ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ (Bagridae)
ಉದಾ : ಉದ್ದ ಮೀಸೆ ಮಾರ್ಜಾಲ ಮೀನು (Long- whiskered cat fish)
ಶಾಸ್ತ್ರೀಯನಾಮ : ಮಿಸ್ಟಸ್ ಗುಲಿಯೊ (Mystus gulio)
ಕರ್ನಾಟಕದಲ್ಲಿ ಇದನ್ನು ಸಿಂಗಾಟಿ ಎಂದು ಕರೆಯುತ್ತಾರೆ.

028_69_PP_KUH

ವಿತರಣೆ : ಭಾರತದ ಉಪಖಂಡ ಅಳವೆಗಳು ಮತ್ತು ಉಬ್ಬರದ ನೀರು ಪ್ರವೇಶಿಸುವ ನದಿಗಳು, ಕೆಲವೊಮ್ಮೆ ಸಿಹಿ ನೀರು ವಲಯಕ್ಕೂ ಏರಿ ಬರಬಹುದು, ಕಡಲನ್ನು ಪ್ರವೇಶಿಸಬಹುದು.

ಗಾತ್ರ : ೪೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ನೀಳವಾದ, ಚಪ್ಪಟೆಯಾದ ದೇಹ, ತಲೆ ತಟ್ಟಿದಂತಿದೆ. ತಲೆಯ ಮೇಲ್ಭಾಗ ಒರಟು ಮತ್ತು ಕಣೀಕೃತವಾಗಿದೆ. ತಲೆಯ ಮೇಲೆ ಉದ್ದನೆಯ ತೋಡು ಜಾಡಿದೆ. ಮೋಟು ತಲೆ, ಎದ್ದು ಕಾಣದ ಸಣ್ಣ ಕಣ್ಣುಗಳು ಬಾಯಿ ತುದಿಯಲ್ಲಿದೆ. ದವಡೆಗಳಲ್ಲಿ ಮೊಳಕೆ ಹಲ್ಲು ಪಟ್ಟಿಗಳಿವೆ. ಕಿರಿದಾದ ವೋಮರಿನ ಹಲ್ಲು ಜಾಡು ಮುಂದುವರಿದಿದೆ ಮತ್ತು ಆರೆ ಚಂದ್ರಾಕಾರವಾಗಿದೆ. ನಾಲ್ಕು ಜೊತೆ ಬಾರ್ಬೆಲ್ ಗಳಿವೆ. ಮ್ಯಾಕ್ಸಿಲರಿ ಜೊತೆ ಸೊಂಟದ ಈಜುರೆಕ್ಕೆಗಳವರೆಗೆ ಹರಡುತ್ತವೆ. ಬೆನ್ನಿನ ಮುಳ್ಳು ಸದೃಢ ಮತ್ತು ಅದರ ಒಳ ಅಂಚು ಗರಗಸದಂತಿದೆ. ಕಡ್ಡಿಗಳಿರುವ ಬೆನ್ನು ಈಜುರೆಕ್ಕೆ ಅದರ ನೇರದಿಂದ ಹಿಂದಿರುವ ಸಣ್ಣ ಅಡಿಪೋಸ್‌(ಕೊಬ್ಬಿದ) ಈಜುರೆಕ್ಕೆ, ಬಾಲದ ಈಜುರೆಕ್ಕೆ ಕವಲೊಡದಿದೆ. ೯ ಬ್ರಾಂಕಿಯೊಸ್ಟೀಗಲ್‌ಕಡ್ಡಿಗಳಿವೆ.

ತಲೆ ಮತ್ತು ಬೆನ್ನು ಭಾಗ ನೀಲಕಂದು, ತಳಭಾಗ ಮಾಸಲು ಬಿಳುಪು. ಹಿಂದಿನ ಜೊತೆ ಬಾರ್ಬೆಲ್‌ಗಳು ಅದರಲ್ಲಿಯೂ ಹಿಂಭಾಗದ ಅರ್ಧ ತುದಿ ಕಪ್ಪು.

ಮಂದೆಗಳಲ್ಲಿ ವಾಸಿಸುವ ಈ ಮೀನು ಭಾಗಶಃ ಕಡಲು ನೀರು ವಾಸಿ. ಇದು ಕೇರಳದ ಹಿನ್ನೀರಿನಲ್ಲಿ ಬಹಳವಾಗಿ ದೊರಕುತ್ತದೆ.

—- 

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ
ಉದಾ : ಗಂಗಾ ನದಿಯ ಮಿಸ್ಟಸ್
‌(Gangetic mystus)
ಶಾಸ್ತ್ರೀಯ ನಾಮ : ಮಿಸ್ಟಸ್
ಕೆವೇಸಿಯಸ್‌(Mystus cavasius)
ಕರ್ನಾಟಕದಲ್ಲಿ ಇದನ್ನು ನಾಯಿಕರ್ಲೆ ಎಂದು ಕರೆಯುತ್ತಾರೆ.

029_69_PP_KUH

ವಿತರಣೆ : ಭಾರತದ ಉಪಖಂಡದಲ್ಲಿ ಸಿಹಿನೀರು ಮತ್ತು ಉಬ್ಬರ ನೀರುಗಳಲ್ಲಿ, ಕೊಳ, ಕೆರೆ, ಗುಂಡಿಗಳು ಮತ್ತು ಪ್ರವಾಹದ ನೀರುಗಳಲ್ಲಿ ನೀರು ನಿಂತ ಗದ್ದೆಗಳಲ್ಲಿ ಕಂಡು ಬರುತ್ತದೆ.

ಗಾತ್ರ : ೪೦ ಸೆಂ. ಮೀ. ಉದ್ದ ಬೆಳೆಯುತ್ತದೆ. ೧೦ ಕೆ.ಜಿ ತೂಗುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ನೀಳವಾದ ತಟ್ಟಿದಂತೆ ಚಪ್ಪಟೆಯಾದ ದೇಹ. ಶಂಕುವಿನಾಕಾರದ ತಲೆ, ತುದಿಯಲ್ಲಿರುವ ಬಾಯಿ ಎರಡು ದವಡೆಗಳಲ್ಲಿ ಮೊಳಕೆಯಾಕಾರದ ಹಲ್ಲು ಪಟ್ಟಿಗಳು. ಆರೆ ಚಂದ್ರಾಕಾರವಾಗಿ ವ್ಯವಸ್ಥಿತವಾದ ವೋಮರೈನ್‌ಮೊಳಕೆ ಹಲ್ಲುಗಳು ಸಾಧಾರಣಕ್ಕಿಂತ ದೊಡ್ಡದಾದ ಕಣ್ಣುಗಳು ನಾಲ್ಕು ಜೊತೆ ಬಾರ್ಬೆಲ್‌ಗಳಿವೆ. ಮ್ಯಾಕ್ಸಿಲರಿ ಜೊತೆ ಬಾರ್ಬೆಲ್‌ಗಳು ಬಾಲದ ಈಜುರೆಕ್ಕೆಯ ಬುಡಕ್ಕು ಹಿಂದಕ್ಕೆ ವಿಸ್ತರಿಸುವಷ್ಟು ಉದ್ದ. ಮರಿಗಳಲ್ಲಿ ಗುದ ಈಜುರೆಕ್ಕೆಯವರೆಗೆ ಮಾತ್ರ ನೀಡುವಷ್ಟು ಉದ್ದ ಇರುತ್ತವೆ. ದುರ್ಬಲವಾದ ಬೆನ್ನಿನ ಮುಳ್ಳು, ಕೆಲವೊಮ್ಮೆ ಗರಗಸದಂತಿರುವ ಅಂಚಿರಬಹುದು. ದೊಡ್ಡದಾದ ಅಡಿಪೋಸ್‌ಈಜುರೆಕ್ಕೆ ಬೆನ್ನಿನ ಮುಳ್ಳಿನ ಸಮಕ್ಕೆ ಇರುತ್ತದೆ.ಬಾಲದ ಈಜುರೆಕ್ಕೆ ಆಳವಾಗಿ ಕವಲೊಡೆದಿದೆ. ಬಾಲದ ತೊಟ್ಟು ಈಜುರೆಕ್ಕೆ ಉದ್ದದ ಕಾಲು ಭಾಗವಿದೆ. ಬ್ರಾಂಕಿಯೊಸ್ಟಿಗಲ್ (ಮುಳ್ಳು) ಕಡ್ಡಿಗಳಿವೆ.

ದೇಹ ಬೂದು ಬಣ್ಣ, ನಡುಪಕ್ಕೆಯ ಉದ್ದಕೂ ಹರಡಿದ ಉದ್ದ ಪಟ್ಟಿ ಇದ್ದು ತಳಭಾಗದ ಮಾಸಲು ಬಿಳಿ ಬಣ್ಣದಿಂದಾಗಿ ಎದ್ದು ಕಾಣುತ್ತದೆ. ಬೆನ್ನಿನ ಮತ್ತು ಬಾಲದ ಈಜುರೆಕ್ಕೆಗಳು ಮಂದಬಣ್ಣ ಜೋಡಿ ಈಜುರೆಕ್ಕೆಗಳು ಮತ್ತು ಗುದ ಈಜುರೆಕ್ಕೆ ಮಾಸಲು ಬಿಳುಪು.

ಭಾರತದಲ್ಲಿ ಇದೊಂದು ಸಾಮಾನ್ಯ ಆಹಾರ ಮೀನು. ಇದರ ಭುಜದ ಮುಳ್ಳು ಚುಚ್ಚಿದರೆ ನೋವಾಗುತ್ತದೆ.

—- 

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ
ಉದಾ : ದೊಡ್ಡ ನದಿ ಮೀಸೆ ಮೀನು/ ಸಿಗಾರ್ಹಿ/ಟೆಂಗರ (Singhari)
ಸ್ತಳಿಯ ಹೆಸರುಗಳು : (ಶೇಡೆ, ಆಡ್ತು ಬಾಳೆಸುರಗೆ ಮೀನು, ಹಾಲತ್ತಿ ಮೀನು)
ಶಾಸ್ತ್ರೀಯ ನಾಮ : ಅಯೊರಿಕ್ತಿಸ್ ಸಿಂಗ್ಹಾಲ (Aorichthys seenghala)

030_69_PP_KUH

ವಿತರಣೆ : ಉತ್ತರದ ಪ್ರಧಾನ ನದಿಗಳಾದ ಗಂಗಾ, ಯಮುನಾ ಮತ್ತು ದಕ್ಷಿಣ ಭಾರತದ ಗೋದವಾರಿ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತದೆ. ನದಿಗಳು, ನಾಲೆಗಳು, ನೀರು ನಿಂತಗುಂಡಿಗಳು, ನೀರು ಹಾಯಿಸಿದ ಗದ್ದೆಗಳು ಇತ್ಯಾದಿ ವಸತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಗಾತ್ರ : ಸುಮಾರು ೧.೫ ಸೆಂ. ಮೀಟರ್ ಉದ್ದದವರೆಗೆ ಬೆಳೆಯುತ್ತವಾದರೂ ಸಾಮಾನ್ಯ ಉದ್ದ ೪೦ ಸೆ. ಮೀ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಚಪ್ಪಟೆಯಾದ ಉದ್ದ ದೇಹ. ಅಗಲವಾದ, ಚಪ್ಪಟೆಯಾದ ಮೂತಿ, ಬಾಯಿ ಮೂತಿಯ ತುದಿಯ ತುಸು ಹಿಂದಿದೆ. ನಾಲ್ಕು ಜೊತೆ ದಾಡಿ ಮೀಸೆಗಳಿವೆ. ಕೆಲವು ಮೀಸೆಗಳು ಸೊಂಟದ ಈಜುರೆಕ್ಕೆ ಯವರೆಗೂ ವಿಸ್ತರಿಸುವಷ್ಟು ಉದ್ದವಿದೆ. ಬೆನ್ನಿನ ಈಜು ರೆಕ್ಕೆಯಲ್ಲಿ ಮುಳ್ಳುಗಳಿದ್ದು ಅವುಗಳಲ್ಲಿ ಮುಂದಿನ ಮುಳ್ಳಿನ ಹಿಂದಿನ ಅಂಚು ಸರಳ ಗರಗಸಾಕಾರವಾಗಿದೆ.

ಬೆನ್ನುಬಾಗ ಕಂದು ಮಿಶ್ರಿತ ಬೂದು ಬಣ್ಣ. ಪಕ್ಕೆಗಳು ಮತ್ತು ಹೊಟ್ಟೆಯ ಭಾಗ ಬೆಳ್ಳಿ ಬಿಳುಪು. ಬೆನ್ನಿನ ಈಜು ರೆಕ್ಕೆಯ ಮೇಲೆ ಕಪ್ಪು ಗುರುತುಗಳಿವೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಮಳೆಗಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಅಂಡಜ.

ಸ್ವಭಾವ : ಸುಲಭವಾಗಿ ಗಾಳದಿಂದ ಹಿಡಿಯಬಹುದು. ದೈತ್ಯ ಗಾತ್ರದ ಮೀಸೆ ಮೀನುಗಳಲ್ಲಿ ಅತಿ ಮುಖ್ಯವಾದ ಮೀನು. ಗಾಳದಲ್ಲಿ ಸಿಕ್ಕಿಬಿದ್ದಾಗ ಬಿಡಿಸಿಕೊಳ್ಳಲು ಹೋರಾಡುತ್ತದೆ. ಇದರ ಮುಖ್ಯ ಆಹಾರ ಮೀನು

—- 

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ (Bagridae)
ಉದಾ : ಬಿಳಿಸುರಗಿ ಮೀನು (Giant – river catfish)
ಶಾಸ್ತ್ರೀಯನಾಮ : ಅಯೊರಿಕ್ತಿಸ್ ಸೀಂಘಾಲ (Aorychthys seenghala)

031_69_PP_KUH

ವಿತರಣೆ : ನಾಲೆಗಳು, ಗುಂಡಿಗಳು ಮತ್ತು ನೀರುನಿಂತ ಗದ್ದೆಗಳಲ್ಲಿ ವಾಸ.

ಗಾತ್ರ : ೧.೫ ಮೀ. ಉದ್ದ ಬೆಳೆಯಬಹುದಾದರೂ ಸಾಮನ್ಯ ಗಾತ್ರ ೪೦ ಸೆಂ ಮೀ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ದೇಹ ಚಪ್ಪಟೆಯಾಗಿ, ನೀಳವಾಗಿರುವ ಬೆಡಗಿನ ಮೀನು. ಮೂತಿ ಅಗಲವಾಗಿ ಸ್ಪಾತುಲದಂತಿದೆ. ಅಗಲವಾದ ಬಾಯಿ ಮುಂದಿನ ತುದಿಯ ಹಿಂಭಾಗದಲ್ಲಿದೆ. ದೇಹದ ಉದ್ದದ ಮೂರನೆ ಒಂದು ಭಾಗದಷ್ಟು ಅಗಲವಾಗಿದೆ. ನಾಲ್ಕು ಜೊತೆ ದಾಡಿ ಮೀಸೆಗಳಿವೆ. ಅವು ಹಿಂದೆ ಸೊಂಟದ ಈಜುರೆಕ್ಕೆಗಳವರೆಗೆ ಅಥವ ಅವಕ್ಕು ಹಿಂದೆ ಗುದ ಈಜುರೆಕ್ಕೆಯವರೆಗೆ ವಿಸ್ತರಿಸಬಹುದು. ಬೆನ್ನು ಈಜುರೆಕ್ಕೆಯ ಮುಖ್ಯ ಮುಳ್ಳಿನ ಹಿಂದಿನ ಅಂಚು ಮೊಂಡು ಗರಗಸದಂತಿದೆ. ಪಶ್ಚ ಬೆನ್ನು ಈಜುರೆಕ್ಕೆಯ ಬುಡ ಅಗ್ರ ಬೆನ್ನು ಈಜುರೆಕ್ಕೆಯಷ್ಟೇ ಉದ್ದವಿದೆ.

ಜೀವಂತ ಮೀನಿನ ಮೇಲ್ಭಾಗ ಕಂದು ಮಿಶ್ರೀತ ಬೂದು, ಪಕ್ಕೆಗಳಲ್ಲಿ ಮತ್ತು ಹೊಟ್ಟೆಭಾಗ ಬೆಳ್ಳಿ ಬಿಳುಪು. ಪಶ್ಚ ಬೆನ್ನು ಈಜುರೆಕ್ಕೆಯ ಮೇಲೆ ಸ್ಪಷ್ಟವಾಗಿ ಕಪ್ಪು ಗುರುತು ಇದೆ.

ಸಂತಾನಾಭಿವೃದ್ಧಿ : ಮುಂಗಾರು ಆರಂಭವಾಗುವ ಮುನ್ನ ಸಂತಾನೋತ್ಪತ್ತಿ ನಡೆಸುತ್ತದೆ.

ಸ್ವಭಾವ : ಭಾತರದ ದೈತ್ಯ ಮಾರ್ಜಾಲ ಮೀನುಗಳಲ್ಲಿ ಒಂದು ದೊಡ್ಡ ನದಿಗಳಿಂದ ಇವನ್ನು ಹೆಚ್ಚಾಗಿ ಹಿಡಿಯುತ್ತಾರೆ. ಹುಳುಗಳ ಗಾಳಕ್ಕೆ ಸಿಕ್ಕಿದರೂ ಸತ್ತ ಬೇಟೆ ಹುಳುವಿಗೂ ಬೀಳುತ್ತದೆ. ಚೆನ್ನಾಗಿ ಕಾಡುತ್ತದೆ ಮತ್ತು ಹಿಡಿಯುವವರಿಗೆ ಉತ್ತಮ ಆಟ ಒದಗಿಸುತ್ತದೆ.

—- 

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ (Bagridae)
ಉದಾ : ಸುರಗಿ ಮೀನು, ತುರಂಗಿ ಮೀನು (Long whiskered fish)
ಶಾಸ್ತ್ರೀಯನಾಮ : ಅಯೋರಿಕ್ತಿಸ್ ಓರ್ (Aorichthys oar)

032_69_PP_KUH

ವಿತರಣೆ : ಸಿಹಿ ನೀರಿನ ನದಿಗಳು, ಕೊಳಗಳು, ಕೆರೆಗಳು, ನಾಲೆಗಳು ಮತ್ತು ಜಲಾಶಯಗಳಲ್ಲಿ ವಾಸಿಸುತ್ತದೆ.

ಗಾತ್ರ : ೧.೮ ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಚಪ್ಪಟೆಯಾದ, ನೀಳದೇಹ, ಗಂಭೀರ ನಿಲುವಿನ ಮೀನು. ಅಗಲವಾದ ದುಂಡಗಿನ ಮೂತಿ. ಮೂತಿಯ ಮುಂತುದಿಗಿಂತ ಹಿಂದೆ ಇರುವ ಬಾಯಿ. ನಾಲ್ಕು ಜೊತೆ ದಾಡಿ ಮೀಸೆಗಳಿವೆ. ಮ್ಯಾಕ್ಸಿಲರಿ ಜೊತೆ (ಮುಂದಿನ ಜೊತೆ) ಹಿಂದೆ ಬಾಲದ ಈಜುರೆಕ್ಕೆಯವರೆಗೆ ಚಾಚ ಬಹುದಾದಷ್ಟು ಉದ್ದ. ಬೆನ್ನು ಈಜುರೆಕ್ಕೆಯ ಮುಳ್ಳಿನ ಹಿಂದಿನ ಅಂಚು ಗರಗಸದಂತಿದೆ. ಬೆನ್ನಿನ (ಅಡಿಪೋಸ್) ಈಜುರೆಕ್ಕೆ ಉದ್ದವಾಗಿದೆ ಮತ್ತು ಅದರ ಬುಡವು ಕಡ್ಡಿಯುಳ್ಳ ಬೆನ್ನಿನ ಈಜುರೆಕ್ಕೆಯ ಎರಡಷ್ಟಿದೆ.

ಮೀನಿನ ಬಣ್ಣ ಬದುಕಿದ್ದಾಗ ಬೆನ್ನಿನ ಕಡುನೀಲಿ, ಕ್ರಮೇಣ ಪಕ್ಕೆಗಳಿಗೆ ಮತ್ತು ಹೊಟ್ಟೆ ಭಾಗಕ್ಕೆ ಬಂದಾಗ ತಿಳಿಯಾಗಿದೆ. ಬೆನ್ನು ಈಜು ರೆಕೆಯ ಬುಡದ ಮೂಳೆಯ ಬಳಿ ಒಂದು ಸಣ್ಣ ಕಪ್ಪು ಗುರುತಿದೆ. ಪಶ್ಚ ಬೆನ್ನಿನ ಈಜುರೆಕ್ಕೆಯ ತುದಿಯಲ್ಲಿ ಸ್ಪಷ್ಟವಾದ ಕಪ್ಪು ಗುರುತಿದೆ. ಈಜುರೆಕ್ಕೆಗಳು ಹಳದಿ ಬಣ್ಣ ಬೆನ್ನಿನ ಮತ್ತು ಬಾಲದ ಈಜುರೆಕ್ಕೆಗಳು ಕಪ್ಪು ಛಾಯೆ ತೋರುತ್ತವೆ.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ ಮುಖ್ಯ ಸಂತಾನೋತ್ಪತಿ ಕ್ರಿಯೆ ನಡೆಯುತ್ತದೆ.

ಸ್ವಭಾವ : ಈ ಕುಟುಂಬದ ಮೀನುಗಳಲ್ಲಿ ಗುದ ಈಜುರೆಕ್ಕೆಗಳು ಸಾಮಾನ್ಯವಾಗಿ ಚಿಕ್ಕವು ಮತ್ತು ಅವುಗಳಲ್ಲಿ ೨೦ ಕ್ಕಿಂತ ಕಡಿಮೆ (೮ ರಿಂದ ೧೬) ರೆಕ್ಕೆ ಕಡ್ಡಿಗಳಿವೆ.

ಇದರ ಮಾಂಸದಲ್ಲಿ ಮೂಳೆಗಳು ಕಡೆಮೆ ಇರುವುದರಿಂದ ಇದನ್ನು ತಿನ್ನಲು ಜನರು ಇಷ್ಟ ಪಡುತ್ತಾರೆ. ಗಾಳದಿಂದ ಹಿಡಿಯುವುದು ಸುಲಭ. ಸತ್ತ ಬೇಟೆಗೂ (ಪ್ರಾಣಿ /ಹುಳು) ಗಾಳಕ್ಕೆ ಬೀಳುತ್ತದೆ.