀ.

ಆವಾಸ : ಕಾಡು, ಹಳ್ಳಿ ನೆರೆಹೊರೆ, ವ್ಯವಸಾಯ ಪ್ರದೇಶ, ಗುಡ್ಡಗಳಲ್ಲಿ.

ಲಕ್ಷಣಗಳು : ಗಂಡು-ಹೋಲೆಯುವ ನೀಲಿ ಕುತ್ತಿಗೆ ಮತ್ತು ಎದೆ. ತಲೆಯ ಮೇಲೆ ಗರಿಗಳ ಗುಚ್ಛ ಬಾಲದ ಗರಿಗಳನ್ನು ಬೀಸಣಿಗೆಯಂತೆ ನೃತ್ಯ ಮಾಡುವಾಗ ತೆರೆದು ಪ್ರದರ್ಶಿಸುತ್ತದೆ. ಬಾಲದ ಗರಿಗಳು ಅತ್ಯಂತ ಉದ್ದ ಮತ್ತು ಕಣ್ಣಿನಂತೆ ರಚನೆಗಳಿವೆ.

ಹೆಣ್ಣು – ಅಷ್ಟೊಂದು ಆಕರ್ಷಣೀಯವಲ್ಲ. ಬಾಲದ ಗರಿಗಳು ಗಿಡ್ಡ ಮತ್ತು ಸಾಮಾನ್ಯ ಕುತ್ತಿಗೆ ಮತ್ತು ಎದೆಯ ಮೇಲೆ ನೀಲಿ ಗರಿಗಳಿಲ್ಲ. ಚಿರಪರಿಚಿತ ಪಕ್ಷಿ. ನವಿಲು ನಮ್ಮ ರಾಷ್ಟ್ರಪಕ್ಷಿ.

ಆಹಾರ : ಹಣ್ಣು, ಕಾಳು, ಹುಳು, ಹಾವು, ಎಳೆಯ ಸಸಿಗಳು ಇತ್ಯಾದಿ. ಸಂತಾನಾಭಿವೃದ್ಧಿ ಜನವರಿಯಿಂದ ಅಕ್ಟೋಬರ್ ನೆಲದ ಮೇಲೆ ಗೂಡು. ಕಡ್ಡಿ ಹಲ್ಲು ಹಾಸು. ೩-೫ ಕೆನೆ ಬಣ್ಣದ ಮೊಟ್ಟೆಗಳು.

—- 

ಬೂದು ಗೌಜಲ ಹಕ್ಕಿ (GREY PARTRIDGE)
ಫ್ರಾಂಕೋಲಿನಸ್ (Francolinus pondicerianus)

170_69_PP_KUH

ಗಾತ್ರ : ಹುಲ್ಲುಗಾವಲು, ಕುರುಚಲು ಮತ್ತು ವ್ಯವಸಾಯ ಭೂಮಿ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತರ. ಬೂದು-ಕಂದು ಮತ್ತು ಮೇಲ್ಭಾಗ ಕೆಂಗಂದು ಅಡ್ಡ ಪಟ್ಟಿ ತೇಪೆಗಳು, ಕೆಳಗಡೆ ಮಾಸಲು ಕೆಂಗಂದು ಹೊಟ್ಟೆಯ ಮೇಲೆ ಸೂಕ್ಷ್ಮ ಕಪ್ಪು ಗೆರೆಗಳು, ಹಳದಿ ಗಂಟಲು. ಗಂಡಿನ ಕಾಲಿನ ಮೇಲೆ ಮೊನಚಾದ ಮುಳ್ಳಿದೆ ಜೋತೆಯಾಗಿರುತ್ತದೆ.

ಆಹಾರ : ಹಸಿರು ಎಳೆಯ ಕಾಂಡ, ಹುಲ್ಲು, ಬೀಜ ಕಾಳುಗಳು, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ವರ್ಷವಿಡೀ ಉತ್ತಗದ್ದೆಗಳಲ್ಲಿ, ಕುರುಚಲು ಕಾಡುಗಳಲ್ಲಿ ನೆಲದ ಮೇಲೆ ಹುಲ್ಲು ಹಾಸಿದ ಆಳವಿಲ್ಲದ ಗುಂಡಿ, ೪-೫ ಮಾಸಲು ಅಥವಾ ಕಲ್ಲಿನ ಬಣ್ಣದ ಮೊಟ್ಟೆಗಳು. ವಿನಾಶದ ಭಯದ ಪಕ್ಷಿ, ಅಪರೂಪ.

 —-

ಬೂದು ಲಾವಕ್ಕೆ (ಪುರುಹಕ್ಕಿ) (GREY QUAIL)
ಕೋರ್ಟನಿಕ್ಸ್ ಕೋರ್ಟಿನಿಕ್ಸ್ (Coturnix coturnix)

171_69_PP_KUH

ಗಾತ್ರ : ೧೮-೨೦ ಸೆಂ.ಮೀ.

ಆವಾಸ : ಹುಲ್ಲುಗಾವಲು, ಪೈರು, ವ್ಯವಸಾಯ ಭೂಮಿ.

ಲಕ್ಷಣಗಳು : ಗಂಡು-ಬಾಲವಿಲ್ಲದ, ದುಂಡನೆಯ ಗೌಜಲ ಹಕ್ಕಿ. ತಿಳಿ ಕಂದು ಮೇಲ್ಭಾಗ ಅಗಲವಾದ ರೇಖೆಗಳ ಗುರುತು, ಕಪ್ಪು ಗಲ್ಲ. ಮಾಸಲು ಕಂಗೆಂದು ಎದೆ ಜೊತೆಗೆ ಬಿಳಿ ರೇಖೆ. ಹೆಣ್ಣಿನ ಗಂಟಲಿನಲ್ಲಿ (anchor) ತಿರುವುದಿಲ್ಲ. ಎದೆಯಲ್ಲಿ ಹೆಚ್ಚು ಒತ್ತೊತ್ತಾದ ಕಪ್ಪು ಗೆರೆಗಳು.

ಆಹಾರ : ಬೀಜ, ಕಾಳು ಮತ್ತು ಕೀಟ.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಮೇವರೆಗೆ. ಆಳವಿಲ್ಲದ ಗುಂಡಿಯಲ್ಲಿ ಹುಲ್ಲಿನ ಹಾಸು. ಹುಲ್ಲುಗಳ ನಡುವೆ ಅಗೋಚರ, ೬-೧೪ ಕೆಂಚು ಮೊಟ್ಟೆಗಳು.

—- 

ಕರಿ ಲಾವಕ್ಕಿ (JUNGLE BUSH QUAIL)
ಪರ್ಡಿಕ್ಯುಲ ಏಸಿಯಾಟಿಕ (Perdicula asiatica)

172_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ಕಾಡಿನ ಅಂಚು, ಹುಲ್ಲುಗಾವಲು, ಕುರುಚಲು ಕಾಡು.

ಲಕ್ಷಣಗಳು : ಗಂಡು : ಕಂದು. ಚುಕ್ಕೆಗಳಿರುವ ಚಿಕ್ಕ ಕೌಜಲ, ದಟ್ಟ ಮಾಸಲು ಮತ್ತು ಕೆಂಗೆಂದು ಮುಖ, ಕೆಂಚು ಗಂಟಲು, ಕೆಳಭಾಗ ಬಿಳಿ. ಜೊತೆಗೆ ಹತ್ತಿರ ಹತ್ತಿರವಿರುವ ಕಪ್ಪು ಉಂಗುರಗಳು. ಹೆಣ್ಣು ಗಂಡನ್ನು ಹೋಲುತ್ತದೆ. ಆದರೆ ತಳಭಾಗಕ್ಕೆ ಗುಲಾಬಿ ಛಾಯೆ ಇದೆ. ಕೆಂಗೆಂದು ಇಲ್ಲ.

ಆಹಾರ : ಹುಲ್ಲಿನ ಬೀಜಗಳು, ಕೀಟಗಳು.

ಸಂತಾನಾಭಿವೃದ್ಧಿ : ಸರಿಯಾದ ದಾಖಲೆ ಸಿಗುವುದಿಲ್ಲ. ನೆಲದ ಮೇಲೆ ಹುಲ್ಲು ಹಾಸಿನ ಗುಳಿ, ೪-೮ ಕೆನೆಬಿಳಿ ಬಣ್ಣದ ಮೊಟ್ಟೆಗಳು.