ಬಸ್ಟರ್ಡ್ (BUSTARD)
ಬ್ಯೂಟಿಯೊ ಬ್ಯುಟಿಯೊ (Buteo buteo)

153_69_PP_KUH

ಗಾತ್ರ : ೫೦-೫೫ ಸೆಂ.ಮೀ.

ಆವಾಸ : ಸಾಕಷ್ಟು ಮಾಹಿತಿ ಇಲ್ಲ. ಕೆಲವೊಮ್ಮೆ ರಣಹದ್ದುಗಳ ಜೊತೆಗೆ ನೋಡಬಹುದು.

ಲಕ್ಷಣಗಳು : ಕಪ್ಪು ಬಿಳಿ ಗರಿಗಳು. ಎಳೆಯ ಗಿಡುಗವನ್ನು ಹೋಲಬಹುದು. ಕಾಲಿನ ಅರ್ಧದಷ್ಟು ಮುಂಭಾಗದಲ್ಲಿ ಗರಿಗಳು. ಹಾರುವಾಗ ಅಗಲವಾದ ಕಪ್ಪು ತುದಿಯ ರೆಕ್ಕೆಯಲ್ಲಿ ಬಿಳಿಯ ತೇಪೆ ವಿಶೇಷ ಲಕ್ಷಣ.

ಆಹಾರ : ಸತ್ತ ಪ್ರಾಣಿಗಳು, ಸಣ್ಣ ಪುಟ್ಟ ಹಕ್ಕಿಗಳು, ಹಾವು-ಹರಣಿ ಇತ್ಯಾದಿ.

ಸಂತಾನಾಭಿವೃದ್ಧಿ : ಮಾಹಿತಿ ಅಲಭ್ಯ.

 —-

ಜುಟ್ಟಿನ ಗಿಡುಗ (CRESTED HAWK EAGLE)
ಸ್ಪಿಜೇಟಸ್ ಸಿರ‍್ಹೇಟಸ್ (Spigaetus cirrhatus)

154_69_PP_KUH

ಗಾತ್ರ : ೬೦-೬೫ ಸೆಂ.ಮೀ.

ಆವಾಸ : ಅರೆ ಹರಿದ್ವರ್ಣ ಮತ್ತು ಎಲೆ ಉದುರವ ಕಾಡುಗಳ ಮರಗಳ ಮೇಲೆ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಆದರೆ ಹೆಣ್ಣು ಗಂಡಿಗಿಂತ ತುಸು ದೊಡ್ಡದಾಗಿರಬಹುದು. ದೊಡ್ಡ ಗಾತ್ರದ, ಕೃಶವಾದ, ಜುಟ್ಟಿನ ಗಿಡುಗ, ಮೇಲ್ಭಾಗ ಕಂದು ಬಣ್ಣ. ಕೆಳಭಾಗ ಬಿಳಿ ಹಿನ್ನೆಲೆಯಲ್ಲಿ ಕಂದು ರಚನೆಗಳು. ಹಾರುವಾಗ ಬಾಲ ದುಂಡಗಿರುತ್ತದೆ. ತಲೆ ಮೇಲೆ ಜುಟ್ಟು ಪ್ರಮುಖ ಲಕ್ಷಣ ಬಾಗಿದ. ಮೊನಚಾದ ಗಿಡ್ಡ ಕೊಕ್ಕು ಬೆಳಚು ಕಾಲುಗಳು.

ಆಹಾರ : ಸಣ್ಣ ಪುಟ್ಟ ಹಕ್ಕಿಗಳು, ಅಳಿಲು, ಓತಿ, ಮೊಲ ಇತ್ಯಾದಿ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಏಪ್ರಿಲ್ವರೆಗೆ. ಮರಗಳ ಮೇಲೆ ಕಡ್ಡಿಗಳ ಗೂಡು. ಒಳಗೆ ಹಸಿರು ಎಲೆಗಳ ಹಾಸು. ಬೂದು-ಬಿಳಿಯ ಏಕ ಮಾತ್ರ ಮೊಟ್ಟೆ ಕೆಂಪು ಗುರುತುಗಳಿರಬಹುದು.

—- 

ಬೊನೆಲ್ಲಿ ಗಿಡುಗ (BONELLIS EAGLE)
ಮೈಕ್ರೋಯೇಸ್ಟಿಯಸ್ ಫೇಸಿಯೇಟಸ್ (Microaestus fasciatus)

155_69_PP_KUH

ಗಾತ್ರ : ೭೦-೭೫ ಸೆಂ.ಮೀ.

ಆವಾಸ : ಎತ್ತರದ ಮರಗಳ ಕಾಡು. ಅಪರೂಪದ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತರನಾಗಿ ಕಂಡರೂ, ಹೆಣ್ಣು ಹಕ್ಕಿ ತುಸು ದೊಡ್ಡದು. ಇದೊಂದು ಉದ್ದ ಬಾಲದ ಕಾಡಿನ ಗಿಡುಗ. ದಟ್ಟ ಕಂದು ಮೇಲ್ಭಾಗ ಮಾಸಲು ಬಿಳಿ ಕೆಳಭಾಗ ಜೊತೆಗೆ ಕಪ್ಪು ಪಟ್ಟಿಗಳು. ಬಾಲ ಬೂದು ಮೇಲ್ಭಾಗ, ಕೆಳಭಾಗ ಬಿಳಿ. ಹಾರುವಾಗ ಬಿಳಿ ಕೆಳಭಾಗ ಎದ್ದು ಕಾಣುತ್ತದೆ.

ಆಹಾರ : ನೆಲದ ಮೇಲೆ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳು

ಸಂತಾನಾಭಿವೃದ್ಧಿ : ಡಿಸೆಂಬರ್ ಜನವರಿ ತಿಂಗಳುಗಳಲ್ಲಿ. ಎತ್ತರದ ಮರಗಳ ಮೇಲೆ ಕಡ್ಡಿಗಳ ದೊಡ್ಡ ಗೂಡು. ಒಳಗೆ ಎಲೆಗಳ ಹಾಸು. ೩ ಬಿಳಿ ಮೊಟ್ಟೆಗಳು.

 —-

ಕಿತ್ತಳೆ ಕಂದು ಗಿಡುಗ (TAWNY EAGLE)
ಅಕ್ವಿಲ ರೇಪೆಕ್ಸ್ (Aquila rapax)

156_69_PP_KUH

ಗಾತ್ರ : ೭೦-೭೫ ಸೆಂ.ಮೀ.

ಆವಾಸ : ಕಾಡು, ಹಳ್ಳಿಗಳ ಸುತ್ತಮುತ್ತ ಮತ್ತು ಬೆಟ್ಟಗಳ ಪ್ರದೇಶ, ಸಾಮಾನ್ಯ ಗಿಡುಗ ಸ್ಥಳೀಯಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೆಣ್ಣು ಸ್ವಲ್ಪ ದೊಡ್ಡದಾಗಿರಬಹುದು. ದಟ್ಟ ಕಂದು ಬಣ್ಣ, ಬಾಲ ಚಿಕ್ಕದು, ತಿಳಿ ಅಡ್ಡ ಪಟ್ಟಿ ಬಾಲದ ಮೇಲೆ ಬಲಿಷ್ಟವಾದ ಬಾಗಿದ ಕೊಕ್ಕು, ಕಾಲುಗಳ ಮೇಲೆ ಸಂಪೂರ್ಣ ಗರಿಗಳ ಹೊದಿಕೆ, ರೆಕ್ಕೆಗಳ ಉದ್ದ, ಕುಳಿತಾಗ ರೆಕ್ಕೆಗಳ ತುದಿ, ಬಾಳದ ತುದಿ ಮುಟ್ಟಬಹುದು.

ಆಹಾರ : ಸತ್ತ ಪ್ರಾಣಿಗಳು, ಚಿಕ್ಕಪುಟ್ಟ ಹಕ್ಕಿ, ಓತಿ ಇತ್ಯಾದಿ.

ಸಂತಾನಾಭಿವೃದ್ಧಿ : ನವಂಬರಿನಿಂದ ಏಪ್ರಿಲ್. ಎತ್ತರದ ಮುಳ್ಳುಗಳ ಮರದ ಮೇಲೆ ಕಡ್ಡಿಗಳ ಗೂಡು, ಒಳಗೆ, ಎಲೆ, ಹುಲ್ಲುಗಳ ಹಾಸು. ೨-೩ ಕೆಂಗಂದು, ಚುಕ್ಕೆಗಳಿರುವ ಮೊಟ್ಟೆಗಳು.

—- 

ರಾಜ ರಣಹದ್ದು (KING VULTURE)
ಸಾರ್ಕೊಜಿಪ್ಸ್ ಕೆಲ್ವಸ್ (Sarcogyps calvus)

157_69_PP_KUH

ಗಾತ್ರ : ೮೦-೯೦ ಸೆಂ.ಮೀ.

ಆವಾಸ : ತೆರೆದ ಕಾಡು, ಹಳ್ಳಿಗಳ ಸುತ್ತಮುತ್ತ, ಎತ್ತರದ ಮರಗಳ ಮೇಲೆ, ಅಪರೂಪ. ವಿನಾಶದ ಭಯದಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದೊಡ್ಡಗಾತ್ರ. ಅಸಹ್ಯ ಭಯ ಹುಟ್ಟಿಸುವ ಕಪ್ಪು ಪಕ್ಷಿ. ತೊಡೆ ಮತ್ತು ಎದೆ ಮೇಲೆ ಬಿಳಿ. ತಲೆ, ಕುತ್ತಿಗೆ ಮತ್ತು ಕಾಲುಗಳು ನಗ್ನ ಕೆಂಪು. ಬಲಿಷ್ಠ ಮೊನಚಾದ ಮತ್ತು ಬಾಗಿದ ಕೊಕ್ಕು, ಗಿಡ್ಡ ಕಾಲುಗಳು, ಒಂಟಿ ಜೀವನ, ಸತ್ತ ಪ್ರಾಣಿಯ ಬಳಿ ಇತರೆ ಹದ್ದುಗಳು ಜೊತೆಗೆ ನೋಡಬಹುದು. ಆಕಾಶದೆತ್ತರದಲ್ಲಿ ಸುತ್ತುತ್ತವೆ.

ಆಹಾರ : ಇದೊಂದು ಜಾಡಮಾಲಿ ಹಕ್ಕಿ, ಸತ್ತ ಪ್ರಾಣಿಗಳೇ ಆಹಾರ.

ಸಂತಾನಾಭೀವೃದ್ಧಿ : ಡಿಸೆಂಬರ‍್ನಿಂದ ಏಪ್ರಿಲ್ ವರೆಗೆ. ೧೦-೧೫ ಮೀಟರ್ ಎತ್ತರದ ಮರಗಳ ಮೇಲೆ ಕಡ್ಡಿಗಳ ದೊಡ್ಡ ಗೂಡು, ಬಿಳಿಯ ಒಂದೇ ಒಂದು ಮೊಟ್ಟೆ