ಸೂಜಿ ಬಾಲದ ಸ್ನೈಪ್ (PINTAIL SNIPE)
ಗ್ಯಾಲಿನಾಗೊ ಸ್ಟೆನುರಾ (Gallinago stenura)

203_69_PP_KUH

ಗಾತ್ರ : ೨೪-೨೮ ಸೆಂ.ಮೀ.

ಆವಾಸ : ತೇವವಿರುವ ಗದ್ದೆ, ಮೈದಾನ ಆರಿದ ಕೊಳ ಇತ್ಯಾದಿಗಳಲ್ಲಿ.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಗಿಡ್ಡ ದೇಹ. ಉದ್ದ, ಮೊನಚಾದ ನೀಳ ಕೊಕ್ಕು. ಗಿಡ್ಡ ಕುತ್ತಿಗೆ ಕೆಂಗಂದು, ಕಪ್ಪು, ಬಿಳಿ ಮಿಶ್ರಿತ ವಿನ್ಯಾಸ. ಕಣ್ಣುಗಳು ಕೆಳಗೆ ಬದಿಗೆ ಚಂದ್ರನಾಕಾರದ ಕೆಂಗಂದು ವಿನ್ಯಾಸ. ಬಾಲದ ಹೊರಭಾಗದ ಗರಿಗಳು ಗಿಡ್ಡ ಹಾಗೂ ಗಡಸು. ನಿಶಾಚರಿ. ಒಂಟಿಯಾಗಿ ಓಡಾಡುತ್ತಿರುತ್ತದೆ. ಬಹುತೇಕ ನಿಶ್ಯಬ್ಧ. ಹಾರುವಾಗ ಮಾತ್ರ ಶಬ್ದ.

ಆಹಾರ : ಎರೆಹುಳು, ಡಿಂಬಿ, ಮೃದ್ವಂಗಿಗಳು.

ಸಂತಾನಾಭಿವೃದ್ಧಿ : ದೇಶದ ಹೊರಗೆ- ಚಳಿಗಾಲದಲ್ಲಿ ವಲಸೆ ಬರುತ್ತವೆ.

—-

ಸಾಮಾನ್ಯ ಸ್ನೈಪ್ (COMMON SNIPE)
ಗ್ಯಾಲ್ಲಿನಾಗೊ ಗ್ಯಾಲಿನಾಗೊ (Gallinago gallinago)

204_69_PP_KUH

ಗಾತ್ರ : ೨೮-೩೦ ಸೆಂ.ಮೀ.

ಆವಾಸ : ಭತ್ತದ ಗದ್ದೆ, ಜೌಗು ಪ್ರದೇಶ, ಕೆರೆ ಇತ್ಯಾದಿಗಳ ಸರಹದ್ದು.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೆಚ್ಚು ಕಡಿಮೆ ಸೂಜಿ ಬಾಲದ ಸ್ನೈಡನ್ನು ಹೋಲುತ್ತದೆ. ಬಣ್ಣದಲ್ಲಿ ಮಾತ್ರ ಸ್ವಲ್ಪ ತಿಳಿ ಮತ್ತು ಹೆಚ್ಚು ತೇವವಿರುವಲ್ಲಿ ಕಂಡು ಬರುತ್ತದೆ. ಕಡು ಕಂದು ಮೇಲ್ಭಾಗದಲ್ಲಿ ಕಪ್ಪು ಗೆರೆಗಳು ಕೆಳಭಾಗ ಬಿಳಿ.

ಆಹಾರ : ಹುಳು, ಡಿಂಬ, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ಹಿಮಾಲಯ, ಕಾಶ್ಮೀರಗಳಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ಜಾಕ್ ಸ್ನೈಪ್ (JACK SNIPE)
ಗೆ ಮಿನಿಮಾ (G minima)

205_69_PP_KUH

ಗಾತ್ರ : ೨೦-೨೧ ಸೆಂ.ಮೀ.

ಆವಾಸ : ಉಳಿದ ಸ್ನೈಪುಗಳಂತೆ ತೇವವಿರುವ ಜಾಗಗಳಲ್ಲಿ.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಸ್ನೈಪು ಜಾತಿಗಳಲ್ಲಿ ಅತಿ ಚಿಕ್ಕದು. ಕಣ್ನಿನ ಹಿಮಬದಿಯಲ್ಲಿ ಅರ್ಧ ಚಂದ್ರಾಕೃತಿಯ ಕಂದು ವಿನ್ಯಾಸ. ನೆತ್ತಿಯ ಮೇಲೆ ಪಟ್ಟಿಲ್ಲಿ. ಕೆಂಗಂದು ಬಣ್ಣದ ಉಳಿದ ಸ್ನೈಪುಗಳಂತೆ.

ಆಹಾರ : ಕೀಟ, ಹುಳು ಮತ್ತು ಕಾಳುಗಳು.

ಸಂತಾನಾಭಿವೃದ್ಧಿ : ದೇಶದ ಹೊರಗೆ (ಸೈಬೀರಿಯ-ಯುರೋಪುಗಳಲ್ಲಿ). ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತವೆ.

—- 

ಮರ ಕೋಳಿ (WOODCOCK)
ಸ್ಕೊಲೊಪೆಕ್ಸ್ ರಸ್ಟಿಕೋಲಾ (Scolopax rusticola)

206_69_PP_KUH

ಗಾತ್ರ : ೩೬ ಸೆಂ.ಮೀ.

ಆವಾಸ : ಶೋಲಾಕಾಡು, ನಿತ್ಯಹರಿದ್ವರ್ಣ ಕಾಡು, ಕಾಫಿ, ಏಲಕ್ಕಿ ತೋಟಗಳಲ್ಲಿ.

ಲಕ್ಷಣಗಳು : ಗಂಡು ಹೆಣ್ಣುಗಳು ಒಂದೇ ತೆರನಾಗಿದೆ. ಸ್ನೈಪು ಜಾತಿಗಳಲ್ಲಿ ಅತಿ ದೊಡ್ಡದು. ಕಾಲು ಗಿಡ್ಡ. ಕೊಕ್ಕು ಉದ್ದ ಮತ್ತು ತುದಿ ಸ್ವಲ್ಪ ಊದಕಕೊಂಡಿದೆ. ರೆಕ್ಕೆಗಳ ಮೇಲಿನ ಬಿಳಿ ವಿನ್ಯಾಸ ಎದ್ದು ಕಾಣುತ್ತದೆ. ಹೊಟ್ಟೆಯ ಭಾಗ ಉಳಿದ ಸ್ನೈಪುಗಳಿಗಿಂತ ತಿಳಿ.

ಆಹಾರ : ಕೀಟ, ಹುಳು, ಕಾಳು, ಕೆಲವೊಮ್ಮೆ ಚಿಗುರು ಕಾಂಡ ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ ಚಳಿಗಾಲದಲ್ಲಿ ದಕ್ಷಿಣಕ್ಕೆ ವಲಸೆ ಬರುತ್ತವೆ.

—- 

ಸಾಂಡರ್ಲಿಂಗ್ (SANDERLING)
ಕ್ಯಾಲಿಡ್ರಿಸ್ ಆಲ್ಬ (Calidris alba)

207_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಸಮುದ್ರತೀರ, ತೆರೆಗಳ ಸಮೀಪ ಹಿಂಡಾಗಿ ಕಂಡು ಬರುತ್ತವೆ. ವಲಸೆ ಪಕ್ಷಿ.

ಲಕ್ಷಣಗಳು : ಗಂಡು – ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಬೂದು – ಕಂಗಂದು ಬಣ್ಣದ ಕಡಲ ತೀರದ ಪುಟ್ಟಪಕ್ಷಿ. ಗಿಡ್ಡ – ಚೂಪಾದ ಕೊಕ್ಕು. ಭುಜದಲ್ಲಿ ಕಪ್ಪು ತೇಪೆ. ಬಾಲದ ತುದಿ ಕೂಡಾಕಪ್ಪು. ಕುತ್ತಿಗೆ, ಎದೆ, ಹೊಟ್ಟೆ ಬಿಳಿ.

ಆಹಾರ : ಸಮುದ್ರ ತೀರದ ಹುಳು, ಏಡಿ, ಶಿಗಡಿ, ಇತ್ಯಾದಿ ಚಿಕ್ಕಪುಟ್ಟ ಗಾಲದಲ್ಲಿ ಕರ್ನಾಟಕದ ಕಡಲ ತೀರಕ್ಕೆ ವಲಸೆ.