ಕಂದು ಸೀಮೆ ಕಾಗೆ (BROWN CRAKE)
ಅಮೋರೋಸ್ ಅಕೂಲ (Amaurornis akool)

178_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ಜಲ ಸಸ್ಯವಿರುವ ನಾಳ, ಕೊಳ, ಕೆರೆ ಇತ್ಯಾದಿಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಆಲಿವ್ ಕಂದು ಮೇಲ್ಭಾಗ, ಬೂದು ಕೆಳಭಾಗ, ಗಿಡ್ಡ ಬಾಲ. ತಿಳಿ ಹಸಿರು ಕೊಕ್ಕು. ಗುಲಾಬಿ ಕಾಲು, ಗಲ್ಲ ಮತ್ತು ಕುತ್ತಿಗೆ ಬಿಳಿ.

ಆಹಾರ : ಕೀಟ, ಮೃದ್ವಂಗಿ ಮತ್ತು ಕಾಳುಗಳು.

ಸಂತಾನಾಭಿವೃದ್ಧಿ : ಮೇದಿಂದ ಆಗಸ್ಟ್ ವರೆಗೆ. ಹುಲ್ಲಿನ, ಕಡ್ಡಿ ಎಲೆಗಳಿಂದ ಕೂಡಿದ ಗೂಡು. ನೀರಿಗೆ ಸಮೀಪ. ೫-೬ ಚುಕ್ಕೆ ಕೆಂಗಂದು ಮೊಟ್ಟೆಗಳು.

—- 

ಬಿಳಿ ಎದೆ ನೀರು ಕೋಳಿ (WHITEBREASTED WATERHEN)
ಅಮೋರೊರ್ನಿಸ್ ಪೋನಿಕ್ಯುರಸ್ (Amourornis phoenicurus)

179_69_PP_KUH

ಗಾತ್ರ : ೩೨ ಸೆಂ.ಮೀ.

ಆವಾಸ : ಜೊಂಡಿನಿಂದ ಕೂಡಿದ ಕೆರೆ, ಕಾಲುವೆ, ತೊರೆ, ನೀರಿರುವ ಗದ್ದೆ ಇತ್ಯಾದಿ. ಸಾಮಾನ್ಯವಾಗಿ ಕಂಡು ಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಮುಂದಲೆ ತಲೆಯ ಇಕ್ಕೆಡೆ ಮತ್ತು ಭಾಗ ಬಿಳಿ. ಗುದದ್ವಾರದ ಬಳಿ ಕೆಂಗಂದು ಬಣ್ಣವಿರುತ್ತದೆ. ದಟ್ಟಬೂದು ಮೈ ಬಣ್ಣವಿರುತ್ತದೆ.

ಆಹಾರ : ಕೀಟ, ಹುಳು, ಮೃದ್ವಂಗಿ, ಕಾಳು ಮತ್ತು ಚಿಗುರು ಕಾಂಡಗಳು.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ (ಜೂನ್ ನಿಂದ ಅಕ್ಟೋಬರ್ ವರೆಗೆ). ಕಡ್ಡಿ, ಬಳ್ಳಿ. ಎಲೆ ಇತ್ಯಾದಿಗಳಿಂದ ಬಟ್ಟಲಿನಂತಹ ಗೂಡು ಕಟ್ಟಿ ೬-೭ ಬಿಳಿ ಅಥವಾ ಗುಲಾಬಿ ಛಾಯೆ ಇರುವ ಮೊಟ್ಟೆಗಳನ್ನಿಡುತ್ತವೆ. ಕರಿಕೆಂದು ಚುಕ್ಕೆಗಳಿರಬಹುದು.

—- 

ಸಾಮಾನ್ಯ ಬಂಜರು ಕೋಳಿ (INDIAN MOORHEN)
ಗ್ಯಾಲಿನುಲ ಕ್ಲೋರೋಪಸ್ (Gallinula chloropus)

180_69_PP_KUH

ಗಾತ್ರ : ೩೦-೩೫ ಸೆಂ.ಮೀ.

ಆವಾಸ : ಜೊಂಡು ತುಂಬಿದ ಕೆರೆ. ಕೊಳ ಇತ್ಯಾದಿ. ನಾಡಿನಾದ್ಯಂತ ಕಂಡು ಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಕಡು ಬೂದು ಮತ್ತು ಕಂಗೆಂದು ಬಣ್ಣದ ನೀರುಕೋಳಿ. ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಡು ಬೂದು ತಲೆ, ಕುತ್ತಿಗೆಯ ಮೇಲ್ಭಾಗ ಆಲಿವ್ ಕಂದು, ಕೆಳಭಾಗ ಕಡು ಬೂದು. ಹೊಟ್ಟೆಯ ಮಧ್ಯಭಾಗ ಬಿಳಿ ಕೊಕ್ಕಿನ ಬುಡದಲ್ಲಿ ಕೆಂಪು ಕವಚ; ಹಸಿರು-ಹಳದಿಯ ಕೊಕ್ಕು ಪ್ರಮುಖ ಲಕ್ಷಣ. ಹಸಿರು ಕಾಲುಗಳು, ಸಣ್ಣ ಗುಂಪಿನಲ್ಲಿ ವಾಸ.

ಆಹಾರ : ಕಾಳು-ಬೀಜ ಮತ್ತು ಜನಸಸ್ಯಗಳ ಗಡ್ಡೆ, ಕಪ್ಪೆ, ಕೀಟ, ಬಸವನ ಹುಳು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ (ಜೂನ್‌ನಿಂದ-ಸೆಂಪ್ಟೆಂಬರ್ ವರೆಗೆ) ಜೊಂಡು, ಕಳೆಗಳಿಂದ ಕೂಡಿದ ತುಸು ದೊಡ್ಡ ಗಾತ್ರದ ಗೂಡು. ಜಲಸಸ್ಯಗಳ ನಡುವೆ ಅಥವಾ ನೀರಿನ ಬಳಿ ಇರುವ ಪೊದೆಗಳಲ್ಲಿ ತಿಳಿ ಹಳದಿ ಅಥವಾ ಕಲ್ಲು ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಚುಕ್ಕೆಗಳಿರುವ ೫-೧೨ ಮೊಟ್ಟೆಗಳನ್ನಿಡುತ್ತವೆ.

—- 

ಕೆನ್ನೀಲಿ ಬಂಜರು ಕೋಳಿ (PURPLE MOORHEN)
ಪಾರ‍್ಫಿರಿಯೊ (Porphyrio porphyrio)

181_69_PP_KUH

ಗಾತ್ರ : ೪೫-೫೦ ಸೆಂ.ಮೀ.

ಆವಾಸ : ಜೊಂಡು, ಜಲಸಸ್ಯ ಇತ್ಯಾದಿಗಳಿಂದ ತುಂಬಿದ ಕೊಳ, ಕೆರೆ ಇತ್ಯಾದಿಗಳಲ್ಲಿ ನಾಡಿನಾದ್ಯಂತ ಕಂಡು ಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಕೆನ್ನೀಲಿ ಬಣ್ಣದ ಸುಂದರ ಜಲಪಕ್ಷಿ. ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಉದ್ದನೆಯ ಕೆಂಪು ಕಾಲುಗಳು, ದಪ್ಪ ಕೆಂಪು ಕೊಕ್ಕು; ಕೆಂಪು ಹಣೆಯಲ್ಲಿ ಕೆಂಪು ಕವಚ, ಗಿಡ್ಡ ಬಾಲದ ಕೆಳಗೆ ಬಿಳಿ ತೇಪೆ.

ಆಹಾರ : ಸಸ್ಯಾಹಾರಿ. ಜಲ ಸಸ್ಯಗಳ ಚಿಗುರು ಪ್ರಮುಖ ಆಹಾರ. ಕೀಟ, ಮೃದ್ವಂಗಿಗಳನ್ನು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಮಳೆಗಾಲ-(ಜೂನ್‌ನಿಂದ-ಸೆಪ್ಟೆಂಬರ‍್ವರೆಗೆ). ತೇಲು ಜೊಂಡು, ಹುಲ್ಲು ಮತ್ತಿತರ ಸಸ್ಯಜನ್ಯ ವಸ್ತುಗಳಿಂದ ದೊಡ್ಡ ಗೂಡು ಕಟ್ಟುತ್ತವೆ. ಗೂಡು ನೀರಿನಿಂದ ಸ್ವಲ್ಪ ಎತ್ತರದಲ್ಲಿರತ್ತದೆ. ತಿಳಿ ಹಳದಿ ಅಥವಾ ಮಾಸಲು ಹಳದಿ ಹಿನ್ನೆಲೆಯಲ್ಲಿ ಕೆಂಗಂದು ಚುಕ್ಕೆಗಳಿರುವ ೩-೭ ಮೊಟ್ಟೆಗಳನ್ನಿಡುತ್ತವೆ.

 —-

ಬಿಳಿ ನಾಮದ ಬಂಜರು ಕೋಳಿ (COOT)
ಫ್ಯುಲಿಕಾ ಆಟ್ರ (Fulica atra)

182_69_PP_KUH

ಗಾತ್ರ : ೩೮-೪೦ ಸೆಂ.ಮೀ.

ಆವಾಸ : ಕೆರೆ ಸರೋವರಗಳಲ್ಲಿ ಕಂಡುಬರುವ ಈಜು ಪಕ್ಷಿ. ಸರ್ವೇ ಸಾಮಾನ್ಯವಾದ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಪ್ಪು ಗರಿಗಳ ಸೊಬಗಿನ ಪಕ್ಷಿ. ದಂತ ಬಿಳಿ ಕೊಕ್ಕು, ಕೊಕ್ಕಿನ ಮೇಲೆ ಬಿಳಿ ಕವಚ ವಿಶಿಷ್ಟ ಲಕ್ಷಣ. ಬಾಲವಿರುವುದಿಲ್ಲ. ಬಾತುಕೋಳಿಯಂತೆ ಕಾಣಬಹುದು. ಸಾಮಾನ್ಯವಾಗಿ ಗುಂಪಿನಲ್ಲಿದ್ದು ನೀರಿನಲ್ಲಿ ತೇಲುತ್ತಿರುತ್ತವೆ.

ಆಹಾರ : ಕಾಳು, ಬೀಜ, ಜಲಸಸ್ಯಗಳ ಚಿಗುರು, ಕೀಟಗಳು ಮತ್ತು ಮೃದ್ವಂಗಿ ಪ್ರಮುಖ ಆಹಾರ.

ಸಂತಾನಾಭಿವೃದ್ಧಿ : ಜುಲೈ-ಆಗಸ್ಟ್ ತಿಂಗಳುಗಳಲ್ಲಿ. ನೀರಿನಲ್ಲಿನ ಜೊಂಡು ಸಸ್ಯಗಳ ನಡುವೆ ತೆಪ್ಪದಂತಹ ಗೂಡು. ೬-೧೦ ಮಾಸಲು ಬಣ್ಣದ, ಚುಕ್ಕೆಗಳಿರುವ ಮೊಟ್ಟೆಗಳನ್ನಿಡುತ್ತವೆ.