ಪುಟ್ಟ ಬಾನಕ್ಕಿ (EDIBLE SWIFLET)
ಕೊಲಕೇಲಿಯಾ ಯುನಿಕಲರ್ (Collocolia unicolor)

258_69_PP_KUH

ಗಾತ್ರ : ೧೨ ಸೆಂ.ಮೀ.

ಆವಾಸ : ಗುಹೆ, ಹೆಬ್ಬಂಡೆಗಳ ತುದಿ, ಸಮುದ್ರ ದ್ವೀಪಗಳಲ್ಲಿ ಇರುತ್ತವೆ. ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಚಿಕ್ಕ ಜಾತಿಯ ಲವಲವಿಕೆಯ ಹಕ್ಕಿ. ಕಪ್ಪು ಕಂದು ಬಣ್ಣದ ಗರಿಗಳಿರುತ್ತವೆ. ಸ್ವಲ್ಪ ಕವಲಾದ ಬಾಲ. ಬಾವಲಿಯಂತೆ ಹಾರುತ್ತವೆ. ಕುತ್ತಿಗೆ ತಿಳಿಕಂದು. ದೊಡ್ಡ ಗುಂಪುಗಳಲ್ಲಿ ವಾಸಿಸುತ್ತವೆ. ರಾತ್ರಿವೇಳೆ ಗುಹೆಗಳಲ್ಲಿ ತಂಗುತ್ತದೆ.

ಆಹಾರ : ದುಂಬಿ, ಜೇನ್ನೋಣ, ಹಾತೆ ಮತ್ತು ಇತರ ಹಾರಾಡುವ ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿ. ಜೊಲ್ಲು ರಸದಿಂದ ರಚಿಸಲಾಗುವ ಗೂಡು. ಕೆಲವೊಮ್ಮೆ ಹುಲ್ಲು ಗರಿಗಳೂ ಸೇರಿರುತ್ತವೆ. ಪ್ರೊಟೀನುಯುಕ್ತ ಈ ಜೊಲ್ಲುರಸದ ಗೂಡನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಎರಡೂ ಬಿಳಿಯ ಮೊಟ್ಟೆಗಳನ್ನು ಇಡುತ್ತದೆ.

—- 

ಬೆಟ್ಟದ ಬಾನಾಡಿ (ALPINE SWIFT)
ಅಪಸ್ ಮೆಲ್ಬ (Apus melba)

259_69_PP_KUH

ಗಾತ್ರ : ೨೦-೨೨ ಸೆಂ.ಮೀ.

ಆವಾಸ : ಗುಡ್ಡ ಕಾಡು ಪ್ರದೇಶ ಮತ್ತು ಕಡಿಕಲ್ಲು (cliffs) ಗಳಲ್ಲಿ ಕಾಣಸಿಗುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ವೇಗವಾಗಿ ಹಾರಾಡುತ್ತವೆ. ಉದ್ದ, ಚೂಪಾದ, ಕತ್ತಿಯಾಕೃತಿಯ ರೆಕ್ಕೆಗಳು ಕಡು ಕಡು ಕಂದು ಮೇಲ್ಭಾಗ, ಕೆಳಭಾಗ ಮತ್ತು ಕುತ್ತಿಗೆ ಬಿಳಿ. ಹಾರಾಡುವಾಗ ಎದ್ದು ಕಾಣುತ್ತದೆ.
ಆಹಾರ : ಹಾರಾಡುವ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಜನವರಿ. ಹುಲ್ಲು, ಗರಿ ಇತ್ಯಾದಿಗಳನ್ನು ಒಳಗೊಂಡು ಜೊಲ್ಲುರಸದ ಗೂಡು ಇರುತ್ತದೆ. ಜೋಗ ಜಲಪಾತದ ಕಡಿಬಂಡೆಗಳಲ್ಲಿನ ಅವುಗಳ ವಾಸ ಪ್ರಸಿದ್ಧವಾಗಿದೆ. ೨-೪ ಹೊಳೆಯುವ ಮೊಟ್ಟೆಗಳನ್ನಿಡುವುದು.

—- 

ಮನೆ ಬಾನಾಡಿ (HOUSE SWIFT)
ಅ. ಅಫಿನಿಸ್ (Apus affinis)

260_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಹಳೆಯ ಕೋಟೆ, ಹಾಳುಬಿದ್ದ ಮನೆಗಳು, ಕೆಳವೊಮ್ಮೆ ವಾಸವಾಗಿರುವ ಮನೆಯ ಹತ್ತಿರ ಇರುವುದೂ ಉಂಟು. ಸ್ಥಳೀಯ ಪಕ್ಷಿ.

ಲಕ್ಷಣಗಳು : ವೇಗದಿಂದ ಹಾರಾಡುವ, ಹೊಗೆಕಪ್ಪು ಬಣ್ಣದ ಸಾಮಾನ್ಯ ಪಕ್ಷಿ. ಗಂಡುಹೆಣ್ಣು ಒಂದೇ ತೆರ. ಬಾಲದ ಬುಡ ಮತ್ತು ಗಂಟಲು ಬಿಳಿ. ಬಾಲ ಚೌಕವಾಗಿದ್ದು ರೆಕ್ಕೆಗಳು ಹೆಚ್ಚು ಉದ್ದವಿಲ್ಲ.

ಆಹಾರ : ಹಾರಾಡುವ ಕೀಟಗಳು ವಿವಿಧ ರೀತಿಯ ನೊಣಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಸೆಪ್ಟೆಂಬರ‍್ ವರೆಗಿನ ಸಮಯ. ಗರಿ, ಹುಲ್ಲು, ಹತ್ತಿ ಇತ್ಯಾದಿಗಳನ್ನು ಜೊಲ್ಲಿನಿಂದ ಗೋಡೆ, ಬಂಡೆಗಳಿಗೆ ಅಂಟಿಸಿ ಅಂದವಿಲ್ಲದ ಗೂಡು ಕಟ್ಟುತ್ತದೆ. ೨-೪ ಬಿಳಿ ಮೊಟ್ಟೆ ಇರುತ್ತವೆ.

—- 

ಜುಟ್ಟಿನ ಬಾನಾಡಿ (CRESTED SWIFT)
ಹೆಮಿಪ್ರೊಕ್ನೆ ಲಾಂಗಿಪೆನ್ನಿಸ್ (Hemiprocne longipennis)

261_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಮರಮಟ್ಟು ಇರುವ ಪ್ರದೇಶ ಮತ್ತು ತೆರೆದ ಕಾಡು.

ಲಕ್ಷಣಗಳು : ಗಂಡು ನೀಲಿಬೂದು ಬಣ್ಣ. ಕೆಳಭಾಗ ತಿಳಿ. ಮುಂದಲೆಯ ಮೇಲೆ ಜುಟ್ಟು ಪ್ರಮುಖ ಲಕ್ಷಣ. ಚೂಪಾದ ಉದ್ದ ರೆಕ್ಕೆಗಳು. ಕತ್ತರಿಯಂತೆ ಆಳವಾದ ಕವಲೊಡೆದ ಬಾಲ. ತಲೆ ಕೆಂಗಂದು, ಹೆಣ್ಣಿನ ತಲೆ ಬೂದು ಬಣ್ಣವನ್ನು ಹೊಂದಿರುವುದು.

ಆಹಾರ : ಹಾರಾಡುವ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಜುಲೈವರೆಗಿನ ಸಮಯ. ತೊಗಟೆ ಮತ್ತು ಗರಿಗಳನ್ನು ಜೊಲ್ಲುರಸದಿಂದ ಎಲೆಗಳಿಲ್ಲದ ಟೊಂಗೆಗೆ ಜೋಡಿಸಿ ಚಿಕ್ಕ ಬಟ್ಟಲಿನಂತಹ ಗೂಡನ್ನು ರಚಿಸುತ್ತದೆ. ಒಂದು ತಿಳಿಬೂದು ಬಣ್ಣದ ಮೊಟ್ಟೆಯನ್ನಿಡುತ್ತದೆ.

—- 

ಹಾಡುವ ಪೊದೆ ಬಾನಾಡಿ (SINGING BUSHLARK)
ಮಿರಾಫ್ರೆ ಜಾವಾನಿಕ (Mirafra javanica)

262_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಪಾಳು ಜುಮೀನು. ಹುಲ್ಲುಗಾವಲು, ಕುರುಚಲು ಕಾಡು, ಅರೆ ಮರುಭೂಮಿ ಇತ್ಯಾದಿ ಕಡೆ ಇರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಹೆಣ್ಣು ಗುಬ್ಬಚ್ಚಿಯಂತೆ ಕಾಡುತ್ತದೆ. ಸ್ವಲ್ಪ ದಪ್ಪ ಕೊಕ್ಕು ರೆಕ್ಕೆಗಳ ಮೇಲೆ ಕೆಂಗಂದು. ಬಾಲದ ಅಂಚು ಬಿಳಿ ಬೆಳುಚುಗಲ್ಲ ಹೊಟ್ಟೆ, ಕಪ್ಪು ಕಣ್ಣು. ಕಣ್ನುಗಳ ಮೇಲ್ಭಾಗದಲ್ಲಿ ಬಿಳಿಯ ಪಟ್ಟಿ ಇರುತ್ತದೆ.

ಆಹಾರ : ಹುಲ್ಲು ಮತ್ತು ಕಳೆಗಳ ಬೀಜ, ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌‌ನಿಂದ ಸೆಪ್ಟೆಂಬರ‍್ ವರೆಗಿನ ಅವಧಿ. ಹುಲ್ಲುಗಳಿಂದ ರಚಿತವಾದ ಬಟ್ಟಲಿನಂತಹ ಗೂಡು ರಚಿಸಿ ೨-೪ ಮೊಟ್ಟೆಗಳನ್ನಿಡುತ್ತದೆ.