ನೀಲಗಿರಿ ಕಾಡು ಪಾರಿವಾಳ (NILGIRI WOODPIGEON)
ಕೊಲಂಬ ಎಲ್ಫಿನ್ ಸ್ಟೋನಿ (Columba elphinstonii)

228_69_PP_KUH

ಗಾತ್ರ : ೪೨ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಕಡುಗಳಲ್ಲಿ ಕಂಡುಬರುವ ಇದು ಸ್ಥಳೀಯ ಪ್ರಭೈದ.

ಲಕ್ಷಣಗಳು : ಗಂಡುಹೆಣ್ಣುಗಳು ಒಂದೇ ತೆರನಾಗಿವೆ. ಕೆಂಗಂದು ಬಣ್ಣದ ದೊಡ್ಡ ಗಾತ್ರದ ಪಾರಿವಾಳ. ಕುತ್ತಿಗೆಯ ಮೇಲೆ ಚದುರಂಗದ ಮಣೆಯಂತಹ ರಚನೆಯಿರುತ್ತದೆ. ಕೊಕ್ಕಿನ ಬುಡಕೆಂಪು, ತಲೆ, ಎದೆ, ಕುತ್ತಿಗೆಯ ಕೆಳಭಾಗ ಬೂದು ಬಣ್ಣದಿಂದಿರುವುದು.

ಆಹಾರ : ಚಿಕ್ಕ ದೊಡ್ಡ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸುತ್ತದೆ.

ಸಂತಾನಾಭಿವೃದ್ಧಿ : ಏಪ್ರೀಲ್‌ನಿಂದ ಜೂನ್‌ವರೆಗಿನ ಸಮಯ ಇತರ ಪಾರಿವಾಳಗಳಂತೆ ಕಸಕಡ್ಡಿಗಳಿಂದ ಗೂಡುಕಟ್ಟಿ ಒಂದು ಬಿಳಿ ಮೊಟ್ಟೆ ಇಡುತ್ತದೆ.

—- 

ಕೆಂಪು ಕಪೋತ (RED TURTLE DOVE)
ಸ್ಟ್ರೆಪ್ಟೊಪಿಲಿಯಾ ಟ್ರಾಂಕ್ವಿಬಾರಿಕ (Streptopelia tranquebarica)

229_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಅಪರೂಪದ ಕಪೋತ. ವ್ಯವಸಾಯ ಭೂಮಿಯ ಸಮೀಪ ಮರಗಳಲ್ಲಿ ಕಾಣಬಹುದು.

ಲಕ್ಷಣಗಳು : ಗಂಡು ಕಪೋತ ಕಡು ಗುಲಾಬಿ ಅಥವಾ ಇಟ್ಟಿಗೆ ಬಣ್ಣ ಹೊಂದಿರುತ್ತದೆ. ತಲೆ ಬೂದು, ಕುತ್ತಿಗೆಯ ಮೇಲೆ ಕಪ್ಪು ಅಡ್ಡ ಪಟ್ಟಿ ಇರುತ್ತದೆ. ಬಾಲ ಬೂದುಬಣ್ಣ, ರೆಕ್ಕೆಗಳ ತುದಿ ಕಪ್ಪು. ಹೆಣ್ಣು ಕಪೋತಕ್ಕೆ ತಿಳಿಗೆಗೆಂಪು ಬಣ್ಣ, ಕಪ್ಪು ಕೊಕ್ಕು, ಕೆಂಪುಕಾಲು ಇರುತ್ತದೆ.

ಆಹಾರ : ಕಾಳು, ಬೀಜ ಇತ್ಯಾದಿ ಸೇವಿಸುತ್ತದೆ.

ಸಂತಾನಾಭಿವೃದ್ಧಿ : ಸರಿಯಾಗಿ ತಿಳಿದಿಲ್ಲ. ಬಹುಶಃ ವರ್ಷವಿಡೀ ಸಂತಾನಾಭಿವೃದ್ಧಿ ಮಾಡಬಹುದು. ಮರಗಳ ಮೇಲೆ ಕಡ್ಡಿಕಸಗಳಿಂದ ಗೂಡು ಕಟ್ಟಿ ಎರಡು ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—- 

ಚುಕ್ಕೆ ಕಪೋತ (SPOTTED DOVE)
ಸ್ಟ್ರೆಪ್ಟೊಪಿಲಿಯಾ ಚೈನೆನ್ಸಿಸ್ (Streptopelia chinensis)

230_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಕಾಡು, ಹಳ್ಳಿ ಸಮೀಪದ ತೋಪು ಮೊದಲಾದೆಡೆ ಇರುವ ಇದನ್ನು ಮನೆಗಳ ಹತ್ತಿರ, ಹೂತೋಟಗಳಲ್ಲೂ ಕಾಣಬಹುದು.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ತಿಳಿ ಗುಲಾಬಿ ಬಣ್ಣ, ಕುತ್ತಿಗೆಯ ಮೇಲೆ ಕಪ್ಪು ಬಿಳಿ ಚುಕ್ಕೆಗಳಿರುತ್ತವೆ. ಕೆಳಭಾಗ ಬೂದು ಬಣ್ಣದಿಂದ ಕೂಡಿದ್ದು ಕೆಂಪು ಕಾಲುಗಳಿರುತ್ತವೆ.

ಆಹಾರ : ಕಾಳು, ಬೀಜ ಇತ್ಯಾದಿಗಳನ್ನು ಸೇವಿಸುತ್ತವೆ.

ಸಂತಾನಾಭಿವೃದ್ಧಿ : ವಾಸವಿರದ ಮನೆ, ಮರಗಳಕೊಂಬೆಗಳ ನಡುವೆ ಕಸಕಡ್ಡಿಗಳಿಂದ ಗೂಡುಕಟ್ಟಿ ಎರಡು ಬಿಳಿ ಮೊಟ್ಟೆಗಳನ್ನಿಡುತ್ತವೆ. ವರ್ಷವಿಡೀ ಸಮತಾನಾಭಿವೃದ್ಧಿಯ ಪ್ರಕ್ರಿಯೆಯನ್ನು ಕಾಣಬಹುದು.

—- 

ಪಚ್ಚೆ ಕಪೋತ (EMERALD DOVE)
ಚ್ಯಾಲ್ಕೊಫಾಪ್ಸ್ ಇಂಡಿಕ (Chalcophaps indica)

231_69_PP_KUH

ಗಾತ್ರ : ೨೭ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಕಾಡುಗಳು, ಘಟ್ಟ ಪ್ರದೇಶದ ರಸ್ತೆಗಳ ಮೇಲೆ ಸಾಮಾನ್ಯವಾಗಿ ಕಂಡುಬರುತ್ತವೆ. ಬಿದಿರು ಮೆಳೆಗಳು ಇವುಗಳಿಗೆ ಪ್ರಶಸ್ತ ವಾಸಸ್ಥಳಗಳು.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಬೂದು ಕಂದು, ಪಚ್ಚೆ ಮತ್ತು ಕಪ್ಪ ಬಣ್ಣಗಳ ಆಕರ್ಷಕ ಪಕ್ಷಿ ಮಂದಲೆ ಬಿಳಿ, ಉಳಿದಂತೆ ತಿಳಿಂದು, ರೆಕ್ಕೆ ಮತ್ತು ದೇಹದ ಮೇಲ್ಭಾಗ ಪಚ್ಚೆ ರಕ್ಕೆಯ ತುದಿ ಮತ್ತು ಬಾಲದ ತುದಿ ಕಪ್ಪು, ಕೆಳಭಾಗ ಕರಿಕೆಂದು ಬಣ್ಣದಿಂದೊಡಗೂಡಿದೆ.

ಆಹಾರ : ಕಾಳು, ಬೇಳೆ, ಮತ್ತು ಹಣ್ಣುಗಳನ್ನು ಸೇವಿಸುತ್ತವೆ.

ಸಂತಾನಾಭಿವೃದ್ಧಿ : ಜನವರಿಯಿಂದ ಮೇ ವರೆಗಿನ ಅವಧಿ. ಕೆಳಮಟ್ಟದ ಮರ ಅಥವಾ ಬಿದಿರು ಮೆಳೆಗಳಲ್ಲಿ ಕಡ್ಡಿಗಳಿಂದ ಗೂಡುಕಟ್ಟಿ ಎರಡು ‘ಬಿಳಿಕಾಫಿ’ ಬಣ್ಣದ ಮೊಟ್ಟೆಗಳನ್ನಿಡುತ್ತವೆ.

—- 

ದೊಡ್ಡ ಗಿಳಿ (LARGE PARAKEET)
ಸಿಟ್ಟಕ್ಯುಲ ಯುಪಟ್ರಿಯ (Psittacula eupatria)

232_69_PP_KUH

ಗಾತ್ರ : ೫೩ ಸೆಂ.ಮೀ.

ಆವಾಸ : ಹಳ್ಳಿಕಾಡು, ವ್ಯವಸಾಯ ಭೂಮಿ ಬಳಿ ಮತ್ತು ತೋಪುಗಳಲ್ಲಿ ಕಾಣಬಹುದು.

ಲಕ್ಷಣಗಳು : ನಮ್ಮ ನಾಡಿನ ದೊಡ್ಡ ಗಾತ್ರದ ಗಿಳಿ, ಹಸಿರು ಮೇಬಣ್ಣ, ಬಲಿಷ್ಠ ಬಾಗಿದ ಕೆಂಪು ಕೊಕ್ಕು, ಭುಜದ ಮೇಲೆ ಕೆಂಪು ಪಟ್ಟಿ ಪ್ರಮುಖ ಲಕ್ಷಣ. ಕುತ್ತಿಗೆಯ ಮೇಲೆ ಗುಲಾಬಿ ಕತ್ತು ಪಟ್ಟಿ, ಕೆಳಭಾಗದಲ್ಲಿ ಕಪ್ಪು ಪಟ್ಟಿ ಇರುತ್ತದೆ. ಹೆಣ್ಣುಗಿಳಿಗೆ ಈ ಪಟ್ಟಿಗಳಿಲ್ಲ. ಗುಂಪುಗಳಲ್ಲಿ ವಾಸಿಸುವ ಇವು ಸದಾ ಗದಲದ ಹಕ್ಕಿಗಳು.

ಆಹಾರ : ಕಾಳು, ಬೇಳೆ ಮತ್ತು ಹಣ್ಣುಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಎಪ್ರೀಲ್‌ನ ಅವಧಿ. ಹಳೆ ಮನೆಯ ಗೋಡೆಯಲ್ಲಿ, ಮರದ ಪೊಟರೆಯಲ್ಲಿ ಗೂಡು ಕಟ್ಟುತ್ತವೆ. ಹಳೆಯ ರಂಧ್ರ ಅಥವಾ ಪೊಟರೆ ಉಪಯೋಗಿಸಬಹುದು. ೨-೪ ಬಿಳಿ ಮೊಟ್ಟೆಗಳನ್ನಿಡುತ್ತವೆ.