ಬಣ್ಣದ ಸ್ನೈಪ್ (PAINTED SNIPE)
ರೊಸ್ಟ್ರೆಟುಲಾ ಬೆಂಗಾಲೆನ್ ಸಿಸ್ (Rostratula benghalensis)

213_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಕೆರೆ, ಹಳ್ಳ, ಕೊಳ, ಜೌಗು ಪ್ರದೇಶ, ಭತ್ತದ ಗದ್ದೆ ಇತ್ಯಾದಿಗಳಲ್ಲಿ.

ಲಕ್ಷಣಗಳು : ಸುಂದರ ವರ್ಣ ವಿನ್ಯಾಸದ ಸಾಮಾನ್ಯ ಹಕ್ಕಿ. ಗಂಡು ಹೆಚ್ಚು ಆಕರ್ಷಣೀಯ. ಮೇಲ್ಭಾಗ ಲೋಹದ ಆಲಿವ್ ಹಸಿರು ಜೊತೆಗೆ ಕಪ್ಪು ಗೆರೆಗಳು ಕೆಳಭಾಗದಲ್ಲಿ ಬಹುತೇಕ ಕಂದು ಮತ್ತು ಬಿಳಿ ಗರಿಗಳು ಎದೆ ಮತ್ತು ಕತ್ತು ನಡುವೆ ಕಪ್ಪು, ಹಾರದಂತಹ ಪಟ್ಟಿಮಾಸಲು ಹಳದಿ ಬಣ್ಣದ ಉದ್ದನೆಯ, ತುದಿ ಬಾಗಿದ ಕೊಕ್ಕು.

ಆಹಾರ : ಭತ್ತದ ಕಾಳು, ತರಕಾರಿ, ಕೀಟ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ವರ್ಷವಿಡೀ, ಕೆರೆ-ಕುಂಟೆಗಳ ದಡದಲ್ಲಿ ಅಥವಾ ಭತ್ತದ ಗದ್ದೆಯ ಬಳಿ ಹಾಸಿಗೆಯಂತಹ ಗೂಡು. ೩-೪ ಹಳದಿ ಕಲ್ಲು ಬಣ್ಣದ ಮೊಟ್ಟೆಗಳು.

—- 

ಕಲ್ಲು ಕೊಂಬೆ (STONE CURLEW
ಬರ‍್ಹಿನಸ್ ಓಡಿಕ್ನೆಮಸ್ (Burhinus oedicnemus)

214_69_PP_KUH

ಗಾತ್ರ : ೪೦-೪೧ ಸೆಂ.ಮೀ.

ಆವಾಸ : ಕುರುಚಲು ಕಾಡು, ಗುಡ್ಡಬೆಟ್ಟ ಗದ್ದೆ ಮಾವಿನ ತೋಪು ಇತ್ಯಾದಿ.

ಲಕ್ಷಣಗಳು : ಗಂಡು ಹೆಣ್ಣುಗಳು ಒಂದೇ ತೆರನಾಗಿವೆ. ಮರಳು ಕಂದು ಬಣ್ಣದ, ಗೆರೆಗಳುಳ್ಳ, ದೊಡ್ಡ ತಲೆಯ, ಬಲಿಷ್ಟ ಕೊಕ್ಕಿನ ನೆಲಪಕ್ಷಿ, ದೊಡ್ಡ ಹಳದಿ ಕಣ್ಣುಗಳು, ಹಳದಿ ಕಾಲುಗಳು, ಎದೆ ಮತ್ತು ಕುತ್ತಿಗೆ ಮೇಲೆ ಕಂದು ಬಣ್ಣದ ರೇಖೆಗಳು.

ಆಹಾರ : ಕೀಟ, ಹುಳು ಮತ್ತು ಚಿಕ್ಕ ಸರೀಸೃಪಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಅಗಷ್ಟವರೆಗೆ. ೨ ಮಾಸಲು, ಆಲಿವ್ ಹಸಿರು ಮೊಟ್ಟೆಗಳು. ಅವುಗಳ ಮೇಲೆ ಕಂದು ಬಣ್ಣದ ಗುರುತುಗಳಿವೆ. ನಿರ್ದಿಷ್ಟ ಗೂಡಿಲ್ಲ, ನೆಲದ ಮೇಲೆ ಕಲ್ಲುಚೂರುಗಳ ನಡುವೆ ಮೊಟ್ಟೆಗಳನ್ನಿಡುವುದು.

 —-

ಪ್ರಾಟಿನ್ ಕೋಲ್ (PRATINCOLE)
ಗ್ಲಾರಿಯೋಲಾ ಲ್ಯಾಕ್ಟಿಯ (Glareola lactea)

215_69_PP_KUH

ಗಾತ್ರ : ೧೭ ಸೆಂ.ಮೀ.

ಆವಾಸ : ಬತ್ತದ ಗದ್ದೆ, ಬಯಲು ಪ್ರದೇಶಗಳಲ್ಲಿ ಹಿಂಡು ಹಿಂಡಾಗಿ ಹಗಲೀಡಿ ತೂಕಡಿಸುತ್ತವೆ.

ಲಕ್ಷಣಗಳು : ಗಂಡು ಹೆಣ್ಣುಗಳು ಒಂದೇ ತೆರನಾಗಿವೆ. ಗಿಡ್ಡ ಕೊಕ್ಕಿನ ಮಾಸಲು ಬೂದು ಬಣ್ಣದ ಚಿಕ್ಕ ಹಕ್ಕಿ. ನೆತ್ತಿ ತಿಳಿ ಬೂದು; ಎದೆ ತಿಳಿಕಂದು; ಹೊಟ್ಟೆ ಬಿಳಿ. ಕಣ್ಣಿನಿಂದ ಕೊಕ್ಕಿನ ಬುಡದವರೆಗೆ ಕಪ್ಪು. ಎಳೆ. ಬಿಳಿ, ಚೌಕಾಕಾರದ ಬಾಲ. ರೆಕ್ಕೆಯ ತುದಿ ಕಪ್ಪು. ಹಗಲು ನಿದ್ರೆ. ಮುಸ್ಸಂಜೆ ವೇಳೆ ಚಟುವಟಿಕೆ.

ಆಹಾರ : ಬಹುತೇಕ ಕೀಟ ತಿನ್ನುತ್ತವೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರಿಲ್‌ವರೆಗೆ. ನದಿ ದಂಡೆಯಲ್ಲಿ ನೆಲದ ಮೇಲೆ ತಟ್ಟಿಯಂಥ ಗುಂಡಿಯಲ್ಲಿ ೨-೩ ತಿಳಿ ಬೂದು ಮೊಟ್ಟೆಗಳು. ಕಂದು ವಿನ್ಯಾಸ ಮೊಟ್ಟೆಗಳನ್ನು ಮರೆಮಾಡುತ್ತದೆ. ಸ್ಥಳೀಯವಾಗಿ ವಲಸೆ ಹೋಗುತ್ತವೆ.

 —-

ಕಂದು ತಲೆಯ ಕಡಲು ಕಾಗೆ (BROWNHEADED GULL)
ಲಾರಸ್ ಬ್ರುನ್ನಿಸಿಫಾಲಸ್ (Larus brunnicephalus)

216_69_PP_KUH

ಗಾತ್ರ : ೪೨ ಸೆಂ.ಮೀ.

ಆವಾಸ : ಸಮುದ್ರ ತೀರ, ಸಮುದ್ರ ಮತ್ತು ಕೆಲವೊಮ್ಮೆ ಒಳನಾಡ ಜಲ ಪ್ರದೇಶ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ತಲೆ ಕಂದುಬಣ್ಣ. ಉಳಿದಂತೆ ಮೇಲ್ಭಾಗ ಬೂದು, ಹೊಟ್ಟೆ ಭಾಗ ಬಿಳಿ. ಚಳಿಗಾಲದಲ್ಲಿ ತಲೆ, ಬೂದು-ಬಿಳಿ. ರೆಕ್ಕೆಯ ತುದಿಯ ಕಪ್ಪು ಭಾಗದಲ್ಲಿ ಬಿಳಿ ‘ಕನ್ನಡಿ’. ಸಮುದ್ರ ತೀರದಲ್ಲಿ ಗುಂಪಾಗಿ ಕಂಡುಬರತ್ತವೆ.

ಆಹಾರ : ಮೀನು, ಕೀಟ, ಹುಳು, ಏಡಿ ಮತ್ತು ಕೆಲಮೊಮ್ಮೆ ಚಿಗುರು ಕಾಂಡ

ಸಂತಾನಾಭಿವೃದ್ಧಿ : ಟಿಬೇಟು ಮತ್ತು ಲಡಾಕಗಳಲ್ಲಿ. ಚಲಿಗಾಲದಲ್ಲಿ ನಮ್ಮ ಕಡಲ ತೀರಕ್ಕೆ ವಲಸೆ ಬರುತ್ತವೆ.

—-

ಹೊಳೆ ಟರ್ನ್ (RIVER TERN)
ಸ್ಟೆರ್ನಾ ಆರೆಂಸಿಯಾ (Sterna aurantia)

217_69_PP_KUH

ಗಾತ್ರ : ೪೦ ಸೆಂ.ಮೀ.

ಆವಾಸ : ಸಿಹಿನೀರಿನ ಕೊಳ, ಕೆರೆ, ಸರೋವರ, ಜಲಾಶಯ ಇತ್ಯಾದಿ

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹಣೆ ಮತ್ತು ತಲೆ ಕಡುಕಪ್ಪು ಕಣ್ಣಿನ ಕೆಳಗೆ ಬಿಳಿ ತೇಪೆ. ರೆಕ್ಕೆ ಮತ್ತು ಬಾಲ ಕಡು ಬೂದು. ಚಳಿಗಾಲದಲ್ಲಿ ಬೂದು ಮತ್ತು ಬಿಳಿಹಕ್ಕಿ. ಮುಂತಲೆ ಬಿಳಿ, ಹಳದಿ ಕೊಕ್ಕು, ಗಿಡ್ಡ, ಕೆಂಪು ಕಾಲು.

ಆಹಾರ : ಮೀನು, ಸೀಗಡಿ, ಏಡಿ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ಮಾರ್ಚಿಯಿಂದ-ಮೇ ವರೆಗೆ, ನೆಲದ ಮೇಲೆ ೩ ಮೊಟ್ಟೆಗಳು. ಕಂದು ಬ್ಣದ ರಚನೆಗಳಿರುವ ತಿಳಿ ನೀಲಿಬಣ್ಣ.