ಬ್ರಾಹ್ಮಿಣಿ ಗರುಡ (BRAHMINI KITE)
ಹರಿಯಾಸ್ಟಸ್ ಇಂಡಸ್ (Haliastus indus)

148_69_PP_KUH

ಗಾತ್ರ : ೬೫ ಸೆಂ.ಮೀ.

ಆವಾಸ : ಭತ್ತದ ಗದ್ದೆ, ಮೀನುಮಾರುಕಟ್ಟೆ, ಹೊಳೆ ಕೆರೆಗಳ ಸಮೀಪ, ಸಮುದ್ರ ತೀರ ಇತ್ಯಾದಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಸುಲಭವಾಗಿ ಗುರುತಿಸಬಹುದಾದ ಗರುಡ. ಕಂದು ದೇಹ. ತಲೆ, ಕುತ್ತಿಗೆ ಮತ್ತು ಹೊಟ್ಟೆ ಬಿಳಿ. ಕಾಲು ಮತ್ತು ಕೊಕ್ಕು ಹಳದಿ. ಕಪ್ಪು ಕಣ್ಣಗಳು ಬಾಲ ಕತ್ತರಿಯಾಗಿಲ್ಲ.

ಆಹಾರ : ಮೀನು, ಕಪ್ಪೆ ಹಾವುಗಳು, ಬಾವಲಿ ಇತ್ಯಾದಿ.

ಸಂತಾನಾಭಿವೃದ್ಧಿ : ಡಿಸೆಂಬರದಿಂದ ಏಪ್ರಿಲ್‌ವರೆಗೆ. ಕಡ್ಡಿಗಳ ದಿಣ್ಣೆಯಿಂತಹ ಗೂಡು. ಒಳಗೆ ಹಸಿರೆಲೆಗಳ ಹಾಸು. ಆಲದ ಮರದಂತಹ ದೊಡ್ಡಮರಗಳಲ್ಲಿ ಗೂಡು. ೨ ತಿಳಿ ಬೂದು ಬಿಳಿ ಮೊಟ್ಟೆಗಳು.

—- 

ಅವೋಸಟ್ (AVOCET)
ರಿಕರ್ವಿರೋಸ್ಟ್ರ ಅವೊಸೆಟ್ಟ(Recurvirostra avosetta)

149_69_PP_KUH

ಗಾತ್ರ : ೪೨ -೪೫ ಸೆಂ.ಮೀ.

ಆವಾಸ : ಜೌಗು ಪ್ರದೇಶ, ಆಳಿವೆ ಮತ್ತು ಸಮುದ್ರ ತೀರದ ಮಣ್ಣು ದಿಬ್ಬಗಳು.

ಲಕ್ಷಣಗಳು : ಗಂಡು ಹೆಣ್ಣಗಳು ಒಂದೇ ತೆರನಾಗಿವೆ. ದೊಡ್ಡ ಗಾತ್ರದ ನೀರ್ನಡಿಗೆ ಹಕ್ಕಿ. ತಲೆ, ರೆಕ್ಕೆಗಳ ಬದಿ ಮತ್ತು ಬಾಲದ ತುದಿ ಕಪ್ಪು. ಉಳಿದಂತೆ ಅಚ್ಚ ಬಿಳುಪು. ಚೂಪಾದ ಉದ್ದನೆಯ, ಮೇಲಕ್ಕೆ ಬಾಗಿದ ಕೊಕ್ಕು ಪ್ರಮುಖ ಲಕ್ಷಣಗಳು. ಕಣ್ಣು ಕೆಂಪು; ಕಾಲುಗಳು ನೀಲಿ-ಬೂದು.

ಆಹಾರ : ನೀರಿನೊಳಗೆ ಮಣ್ಣನ್ನು ಕೆದಕಿ ಹುಳು ಆರಿಸಿ ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಧ್ಯ ಏಷ್ಯಾದಲ್ಲಿ. ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಅಪರೂಪದಲ್ಲಿ ವಲಸೆ ಬರುತ್ತವೆ.

—- 

ಶಿಕ್ರ (SHIKRA)
ಆಕ್ಸಿಪಿಟರ್ ಬಾಡಿಯಸ್(Accipiter badius)

150_69_PP_KUH

ಗಾತ್ರ : ೩೦-೩೬ ಸೆಂ.ಮೀ.

ಆವಾಸ : ತೆರೆದ ಕಾಡು ; ಹಳ್ಳ ಬದಿಯ ಎತ್ತರ ಮರಗಳ ತೋಪು; ವ್ಯವಸಾಯ ಭೂಮಿಯ ಪಕ್ಕದ ಕಡಲ್ಲಿ ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ತಿಳಿ ಬೂದು ಬಣ್ಣದ ಸಾಮಾನ್ಯ ಗಾತ್ರದ ಡೇಗೆ. ಬೂದು – ನೀಲಿ ಮೇಲ್ಭಾಗ; ಕಂದು ಅಡ್ಡ ಪಟ್ಟಿಯುಳ್ಳ ಬಿಳಿ ಕೆಳಭಾಗ : ಕೊಕ್ಕು ಮತ್ತು ಕಾಲು ಹಳದಿ. ಹೆಣ್ಣು ಪಕ್ಷಿಗೆ ಹೆಚ್ಚು ಕಂದು ಬಣ್ಣ.

ಆಹಾರ : ಸರೀಸೃಪಗಳು, ಇಲಿ, ಅಳಿಲು, ಹಕ್ಕಿ ಇತ್ಯಾದಿ.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಜೂನ್ ವರೆಗೆ, ಕಾಗೆ ಗೂಡಿನಂತೆ ಕಡ್ಡಿಗಳ ಡಿಣ್ಣೆಯ ಗೂಡು. ಒಳಗೆ ಬೇರು ಮತ್ತು ಎಲೆ ಹಾಸು. ೩-೪ ತಿಳಿನೀಲಿ ಬಿಳಿ ಮೊಟ್ಟೆಗಳು.

—- 

ಜುಟ್ಟಿನ ಗೋಶ್ವಾಕು (CRESTED GOSHWAK)
ಅಸ್ಸಿಪಿಟರ್ ಟ್ರಿವಿರ್ಗಾಟಸ್ (Accipiter trivirgatus)

151_69_PP_KUH

ಗಾತ್ರ : ೩೦-೪೬ ಸೆಂ.ಮೀ.

ಆವಾಸ : ಕಾಡು ಹಕ್ಕಿ. ಎಲೆ ಉದುರುವ ಅಥವಾ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಬಹುದು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಶಿಕ್ರವನ್ನು ಹೋಲುವ ಪಕ್ಷಿ. ಹಿಂದೆ ತಲೆಯ ಮೇಲೆ ಜುಟ್ಟು ಗಿಡ್ಡ ಮತ್ತು ಅಗಲವಾದ ರೆಕ್ಕೆಗಳು ಪ್ರಮುಖ ಲಕ್ಷಣಗಳು ಗಂಡು ಹಕ್ಕಿಯ ತಲೆ ಕಡು ಬೂದು; ಬಾಲದ ಮೇಲೆ ನಾಲ್ಕು ಕಂದು ಅಡ್ಡ ಪಟ್ಟಿಗಳು. ಗಂಟಲು ಮತ್ತು ಬಾಲದ ಕೆಳಗೆ ಬಿಳಿ. ಹೆಣ್ಣು ಹಕ್ಕಿಯ ನೆತ್ತಿ ಕಂದು ಬಣ್ಣ. ಕೆಳಭಾಗದಲ್ಲಿ ಕಂದು ಅಡ್ಡ ಪಟ್ಟಿಗಳು.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಮೇ ವರೆಗೆ. ಕಡ್ಡಿಗಳ ದೊಡ್ಡ ಗೂಡು. ೨-೩ ತಿಳಿ ನೀಲಿ-ಬಿಳಿ ಮೊಟ್ಟೆಗಳು

—- 

ಉದ್ದಕಾಲಿನ ಬಸರ್ಡ್ (LONGLEGGED BUZZARD)
ಬ್ಯೂಟಿಯೊರುಫಿನಸ್ (Butio rufinus)

152_69_PP_KUH

ಗಾತ್ರ : ೫೦ ಸೆಂ.ಮಿ.

ಆವಾಸ : ಮರಗಳ ಮೇಲೆ, ತೆರೆದ ಕಾಡಿನಲ್ಲಿ, ಹುಲ್ಲು ಗಾವಲಿನ ಎತ್ತರದ ಮರಗಳಲ್ಲಿ. ಕಾಳ್ಗಿಚ್ಚಿನಲ್ಲಿ ತಪ್ಪಿಸಿಕೊಳ್ಳುವ ಪ್ರಾಣಿಗಳನ್ನು ಹಿಡಿದು ತಿನ್ನುವುದು ಸಾಮಾನ್ಯ.

ಲಕ್ಷಣಗಳು : ವಿಭಿನ್ನ ಛಾಯೆಗಳ ಕಂದುಬಣ್ಣ, ಹೆಚ್ಚು, ಕಡಿಮೆ ಬಿಳಿ, ತಲೆ ಕುತ್ತಿಗೆ ಮತ್ತು ಎದೆ. ಕೆನೆ ಬಿಳಿ ಬಾಲ ಮತ್ತು ಅಡ್ಡ ಪಟ್ಟಿಗಳು ಎದ್ದು ಕಾಣುತ್ತವೆ. ಕಾಲುಗಳ ಮೇಲೆ ಗರಿಗಳಿಲ್ಲ.

ಆಹಾರ : ಸತ್ತು ಬಿದ್ದ ಪ್ರಾಣಿಗಳು, ಚಿಕ್ಕ ಸಸ್ತನಿಗಳು, ಗಾಯಗೊಂಡು ಹಕ್ಕಿಗಳು, ಹಾವು ಇತ್ಯಾದಿ.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಮೇ ವರೆಗೆ. ಕಡ್ಡಿಗಳ ದೊಡ್ಡ ಗೂಡು ದೊಡ್ಡ ಮರಗಳ ಮೇಲೆ, ಇಲ್ಲವೆ ಎತ್ತರ ಬಂಡೆಗಳ ಮೇಲೆ ೨-೩ ಬಿಳಿ ಅಥವಾ ಕಂದು ಬಣ್ಣದ ತೇಪೆ ಇರುವ ಮೊಟ್ಟೆಗಳು.