ಸಾಮಾನ್ಯ ಟರ್ನ್ (COMMON TERN)
ಸ್ಟರ್ನಾ ಹಿರುಂಡೋ (Sterna hirnudo)

223_69_PP_KUH

ಗಾತ್ರ : ೩೩ ಸೆಂ.ಮೀ.

ಆವಾಸ : ಸಮುದ್ರ ಕಿನಾರೆ, ಸರೋವರ ಮತ್ತು ನದಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಮುಂತಲೆ ಬಿಳಿ ತಲೆಯಲ್ಲೂ ಕಪ್ಪು-ಬಿಳಿ ರೇಖೆಗಳು. ಬಿಳಿ ಗಡ್ಡ ಮತ್ತು ಗಂಟಲು. ರೆಕ್ಕೆ ಬೂದು. ಕಪ್ಪು ಕಾಲು ಮತ್ತು ಕೊಕ್ಕು ಎದೆ ಬೂದು.

ಆಹಾರ : ಮೀನು, ಏಡಿ, ಸೀಗಡಿ, ಕೀಟ ಇತ್ಯಾದಿ.

ಸಂತಾನಾಭಿವೃದ್ಧಿ : ಮಧ್ಯ ಏಷ್ಯಾದಲ್ಲಿ. ಚಳಿಗಾಲದಲ್ಲಿ ಕರ್ನಾಟಕದ ಕಡಲ ತೀರಕ್ಕೆ ವಲಸೆ ಬರುತ್ತವೆ.

—- 

ಹಸಿರು ಇಂಪೀರಿಯಲ್ ಪಾರಿವಾಳ (GREEN IMPERIAL PIGEON)
ಡಕುಲಾ ಅನಿಯಾ (Ducula aenea)

224_69_PP_KUH

ಗಾತ್ರ : ೪೩-೪೭ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟಕಾಡು.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ ತಲೆ, ಕುತ್ತಿಗೆ, ಎದೆ ಮತ್ತು ಹೊಟ್ಟೆ ಬೂದು ಬಣ್ಣ. ಉಳಿದಂತೆ, ಮೇಲ್ಭಾಗ, ರೆಕ್ಕೆಗಳು ಮತ್ತು ಬಾಲ ಹೊಳೆಯುವ ಹಿತ್ತಾಳೆ ಹಸಿರು ಬಣ್ಣ ಬಾಲದ ಕೆಳಭಾಗದಲ್ಲಿ ಕೆಂಗಂದು. ಮರಗಳಲ್ಲಿ ವಾಸಿಸುವ ದೊಡ್ಡ ಗಾತ್ರದ ಪಾರಿವಾಳ. ಒಂಟಿಯಾಗಿ ಇಲ್ಲವೆ ಜೋಡಿಯಾಗಿ ಕಾಣಸಿಗಬಹುದು.

ಆಹಾರ : ಫಲಾಹಾರಿ ಅತ್ತಿ, ಆಲದ ಹಣ್ಣು ಅಚ್ಚುಮೆಚ್ಚು.

ಸಂತಾನಾಭಿವೃದ್ಧಿ : ಬಹುತೇಕ ಏಪ್ರಿಲ್-ಮೇ ತಿಂಗಳುಗಳಲ್ಲಿ ಹೆಚ್ಚು ಎತ್ತರವಿಲ್ಲದ ಮರಗಳ ಮೇಲೆ ಕಡ್ಡಿಗಳ ಗೂಡು. ಒಂದು ಬಿಳಿ ಮೊಟ್ಟೆ

—- 

ಬೂದು ಮುಖದ ಹಸಿರು ಪಾರಿವಾಳ (GREYFRONTED GREEN BIGEON)
ಟ್ರಿರಾನ್ ಪಾಂಪೆಡೋರ (Treron pomadora)

225_69_PP_KUH

ಗಾತ್ರ : ೨೮೩೦ ಸೆಂ.ಮೀ.

ಆವಾಸ : ಆಲ, ಅಶ್ವಥ ಮೊದಲಾದ ಹಣ್ಣಿರುವ ಮರಗಳಲ್ಲಿ

ಲಕ್ಷಣಗಳು : ಸಾಮಾನ್ಯವಾಗಿ ಹಸಿರು ಪಾರಿವಾಳ. ಕೆಂಪು ಕಾಲುಗಳು ಕೆಂಗಂದು ಕವಚ.

ಆಹಾರ : ರಸವುಳ್ಳ ಹಣ್ಣುಗಳು.

ಸಂತಾನಾಭಿವೃದ್ಧಿ : ಡಿಸೆಂಬರಿನಿಂದ ಮಾರ್ಚ್‌ವರೆಗೆ ಸಾಮಾನ್ಯ ಎತ್ತರದ ಮರದ ಮೇಲೆ ಕಡ್ಡಿಗಳ ಗೂಡು, ೩ ಬಿಳಿ ಮೊಟ್ಟೆಗಳು.

—- 

ಸಾಮಾನ್ಯ ಹಸಿರು ಪಾರಿವಾಳ (COMMON GREEN PIGEON)
ಟ್ರಿ. ಪೋನಿಕಾಪ್ಟೆರ (Treron phoenicoptera)

226_69_PP_KUH

ಗಾತ್ರ : ೩೦-೩೩ ಸೆಂ.ಮೀ.

ಆವಾಸ : ಮರದ ಮೇಲೆ ವಾಸಿಸುವ ಸ್ವಲ್ಪ ದೊಡ್ಡ ಗಾತ್ರದ ಪಾರಿವಾಳ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹಳದಿ, ಹಸಿರು, ಕಂದು, ಕಪ್ಪು ಬಣ್ಣಗಳ ಸುಂದರ ಸಪಾರಿವಾಳ. ಕುತ್ತಿಗೆ ಎದೆ ತಿಳಿಹಸಿರಿನ ಹಳದಿ, ಮೇಲ್ಭಾಗ ಹಿತ್ತಾಳೆ ಹಸಿರು, ರೆಕ್ಕೆಗಯ ಬುಡದಲ್ಲಿ ತಿಳಿಗುಲಾಬಿ. ತಲೆ, ಕುತ್ತಿಗೆ ಮೇಲ್ಭಾಗ ಬೂದು.

ಆಹಾರ : ಅತ್ತಿ, ಆಲ, ಅಶ್ವಥ ಹಣ್ಣುಗಳು ಪ್ರಮುಖ ಆಹಾರ. ಇತರೆ ಹಣ್ಣುಗಳನ್ನು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಏಪ್ರೀಲ್ ಮೇ ತಿಂಗಳುಗಳಲ್ಲಿ ಹೆಚ್ಚು ಎತ್ತರವಿಲ್ಲದ ಮರಗಳ ಮೇಲೆ ಕಡ್ಡಿಗಳ ಗೂಡು. ಒಮದು ಬಿಳಿ ಮೊಟ್ಟೆ

—- 

ನೀಲಿ ಪಾರಿವಾಳ (BLUE ROCK PIGEON)
ಕೋಲಂಬ ಲಿವಿಯಾ (Columba livia)

227_69_PP_KUH

ಗಾತ್ರ : ೩೩ ಸೆಂ.ಮೀ.

ಆವಾಸ : ಮನುಷ್ಯನ ಜೊತೆಗೆ ಬದುಕುವ ಪಕ್ಷಿ. ಹಾಳು ಬಿದ್ದ ಮನೆ ಎತ್ತರದ ಬಂಡೆಗಳು, ಹಳ್ಳಿಗಾಡು ಪಟ್ಟಣ ಇತ್ಯಾದಿ.

ಲಕ್ಷಣಗಳು : ಗಂಡು ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ಚಿರಪರಿಚಿತ ಹಕ್ಕಿ. ಕಡುಬೂದು ಬಣ್ಣದ ಲೋಹ ಪಚ್ಚೆ ಕುತ್ತಿಗೆ, ಕೆಂಪು ಕಾಲಿನ ಗಿಡ್ಡ ಕೊಕ್ಕಿನ ಹಕ್ಕಿ. ರೆಕ್ಕೆಗಳ ಮೇಲೆ ಎರಡು ಕಪ್ಪು ಪಟ್ಟೆಗಳಿವೆ. ಬೂದು. ಬಾಲ, ಮೇಲೆ ಕಪ್ಪು ಛಾಯೆ.

ಆಹಾರ : ಕಾಳು, ಬೇಳೆ, ಬೀಜ ಇತ್ಯಾದಿ.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡೀ ಸುರಕ್ಷಿತ ಸ್ಥಳ (ಮನೆಯ ಮಾಡಿನ ಸಂದು, ಎತ್ತರದ ಕಲ್ಲು ಇತ್ಯಾದಿ) ದಲ್ಲಿ ಕಸಕಡ್ಡಿಗಳ ಗೂಡು. ಎರಡು ಬಿಳಿ ಮೊಟ್ಟೆಗಳು.