ನೀರುಕೋಳಿ (WATER COCK)
ಗ್ಯಾಲ್ಲಿಕ್ರೆಕ್ಸ್ ಸಿನೇರ (Gallicrex cinerea)

188_69_PP_KUH

ಗಾತ್ರ : ೩೬-೪೩ ಸೆಂ.ಮೀ.

ಆವಾಸ : ಜೌಗು ಪ್ರದೇಶ, ನೀರು ತುಂಬಿದ ಹೊಲಗದ್ದೆಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ನೀರ್ಕೋಳಿ ೪೩ ಸೆಂ.ಮೀ. ಹೆಣ್ಣು ೩೬ ಸೆಂ.ಮೀ. ಗಂಡು ಬಹುತೇಕ ಬೂದುಕಪ್ಪು, ಹಳದಿ ಕೊಕ್ಕು, ಕೆಂಪು ಕೊಂಬು, ಕಣ್ಣು ಮತ್ತು ಕಾಲುಗಳು ದಟ್ಟಕೆಂಪು.

ಆಹಾರ : ಕಾಳುಗಳು, ಹಸಿರು ಕಾಂಡ, ಕೆಲವೊಮ್ಮೆ ಕೀಟಗಳು ಮೃದ್ವಂಗಿ.

ಸಂತಾನಾಭಿವೃದ್ಧಿ : ಜೂನ್ ನಿಂದ ಸೆಪ್ಟೆಂಬರ‍್ವರೆಗೆ. ಭತ್ತದ ಗದ್ದೆ ಅಥವಾ ಜೊಂಡು ತುಂಬಿದ ಕೆರೆಗಳಲ್ಲಿ ಬಟ್ಟಲಿನಂತಹ ಹುಲ್ಲಿನ ಗೂಡು. ೩-೬ ಬಿಳಿ ಅಥವಾ ತಿಳಿಗುಲಾಬಿ ಬಣ್ಣದ ಮೊಟ್ಟೆಗಳು.

—- 

ಹಳದಿ ಜೋಲಿಯ ತಿತ್ತಿರಿ (YELLOWWATTLED LAPWING)
ವೆನೆಲ್ಲಸ್ ಮಲಬಾರಿಕಸ್ (Vanellus malabaricus)

189_69_PP_KUH

ಗಾತ್ರ : ೨೬-೨೮ ಸೆಂ.ಮೀ.

ಆವಾಸ : ತೆರೆದ ಗುಡ್ಡ, ಬಯಲು, ಹಾಳು ಬಿದ್ದ ಗದ್ದೆ ಇತ್ಯಾದಿ. ಇದು ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಪ್ಪು ತಲೆ, ಸುತ್ತಲೂ ಬಿಳಿಪಟ್ಟಿ ಮರಳು ಬಣ್ಣದ ಮೇಲ್ಭಾಗ, ಬಾಲಕ್ಕೆ ಕರಿಯ ಅಂಚು, ಎದೆಯ ಮೇಲೆ ಕರಿಯ ಪಟ್ಟಿ ಇರುತ್ತದೆ. ಹಳದಿ ಬಣ್ಣದ ಕೊಕ್ಕಿನ ಬುಡದ ಜೋಲಿ ಪ್ರಮುಖ ಲಕ್ಷಣ.

ಆಹಾರ : ಪ್ರಮುಖವಾಗಿ ಕೀಟಗಳು ಮತ್ತು ಹುಳುಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಎಪ್ರಿಲ್‌ನಿಂದ-ಜುಲೈ ತಿಂಗಳ ಅವಧಿ. ಗೂಡು ರಚಿಸುವುದಿಲ್ಲ. ಆರಿಸಿದ ಕೆಲವು ಕಲ್ಲುಗಳ ನಡುವೆ ಅದೇ ಬಣ್ಣದ ನಾಲ್ಕು ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳ ಮೇಲೆ ಕಂದು ರಚನೆಗಳಿರುತ್ತವೆ.

—- 

ಉಂಗುರು ಕುತ್ತಿಗೆಯ ಚಿಕ್ಕ ಪ್ಲೊವರ್ (LITTLE PINGED PLOVER)
ಚಾರಾಡ್ರಿಯಸ್ ಚುಬಿಯಸ್ (Charadrius chubius)

190_69_PP_KUH

ಗಾತ್ರ : ೧೪-೧೬ ಸೆಂ.ಮೀ.

ಆವಾಸ : ಹಿನ್ನೀರು, ಅಳಿವೆ, ನದೀ ಮಧ್ಯದ ಮತ್ತು ಅಳಿವೆ ಮಧ್ಯದ ಮಣ್ಣಿನ ದಿಣ್ಣೆಗಳಲ್ಲಿ ಕಾಣುವ ಈ ಹಕ್ಕಿ ಚಳಿಗಾಲದಲ್ಲಿ ವಲಸೆ ಬರುವಂಥದ್ದಾಗಿದೆ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತೆರನಾಗಿ ಕಾಣುತ್ತವೆ. ದಪ್ಪತಲೆ, ಹಳದಿ ಕಾಲುಗಳು, ಚಿಕ್ಕ ಕೊಕ್ಕು, ಕುತ್ತಿಗೆ ಸುತ್ತ ಬಿಳಿಯ ಉಂಗುರದ ಪಟ್ಟಿ ಪ್ರಮುಖ ಲಕ್ಷಣ. ಕಣ್ಣಿನ ಸುತ್ತ ಹಳದಿ ಉಂಗುರ, ಉಳಿದಂತೆ ಮರಳು-ಕಂದು ಮೇಲ್ಭಾಗ, ಎದೆ ಬಿಳಿಯಾಗಿದೆ. ನೆತ್ತಿಯ ಮೇಲೂ ಬಿಳಿ ಬಣ್ಣ ವಿರುತ್ತದೆ. ಗುಂಪುಗಳಲ್ಲಿ ವಾಸ ಮಾಡುತ್ತವೆ.

ಸಂತಾನಾಭಿವೃದ್ಧಿ : ಕರ್ನಾಟಕದಲ್ಲಿ ಸಂತಾನಾಭಿವೃದ್ಧಿ ಮಾಡಿರುವ ಬಗ್ಗೆ ದಾಖಲೆ ಇಲ್ಲ. ಬಹುತೇಕ ಚಳಿಗಾಲದಲ್ಲಿ ಕಂಡುಬರುತ್ತವೆ.

—- 

ಕೆಂಟಿಶ್ ಪ್ಲೊವರ್ (KENTISH PLOVER)
ಕೆರಾಡ್ರಿಯಸ್ ಅಲೆಕ್ಸಾಂಡ್ರಿನಸ್ (Charadrius alexandrinus)

191_69_PP_KUH

ಗಾತ್ರ : ೧೫-೧೭ ಸೆಂ.ಮೀ.

ಆವಾಸ : ಉಂಗುರು ಕುತ್ತಿಗೆಯ ಪ್ಲೊವರ‍್ನಂತೆ. ಕೆಲವೊಮ್ಮೆ ಒಂದೇ ಸ್ಥಳದಲ್ಲಿ ಕಂಡು ಬರಬಹುದು. ಸ್ಥಳೀಯ ವಲಸೆ ಹಕ್ಕಿ.

ಲಕ್ಷಣಗಳು : ಉಂಗುರು ಕುತ್ತಿಗೆಯ ಪ್ಲೊವರನ್ನು ಹೋಲುತ್ತದೆ. ಕಪ್ಪು ಕಾಲು, ಕಣ್ಣಿನ ಪಕ್ಕದಲ್ಲಿ ತೆಳುವಾದ ಪಟ್ಟಿ, ಹಣೆಯ ಬಿಳಿಪಟ್ಟಿ ಕೆನ್ನೆಗೂ ಹರಡಿರುವುದು ಮತ್ತು ಉಂಗುರ ಇಲ್ಲದಿರುವುದು ಕೆಂಟಿಕ್ ಪ್ಲೊವರ್ ಲಕ್ಷಣ. ಉಳಿದಂತೆ ಬಿಳಿ ಎದೆ, ಕಂದು ಮೇಲ್ಭಾಗವಿರುವುದು.

ಆಹಾರ : ಕೀಟ ಮತ್ತು ಏಡಿಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಕರ್ನಾಟಕದಲ್ಲಿ ಸಂತಾನಾಭಿವೃದ್ಧಿ ನಡೆಯುವ ಬಗ್ಗೆ ದಾಖಲೆ ಇಲ್ಲ. ಚಳಿಗಾಲದಲ್ಲಿ ವಲಸೆ ಬರುವುದು ಸಾಮಾನ್ಯ. ಎಪ್ರಿಲ್‌ನಿಂದ ಆಗಸ್ಟ್ ವರೆಗೆ (ದಕ್ಷಿಣ ಭಾರತದಲ್ಲಿ) ಸಂತಾನಾಭಿವೃದ್ಧಿಯ ಸಮಯವಾಗಿರುತ್ತದೆ.

 —-

ಕಿರಿಯ ಮರಳು ಪ್ಲೊವರ್ (LESSER SAND PLOVER)
ಕೆ. ಮಂಗೋಲಸ್ (Charadrius Mongolus)

192_69_PP_KUH

ಗಾತ್ರ : ೧೯-೨೧ ಸೆಂ.ಮೀ.

ಆವಾಸ : ಉಳಿದ ಪ್ಲೊವರ್ ಮತ್ತು ಮರಳು ಪೀಪಿಗಳ ಜೊತೆಗೆ ಗುಂಪಿನಲ್ಲಿ ಕಾಣಸಿಗುತ್ತವೆ. ಅಳಿವೆ, ಹಿನ್ನೇರು, ಮಣ್ಣಿನ ದಿಬ್ಬಗಳಲ್ಲಿ ಸಾಮಾನ್ಯವಾಗಿರುತ್ತವೆ. ಚಳಿಗಾಲದಲ್ಲಿ ವಲಸೆ ಬರುವಂತಹ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸ ಕಂಡು ಬರುವುದಿಲ್ಲ. ಕೆಂಟಿಕ್ ಪ್ಲೊವರನ್ನು ಹೋಲುತ್ತವೆ. ಆದರೆ ಕಣ್ಣುಪಟ್ಟಿ ಇರುವುದಿಲ್ಲ. ಮೇಲ್ಭಾಗದಲ್ಲಿ ಮರಳು ಕಂಡು, ಕೆಳಭಾಗ ಬಿಳಿ, ಹಣೆ ನಸುಕಂದು, ದಟ್ಟ ಹಸಿರಾದ ಕಾಲುಗಳಿರುತ್ತವೆ.

ಆಹಾರ : ಕೀಟಗಳು, ಏಡಿ ಮತ್ತಿತರ ಸಾಗರದ ಚಿಕ್ಕ ಜೀವಿಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಹಿಮಾಲಯದಿಂದ ಚಳಿಗಾಲದಲ್ಲಿ ವಲಸೆ ಬರುತ್ತವೆ.