ಹಸಿರು ಕಾಲಿನ ಮರಳು ಪೀಪಿ (GREEN SHANK)
ಟ್ರಿಂಗ ನೆಬುಲೇರಿಯಾ (Tringa nebualria)

198_69_PP_KUH

ಗಾತ್ರ : ೩೪-೩೬ ಸೆಂ.ಮೀ.

ಆವಾಸ : ಸಿಹಿ ನೀರಿನ ಕೊಳ, ಕೆರೆ, ಭತ್ತದ ಗದ್ದೆ ಇತ್ಯಾದಿಗಳಲ್ಲಿ.

ಲಕ್ಷಣಗಳೂ : ಗಂಡು-ಹೆಣ್ಣುಗಳು ಒಂದೇ ತರನಾಗಿವೆ. ಮರಳು ಪೀಪಿ ಜಾತಿಯಲ್ಲಿ ಅತಿ ದೊಡ್ಡದು. ಆಲಿವ್ ಹಸಿರು ಕಾಲುಗಳು ಪ್ರಮುಖ ಲಕ್ಷಣ. ಉದ್ದನೆಯ ಸ್ವಲ್ಪ ಮೇಲಕ್ಕೆ ಬಾಗಿದ ಮಾಸಲು ಕೊಕ್ಕು. ತುದಿಕಪ್ಪು, ಹಣೆ ಬಿಳಿ. ಮೇಲ್ಭಾಗ ಬೂದು ಕಂದು. ಹೊಟ್ಟೆ ಭಾಗ ಬಿಳಿ.

ಆಹಾರ : ಉಳಿದ ಮರಳು ಪೀಪಿಗಳಂತೆ ನೀರಿನಕೀಟ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ಉತ್ತರ ಯುರೋಪು ಮತ್ತು ಏಷ್ಯಾ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—-

ಸಾಮಾನ್ಯ ಮರಳು ಪೀಪಿ (COMMON SAND PIPER)
ಟ್ರಿಂ.ಹೈಪೊಲ್ಯುಕಾಸ್ (Tringa hypoleucos)

199_69_PP_KUH

ಗಾತ್ರ : ೨೦-೨೨ ಸೆಂ.ಮೀ.

ಆವಾಸ : ಸಿಹಿ ನೀರಿನ ಜೌಗು ಪ್ರದೇಶ, ತೇವವಾಗಿರುವ ಭತ್ತದ ಗದ್ದೆ, ನೀರು ಆರಿದ ಕೆರೆ, ಕೊಳ, ಅಳಿವೆ ಇತ್ಯಾದಿ.

 : ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಉದ್ದ ಕಾಲಿನ ನೀಳ ಕೊಕ್ಕಿನ ಚಟುವಟಿಕೆಯ ಹಕ್ಕಿ. ಮೇಲ್ಭಾಗ ಆಲಿವ್ ಕಂದು ಹೊಟ್ಟೆಭಾಗ ಬಿಳಿ. ಕುತ್ತಿಗೆ ಮುಂಭಾಗದಲ್ಲಿ ಕಪ್ಪು ಗೀಟುಗಳಿವೆ. ಕಪ್ಪು ಕೊಕ್ಕು, ಬಾಲದಲ್ಲಿ ಕಪ್ಪು ಅಡ್ಡ ಗೆರೆಗಳು.

ಆಹಾರ : ಇತರೆ ಮರಳು ಪೀಪಿಗಳಂತೆ ಕೀಟ, ಏಡಿ, ಹುಳು ಇತ್ಯಾದಿ.

ಸಂತಾನಾಭಿವೃದ್ಧಿ : ಹಿಮಾಲಯದ ತಪ್ಪಲಿನಲ್ಲಿ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತದೆ.

—- 

ಗೋಲ್ಡನ್ ಪ್ಲೋವರ್ (GOLDEN PLOVER)
ಪ್ಲುವಿಯಾಲಿಸ್ ಫಲವ (Pluvialis fulva)

200_69_PP_KUH

ಗಾತ್ರ : ೨೬-೨೯ ಸೆಂ.ಮೀ.

ಆವಾಸ : ಸಮುದ್ರತೀರ, ತೇವವಾಗಿರುವ ಭತ್ತದ ಗದ್ದೆ ಬತ್ತಿದ ಕೊಳ ಇತ್ಯಾದಿ ಕಡೆಗಳಲ್ಲಿ ಕಂಡು ಬರುತ್ತದೆ. ಇದು ವಲಸೆ ಬರುವ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದಪ್ಪ ತಲೆ, ಪಾರಿವಾಳದ ಕೊಕ್ಕಿನಂತಹ ಕೊಕ್ಕು, ತಿಳಿ ಬಂಗಾರದ ಹಿನ್ನೆಲೆಯಲ್ಲಿ ಕಂದು ಬಣ್ಣ, ತಳಭಾಗ ಬಿಳಿ ಇರುತ್ತದೆ. ಎದೆಯು ಕಂದು, ಬೂದು ಮತ್ತು ಹಳದಿ ಬಣ್ಣಗಳ ಮಿಶ್ರಣವಾಗಿದೆ. ಗುಂಪುಗಳಲ್ಲಿ ಕಾಣಸಿಗುತ್ತವೆ.

ಆಹಾರ : ಕೀಟ, ಹುಳು ಮತ್ತಿತರ ಚಿಕ್ಕ ಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ನಾಡಿನಿಂದ ಹೊರಗೆ. ಚಳಿಗಾಲದ ಸಮಯ. ನಮ್ಮ ಕಡಲ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

—- 

ಚುಕ್ಕೆಯ ಕೆಂಪು ಕಾಲಿನ ಹಕ್ಕಿ (SPOTTED REDSHANK)
ಟ್ರಿಂಗಾ ಎರಿತ್ರೋಪಸ್ (Tringa erythropus)

201_69_PP_KUH

ಗಾತ್ರ : ೨೫-೨೮ ಸೆಂ.ಮೀ.

ಆವಾಸ : ಜೌಗು ಪ್ರದೇಶ, ಅಳಿವೆ, ಕರಾವಳಿಯ ಕೆರೆ, ಮತ್ತಿತರ ನೀರಿನಾಶ್ರಯದ ಜಾಗಗಳೂ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತೆರನಾಗಿರುತ್ತದೆ. ಬೂದು-ಕಂದು ಮೇಲ್ಭಾಗ ಕೆಳಗೆ ಬಿಳಿ ಕಪ್ಪು, ನೀಳ, ಮೊನಚಾದ ಕೊಕ್ಕು, ಕಿತ್ತಳೆ-ಕೆಂಪು ಕಾಲು ಪ್ರಮುಖ ಲಕ್ಷಣ. ರೆಕ್ಕೆಯ ಗರಿಗಳಲ್ಲಿ ಕಂದು-ಬಿಳಿ ಪಟ್ಟಿಗಳು ಗಮನಾರ್ಹ. ಬಾಲದಲ್ಲಿ ಕಪ್ಪು-ಬಿಳಿ ಅಡ್ಡ ರೇಖೆಗಳು.

ಆಹಾರ : ನೀರಿನಲ್ಲಿರುವ ಚಿಕ್ಕ ಪುಟ್ಟ ಪ್ರಾಣಿಗಳು.

ಸಂತಾನಾಭಿವೃದ್ಧಿ : ಹೊರದೇಶಗಳಲ್ಲಿ. ಚಳಿಗಾಲದಲ್ಲಿ ಕಡಲ ತೀರದ ನೀರಿರುವ ವಿವಿಧ ಪ್ರದೇಶಗಳಿಗೆ ವಲಸೆ ಬರುತ್ತವೆ.

—-

ರೆಡ್ಡಿ ಟರ್ನ್‌ಸ್ಟೋನ್ (RUDDY TURNSTONE)
ಅರೆನೆರಿಯಾ ಇಂಟರ‍್ಪ್ರೆಸ್ (Arenaria interpres)

202_69_PP_KUH

ಗಾತ್ರ : ೨೦-೨೨ ಸೆಂ.ಮೀ.

ಆವಾಸ : ಸಮುದ್ರ ತೀರದ ನೀರಿನ ಬಳಿ ಗುಂಪುಗಳಲ್ಲಿ ಕಂಡುಬರುತ್ತವೆ.

ಲಕ್ಷಣಗಳು : ಗಂಡು-ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ಬಿಳಿಯ ಗಲ್ಲ ಮತ್ತು ಗಂಟಲು ಪ್ರಮುಖ ಲಕ್ಷಣ. ನೇರ-ಗಿಡ್ಡ, ಕಪ್ಪು ಕೊಕ್ಕು. ಕಿತ್ತಳೆ ಬಣ್ಣದ ಕಾಲುಗಳು, ಕಂಗೆಂದು ಮತ್ತು ಕಂದು ಬಣ್ಣದ ಮೇಲ್ಭಾಗ. ಕಣ್ಣಿನ ಮೇಲೆ ಬಿಳಿಯ ಪಟ್ಟಿ. ಬಾಲ ಕಡು ಕಂದು ಆದರ ಬಿಳಿಯ ತುದಿ. ಚಟುವಟಿಕೆಯ ಹಕ್ಕಿ.

ಆಹಾರ : ಸಮುದ್ರದ ಚಿಕ್ಕ ಪುಟ್ಟ ಪ್ರಾಣಿಗಳು.

ಸಂತಾನಾಭಿವೃದ್ಧಿ : ಯುರೋಪಿನ ಉತ್ತರಭಾಗ. ಸೈಬೀರಿಯ ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿ.