ಸಾಮಾನ್ಯ ಕೊಕ್ಕರೆ (COMMON CRANE)
ಗ್ರಸ್ ಗ್ರಸ್ (Grus grus)

173_69_PP_KUH

ಗಾತ್ರ : ೭೦-೧೦೦ ಸೆಂ.ಮೀ.

ಆವಾಸ : ಭತ್ತ, ಗೋಧಿ, ನೆಲಗಡಲೆ ಮತ್ತಿತರ ವ್ಯವಸಾಯ ಭೂಮಿಯಲ್ಲಿ, ಕೆಲವೊಮ್ಮೆ ನದಿ ದಂಡೆಯಲ್ಲಿ ಅಥವಾ ಕೆರೆ – ಸರೋವರಗಳ ಬಳಿಯೂ ಕಾಣಬಹುದು.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ತಲೆ ಮತ್ತು ಕುತ್ತಿಗೆ ಮುಂಭಾಗ ಕಪ್ಪು, ಕಣ್ಣುಗಳ ಹಿಂದೆ ಬಿಳಿ ಪಟ್ಟಿ ತಿಳಿ ಬೂದು ಮೈಬಣ್ಣ ತಲೆಯ ಮೇಲೆ ಸ್ವಲ್ಪ ಕೆಂಬಣ್ಣ.

ಆಹಾರ : ಸಸ್ಯಾಹಾರಿ, ಗೆಡ್ಡೆ, ಹೆಣಸು, ಎಳೆ ಕಾಂಡ, ಕಾಳು ಮತ್ತು ಕೆಲವೊಮ್ಮೆ ಕೀಟ ಹಾಗೂ ಚಿಕ್ಕ ಸರೀಸೃಪಗಳನ್ನು ತಿನ್ನಬಹುದು.

ಸಂತಾನಾಭಿವೃದ್ಧಿ : ನಮ್ಮ ದೇಶಕ್ಕೆ ವಲಸೆ ಬರುವ ಹಕ್ಕಿ. ಉತ್ತರ ಕರ್ನಾಟಕಕ್ಕೆ ವಲಸೆ ಬರುತ್ತದೆ. ಇಲ್ಲಿ ಸಂತಾನಾಭಿವೃದ್ಧಿ ಮಾಡುವುದಿಲ್ಲ.

 —-

ಡೆಮ್ಯೊಸೆಲ್ ಕೊಕ್ಕರೆ (DEMOISELLE CRANE)
ಆಂತ್ರೋಪೋಡಿಯಸ್ ವರ್ಗೊ (Anthropodius virgo)

174_69_PP_KUH

ಗಾತ್ರ : ೯೦-೧೦೦ ಸೆಂ.ಮೀ.

ಆವಾಸ : ನೀರಿನಾಶ್ರಯದ ಬಳಿ ಗದ್ದೆಗಳಲ್ಲಿ. ಕೆರೆ, ಸರೋವರಗಳಲ್ಲಿ. ಗುಂಪುಗಳಲ್ಲಿ ಕಂಡುಬರುತ್ತವೆ.

ಲಕ್ಷಣಗಳು : ಬೂದು ಬಣ್ಣದ ಕೊಕ್ಕರೆ. ಕುತ್ತಿಗೆ ಮತ್ತು ಕಪ್ಪು ಕಣ್ಣುಗಳ ಹಿಂದೆ ಬಿಳಿ ಗರಿಗುಚ್ಛ, ನೆತ್ತಿ ಬೂದು ಬಣ್ಣ. ಕುತ್ತಿಗೆ ಗರಿಗಳಿಗೂ ಎದೆಯ ಮೇಲೆ ಬಾಗಿರುತ್ತದೆ. ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ.

ಆಹಾರ : ಉಳಿದ ಕೊಕ್ಕರೆಗಳಂತೆ ಕಾಳು, ಚಿಗುರು, ಕಪ್ಪೆ ಮತ್ತು ಕೀಟ.

ಸಂತಾನಾಭಿವೃದ್ಧಿ : ನಮ್ಮ ದೇಶದಲ್ಲಿ ಸಂತಾನಾಭಿವೃದ್ಧಿ ಮಾಡುವುದಿಲ್ಲ. ಕರ್ನಾಟಕದ ಉತ್ತರ ಭಾಗಕ್ಕೆ ಚಳಿಗಾಲದಲ್ಲಿ ವಲಸೆಬರುತ್ತವೆ.

—- 

ಸಾಮಾನ್ಯ ಲಾವಕ್ಕಿ (ಕಾರೆ ಚಕ್ಕಿ) (COMMON-BUSTARD)
ಟರ‍್ನಿಕ್ಸ್ ಸಸಿಟೇಟರ‍್ (Quail-turnix suscitator)

175_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಮರಳುಗಾಡು ಮತ್ತು ದಟ್ಟ ಅರಣ್ಯ ಬಿಟ್ಟರೆ ಉಳಿದಂತೆ ಸಾಮಾನ್ಯವಾಗಿ ಕಂಡುಬರುತ್ತದೆ.

ಲಕ್ಷಣಗಳು : ಬೂದು ಕೊಕ್ಕು ಮತ್ತು ಕಾಲುಗಳು. ಕೆಂಗಂದು ಮೇಲ್ಭಾಗ ಮತ್ತು ಮಾಸಲು ಕೆಳಗೆ. ಗಲ್ಲಿ ಕುತ್ತಿಗೆ ಮತ್ತು ಎದೆ ಕಪ್ಪು, ಒತ್ತೊತ್ತಾದ ಪಟ್ಟಿಗಳು. ಗಂಡು-ಹೆಣ್ಣಿಗಿಂತ ದೊಡ್ಡದು. ತಿಳಿಹಳದಿ ಕಣ್ಣು ಪ್ರಮುಖ ಲಕ್ಷಣ.

ಆಹಾರ : ಕಾಳು, ಚಿಗುರು, ಕೀಟಗಳು.

ಸಂತಾನಾಭಿವೃದ್ಧಿ : ವರ್ಷವಿಡಿ, ಕುರುಚಲು ಕಾಡು ಅಥವಾ ಗದ್ದೆಗಳಲ್ಲಿ ಹುಲ್ಲು ಹಾಸಿದ ಗುಳಿಗಳಲ್ಲಿ ೩-೪ ಕಂದು ಚುಕ್ಕೆಗಳುಳ್ಳ ತಿಳಿ ಬೂದು ಮೊಟ್ಟೆಗಳು.

—- 

ನೀಲಿ ಎದೆ ಕೊರವಾಕ (BLUEBREASTED BANDED RAIL)
ರಾಲಸ್ ಸ್ಟ್ರೈಯೇಟಸ್ (Rallus striatus)

176_69_PP_KUH

ಗಾತ್ರ : ೨೬-೨೮ ಸೆಂ.ಮೀ.

ಆವಾಸ : ನೀರಿರುವ ಪ್ರದೇಶ, ಸಸ್ಯಗಳಿಂದ ತುಂಬಿದ ಕೆರೆ, ಹಿನ್ನೀರು, ಕಾಂಡ್ಲವನ

ಲಕ್ಷಣಗಳು : ಗಂಡು-ಚಿಕ್ಕ ಬಿಳಿ ಚುಕ್ಕೆಗಳಿರುವ ದಟ್ಟ ಕಂದು ಮೇಲ್ಭಾಗ, ಕೆಂಗೆಂದು ತಲೆ, ಕುತ್ತಿಗೆ, ಗಲ್ಲ ಬಿಳಿ, ಬೂದು ನೀಲಿ ಎದೆ. ಕೆಲವು ಕೊಕ್ಕು ಮತ್ತು ಕಣ್ಣುಗಳು. ಬೂದು ಕಾಲುಗಳು.

ಆಹಾರ : ಮೃದ್ವಂಗಿ, ಕೀಟಗಳು, ಚಿಗುರು ಕಾಂಡಗಳು.

ಸಂತಾನಾಭಿವೃದ್ಧಿ : ಜೂನ್‌ದಿಂದ ಅಕ್ಟೋಬರ‍್ವರೆಗೆ ಸಸ್ಯಗಳು ಚಾಪೆಯಂತಹ ಗೂಡು. ಜಲಸಸ್ಯಗಳ ನಡುವೆ ೫-೭ ಕೆಂಚು ಚುಕ್ಕೆಗಳಿರುವ ಮೊಟ್ಟೆಗಳು.

 —-

ಚಿಕ್ಕ ಸೀಮೆ ಕಾಗೆ (LITTLE CRAKE)
ಪೋರ್ಜಾನಾ ಪಾರ್ರ (Porgana parra)

177_69_PP_KUH

ಗಾತ್ರ : ೨೦-೨೩ ಸೆಂ.ಮೀ.

ಆವಾಸ : ನೀರಿರುವ ಜಾಗಗಳು ಕೆರೆ, ತೋಡು ಇತ್ಯಾದಿ.

ಲಕ್ಷಣಗಳು : ತಲೆ-ಕುತ್ತಿಗೆ ಕೆಳಭಾಗ ಬೂದು. ನೆತ್ತಿ ಮತ್ತು ಕುತ್ತಿಗೆ ಕೆಂಗಂದು. ಉಳಿದಂತೆ ಮೇಲ್ಭಾಗ ಬಿಳಿ ಗೆರೆಗಳಿರುವ ಹಸಿರು-ಕಂದು. ಕೆಳ ಭಾಗದಲ್ಲಿ ಬೂದುಬಿಳಿ ಪಟ್ಟೆಗಳು.

ಆಹಾರ : ಬಹುತೇಕ ಕೀಟಗಳು ಮತ್ತು ಹುಳುಗಳು.

ಸಂತಾನಾಭಿವೃದ್ಧಿ : ಕರ್ನಾಟಕದಲ್ಲಿ ಸಂತಾನಾಭಿವೃದ್ಧಿ ಇಲ್ಲ. ಇದೊಂದು ವಲಸೆ ಬರುವ ಹಕ್ಕಿ.