ಕೆನ್ನವಿಲು (GREAT INDIAN BUSTARD)
ಕೊರಿಯೊಟಿಸ್ ನೈಗ್ರಿಸೆಪ್ಸ್ (Choriotis nigriceps)

183_69_PP_KUH

ಗಾತ್ರ : ೯೨-೧೨೦ ಸೆಂ.ಮೀ.

ಆವಾಸ : ಹುಲ್ಲುಗಾವಲು ಮತ್ತು ಕುರುಚಲು ಕಾಡು. ಕರ್ನಾಟಕದ ರಾಣೇಬೆನ್ನೂರಿನ ವನ್ಯಧಾಮದಲ್ಲಿ ಕಾಣಬಹುದು. ಅಪರೂಪದ ವಿನಾಶದ ಭಯದಲ್ಲಿ ಬದುಕುತ್ತಿರುವ ದೊಡ್ಡ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣಿಗಿಂತ ತುಸು ದೊಡ್ಡದು. ನೆತ್ತಿ ಕಪ್ಪು, ಚಿಕ್ಕ ಜುಟ್ಟು; ಮಾಸಲು-ಹೊಯಿಗೆ ಬಣ್ಣದ ಮೇಲ್ಭಾಗ ; ಕೆಳಭಾಗ ಬಿಳಿ. ಎದೆಯ ಮೇಲೆ ಕಪ್ಪು ಅಡ್ಡಪಟ್ಟಿ ಹೆಣ್ಣು ಹಕ್ಕಿಯಲ್ಲಿ ಎದೆಯ ಪಟ್ಟಿ ತುಂಡಾಗಿದೆ. ಉಳಿದಂತೆ ಗಂಡು-ಹೆಣ್ಣುಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ.

ಆಹಾರ : ವಿವಿಧ ಸಸ್ಯಗಳ ಚಿಗುರು, ಕಾಳು-ಬೇಳೆ, ಕೀಟಗಳು, ಹಲ್ಲಿ ಮತ್ತು ಮೃದ್ವಂಗಿಗಳು.

ಸಂತಾನಾಭಿವೃದ್ಧಿ : ಮುಖ್ಯವಾಗಿ ಮಾರ್ಚನಿಂದ-ಸೆಪ್ಟೆಂಬರ‍್ವರೆಗೆ. ಕಡು ಕಂದು ರಚನೆಯ ತಿಳಿ ಆಲಿವ್ ಕಂದು ಬಣ್ಣದ ಒಂದು ಮೊಟ್ಟೆ ಅಪರೂಪವಾಗಿ ಎರಡು ಮೊಟ್ಟೆಗಳನ್ನು ಪೊದೆಯ ಬುಡದಲ್ಲಿ ಇಡುತ್ತವೆ.

—- 

ಉದ್ದ ಬಾಲದ ಜಕಾನಾ (PHEASANTTAILED JACANA)
ಹೈಡ್ರೊಪೇಸಿಯನಸ್ ಕಿರುರ್ಗಸ್ (Hydrophasianus chirurgus)

184_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ತಾವರೆ, ಕೋಳ, ಮೊದಲಾದ ಅಗಲ ಎಲೆಗಳಿರುವ ಕೊಳ, ಕೆರೆಗಳಲ್ಲಿ ವಾಸ. ಸ್ಥಳೀಯ ನೀರ್ನಡಿಗೆ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ಸಂತಾನಾಭಿವೃದ್ಧಿಯ ಕಾಲದಲ್ಲಿ ೧೪ ಸೆಂ.ಮೀ. ಉದ್ದದ ಕಡು ಕಂದು ಬಣ್ಣದ ಬಾಲ ವಿಶೇಷ ಲಕ್ಷಣ. ಚಾಕೋಲೇಟ್ ಮತ್ತು ಬಿಳಿಬಣ್ಣದ ಸುಂದರ ಹಕ್ಕಿ. ತಲೆ, ಕುತ್ತಿಗೆ ಅಚ್ಚ ಬಿಳುಪು. ರೆಕ್ಕೆ ಮೇಲಿನ ಬಿಳಿ ಎದ್ದು ಕಾಣುತ್ತದೆ. ಜೇಡದ ಕಾಲಿನಂತಹ ಉದ್ದನೆಯ ಕಾಲುಗಳಿರುವುದು ಪ್ರಮುಖ ಲಕ್ಷಣವಾಗಿದೆ.

ಆಹಾರ : ಕಾಳು, ಬೇಳೇ ಬೇರು, ಜಲಸಸ್ಯ, ಕೀಟ ಮತ್ತು ಮೃದ್ವಂಗಿಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಜೂನ್‌ನಿಂದ ಸೆಪ್ಟೆಂಬರ‍್ವರೆಗಿನ ಸಮಯ. ತೇಲುವ ಎಲೆ, ಹುಲ್ಲು, ಜೊಂಡುಗಳ ತೇಲುವ ಗೂಡು ಕಟ್ಟುತ್ತವೆ. ಕೆಂಗಂದು ಬಣ್ಣದ ಯಾವುದೇ ಗುರುತುಗಳಿಲ್ಲದ ನಾಲ್ಕು ಮೊಟ್ಟೆಗಳನ್ನಿಡುತ್ತವೆ.

—- 

ಹಿತ್ತಾಳೆ ರೆಕ್ಕೆಯ ಜಕಾನಾ (BRONZEWINGED JACANA)
ಮೆಟಪೋಡಿಯಸ್ ಇಂಡಿಕಸ್ (Metopidius indicus)

185_69_PP_KUH

ಗಾತ್ರ : ೨೮-೩೨ ಸೆಂ.ಮೀ.

ಆವಾಸ : ಜಲ ಸಸ್ಯಗಳಿಂದ ತುಂಬಿದ ಕೆರೆ, ಕೊಳ ಇತ್ಯಾದಿ. ನೀರ್ನಡಿಗೆಯ ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೆಣ್ಣು ಗಾತ್ರದಲ್ಲಿ ಸ್ವಲ್ಪ ದೊಡ್ಡದಿರಬಹುದು. ಹೊಳೆಯುವ ಕಪ್ಪು ತಲೆ, ಕುತ್ತಿಗೆ ಮತ್ತು ಎದೆ. ರೆಕ್ಕೆಗಳು ಮತ್ತು ಬೆನ್ನುಹಿತ್ತಾಳೆ ಹಸಿರು ಬಣ್ಣದಿಂದ ಕೂಡಿದೆ. ಕಣ್ಣುಗಳ ಹಿಂದೆ ಅಗಲದ ಬಿಳಿ ಪಟ್ಟಿ ಇರುತ್ತದೆ. ಜೇಡನಂತಹ, ನೀರ್ನಡಿಗೆಗೆ ಅನುಕೂಲವಾದ ಕಾಲುಗಳಿರುತ್ತವೆ.

ಆಹಾರ : ಗಡ್ಡೆ, ಜಲಸಸ್ಯಗಳ ಬೀಜ, ಕೆಲವೊಮ್ಮೆ ಕೀಟ, ಹುಳುಗಳನ್ನು ಸೇವಿಸುವುದುಂಟು.

ಸಂತಾನಾಭಿವೃದ್ಧಿ : ಜೂನಿನಿಂದ-ಸೆಪ್ಟೆಂಬರ ವರೆಗಿನ ಸಮಯ. ಅರೆಮುಳುಗಿದ ಸಸ್ಯಗಳ ನಡುವೆ ಗೂಡು. ನಾಲ್ಕು ಚಂದದ ಹಿತ್ತಾಳೆ. ಕಂದು ಬಣ್ಣದ ಮೊಟ್ಟೆಗಳನ್ನಿಡುತ್ತವೆ.

—- 

ಸಿಂಪಿ ಹಿಡುಕ (OYSTER CATCHER)
ಹಿಮೆಟೋಪಸ್ ಓಸ್ಟ್ರೊಲಿಗಸ್ (Haematopus ostroligus)

186_69_PP_KUH

ಗಾತ್ರ : ೪೦-೪೬ ಸೆಂ.ಮೀ.

ಆವಾಸ : ಕಪ್ಪೆ ಚಿಪ್ಪು (Pysta)ಇರುವ ಸಮುದ್ರ ತೀರ. ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಪ್ಪು ಬಿಳುಪು ಬಣ್ಣದ ಎದ್ದು ಕಾಣುವ ಹಕ್ಕಿ. ರೆಕ್ಕೆಯ ಮೇಲೆ ಬಿಳಿಯ ಪಟ್ಟಿ ಇರುತ್ತದೆ. ಕೆಂಪಾದ ಬಲಿಷ್ಟ ಕೊಕ್ಕನ್ನು ಹೊಂದಿದೆ. ಗುಲಾಬಿ ಕಾಲುಗಳು. ಎದೆ, ತಲೆ ಮತ್ತು ಬಾಲ ಕಪ್ಪಾಗಿದೆ.

ಆಹಾರ : ಸಿಂಪಿ ಮತ್ತಿತರ ಮೃದ್ವಂಗಿಗಳು. ಚಿಪ್ಪನ್ನು ಬಿಡಿಸಲು ಅನುಕೂಲಕರವಾದ ಕೊಕ್ಕಿರುವುದು ಗಮನಾರ್ಹ.

ಸಂತಾನಾಭಿವೃದ್ಧಿ : ನಾಡಿನ ಹೊರಗೆ ಚಳಿಗಾಲದ ಸಮಯ ಸಮುದ್ರ ತೀರಕ್ಕೆ ವಲಸೆ ಬರುವ ಅಪರೂಪದ ಹಕ್ಕಿ.

—- 

ಕೆಂಪು ಜೋಲಿಯ ತಿತ್ತಿರಿ (REDWATTLED LAPWING)
ವನೆಲ್ಲಸ್ ಇಂಡಿಕಸ್ (Vanellus indicus)

187_69_PP_KUH

ಗಾತ್ರ : ೩೨-೩೫ ಸೆಂ.ಮೀ.

ಆವಾಸ : ಉತ್ತು ಬಿಟ್ಟ ಭತ್ತದ ಗದ್ದೆ, ಗುಡ್ಡ ಪ್ರದೇಶ, ಕೆರೆಗಳ ಹತ್ತಿರದ ದಡ ಇತ್ಯಾದಿ. ಇದು ಸ್ಥಳಿಯ ಪ್ರಭೇದ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಪ್ಪು ತಲೆ, ಎದೆ ಮತ್ತು ಕುತ್ತಿಗೆ. ಹಿತ್ತಾಳೆ ಕಂದು ಬಣ್ಣದ ಮೇಲ್ಭಾಗ, ಬಿಳಿಯಾದ ಕೆಳಭಾಗ, ಕೊಕ್ಕಿನ ಬುಡದಲ್ಲಿ, ಮುಖದ ಮೇಲೆ ಕೆಂಪು ಜೋಲಿಗಳಿರುವುದು ಪ್ರಮುಖ ಲಕ್ಷಣ.
ಆಹಾರ : ಹುಳು, ಕೀಟ,ಮೃದ್ವಂಗಿ ಇತ್ಯಾದಿಗಳನ್ನು ಸೇವಿಸುತ್ತವೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಆಗಸ್ಟವರೆಗಿನ ಸಮಯ. ನೆಲದ ಮೇಲೆ ಚಿಕ್ಕ ಪುಟ್ಟ ಕಲ್ಲುಗಳ ನಡುವೆ ನಾಲ್ಕು ಕಲ್ಲಿನ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ವಿಶೇಷವಾದ ಗೂಡು ನಿರ್ಮಾಣ ಇಲ್ಲ.