ದೊಡ್ಡ ಕಪ್ಪು ಮಲೆಹಕ್ಕಿ (GREAT PIED HORNBILL)
ಬ್ಯುಸೆರಾಸ್ ಬೈಕಾರ‍್ನ್ನಿಸ್ (Buceros bicornis)

283_69_PP_KUH

ಗಾತ್ರ : ೯೦-೧೦೫ ಸೆಂ.ಮೀ.

ಆವಾಸ : ಹಳೆಯ, ಎತ್ತರ ಮರಗಳುಳ್ಳ ಕಾಡು. ಸ್ಥಳೀಯ ಪ್ರಭೇದ ಹಾಗೂ ಸ್ಥಳೀಯ ಪ್ರಭೇದ ಹಾಗೂ ಸ್ಥಳೀಯ ವಲಸೆ ಪಕ್ಷಿ.

ಲಕ್ಷಣಗಳು : ದೊಡ್ಡ ಕಪ್ಪು ಬಿಳಿ ಹಕ್ಕಿ. ದೊಡ್ಡ ಹಳದಿ ಕೊಕ್ಕು, ಕೊಕ್ಕು ಮತ್ತು ತಲೆಯ ಮೇಲೆ ಅದೇ ಬಣ್ಣದ ಶಿಖೆ ಇರುವುದು. ಕಣ್ಣು ಕೆಂಪು, ಮುಖ, ಬೆನ್ನು, ರೆಕ್ಕೆ, ಎದೆ ಕಪ್ಪು, ರೆಕ್ಕೆಗಳಲ್ಲಿ ಬಿಳಿ ತೇಪೆ ಇರುತ್ತದೆ. ಬಿಳಿ ಬಾಲದ ಕೊನೆಯ ಸ್ವಲ್ಪ ಮೊದಲು ಕಪ್ಪು ಅಡ್ಡಪಟ್ಟಿ ಕಂಡುಬರುತ್ತದೆ. ಬಾಲದ ಬುಡದಲ್ಲಿ ಕೆಲವೊಮ್ಮೆ ತಿಳಿಹಳದಿ ಇರುತ್ತದೆ.

ಆಹಾರ : ಬಹುತೇಕ ಆಲ, ಅತ್ತಿ, ಅಶ್ವತ್ಥದ ಹಣ್ಣುಗಳನ್ನು ತಿನ್ನುತ್ತದೆ. ಕೀಟ ಮತ್ತಿತರ ಚಿಕ್ಕ ಪುಟ್ಟ ಪ್ರಾಣಿಗಳನ್ನು ತಿನ್ನಬಹುದು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರೀಲ್‌ನ ಅವಧಿ. ಎತ್ತರದ ಮರದ ಪೊಟರೆಯಲ್ಲಿ ಗೂಡು ರಚಿಸಿ ಎರಡು ಬಿಳಿ ಮೊಟ್ಟೆಗಳನ್ನು ಇಡುತ್ತದೆ.

 —-

ಮಲಬಾರ್ ಕಪ್ಪು ಬಿಳಿ ಮಲೆಹಕ್ಕಿ (MALABAR PIED HORNBRILL)
ಆಂತ್ರೆಕೊಸಿರಾಸ್ ಕೊರೊನೇಟಸ್ (Anthracoceros coronatus)

284_69_PP_KUH

ಗಾತ್ರ : ೬೫ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ದಟ್ಟ ಕಾಡು. ಎತ್ತರದ ಮರಗಳು ಇರುವ ಕಡೆ ಕಾಣಬಹುದು. ಸ್ಥಳೀಯ ಪ್ರಭೇದ ಮತ್ತು ಅಪರೂಪದ ಪಕ್ಷಿ.

ಲಕ್ಷಣಗಳು : ದೊಡ್ಡ ಗಾತ್ರದ ಕಪ್ಪು ಬಿಳಿ ಹಕ್ಕಿ. ದೊಡ್ಡ ಹಳದಿ ಕೊಕ್ಕು. ಕೊಕ್ಕಿನ ಮೇಲೆ ಅಷ್ಟೇ ಗಾತ್ರದ ಕಪ್ಪು ಶಿಖೆ. ಮೇಲ್ಭಾಗ ಅಚ್ಚ ಕಪ್ಪು, ಹೊಟ್ಟೆಯ ಭಾಗ ಬಿಳಿ. ಬಾಲದ ಅಂಚಿನಲ್ಲಿ ಬಿಳಿಗರಿಗಳು. ಕಣ್ಣಿನ ಕೆಳಭಾಗದಲ್ಲಿ ಕಪ್ಪು ತೇಪೆ ಇರುತ್ತದೆ. ಹೆಣ್ಣಿನ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ.

ಆಹಾರ : ಆಲದ ಹಣ್ಣು, ಸಣ್ಣ ಹಕ್ಕಿಗಳು, ಮೀನು ಮತ್ತು ಗೆದ್ದಲನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಎಪ್ರೀಲ್ ಮೇ ಸಮಯ. ಸಂತಾನಾಭಿವೃದ್ಧಿ ರೀತಿ ಉಳಿದ ಮಲೆ ಹಕ್ಕಿಗಳಂತೆಯೇ ಕಂಡುಬರುತ್ತದೆ.

 —-

ದೊಡ್ಡ ಹಸಿರು ಕುಟ್ರು ಹಕ್ಕಿ (LARGE GREEN BARBET)
ಮೆಗಲೈಮ ಜಿಲೇನಿಕಾ (Megalaima zeylanica)

285_69_PP_KUH

ಗಾತ್ರ : ೨೭ ಸೆಂ.ಮೀ.

ಆವಾಸ : ಕಾಡು, ಮರಗಳಿರುವ ಪ್ರದೇಶ ಮತ್ತು ಮನುಷ್ಯ ಆವಾಸದ ಬಳಿ ಇರುತ್ತದೆ. ಸ್ಥಳೀಯ ಸಾಮಾನ್ಯಹಕ್ಕಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಂದು ತಲೆಯ ಹಸಿರುಹಕ್ಕಿ. ಕುತ್ತಿಗೆಯಲ್ಲಿ ತಿಳಿಕಂದು ಜೊತೆಗೆ ಬಿಳಿಚುಕ್ಕೆಗಳಿರುತ್ತವೆ. ಹೊಟ್ಟೆ ತಿಳಿಹಸಿರು. ರೆಕ್ಕೆಯ ಕೊನೆಯ ಅರ್ಧ ದಟ್ಟಹಸಿರು. ಬಾಲವೂ ಕಡುಹಸಿರು ಕಣ್ಣುಸುತ್ತ ಹಳದಿ ಕೊಕ್ಕಿನ ಬುಡದಲ್ಲಿ ಕೆಂಪು ಮಚ್ಚೆ ಕಂಡುಬರುತ್ತದೆ.

ಆಹಾರ : ವಿವಿಧ ರೀತಿಯ ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜೂನ್ ತಿಂಗಳ ಅವಧಿ. ಒಣ ಮರದ ಕಾಂಡ ಕೊರೆದು ಗೂಡು ನಿರ್ಮಿಸಿ ೨-೩ ಮೊಟ್ಟೆಗಳನ್ನಿಡುತ್ತದೆ.

 —-

ಚಿಕ್ಕ ಹಸಿರು ಕುಟ್ರುಹಕ್ಕಿ (SMALL GREEN BARBET)
ಮೆ. ವಿರಿಡಿಸ್ (Megalaima viridis)

286_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಮರಗಳಿರುವ ಪ್ರದೇಶ. ತೋಟ ಮತ್ತು ನಾಗಬನ ಇತ್ಯಾದಿ ಕಡೆಗಳಲ್ಲಿ ಕಾಣುವ ಇದು ಸ್ಥಳೀಯ ಸಾಮಾನ್ಯ ಹಕ್ಕಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದೊಡ್ಡ ಕುಟ್ರು ಹಕ್ಕಿಯನ್ನು ಹೋಲುತ್ತದೆ. ಆದರೆ ಗಲ್ಲದಲ್ಲಿನ ಬಿಳಿಪಟ್ಟಿ ಚಿಕ್ಕ ಕುಟ್ರು ಹಕ್ಕಿಯ ಪ್ರಮುಖ ಲಕ್ಷಣ. ಕಣ್ಣಿನ ಮೇಲೆ ಬಿಳಿ ಹುಬ್ಬು ಕಣ್ಣಿನ ಕೆಳಭಾಗ ಬಿಳಿ ತೇಪೆಯಿಂದ ಕೂಡಿರುತ್ತದೆ. ಕೊಕ್ಕು ಮಾಸಲು ಬಣ್ಣ. ತಲೆ ಮತ್ತು ಕುತ್ತಿಗೆ ಕಡು ಕಂದಾಗಿರುತ್ತದೆ.

ಆಹಾರ : ಕಾಫಿ, ಆಲದ ಹಣ್ಣು ಹಾಗು ಇತರ ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಡಿಸೆಂಬರ್ ನಿಂದ ಜೂನ್ ತಿಂಗಳ ಅವಧಿ. ಒಣ ಮರದ ಟೊಂಗೆಯನ್ನು ಕೊರೆದು ಗೂಡು ನಿರ್ಮಿಸಿ ೨-೩ ಬಿಳಿ ಮೊಟ್ಟೆಯನ್ನು ಇಡುತ್ತದೆ.

 —-

ಕೆಂಪು ಗಂಟಲು ಕುಟ್ರು ಹಕ್ಕಿ (CRIMSON THROATED BARBET)
ಮೆ. ರುಬ್ರಿಕ್ಯಾಪಿಲ್ಲ (Megalaima rubricapilla)

287_69_PP_KUH

ಗಾತ್ರ : ೧೭ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟ, ತೆರೆದ ಕಾಡು. ಮರಗಳಿರುವ ಪ್ರದೇಶಗಳಲ್ಲಿ ಇರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಸಣ್ಣ ಕುಟ್ರುಹಕ್ಕಿ. ಹುಲ್ಲು ಹಸಿರು ಬಣ್ಣ, ಕೆಂಪು ಮುಖ ಮತ್ತು ಕಾಲುಗಳು. ಕಪ್ಪು ಕಣ್ಣು. ಕಣ್ಣಿನ ಹಿಂಭಾಗದಲ್ಲಿ ನೆತ್ತಿಯಿಂದ ಕುತ್ತಿಗೆವರೆಗೆ ಕಪ್ಪು ಪಟ್ಟಿ ಅದರ ಹಿಂದೆ ತಿಳಿನೀಲಿ ಬಣ್ಣ ಇರುತ್ತದೆ.

ಆಹಾರ : ರಸವತ್ತಾದ ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಮಾರ್ಚ್‌ನ ಅವಧಿ. ಮರದ ಟೊಂಗೆಯಲ್ಲಿ ಕೊರೆದ ಗೂಡು, ೩ ಮೊಟ್ಟೆಗಳಿಡುತ್ತವೆ.