ಬಿಳಿ ಎದೆಯ ಮೀಂಚುಳ್ಳಿ (WHITEBREASTED KINGFISHER)
ಹ್ಯಾಲ್ಸಿಯಾನ್ ಸ್ಮಿರ್ನೀಯನ್‌ಸಿಸ್ (Halcyon smyrnensis)

273_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ಅತ್ಯಂತ ಸಾಮಾನ್ಯ ಮೀಂಚುಳ್ಳಿ ನೀರನಾಶ್ರಯ ಇರುವ ಎಲ್ಲ ಕಡೆ ಅಂದರೆ ಕಾಡಿನಿಂದ ಹಿಡಿದು ಸಮುದ್ರ ತೀರದವರೆಗೆ ಕಾಣಸಿಗುತ್ತದೆ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಕಡುಕಂದು ತಲೆ, ಗಂಟಲು ಮತ್ತು ಎದೆ ಬಿಳಿ, ಹೊಟ್ಟೆ ಭಾಗ ಕಂದು, ಗಲ್ಲ ಬಿಳಿ, ಚೂರಿಯಂತಹ ಕೆಂಪು ಕೊಕ್ಕು, ಹವಳಕೆಂಪು ಕಾಲನ್ನು ಹೊಂದಿರುತ್ತದೆ. ಒಂಟಿಯಾಗಿ ಕಾಣಸಿಗುತ್ತದೆ.

ಆಹಾರ : ಕೀಟ, ಹುಳು, ಹರಣೆ, ಮೀನು ಇತ್ಯಾದಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ದಿಂದ ಜುಲೈ. ೪-೭ ಮೊಟ್ಟೆಗಳನ್ನು ಇಡುತ್ತದೆ.

—- 

ಕಪ್ಪು ಟೋಪಿ ಮೀಂಚುಳ್ಳಿ (BLACKCAPPED KINGFISHER)
ಹ್ಯಾ. ಪಿಲೇಟ (Halcyon pileata)

274_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಪ್ರಮುಖವಾಗಿ ಕರಾವಳಿ ಪ್ರದೇಶ, ಕಾಂಡ್ಲಾ ಕಾಡು, ಹಿನ್ನೀರು. ನದಿ, ಅಳಿವೆ ಇತ್ಯಾದಿ ಸ್ಥಳಗಳಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳು ಒಂದೇ ತೆರನಾಗಿವೆ. ಬಿಳಿ ಟೋಪಿ ಮತ್ತು ಕತ್ತು ಪಟ್ಟಿ ಪ್ರಮುಖ ಲಕ್ಷಣಗಳು. ಹವಳ ಕೆಂಪು ಕೊಕ್ಕು ಮತ್ತು ಕಾಲು, ನೇರಳೆನೀಲಿ ಮೇಲ್ಭಾಗ; ತಿಳಿಕಂದು ಹೊಟ್ಟೆ ಇರುತ್ತದೆ.

ಆಹಾರ : ಮೀನು, ಕಪ್ಪೆ, ಕೀಟ, ಹುಳು ಇತ್ಯಾದಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮೇ ಮತ್ತು ಜೂನ್ ತಿಂಗಳ ಸಮಯ. ಎತ್ತರ ಮಣ್ಣಿನ ದಂಡೆಯಲ್ಲಿ ಟನಲ್‌ನಂತಹ ಗೂಡು ರಚಿಸಿ ೪-೫ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಕೊಕ್ಕರೆ ಕೊಕ್ಕಿನ ಮೀಂಚುಳ್ಳ (STORKBILLED KINGFISHER)
ಪೆಲಾರೊಗಪ್ಸಿಸ್ ಕಾಪೆನ್ಸಿಸೆ (Pelargopsis capensis)

275_69_PP_KUH

ಗಾತ್ರ : ೩೮ ಸೆಂ.ಮೀ. ನಮ್ಮಲ್ಲಿ ಕಂಡುಬರುವ ಮಿಂಚುಳ್ಳಿಗಳಲ್ಲಿ ಅತಿ ದೊಡ್ಡದು.

ಆವಾಸ : ತೊರೆ, ನದಿ, ಹಿನ್ನೀರು, ಕೆರೆ ಇತ್ಯಾದಿಗಳ ಬಳಿ ಇರುತ್ತದೆ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಒಂಟಿ ಜೀವಿ, ದಪ್ಪ, ದೊಡ್ಡ ಬಲಿಷ್ಠ ಕೆಂಪು ಕೊಕ್ಕೆ ಪ್ರಮುಖ ಲಕ್ಷಣ. ತಲೆ ಕಂದು, ಬೆನ್ನುಭಾಗ ತಿಳಿ ಪಚ್ಚೆ, ಹೊಟ್ಟೆ ಮತ್ತು ಎದೆಯ ಭಾಗ ತಿಳಿಹಳದಿಕಂದು ಬಣ್ಣ.

ಆಹಾರ : ಮೀನು, ಏಡಿ, ಹಾವು, ಹರಣಿ ಕಪ್ಪೆ ಇತ್ಯಾದಿ.

ಸಂತಾನಾಭಿವೃದ್ಧಿ : ಜನವರಿಯಿಂದ ಜುಲೈವರೆಗಿನ ಅವಧಿ. ಟನಲ್‌ನಂತಹ ಉದ್ದನೆಯ ಗೂಡು. ಮಣ್ಣಿನ ದಿಣ್ಣೆ ಅಥವಾ ನದಿ ದಡದಲ್ಲಿ ಗೂಡು ರಚಿಸಿ ೪-೫ ಬಿಳಿ ಹೊಳೆಯ ಮೊಟ್ಟೆಗಳನ್ನಿಡುತ್ತದೆ.

—- 

ಕಂದು ತಲೆಯ ಗುಂಗುರು ಪಂಚ (CHESTNUTHEADED BEE-EATER)
ಮಿರಾಪ್ಸ್ ಲೆಸ್ಕಿನಾಲ್ಟಿ (Merops leschenaulti)

276_69_PP_KUH

ಗಾತ್ರ : ೧೮-೨೦ ಸೆಂ.ಮೀ.

ಆವಾಸ : ಕಾಡಿನಲ್ಲಿ ನೀರು ಇರುವ ಕಡೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹುಲ್ಲುಹಸಿರು ಮೈ ಬಣ್ಣ. ತಲೆ ದಟ್ಟ ಕೆಂಗಂದು. ಗಲ್ಲು, ಗಂಟಲು ಹಳದಿ, ಗಂಟಲ ಕೆಳಗೆ ಕಪ್ಪು ಸರದಂತದೆ. ಮೊನಚಾದ ಉದ್ದನೆಯ ಕೊಕ್ಕು ತುದಿ ಸ್ವಲ್ಪ ಬಾಗಿದೆ. ರೆಕ್ಕೆ ತುದಿ ಕಪ್ಪು, ಬಾಲ ಚೌಕಾಕಾರವಾಗಿದೆ.

ಆಹಾರ : ಜೇನ್ನೂಣ, ಮತ್ತಿತರ ಹಾರುವ ಕೀಟಗಳನ್ನು ತಿನ್ನುತ್ತದೆ. ಗಾಳಿಯಲ್ಲೇ ಹಾರುವ ಕೀಟಗಳನ್ನು ಹಿಡಿಯುವುದು ಇದರ ಸಹಜಸಾಮಾನ್ಯ ವರ್ತನೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್ ವರೆಗಿನ ಅವಧಿ. ನದಿ, ಗದ್ದೆ ಬದಿಯ ಮಣ್ಣಿನ ದಿಣ್ಣೆಯಲ್ಲಿ ಉದ್ದನೆಯ ಟನೆಲ್ ಗೂಡು ರಚಿಸಿ ೫-೬ ಹೊಳೆವ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—- 

ನೀಲಿ ಬಾಲದ ಗುಂಗುರು ಪಂಚ (BLUETAILED BEE-EATER)
ಮೀರಾಪ್ಸ್ ಫಿಲಿಪೈನಸ್ (Merops philippinus)

277_69_PP_KUH

ಗಾತ್ರ : ೨೩-೨೬ ಸೆಂ.ಮೀ.

ಆವಾಸ : ಮೈದಾನ ಪ್ರದೇಶ, ತೆರೆದ ಕಾಡು, ತಿಳಿಕಾಡು, ಕರಾವಳಿ ಪ್ರದೇಶದಲ್ಲಿ ವಾಸಿಸುವ ಇದು ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹಸಿರು ದೇಹದ ನೀಲಿ ಬಾಲದ ಗುಂಗುರು ಪಂಚ. ಗಲ್ಲ, ಕುತ್ತಿಗೆ ಕಂದು, ಕೊಕ್ಕು ಕಪ್ಪಾಗಿದೆ. ಕಣ್ಣನ್ನು ಹಾದು ಹೋಗುವ ಕಪ್ಪು ಪಟ್ಟಿ ರೆಕ್ಕೆಯ ಅಂಚು ಕಪ್ಪು. ಬಾಲದ ಮಧ್ಯದ ಗರಿ ಕಡ್ಡಿಯಂತೆ ನೀಳವಾಗಿದೆ.

ಆಹಾರ : ಹಾರಾಡುವ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್ ಅವಧಿ. ನದಿ, ತೊರೆ, ಗದ್ದೆ ಬದಿಯ ಮಣ್ಣಿನ ದಿಣ್ಣೆಯಲ್ಲಿ ಉದ್ದನೆಯ ಟನೆಲ್ ಗೂಡು ರಚಿಸಿ ೫-೭ ಬಿಳಿ ಮೊಟ್ಟೆಗಳನ್ನಿಡುತ್ತದೆ.