ಗುಲಾಬಿ ಉಂಗುರದ ಗಿಳಿ (ROSERINGED PARAKEET)
ಸಿಟ್ಟಕ್ಯುಲಾ ಕ್ರಮೆರಿ (Psittacula krameri)

233_69_PP_KUH

ಗಾತ್ರ : ೪೨ ಸೆಂ.ಮೀ.

ಆವಾಸ : ಅತ್ಯಂತ ಸಾಮಾನ್ಯ ಗಿಳಿ ಭತ್ತದ ಗದ್ದೆಗಳಿಂದ ಹಿಡದು ಪೇಟೆ ಪಟ್ಟಣ ಕಾಡುಗಳಲ್ಲಿಯೂ ಕಾಣಬಹುದು.

ಲಕ್ಷಣಗಳು : ಹಸಿರು ತಲೆ, ಬಾಗಿದ ಮೊನಚಾದ ಕೆಂಪುಕೊಕ್ಕು, ಪಚ್ಚೆ ಬಾಲ, ಗಂಡು ಗಿಳಿಯ ಕುತ್ತಿಗೆಯ ಸುತ್ತ ಗುಲಬಿಕಪ್ಪು ಬಣ್ಣದ ಉಂಗುರವಿರುತ್ತದೆ. ಹೆಣ್ಣುಗಿಳಿಗೆ ಈ ಉಂಗುರವಿಲ್ಲ. ಸದ್ದು ಮಾಡುತ್ತಾ ಗುಂಪಾಗಿ ಗದ್ದೆಗೆ ಇಳಿಯುತ್ತವೆ.

ಆಹಾರ : ಹಣ್ಣು, ಕಾಳು, ಬೀಜ ಇತ್ಯಾದಿಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಪೈರಿಗೆ ಸಾಕಷ್ಟು ಹಾನಿ ಮಾಡುತ್ತವೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರಿಲ್‌ವರೆಗಿನ ಸಮಯ. ಮರದ ಸಹಜ ಪೊಟರೆಯಲ್ಲಿ ಇವುಗಳ ಗೂಡು. ಹಳೆಯ ಎತ್ತರದ ಗೋಡೆಯಲ್ಲಿ ರಂಧ್ರು ಕೊರೆದು ಗೂಡು ಮಾಡಬಹುದು. ೪-೬ ಬಿಳಿ ಮೊಟ್ಟೆಗಳನ್ನು ಇಡುತ್ತವೆ.

—- 

ಗುಲಾಬಿ ತಲೆಯ ಗಿಳಿ (BLOSSOMHEADED PARAKEET)
ಸಿ. ಸೈಯೊನೋಸಿಫಾಲ (Psittacula cyanocephala)

234_69_PP_KUH

ಗಾತ್ರ : ೩೬ ಸೆ.ಮೀ.

ಆವಾಸ : ಪೇಟೆ, ಪಟ್ಟಣ, ಹಳ್ಳಿ, ಕಾಡು ಹೀಗೆ ಎಲ್ಲೆಡೆ ಕಂಡುಬರುವ ಸಾಮಾನ್ಯಗಿಳಿ.

ಲಕ್ಷಣಗಳು : ಉದ್ದನೆಯ ಬಾಲದ ಸುಂದರ ಗಿಳಿ. ಗುಲಾಬಿಕೆಂಪು ತಲೆ, ಮಾಸಲು ಕೊಕ್ಕು ಹೊಂದಿರುತ್ತದೆ. ಕೆಂಪು ಭುಜದ ಪಟ್ಟಿ ಕುತ್ತಿಗೆಯ ಸುತ್ತ ಕಪ್ಪು ಉಂಗುರವಿದೆ. ಹೆಣ್ಣು ಗಿಳಿಯ ತಲೆ ಬೂದು ಬಣ್ಣ ಕುತ್ತಿಗೆಯ ಸುತ್ತ ಹಳದಿ ಪಟ್ಟಿ ಇರುತ್ತದೆ. ಆದರೆ ಕೆಂಪು ಭುಜದ ಪಟ್ಟಿ ಇರುವುದಿಲ್ಲ. ಬಾಲದ ಗರಿಗಳ ತುದಿಯ ಬಿಳಿ ಪ್ರಮುಖ ಲಕ್ಷಣ.

ಆಹಾರ : ಪೈರು, ಪಜ್ಜೆಗಳ ಕಾಳು, ಹಣ್ಣು ಇತ್ಯಾದಿ ತಿನ್ನುವ ಪಕ್ಷಿ. ಪೀಡೆ ಎಂದು ಗುರುತಿಸಲಾಗುವುದು.

ಸಂತಾನಾಭಿವೃದ್ಧಿ : ಜನವರಿಯಿಂದ ಮೇ ತಿಂಗಳ ಸಮಯದಲ್ಲಿ ಮರಗಳ ತೂತುಗಳಲ್ಲಿ ೪-೫ ಬಿಳಿ ಮೊಟ್ಟೆ ಇಡುತ್ತವೆ.

—- 

ನೀಲಿ ರೆಕ್ಕೆಗಿಳಿ (BLUEWINGED PARAKEET)
ಸಿ. ಕೊಲುಂಬಾಯಿಡಿಸ್ (Psittacula columboides)

235_69_PP_KUH

ಗಾತ್ರ : ೩೮ ಸೆಂ.ಮೀ.

ಆವಾಸ : ಹಳ್ಳಿಗಾಡು, ತೆರೆದ ಕಾಡು, ಪಟ್ಟಣದಲ್ಲಿನ ಎತ್ತರದ ಮರಗಳಲ್ಲಿ ವಾಸ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗುಲಾಬಿ ತಲೆ ಗಿಳಿಯನ್ನು ಹೋಲುತ್ತದೆ. ಆದರೆ ತಲೆ ನೀಲಿ ಬೂದು. ಕತ್ತಿನ ಕರಿಪಟ್ಟಿಯ ಕೆಳಗೆ ನೀಲಿ ಪಟ್ಟಿ. ಬಾಲದ ಗರಿಗಳು ನೀಲಿ, ರೆಕ್ಕೆಯ ಗರಿಗಳೂ ನೀಲಿಹಸಿರು, ಕೆಂಪು ಕೊಕ್ಕು, ಹೆಣ್ಣು ಗಿಳಿಯ ಕೊಕ್ಕು ಕಪ್ಪಾಗಿದೆ, ಕತ್ತಿನಲ್ಲಿ ನೀಲಿ ಪಟ್ಟಿ ಇಲ್ಲ.

ಆಹಾರ : ಹಣ್ಣು, ಕಾಳು ಇತ್ಯಾದಿ. ಕೆಲವೊಮ್ಮೆ ಭತ್ತದ ಗದ್ದೆಗೆ ಹಾನಿಯನ್ನುಂಟು ಮಾಡಬಹುದು.

ಸಂತಾನಾಭಿವೃದ್ಧಿ : ಜನವರಿಯಿಂದ ಮಾರ್ಚ್‌ನ ಅವಧಿ ಮರಕುಟುಕ ಕುಟ್ರುಹಕ್ಕಿಗಳ ಗೂಡನ್ನು ಉಪಯೋಗಿಸಿಕೊಂಡು ನಾಲ್ಕು ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—- 

ಕಿರುಗಿಳಿ (LORIKEET)
ಲೋರಿಕ್ಯುಲಸ್ ವರ‍್ಲಿಸ್ (Loriculus vernalis)

236_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಮರಗಳ ಮೇಲೆ ವಾಸ. ಎಲೆಗಳಿಂದ ತುಂಬಿದ ಮರಗಳಲ್ಲೇ ಹೆಚ್ಚಾಗಿರುತ್ತವೆ.

ಲಕ್ಷಣಗಳು : ಎದ್ದು ಕಾಣುವ ಹಸಿರು ಬಣ್ಣದ ಚಿಕ್ಕ ಗಿಳಿ. ಕೆಂಪಾದ ಕೊಕ್ಕು ಹಾಗು ಕಾಲು, ಗಿಡ್ಡಬಾಲ ಪ್ರಮುಖ ಲಕ್ಷಣಗಳು. ಬಾಲದ ಬುಡದಲ್ಲಿ ಕೆಂಪು ಗುರುತು. ಗಂಡು ಗಿಳಿಯ ಗಂಟಲಿನಲ್ಲಿ ನೀಲಿ ಪಟ್ಟಿ. ಹೆಣ್ಣು ಹಕ್ಕಿಯ ಕೊಕ್ಕು ತಿಳಿಗೆಂಪು. ಬಾಲದ ಬುಡದ ಕೆಂಪು ಗುರುತು ಅಸ್ಪಷ್ಟ.

ಆಹಾರ : ಆಲದ ಹಣ್ಣು ಅಚ್ಚುಮೆಚ್ಚು. ಇತರೆ ಹಣ್ಣು ಮತ್ತು ಮಕರಂಧ ಸೇವಿಸುವುದು ಸಾಮಾನ್ಯ.

ಸಂತಾನಾಭಿವೃದ್ಧಿ : ಜನವರಿಯಿಂದ ಏಪ್ರೀಲ್‌ನ ಅವಧಿ. ಹಳೆಯ ಲಡ್ಡುವರದ ಪೊಟರೆಯಲ್ಲಿ ಗೂಡು. ಚಿಕ್ಕ ಮೂರು ಬಿಳಿ ಮೊಟ್ಟೆ ಗಳನ್ನಿಡುತ್ತದೆ.

—- 

ಶಬಲ ಜುಟ್ಟಿನ ಕೋಗಿಲೆ (PIEDCRESTED CUCKOO)
ಕ್ಲಮೆಟಾರ್ ಜಾಕೊಬಿನಸ್ (Clamator jacobinus)

237_69_PP_KUH

ಗಾತ್ರ : ೩೩ ಸೆಂ.ಮೀ.

ಆವಾಸ : ತೆರೆದ ಕಾಡು, ಹಳ್ಳಿಗಾಡು ಮತ್ತು ಮನುಷ್ಯರ ಆವಾಸ.

ಲಕ್ಷಣಗಳು : ಗಂಡುಹೆಣ್ಣುಗಳು ಒಂದೇ ತೆರನಾಗಿರುತ್ತವೆ. ಕಪ್ಪು ಬಿಳುಪು ಕೋಗಿಲೆ ಜಾತಿ ಪಕ್ಷಿ ಬಾಲದ ತುದಿ ಮತ್ತು ರೆಕ್ಕೆಗಳ ಮೇಲೆ ಬಿಳಿ ಗುರುತು. ಮೇಲ್ಭಾಗ ಕಪ್ಪು ಗಂಟಲು, ಕುತ್ತಿಗೆ ಕೆಳಭಾಗ ಬಿಳಿ. ತಲೆಯ ಮೇಲೆ ಕರಿ ಜುಟ್ಟು ಪ್ರಮುಖ ಲಕ್ಷಣ.

ಆಹಾರ : ಕೀಟಗಳು ಮತ್ತು ಹುಳು, ಡಿಂಬ ಇತ್ಯಾದಿ.

ಸಂತಾನಾಭಿವೃದ್ಧಿ : ಜೂನ್ ನಿಂದ ಆಗಸ್ಟ್ ವರೆಗಿನ ಅವಧಿ. ಬಾಬ್ಲರ್ ಗೂಡಿನಲ್ಲಿ ಮೊಟ್ಟೆ ಇಡುವ ಪರಾವಲಂಬಿ ಹಕ್ಕಿ ಇದು. ಬಾಬ್ಲರ್ ಮೊಟ್ಟೆಯನ್ನು ಹೋಲುವ ನೀಲಿಯ ಮೊಟ್ಟೆಗಳಿರುತ್ತವೆ.