ನೀಲಿ ಕೊಕ್ಕಿನ ಮಲ್ಕೋಹ (GREENBILLED MALKOHA)
ರ್ಹಾಪೊಡೈಟಿಸ್ ವಿರಿಡಿರೋಸ್ಟ್ರಿಸ್ (Rhopodytes viridirostris)

243_69_PP_KUH

ಗಾತ್ರ : ೩೯ ಸೆಂ.ಮೀ.

ಆವಾಸ : ಕುರುಚಲು ಕಾಡು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹಸಿರು ಬೂದು ಬಣ್ಣದ ಪಕ್ಷಿ. ಹಸಿರು ಕೊಕ್ಕು, ನೀಲಿ ಕಣ್ಣು ಸುತ್ತು, ಹಸಿರುತಿಳಿಕಂದು ಕೆಳಭಾಗವಿರುತ್ತದೆ. ಬಿಳಿ ತುದಿಯ ಉದ್ದನೆಯ ಅಗಲವಾದ ಬಾಲವಿರುತ್ತದೆ.

ಆಹಾರ : ಕಂಬಳಿ ಹುಳು, ಕೀಟ ಮತ್ತು ಇತರೆ ಸಣ್ಣ ಪ್ರಾಣಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಕಂಬಳಿ ಹುಳು, ಕೀಟ ಮತ್ತು ಇತರೆ ಸಣ್ಣ ಪ್ರಾಣಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ವರೆಗಿನ ಅವಧಿ. ಕಡ್ಡಿಗಳ ಅಟ್ಟೆಯಲ್ಲಿ ಎರಡು ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಕುಪ್ಪಳ (COUCAL)
ಸೆಂಟ್ರೋಪಸ್ ಸೈನೆನ್ಸಿಸ್ (Centropus sinensis)

244_69_PP_KUH

ಗಾತ್ರ : ೪೮ ಸೆ.ಮೀ.

ಆವಾಸ : ಹುಲ್ಲುಗಾವಲು, ತೋಟ ಮತ್ತು ಕುರುಚಲು ಕಾಡುಗಳಲ್ಲಿ ವಾಸಿಸುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೊಳೆಯುವ ಕಪ್ಪು ಬಣ್ಣದ ಹಕ್ಕಿ. ರೆಕ್ಕೆ ಕಂದು ಬಣ್ಣ (ಕೆಂಗಂದು) ದೊಡ್ಡ, ಉದ್ದ, ಅಗಲ, ಕಪ್ಪು ಬಾಲ. ಕೆಂಪು ಕಣ್ಣುಗಳು. ಬಲಿಷ್ಠ, ಮೊನಚಾದ ಕಪ್ಪು ಕೊಕ್ಕು, ಹೆಣ್ಣು ಗಾತ್ರದಲ್ಲಿ ಸ್ವಲ್ಪ ದೊಡ್ಡದು.

ಆಹಾರ : ಕೀಟ, ಕಪ್ಪೆ, ಸರೀಸೃಪ ಇತರ ಪಕ್ಷಿ ಮತ್ತು ಮೊಟ್ಟೆ ಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಸೆಪ್ಟೆಂಬರ‍್ವರೆಗಿನ ಸಮಯ. ಕಡ್ಡಿ, ಎಲೆ, ಇತ್ಯಾದಿಗಳ ಗೂಡುಕಟ್ಟಿ ೩-೪ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಬಾರ್ನ್‌ಗೂಬೆ (BARN OWL)
ಟೈಲೊ ಆಲ್ಬ (Tyto alba)

245_69_PP_KUH

ಗಾತ್ರ : ೩೬ ಸೆಂ.ಮೀ.

ಆವಾಸ : ಹುಲ್ಲುಗಾವಲು, ಹಳೆಯ ಉಪಯೋಗಿಸದ ಮನೆ, ಮನುಷ್ಯ ವಾಸದ ಸುತ್ತ ಮುತ್ತ ಕಾಣಬಹುದು. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಎದುರು ದೃಷ್ಟಿಯ ಕಣ್ಣುಗಳು. ಹೃದಯದ ಆಕಾರದ ಬಿಳಿಮುಖ. ಮಾಸಲು ಬಂಗಾರದ ಬಣ್ಣ, ಕೆಳಭಾಗ ಬಿಳಿ, ಅಲ್ಲಲ್ಲಿ ಹುಂಡುಗಳು. ಮೊನಚಾದ ಚಿಕ್ಕ ಕೊಕ್ಕು ಬಲಿಷ್ಠ ಕಾಲುಗಳು.

ಆಹಾರ : ಇಲಿ, ಹೆಗ್ಗಣ ಇತ್ಯಾದಿಗಳನ್ನು ತಿನ್ನುತ್ತದೆ. ಇಲಿ ನಿಯಂತ್ರಣದಲ್ಲಿ ಸಹಕಾರಿ.

ಸಂತಾನಾಭಿವೃದ್ಧಿ : ಬಹುಶಃ ವರ್ಷವಿಡೀ ಸಂತಾನಾಭಿವೃದ್ಧಿ ನಡೆಸುತ್ತವೆ. ಹಳೆ ಮನೆಯ ಗೋಡೆಯಲ್ಲಿ ಅಥವಾ ಮರದ ಪೊಟರೆಯಲ್ಲಿ ಗೂಡು, ಛಾವಣಿಯ ನಡುವಿನ ಸ್ಥಳದ್ಲಲಿ ಗೂಡುಕಟ್ಟಬಹುದು. ೪-೭ ಮೊಟ್ಟೆಗಳಿರುತ್ತವೆ.

—- 

ಹುಲ್ಲುಗೂಬೆ (GRASS OWL)
ಟೈಟೊ ಕೇಪೆನ್ಸಿಸ್ (Tyto capensis)

246_69_PP_KUH

ಗಾತ್ರ : ೩೬ ಸೆಂ.ಮೀ.

ಆವಾಸ : ಹುಲ್ಲುಗಾವಲು ಮತ್ತು ಅಲ್ಲಲ್ಲಿ ಮರವಿರುವ ಎತ್ತರದ ಹುಲ್ಲುಗಳ ಪ್ರದೇಶ. ಇದು ಸ್ಥಳೀಯ ಪ್ರಭೇದ.

ಲಕ್ಷಣಗಳು : ಬಾರ್ನ್ ಗೂಬೆಯನ್ನು ಹೋಲುತ್ತದೆ. ಆದರೆ ಹುಲ್ಲುಗೂಬೆ ಇರುವುದು ಹುಲ್ಲುಗಾವಲಿನಲ್ಲಿ. ಬಿಳಿ ಮುಖ ಮತ್ತು ಬಿಳಿಯ ಕೆಳಭಾಗ. ದಟ್ಟ ಕಂದು ಮೇಲ್ಭಾಗದಲ್ಲಿ ಬಿಳಿ ಚುಕ್ಕೆಗಳು. ಕಣ್ಣುಗಳ ಮುಂದೆ ಎದ್ದುದ ಕಾಣುವ ಕಪ್ಪು ಚುಕ್ಕೆಗಳು ಪ್ರಮುಖ ಲಕ್ಷಣ.

ಆಹಾರ : ಮುಖ್ಯವಾಗಿ ಇಲಿ, ಕೀಟ, ಹಾವು, ಇತರೆ ಹಕ್ಕಿಗಳನ್ನು ತಿನ್ನಬಹುದು.

ಸಂತಾನಾಭಿವೃದ್ಧಿ : ಅಕ್ಟೋಬರ‍್ನಿಂದ ಮಾರ್ಚ್‌ವರೆಗಿನ ಅವಧಿ. ಎತ್ತರ ಹುಲ್ಲುಗಳ ನಡುವೆ ಹುಲ್ಲಿನ ಹಾಸಿನಲ್ಲಿ ೪-೬ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಚಿಕ್ಕ ಕೊಂಬು ಗೂಬೆ (SCOPS OWL)
ಓಟಸ್ ಸ್ಕೌಪ್ಸ್ (Otus scops)

247_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ಬೆಟ್ಟಗಳು ಮತ್ತು ಕಣಿವೆಗಳಲ್ಲಿರುವ ಇದು ಪೊಟರೆ ಅಥವಾ ಹಸಿರೆಲೆಗಳ ನಡುವೆ ಹಗಲು ವಿಶ್ರಾಂತಿ ಪಡೆಯುತ್ತಿದೆ. ಸ್ಥಳೀಯ ಪ್ರಭೇದ.

ಆವಾಸ : ಬೆಟ್ಟಗಳು ಮತ್ತು ಕಣಿವೆಗಳಲ್ಲಿರುವ ಇದು ಪೊಟರೆ ಅಥವಾ ಹಸಿರೆಲೆಗಳ ನಡುವೆ ಹಗಲು ವಿಶ್ರಾಂತಿ ಪಡೆಯುತ್ತದೆ. ಸ್ಥಳೀಯ ಪ್ರಭೇದ.

ಲಕ್ಷಣಗಳು : ಕೃಶ ಮೈ ಕಟ್ಟಿನ ಚಿಕ್ಕ ಗೂಬೆ. ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ತಲೆಯ ಮೇಲೆ ಚಿಕ್ಕ ಕೊಂಬಿನಂತಹ ರಚನೆಗಳಿವೆ. ಕಂದು ಬಣ್ಣ ಗಡ್ಡ ಬಿಳಿ. ರೆಕ್ಕೆಗಳ ಮೇಲೆ ಬಿಳಿ ಚುಕ್ಕೆಗಳ ಸಾಲು ಕಾಣಬಹುದು.

ಆಹಾರ : ಕೀಟ, ಇಲಿ ಹಾಗು ಚಿಕ್ಕ ಸರೀಸೃಪಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧ : ಫೆಬ್ರವರಿಯಿಂದ ಮೇ ವರೆಗಿನ ಅವಧಿ. ಮರದ ಪೊಟರೆಯಲ್ಲಿ ಗೂಡು. ೩-೪ ಬಿಳಿ ಮೊಟ್ಟೆಗಳನ್ನಿಡುತ್ತದೆ.