ಭಾರತದ ಚಾತಕ (INDIAN CUCKOO)
ಕು. ಮೈಕ್ರೊಪ್ಟೆರಸ್ (Cuculus micropterus)

238_69_PP_KUH

ಗಾತ್ರ : ೩೩ ಸೆಂ.ಮೀ.

ಆವಾಸ : ಕಾಡು ಮತ್ತು ತೋಪುಗಳಲ್ಲಿ ಕಾಣಸಿಗುತ್ತದೆ.

ಲಕ್ಷಣಗಳು : ಮೇಲ್ಭಾಗ ಬಳಪದ ಕಂದು. ತಲೆ, ಕುತ್ತಿಗೆ ಬೂದು. ಕೆಳಗಡೆ ಬಿಳಿ, ಬಾಲದ ತುದಿಗೆ ಸ್ವಲ್ಪ ಮೊದಲು ಅಡ್ಡಪಟ್ಟಿ ಪ್ರಮುಖ ಲಕ್ಷಣ. ಹೆಣ್ಣುಗಳಿಗೆ ಕೆಂಗಂದು ಛಾಯೆಯ ಎದೆ ಮತ್ತು ಗಂಟಲು ಇರುತ್ತದೆ.

ಆಹಾರ : ಕೀಟಗಳು ಮತ್ತು ಕಂಬಳಿ ಹುಳುಗಳೆಂದರೆ ಅಚ್ಚುಮೆಚ್ಚು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಆಗಸ್ಟನ್ ಅವಧಿ. ಕಾಜಾಣ, ಬಂಗಾರದ ಹಕ್ಕಿಗಳ ಪರಾವಲಂಬಿ.

—- 

ಕುಕೂ (ಚಾತಕ) (CUCKOO)
ಕ್ಯುಕುಲಸ್ ಕೆನೊರಸ್ (Cuculus canorus)

239_69_PP_KUH

ಗಾತ್ರ : ೩೨-೩೪ ಸೆಂ.ಮೀ.

ಆವಾಸ : ಕಾಡುಗಳಲ್ಲಿ ಮರಗಳ ಮೇಲೆ ವಾಸ.

ಲಕ್ಷಣಗಳು : ಕಡು ಬೂದು ಮೇಲ್ಭಾಗ. ಕುತ್ತಿಗೆ, ತಲೆ ಮತ್ತು ಹೊಟ್ಟೆಯ ಭಾಗದಲ್ಲಿ ಬಿಳಿ ಹಿನ್ನೆಲೆಯ ಕಪ್ಪು ಅಡ್ಡಪಟ್ಟಿಗಳು. ಬಾಲ ಕಪ್ಪು ಕಂದು ಬಣ್ಣದಿಂದ ಕೂಡಿದ್ದು ಬಿಳಿ ಗುರುತುಗಳಿರುತ್ತವೆ. ಹೆಣ್ಣು ಕೆಂಗಂದು ಅಥವಾ ಕಪ್ಪು ಕಂದು.

ಆಹಾರ : ಕೀಟುಗಳು, ಕಂಬಳಿ ಹುಳು, ಜೀರುಂಡೆಗಳಿಗೆ ಪ್ರಾಶಸ್ರ ಯ

ಸಂತಾಕನಾಭಿವೃದ್ಧಿ : ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಸಮಯ. ಹಲವಾರು ಹಕ್ಕಿಗಳ ಗೂಡನ್ನು ಅವಲಂಬಿಸುತ್ತದೆ.

—- 

ಗೋಳಿನ ಕೋಗಿಲೆ (BAYBANDED CUCKOO)
ಕಕೊಮೆಂಟಿಸ್ ಸೊನ್ನೆರೇಟಿ (Cacomantis sonneratii)

240_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ತೆರೆದ ಕಾಡು, ತೋಪು, ತೋಟಗಳು.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಬೂದು ತಲೆ, ಬೂದುಕಂದು ಮೇಲ್ಭಾಗ, ಬಾಲದ ತುದಿ ಬಿಳಿ ಕೆಳಭಾಗದಲ್ಲಿ ತಿಳಿಬೂದು ಬಣ್ಣ ಜೊತೆಗೆ ಕರಿ ಅಡ್ಡ ಪಟ್ಟಿಗಳಿರುತ್ತವೆ. ಹೆಣ್ಣು ಹಕ್ಕಿಯಲ್ಲಿ ಕೆಂಪು ಹಂತ ತಲುಪಬಹುದು ಉಳಿದಂತೆ ವ್ಯತ್ಯಾಸವಿಲ್ಲ.

ಆಹಾರ : ಕೀಟಗಳು, ಕಂಬಳಿ ಹುಳಗಳನ್ನು ತಿನ್ನುವುದು.

ಸಂತಾನಾಭಿವೃದ್ಧಿ : ಜುಲೈನಿಂದ ಆಗಸ್ಟ್‌ವರೆಗಿನ ಅವಧಿ. ದರ್ಜಿ ಮತ್ತು ಬಾಬ್ಲರ್ ಹಕ್ಕಿಗಳ ಪರಾವಲಂಬಿ.

—- 

ಕಾಜಾಣ ಕುಕೂ (DRONGO CUCKOO)
ಸುರಿನ್ನಿಕ್ಯುಲಸ್ ಲಗಬ್ರಿಸ್ (Surniculus lugubris)

241_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ತೆರೆದ ಕಾಡು, ಹಳ್ಳ ಗಾಡು ಇತ್ಯಾದಿಗಳ ಮರಗಳ ಮೇಲೆ ವಾಸ. ಸ್ಥಳೀಯ ಪಕ್ಷಿ.
ಲಕ್ಷಣಗಳು : ಕಪ್ಪು ಕಾಜಾಣವನ್ನು ಹೋಲುತ್ತದೆ, ಬಾಲದ ಕೆಳಗಿನ ಬಿಳಿ ಗರಿಗಳು. ಬಾಲದ ಇಕ್ಕೆಡೆಯ ಗರಿಗಳಲ್ಲಿ ಬಿಳಿಯ ಅಡ್ಡ ಪಟ್ಟಿ ಪ್ರಮುಖ ಲಕ್ಷಣ.

ಆಹಾರ : ಹುಳುಗಳು ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಅಕ್ಟೋಬರ‍್ವರೆಗೆ ಇತರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಪರಾವಲಂಬಿ.

—- 

ಕೋಗಿಲೆ (KOEL)
ಯೂಡೈನಮಿಸ್ ಸ್ಕೋಲಪೇಸಿಯ (Eudynamis scolopacea)

242_69_PP_KUH

ಗಾತ್ರ : ೪೨ ಸೆಂ.ಮೀ.

ಆವಾಸ : ಕಾಡು, ಮಾವಿನ ತೋಪು, ತೋಟ ಇತ್ಯಾದಿಗಳಲ್ಲಿ ಕಾಣುವುದು. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೊಳೆಯುವ ಕಪ್ಪು ಬಣ್ಣ, ತಿಳಿ ಹಸಿರು ಕೊಕ್ಕು, ಕೆಂಪು ಕಣ್ಣಗಳು. ಹೆಣ್ಣು ಕಡು ಕಂದು ಬಣ್ಣ, ದೇಹದ ಮೇಲೆ ಬಿಳಿ ಚುಕ್ಕೆಗಳು ಅಥವಾ ಅಡ್ಡ ಪಟ್ಟಿಗಳು. ಬಾಲ ಉದ್ದ, ಹಸಿರು ಕೊಕ್ಕು, ಮಧುರ ಕಂಠವು ಗಂಡು ಕೋಗಿಲೆಯ ಹೆಚ್ಚುಗಾರಿಕೆ. ಮರದಲ್ಲೆ ವಾಸ. ಅಪರೂಪವಾಗಿ ನೆಲಕ್ಕಿಳಿಯುತ್ತವೆ.

ಆಹಾರ : ಹೆಚ್ಚಾಗಿ ಹಣ್ಣುಗಳು, ಕಂಬಳಿ ಹುಳು ಮತ್ತು ಕೀಟಗಳನ್ನು ತಿನ್ನುವುದು ಉಂಟು.

ಸಂತಾನಾಭಿವೃದ್ಧಿ : ಎಪ್ರೀಲ್‌ನಿಂದ ಆಗಸ್ಟ್‌ನ ಅವಧಿ. ಕಾಗೆ ಗೂಡಿನಲ್ಲಿ ಮೊಟ್ಟೆ ಇಡುವ ಪರಾವಲಂಬಿ. ಕಾಗೆ ಮೊಟ್ಟೆಗಿಂತ ತುಸು ಚಿಕ್ಕ ತಿಳಿನೀಲಿ ಮೊಟ್ಟೆಗಳನ್ನಿಡುತ್ತವೆ.