ದಕ್ಷಿಣದ ಟ್ರೊಗೊನ್ (SOUTHERN TROGON)
ಹರ‍್ಪಕ್ಟಿಸ್ ಫೇಸಿಯೇಟಸ್ (Harpactes fasciatus)

268_69_PP_KUH

ಗಾತ್ರ : ೩೦-೩೨ ಸೆಂ.ಮೀ.

ಆವಾಸ : ತೆರೆದ, ಎಲೆ ಉದುರುವ ಕಾಡುಗಳಲ್ಲಿ ವಾಸ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಕಪ್ಪು, ತಲೆ, ಕುತ್ತಿಗೆ ಮತ್ತು ಎದೆ. ಹಳದಿ ಕಂದು ಬೆನ್ನು. ಕಪ್ಪು ರೆಕ್ಕೆಗಳು, ಬಿಳಿ ಅಂಚು, ಉದ್ದನೆಯ ಬಾಲ ಇದ್ದು ಬೆನ್ನು ಕೆಂಪಿರುತ್ತದೆ. ಬಿಳಿಯ ಎದೆ ಪಟ್ಟಿ ಇದೆ. ಹೆಣ್ಣು ಹೆಚ್ಚು ಕಡಿಮೆ ಮಂದ ಬಣ್ಣ ತಲೆ ಮೇಲೆ ಕಪ್ಪು ಇಲ್ಲ. ಕಿತ್ತಳೆಕಂದು. ಹೊಟ್ಟೆ ಮತ್ತು ಬೆನ್ನು. ಕಡು ಹಳದಿಕಂದು ತಲೆ ಮತ್ತು ಕುತ್ತಿಗೆ. ರೆಕ್ಕೆಗಳ ಅಂಚಿನಲ್ಲಿ ಬಿಳಿ ಪಟ್ಟಿ ಇಲ್ಲ.

ಆಹಾರ : ಹೆಚ್ಚಾಗಿ ಕೀಟಗಳು. ಹಣ್ಣುಗಳನ್ನು ತಿನ್ನುವುದು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜೂನ್ ವರೆಗಿನ ಅವಧಿ. ಕಾಡಿನ ಮಧ್ಯದ ಮರದ ಪೊಟರೆಯಲ್ಲಿ ಗೂಡು. ೨-೪ ಹೊಳೆಯುವ ದಂತಬಿಳಿ ಮೊಟ್ಟೆಗಳಿರುತ್ತವೆ.

—- 

ಕಪ್ಪು ಬಿಳಿ ಮೀಂಚುಳ್ಳಿ (PIED KINGFISHER)
ಸೆರಿಲ್ ರೂಡಿಸ್ (Ceryle rudis)

269_69_PP_KUH

ಗಾತ್ರ : ೧೨-೧೩ ಸೆಂ.ಮೀ.

ಆವಾಸ : ನದಿ, ತೊರೆ, ಕೆರೆ ಇತ್ಯಾದಿಗಳ ದಡದಲ್ಲಿರುವುದು. ಕರಾವಳಿಯಲ್ಲಿ ಸಾಮಾನ್ಯ.

ಲಕ್ಷಣಗಳು : ಇದೊಂದು ಕಪ್ಪು ಬಿಳಿ ಮೀಂಚುಳ್ಳಿ. ಆಕಾಶದಲ್ಲಿ ಹೆಲಿಕಾಪ್ಟರಿನಂತೆ ನಿಂತು ರೆಕ್ಕೆ ಬಡಿಯುವುದು ಇದರ ಲಕ್ಷಣ. ಮೊನಚಾದ ಬಲಿಷ್ಠ ಕಪ್ಪು ಕೊಕ್ಕು. ತೆಲೆಯ ಮೇಲೆ ಹಿಂದಕ್ಕೆ ಬಾಗಿದ ಗರಿಗಳ ಜುಟ್ಟು. ಬಿಳಿಕುತ್ತಿಗೆ, ಕೆಳಗೆ ಎರಡು ಕಪ್ಪು ಪಟ್ಟಿಗಳಿರುವುದು ಗಂಡುಹಕ್ಕಿಯ ಲಕ್ಷಣ. ಹೆಣ್ಣಿನಲ್ಲಿ ಒಂದೇ ತುಂಡಾದ ಪಟ್ಟಿ. ಸಾಮಾನ್ಯವಾಗಿ ಒಂಟಿಯಾಗಿರುತ್ತದೆ.

ಆಹಾರ : ಮೀನು, ಕಪ್ಪೆ, ಗೊದಮೊಟ್ಟೆ ಇತ್ಯಾದಿಗಳನ್ನು ತಿನ್ನುವುದು.

ಸಂತಾನಾಭಿವೃದ್ಧಿ : ಅಕ್ಟೋಬರ‍್ನಿಂದ ಮೇ ವರೆಗಿನ ಸಮಯ ಮಣ್ಣುದಿಬ್ಬದಲ್ಲಿ, ಕಡಿದಾದ ಅಂಚಿನಲ್ಲಿ ಕೊಳವೆಯಂಥ ಗೂಡುರಚಿಸಿ ೫-೬ ಹೊಳೆಯುವ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಚಿಕ್ಕ ನೀಲಿ ಮೀಂಚುಳ್ಳಿ (SMALL BLUE KINGFISHER)
ಅಲ್ಸೆಡೊ ಅಥಿಸ್ (Alcedo atthis)

270_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ಕೊಳ, ಕೆರೆ, ನದಿ, ತೊರೆ ಇತ್ಯಾದಿಗಳಲ್ಲಿ ಇರುತ್ತದೆ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಮೇಲ್ಭಾಗ ಉಜ್ವಲ ನೀಲಿ. ಗರಿಗಳು ಹಸಿರುನೀಲಿ. ಕೆನ್ನೆ ತಿಳಿಗಂದು, ಗಲ್ಲ ಬಿಳಿ, ಗಿಡ್ಡ ಕಾಲುಗಳು. ಉದ್ದನೆಯ, ಬಲಿಷ್ಠ ಚೂರಿಯಂತಹ ಕೊಕ್ಕು. ಹೊಟ್ಟೆಯ ಭಾಗ ತಿಳಿಕಂದು. ನಮ್ಮಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಮೀಂಚುಳ್ಳಿ.

ಆಹಾರ : ಪ್ರಮುಖವಾಗಿ ಮೀನು. ಹುಳು, ಕೀಟ, ಸರೀಸೃಪಗಳನ್ನು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್ ವರೆಗಿನ ಅವಧಿ. ಮಣ್ಣಿನ ರಾಶಿ, ಕಡಿದಾದ ಗೋಡೆಯಂತಹ ನೆಲದಲ್ಲಿ ಕೊಳವೆಯಾಕಾರದ ಗೂಡು ರಚಿಸಿ ೫-೭ ಹೊಳೆವ ಮೊಟ್ಟೆಗಳನ್ನು ಇಡುತ್ತದೆ.

—-

ನೀಲಿಕಿವಿಯ ಮೀಂಚುಳ್ಳಿ (BLUE EARED KINGFISHER)
ಅಲ್ಸೆಡೊ ಮೆನಿಂಟಿಂಗ್ (Alcedo meninting)

271_69_PP_KUH

ಗಾತ್ರ : ೧೬ ಸೆಂ.ಮೀ.

ಆವಾಸ : ದಟ್ಟವಾದ ಕಾಡಿನ ಮಧ್ಯದ ತೊರೆಯಲ್ಲಿ ಇರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಚಿಕ್ಕ ನೀಲಿ ಮೀಂಚುಳ್ಳಿಯಲ್ಲಿ ಹೋಲುತ್ತದೆ. ಆದರೆ ವಸ್ತುಶಃ ಕಾಡಿನ ಮೀಂಚಳ್ಳಿ. ನೇರಳೆ ನೀಲಿ ಬಾಲ. ಕಿವಿಯ ಹಿಂದೆ ಬಿಳಿ ಪಟ್ಟಿ ಕಿವಿಯ ಮೇಲೆ ನೀಲಿ ಗರಿಗಳು. ಕುತ್ತಿಗೆಯಲ್ಲಿ ಬಿಳಿ ಪಟ್ಟಿ ಇಲ್ಲ.

ಆಹಾರ : ಮೀನು ಮತ್ತು ನೀರಿನಲ್ಲಿರುವ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಏಪ್ರಿಲ್ನಿಂದ ಆಗಸ್ಟ್ನ ಅವಧಿ. ತೊರೆಯ ಪಕ್ಕದಡದಲ್ಲಿ ಉದ್ದನೆಯ ಕೊಳವೆಯಾಕಾರದ ಗೂಡು ರಚಿಸಿ ೫-೮ ಮೊಟ್ಟೆಗಳನ್ನಿಡುತ್ತದೆ.

—- 

ಮೂರು ಬೆರಳಿನ ಮೀಂಚುಳ್ಳಿ (THREE TOED KINGFISHER)
ಸೆರಿಕ್ಸ್ ಎರತೇಕಸ್ (Ceryx erithacus)

272_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ತೇವದ ಕಾಡುಗಳ ನೆರಳಿರುವ ತೊರೆಗಳ ಬಳಿ ಕಾಣಸಿಗುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಇದೊಂದು ಕುಬ್ಜ ಮೀಂಚುಳ್ಳಿ. ಆದರೆ ಸುಂದರ ಪಕ್ಷಿ. ಕೆನ್ನೀಲಿ ಬಣ್ಣ. ಕಿತ್ತಳೆ, ಹಳದಿ ಹೊಟ್ಟೆ ಎದೆ ಮತ್ತು ಹವಳಕೆಂಪು ಕೊಕ್ಕು. ಕುತ್ತಿಗೆ ಮತ್ತು ಕಿವಿಯ ಹಿಂದೆ ಬಿಳಿಯ ಮಚ್ಚೆ. ಕಿವಿಯ ಬಳಿ ಕಪ್ಪು ಚುಕ್ಕೆ. ಕಾಲಿನಲ್ಲಿ ಮೂರು ಬೆರಳಿರುವುದು ಪ್ರಮುಖ ಲಕ್ಷಣ.

ಆಹಾರ : ಸಣ್ಣ ಮೀನುಗಳು ಮತ್ತು ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜುಲೈನಿಂದ ಸೆಪ್ಟೆಂಬರ‍್ವರೆಗಿನ ಅವಧಿ. ರಸ್ತೆ ಬಳಿಯ ಮಣ್ಣು ದಂಡೆಯಲ್ಲಿ ಕೊಳವೆಯಂತಹ ಗೂಡು. ೪-೫ ಮೊಟ್ಟೆಗಳಿರುತ್ತವೆ.