ಕಪ್ಪು ರೆಕ್ಕೆಯ ಸ್ಟಿಲ್ಟ್ (BLACKWINGED STILT)
ಹಿಮೇಂಟೋಪನ್ನ
ಹಿಮೇಂಟೋಪಸ್ (Himantopus himantopus)

218_69_PP_KUH

ಗಾತ್ರ : ೩೫-೪೦ ಸೇಂ.ಮೀ.

ಆವಾಸ : ಸಮುದ್ರ ತೀರದ ಉಪ್ಪು ನೀರಿನ ಪ್ರದೇಶದಿಂದ ಒಳನಾಡಿನ ಸಿಹಿ ನೀರಿನ ಕೆರೆಗಳವರೆಗೆ ವಿವಿಧ ನೀರಿರುವ ಪ್ರದೇಶಗಳು.

ಲಕ್ಷಣಗಳು : ಉದ್ದ ಕಾಲಿನ ನೀರ್ನಡಿಗೆಯ ನೀಳ ಹಕ್ಕಿ. ಕೆಂಪು ಕಾಲುಗಳು ಮತ್ತು ಉದ್ದನೆಯ ಮೊನಚಾದ ಕೊಕ್ಕು. ಗಂಡು ಹಕ್ಕಿಗಳ ರೆಕ್ಕೆ ಕಡುಕಪ್ಪು. ಹೆಣ್ಣು ಹಕ್ಕಿಗಳ ರೆಕ್ಕೆ ಸ್ವಲ್ಪತಿಳಿ ಕಂದು-ಕಪ್ಪು ಬಣ್ಣ ಎದೆ, ಹೊಟ್ಟೆ ಬಿಳಿ.

ಆಹಾರ : ಹುಳು, ಮೃದ್ವಂಗಿ, ಕೀಟ ಇತ್ಯಾದಿಗಳು

ಸಂತಾನಾಭಿವೃದ್ಧಿ : ಏಪ್ರಿಲ್‌ನಿಂದ ಅಗಸ್ಟ್ ವರೆಗೆ ನೀರಿನ ಬಳಿ ನೆಲದ ಮೇಲೆ ಆಳವಿಲ್ಲದ ಹೊಂಡದಲ್ಲಿ. ೩-೪ ಮಾಸಲು ಬಣ್ಣದ ಮೊಟ್ಟೆಗಳು. ಸ್ಥಳೀಯವಾಗಿ ವಲಸೆ ಹೋಗಬಲ್ಲವು.

—- 

ವಿಸ್ಕರ್ಡ್ ಟರ್ನ್ (WHISKERED TERN)
ಕ್ಲಿಡೋನಿಯಸ್ ಹೈಬ್ರಿಡಾ (Chlidonias hybrida)

219_69_PP_KUH

ಗಾತ್ರ : ೨೪-೨೬ ಸೆಂ.ಮೀ.

ಆವಾಸ : ಸಮುದ್ರ ತೀರ, ಅಳಿವೆ, ಕಾಂಡ್ಲವನ, ಕೆರೆ, ಸರೋವರ ಬತ್ತದ ಗದ್ದೆ ಇತ್ಯಾದಿ.

ಲಕ್ಷಣಗಳು : ಗಂಡು-ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ಚಳಿಗಾಲದಲ್ಲಿ ಮೇಲ್ಭಾಗ ಬೂದು, ಕೆಳಭಾಗ ಬಿಳಿ, ಬಾಲ ಕವಲಾಗಿದೆ. ಕೆಂಪುಕೊಕ್ಕು ಮತ್ತು ಕಾಲುಗಳು. ಹಕ್ಕಿ ಕುಳಿತಾಗ ರೆಕ್ಕೆಗಳ ತುದಿ ಬಾಲದಿಂದ ಮುಂದೆ ಚಾಚಿರುತ್ತದೆ. ಬೇಸಿಗೆಯಲ್ಲಿ ತಲೆ ಕಪ್ಪು ಮತ್ತು ಕೆಳಭಾಗ ಕಡು ಬೂದು.

ಆಹಾರ : ಚಿಕ್ಕಪುಟ್ಟ ಮೀನು, ಗೊದಮೊಟ್ಟೆ, ಏಡಿ, ಕೀಟಗಳು.

ಸಂತಾನಾಭಿವೃದ್ಧಿ : ಉತ್ತರ ಭಾರತ (ಕಾಶ್ಮೀರ). ಚಳಿಗಾಲದಲ್ಲಿ ವಲಸೆ ಬರುತ್ತವೆ.

 —-

ಹೆರ್ರಿಂಗ್ ಕಡಲಕಾಗೆ (HERRING GULL)
ಲಾರಸ್ ಆರ‍್ಗೆಂಟೇಟಸ್ (Larus argentatus)

220_69_PP_KUH

ಗಾತ್ರ : ೬೦ ಸೆಂ.ಮೀ.

ಆವಾಸ : ಸಮುದ್ರ ಕಿನಾರೆ, ನದಿ, ಸರೋವರ ಮತ್ತು ಜವುಗು ಪ್ರದೇಶ.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ದೊಡ್ಡ ಕಡಲ ಕಾಗೆ. ಹಳದಿಕಲುಗಳು, ಉದ್ದ-ಹಳದಿ ಕೊಕ್ಕು, ಕೆಳ ಡವಡೆಯ ತುದಿಯಲ್ಲಿ ಕೆಂಪು ಚುಕ್ಕೆ ಪ್ರಮುಖ ಲಕ್ಷಣಗಳು. ರೆಕ್ಕೆಯ ಕಪ್ಪು ಗರಿಗಳ ಮೇಲೆ ಬಳಿ ‘ಕನ್ನಡಿ’ ಚಳಿಗಾಲದಲ್ಲಿ ತಲೆ ಕಂದುಬಣ್ಣಕ್ಕೆ ತಿರುಗುತ್ತದೆ.

ಆಹಾರ : ಮೃದ್ವಂಗಿ, ಏಡಿ ಮತ್ತು ಮೀನು.

ಸಂತಾನಾಭಿವೃದ್ಧಿ : ಉತ್ತರ ಏಷ್ಯಾದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.

 —-

ಚಿಕ್ಕ ಟರ್ನ್ (LITTLE TERN)
ಸ್ಟರ್ನಾ ಆಲ್ಬಿಫ್ರಾಂಸ್ (Sterna albifrons)

221_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ಉಪ್ಪು ನೀರಿನ ಕೊಳ, ಹಿನ್ನೀರು, ಅಳಿವೆ, ನದಿ ಕೆರೆ ಇತ್ಯಾದಿಗಳು.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಚಿಕ ಟರ್ನ್‌ ಕಪ್ಪು, ಬೂದು, ಬಿಳಿ ಮಿಶ್ರಿತ ಹಕ್ಕಿ. ಬೇಸಗೆಯಲ್ಲಿ ಲತೆ ಕಪ್ಪು ಚಳಿಗಾಲದಲ್ಲಿ ಬಿಳಿ ಛಾಯೆ ಹೆಚ್ಚು ಮುಂತಲೆ ಬಿಳಿ ಕೊಕ್ಕು ಬೇಸಗೆಯಲ್ಲಿ ಹಳದಿ; ಚಳಿಗಾಲದಲ್ಲಿ ಕಪ್ಪು. ಕಾಲು ಬೇಸಗೆಯಲ್ಲಿ ಹಳದಿ, ಚಳಿಗಾಲದಲ್ಲಿ ಕೆಂಪು.

ಆಹಾರ : ಸಣ್ಣ ಮೀನು, ಜಲಚರ ಪ್ರಾಣಿ, ಕೀಟಗಳು.

ಸಂತಾನಾಭಿವೃದ್ಧಿ : ಮೇ ಮತ್ತು ಜೂನ್ ತಿಂಗಳುಗಳಲ್ಲಿ. ಮರಳು ಅಥವಾ ಮಣ್ಣಿನಲ್ಲಿ ತಟ್ಟೆಯಂತಹ ಹೊಂಡದಲ್ಲಿ ಮೊಟ್ಟೆ ಕಂದು ಚುಕ್ಕೆ ಗಳಿರುವ ಮರುಳು ಬಣ್ಣದ ಅಥವಾ ತಿಳಿ ಹಸಿರಿನ ೨-೩ ಮೊಟ್ಟೆಗಳು.

 —-

ಕಪ್ಪು ಹೊಟ್ಟೆಯ ಸ್ಯಾಂಡ್ ಗ್ರೌಸ್ (BLACKBELLIED SANDGROUSE)
ಟಿರೋಕ್ಲಿಸ್ ಓರಿಯಂಟಾಲಿಸ್ (Pterocles orientalis)

222_69_PP_KUH

ಗಾತ್ರ : ೩೭-೩೯ ಸೆಂ.ಮೀ.

ಆವಾಸ : ನೀರರುವೆಡೆ ಗುಂಪುಗಳಲ್ಲಿ. ಅರೆ ಮರುಭೂಮಿಯಲ್ಲಿ

ಲಕ್ಷಣಗಳು : ಪಾರಿವಾಳವನ್ನು ಹೋಲುವ ಹಕ್ಕಿ. ಗಿಡ್ಡ ಬೂದು ಬಣ್ಣದ

ಕೊಕ್ಕು. ಎದೆ ಮತ್ತು ಹೊಟ್ಟೆ ಕಪ್ಪು. ಮೊನಚಾದ ಬಾಲ. ರೆಕ್ಕೆಗಳ ಕೆಳಭಾಗ ಬಿಳಿ. ಗಂಡು : ಮರುಳು ಬೂದು ಬಣ್ಣ, ಆಲಿವ್ ಕಪ್ಪು ಚುಕ್ಕಿಗಳು ಗಂಡು : ಮರಳು ಬೂದು ಬಣ್ಣ, ಆಲಿವ್ ಕಪ್ಪು ಚುಕ್ಕಿಗಳು ಗಂಟಲು ಮೇಲ್ಭಾಗದಲ್ಲಿ ಕೆಂಗಂದು ಕೆಳಭಾಗದಲ್ಲಿ ಕಪ್ಪು. ಹೆಣ್ಣು : ಗುಲಾಬಿ-ಬೂದು ಕುತ್ತಿಗೆ ಮತ್ತು ತಲೆ ಮೇಲೆ ಚುಕ್ಕೆಗಳು.

ಆಹಾರ : ಹುಲ್ಲು, ಬೀಜ ಮತ್ತು ಕಾಳುಗಳು.

ಸಂತಾನಾಭಿವೃದ್ಧಿ : ಮೆಡಿಟರೇನಿಯನ್ ಮತ್ತು ಮದ್ಯ ಏಷ್ಯಾಗಳಲ್ಲಿ, ಚಳಿಗಾಲದಲ್ಲಿ ವಲಸೆಬರುತ್ತವೆ.