ವಿಂಬ್ರೆಲ್ (WHIMBREL)
ನ್ಯುಮೇನಿಯಸ್ ಫೇಕೋಪಸ್(Numenius phecopus)

193_69_PP_KUH

ಗಾತ್ರ : ೫೦ ಸೆಂ.ಮೀ.

ಆವಾಸ : ಸಮುದ್ರತೀರದ ಕುದುರು, ಹಿನ್ನೀರು, ನದಿ ಇತ್ಯಾದಿಗಳಲ್ಲಿ ಮಣ್ಣಿನ ದಿಣ್ಣೆಯ ಮೇಲೆ ನಿಂತಿರುತ್ತದೆ. ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಸವಿಲ್ಲ. ಮರಳು ಕಂದು ಬಣ್ಣ. ನೆತ್ತಿಕಪ್ಪು, ಬಿಳಿಯಪಟ್ಟೆ ನೆತ್ತಿಯ ಮೇಲೆ, ಬಾಗಿದ ಮೊನಚಾದ ಕೊಕ್ಕು. ನೀಳ ಕಾಲುಗಳು. ಸಾಮಾನ್ಯವಾಗಿ ಒಂಟಿ ಜೀವಿ. ನೆಲದ ಮೇಲೆ ಒಂಟಿಯಾಗಿ ಓಡಬಲ್ಲದು.

ಆಹಾರ : ಏಡಿ, ಶಿಗಡಿ ಕೀಟ, ಮೀನುಗಳು.

ಸಂತಾನಾಭಿವೃದ್ಧಿ : ನಮ್ಮ ನಾಡಿನಲ್ಲಿ ಸಂತಾನಾಭಿವೃದ್ಧಿಯಿಲ್ಲ. ಚಳಿಗಾಲದಲ್ಲಿ ಉತ್ತರದಿಂದ ವಲಸೆ ಬರುತ್ತವೆ.

 —-

ಕರ್ಲ್ಯೂ (ಕೊಂಚೆ) (CURLEW)
ನ್ಯುಮೇನಿಯಸ್ ಆಕ್ಟೇಟಾ (Numenius arquata)

194_69_PP_KUH

ಗಾತ್ರ : ೫೮-೬೦ ಸೆಂ.ಮೀ.

ಆವಾಸ : ಕರಾವಳಿಯ ಸಮುದ್ರ ತೀರದಲ್ಲಿ ಮತ್ತು ಇತರೆ ನೀರಿನಾಶ್ರಯ ಬಳಿ ಕಂಡು ಬರುತ್ತದೆ. ನೆಲದ ಮೇಲೆ ವೇಗವಾಗಿ ಓಡಬಲ್ಲವು. ವಲಸೆ ಹಕ್ಕಿ

ಲಕ್ಷಣಗಳು : ವಿಂಬ್ರೆಲ್ ಗಿಂತ ಸ್ವಲ್ಪ ದೊಡ್ಡದು. ದೂರದಿಂದ ನೋಡುವಾಗ ಒಂದೇ ರೀತಿ ಕಾಣಬಹುದು. ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಮರಳು ಕಂದು ಬಣ್ಣ ತುಸು ದೊಡ್ಡ ಗಾತ್ರದ ನೀರ್ನಡಿಗೆ ಹಕ್ಕಿ, ಮೇಲ್ಮೈಯಲ್ಲಿ ಕಂಗೆಂದು – ಕಪ್ಪು ಮಿಶ್ರಿತ ರಚನೆಗಳು. ಉದ್ದನೆಯ ಬಿಲ್ಲಿನಂತೆ ಬಾಗಿದ ಕೊಕ್ಕು ಪ್ರಮುಖ ಲಕ್ಷಣ.

ಆಹಾರ : ಮೀನು, ಮೃದ್ವಂಗಿ, ಕೀಟ, ಏಡಿ ಇತ್ಯಾದಿ.

ಸಂತಾನಾಭಿವೃದ್ಧಿ : ಉತ್ತರ ಯುರೋಪು-ಸೈಬೀರಿಯದಲ್ಲಿ. ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿ.

 —-

ಕಪ್ಪು ಬಾಲದ ಗಾಡ್ ವಿಟ್ (BLACKTAILED GODWIT)
ಲಿಮೋಸ ಲಿಮೋಸ (Limosa limosa)

195_69_PP_KUH

ಗಾತ್ರ : ೪೦-೪೨ ಸೆಂ.ಮೀ.

ಆವಾಸ : ಜೌಗು ಪ್ರದೇಶ. ಅಳಿವೆ, ಸಮುದ್ರ ತೀರದ ಹಿನ್ನೀರು.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿದೆ. ಆದರೆ ಹೆಣ್ಣು ಹಕ್ಕಿ ಗಾತ್ರದಲ್ಲಿ ಸ್ವಲ್ಪ ದೊಡ್ಡದಿರಬಹುದು. ಬಿಳಿ-ಕಂದು ವರ್ಣ ವಿನ್ಯಾಸದ ಉದ್ದನೆಯ ಕಾಲಿನ. ನೀರ್ನಡಿಗೆ ಹಕ್ಕಿ. ಕೊಕ್ಕು ತೆಳು, ಉದ್ದ ಮತ್ತು ಸ್ವಲ್ಪ ಮೇಲಕ್ಕೆ ಬಾಗಿದೆ. ಕೆಳಭಾಗ ಬಿಳಿ ಮಾಸಲು. ಕೊಕ್ಕು ತುದಿ ಕಪ್ಪು, ಬಾಲದ ತುದಿ ಕಪ್ಪು, ಬಾಲದ ತುದಿ ಕಪ್ಪು.

ಆಹಾರ : ಹುಳು, ಕೀಟ, ಮೃದ್ವಂಗಿ, ಏಡಿ ಇತ್ಯಾದಿ.

ಸಂತಾನಾಭಿವೃದ್ಧಿ : ಮಧ್ಯ ಯುರೋಪಿನಲ್ಲಿ ಚಳಿಗಾದಲ್ಲಿ ವಲಸೆ ಬರುತ್ತದೆ.

—- 

ಚುಕ್ಕೆ ಮರಳು ಪೀಪಿ (SPOTTED SANDPIPER)
ಟ್ರಿಂಗ ಗ್ಲೇರಿಯೋಲ (Tringa glareola)

196_69_PP_KUH

ಗಾತ್ರ : ೨೦-೨೨ ಸೆಂ.ಮೀ.

ಆವಾಸ : ಸ್ವಲ್ಪ ನೀರಿರುವ ಭತ್ತದ ಗದ್ದೆ, ನದಿ ಮಧ್ಯದ ಮಣ್ಣಿನ ದಿಣ್ಣೆ, ಅಳಿವೆಯ ತೀರ ಇತ್ಯಾದಿ.

ಲಕ್ಷಣಗಳು : ಗಂಡು ಹೆಣ್ಣುಗಳು ಒಂದೇ ತೆರನಾಗಿವೆ. ಬೂದು-ಕಂದು ಮೇಲ್ಭಾಗದಲ್ಲಿ ಬಿಳಿಯ ಚುಕ್ಕೆಗಳು. ಕೆಳಭಾಗ ಬಿಳಿ ಕಣ್ಣಿನ ಮೇಲ್ಭಾಗದ ಬಿಳಿಯ ರೇಖೆ ಬಾಲದ ಮೇಲೆ ಅಡ್ಡ ಪಟ್ಟಿಗಳಲ್ಲಿ ಕೊಕ್ಕು ನೇರ ಮತ್ತು ಕಪ್ಪು ಹಸಿರು-ನೀಳ ಕಾಲುಗಳು.

ಆಹಾರ : ಕೀಟ, ಕಪ್ಪೆ, ಮೃದ್ವಂಗಿ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ದೇಶದ ಹೊರಗೆ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—-

ಜೌಗು ಮರಳು ಪೀಪಿ (MARSH SAND PIPER)
ಟ್ರಿಂ. ಸ್ಟಾಗ್ನಾಟಿಲಿಯಸ್(Tringa stagnatileus)

197_69_PP_KUH

ಗಾತ್ರ : ೨೨-೨೫ ಸೆಂ.ಮೀ.

ಆವಾಸ : ಭತ್ತದ ಗದ್ದೆ, ಕೆರೆ, ಜೌಗು ಪ್ರದೇಶ ಅಳಿವೆ ಇತ್ಯಾದಿಗಳ ಅಂಚಿನಲ್ಲಿ.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಹಸಿರು ಕಾಲಿನ ಮರಳು ಪೀಪಿಯಂತೆ ಕಂಡು ಬರುತ್ತದೆ. ಆದರೆ ಚಿಕ್ಕದು ಮತ್ತು ಬಣ್ಣ ತಿಳಿ. ಹಣೆ, ತಲೆಯ ಇಕ್ಕೆಡೆ. ಭುಜ ಮತ್ತು ಕೆಳಭಾಗ ಬಿಳಿ, ಉಳಿದಂತೆ ತಿಳಿ ಬೂದು-ಕಂದು ಉದ್ದನೆಯ ಹಸಿರು ಕಾಲುಗಳು, ತೆಳ್ಳಗಿನ ಉದ್ದನೆಯ ಕೊಕ್ಕು.

ಆಹಾರ : ಕೀಟ, ಮೃದ್ವಂಗಿ ಹುಳು, ಕಪ್ಪೆ ಇತ್ಯಾದಿ.

ಸಂತಾನಾಭಿವೃದ್ಧಿ : ದೇಶದ ಹೊರಗೆ. ಚಳಿಗಾಲದಲ್ಲಿ ವಲಸೆ ಬರುತ್ತವೆ.