ಕಾಡು ಗೂಬೆ (FOREST EAGLE OWL)
ಬ್ಯೂ.ನಿಪೆಲ್ಸೆಸ್ (Bubo nipalensis)

248_69_PP_KUH

ಗಾತ್ರ : ೬೩ ಸೆಂ.ಮೀ.

ಆವಾಸ : ದಟ್ಟ ಕಾಡುಗಳಲ್ಲಿ ಎತ್ತರದ ಮರಗಳ ಮೇಲೆ ವಾಸ. ಸ್ಥಳೀಯ ಪಕ್ಷಿ.

ಲಕ್ಷಣಗಳು : ದೊಡ್ಡ ಕಂದು ಬಣ್ಣದ ಗೂಬೆ. ಗಂಡುಹೆಣ್ಣು ಒಂದೇ ತೆರನಗಿವೆ. ‘ಕೊಂಬು’ ಎರಡೂ ಬದಿಗೆ ಚಾಚಿವೆ. ಕಂದು ಕಣ್ಣುಗಳು. ಕಾಲು ತುಂಬ ಗರಿಗಳಿವೆ. ಹೊಟ್ಟೆ ಎದೆ ಮೇಲೆ ಬಿಳಿ ಹಿನ್ನೆಲೆಯಲ್ಲಿ ಕಂದು ಅಡ್ಡ ಗೆರೆಗಳಿವೆ.

ಆಹಾರ : ಹಕ್ಕಿ ಮತ್ತು ಸಸ್ತನಿಗಳನ್ನು ತಿನ್ನುತ್ತವೆ. ನರಿಗಳಂತಹ ಸಸ್ತನಿಗಳನ್ನು ಹಿಡಿದು ತಿನ್ನಬಲ್ಲವು.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಮಾರ್ಚ್‌ವರೆಗಿನ ಅವಧಿ. ಹಳೆಯ ಎತ್ತರವಾದ ಮರದ ಪೊಟರೆಯಲ್ಲಿ ಗೂಡು. ಬಿಳಿಯ ಒಂದು ಮೊಟ್ಟೆಯನ್ನು ಇಡುತ್ತದೆ.

—- 

ಕೊಂಬು ಗೂಬೆ (HORNED OWL)
ಬ್ಯೂಬೊ ಬ್ಯೂಬೊ (Bubo bubo)

249_69_PP_KUH

ಗಾತ್ರ : ೫೬-೬೬ ಸೆಂ.ಮೀ.

ಆವಾಸ : ನದಿತೊರೆಗಳ ಸಮೀಪದ ಮರಗಳು. ಅಥವಾ ಕಲ್ಲು ಬಂಡೆಗಳಿಂದ ಕೂಡಿದ ಬೆಟ್ಟ ಗುಡ್ಡಗಳಲ್ಲಿ ಕಾಣಸಿಗುತ್ತದೆ. ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ದೊಡ್ಡ ಗಾತ್ರದ ಗೂಬೆ. ನೆತ್ತಿಯ ಮೇಲಿನ ಎರಡು ‘ಕೊಂಬುಗಳು’ ವಿಶೇಷ ಲಕ್ಷಣ. ಮೇಲ್ಭಾಗ ಚುಕ್ಕೆಗಳಿಂದ ಕೂಡಿದ ಕಡು ಕಂದು. ಕೆಳಭಾಗ ನಸುಕಂದು, ಚಿಕ್ಕ ಪುಟ್ಟ ಗೆರೆಗಳು. ಕಾಲುಗಳಲ್ಲಿ ಗರಿಗಳಿವೆ.

ಆಹಾರ : ಚಿಕ್ಕ ಪುಟ್ಟ ಸಸ್ತನಿಗಳು, ಹಕ್ಕಿಗಳು, ಹಾವುರಾಣಿ, ಮೀನು ಇತ್ಯಾದಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ನವಂಬರ‍್ನಿಂದ ಎಪ್ರಿಲ್ ವರೆಗಿನ ಅವಧಿ. ನೆಲದ ಮೇಲೆ ೩-೪ ಬಿಳಿಯ ಮೊಟ್ಟೆಗಳನ್ನಿಡುತ್ತದೆ.

—- 

ಕಂದು ಡೇಗೆ ಗೂಬೆ (BROWN HAWK-OWL)
ನೈನೊಕ್ಸ್ ಸ್ಕುಟುಲೇಟಾ (Ninox scutulata)

250_69_PP_KUH

ಗಾತ್ರ : ೩೨ ಸೆ.ಮೀ.

ಆವಾಸ : ಕಾಡು ಮತ್ತು ತುಂಬ ಮರಗಳಿರುವ ಪ್ರದೇಶ. ನದಿ ಬಳಿಯ ಕಾಡು ಪ್ರಶಸ್ತ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಡೇಗೆ ರೂಪದ ಗೂಬೆ. ಕಪ್ಪು ಮುಖ, ಕೆಂಗಂದು ಕೆಳಭಾಗ ಹಳದಿ ಬಣ್ಣದ ದೊಡ್ಡ ಕಣ್ಣುಗಳು, ಕೊಕ್ಕಿನ ಬುಡ ಬಿಳಿ. ಹೊಟ್ಟೆಯ ಮೇಲೆ ತಿಳಿ ಚುಕ್ಕೆಗಳು, ಹಳದಿಕಾಲು. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ.

ಆಹಾರ : ದೊಡ್ಡ ಕೀಟಗಳು, ಕಪ್ಪೆ, ಇಲಿ, ಚಿಕ್ಕ ಹಾವು ಇತ್ಯಾದಿ.

ಸಂತಾನಾಭಿವೃದ್ಧಿ : ಜನವರಿಯಿಮದ ಜುಲೈವರೆಗೆ. ಮರದ ಪೊಟರೆಯಲ್ಲಿ ಗೂಡು ೩-೪ ಬಿಳಿ ಮೊಟ್ಟೆಗಳನ್ನಿಡುತ್ತದೆ.

—-

ಕಂದುಮೀನುಗೂಬೆ (BROWN FISH OWL)
ಬ್ಯು ಜೈಲೊನೆನ್ಸಿಸ್ (Bubo zeylonensis)

251_69_PP_KUH

ಗಾತ್ರ : ೫೬-೫೮ ಸೆಂ.ಮೀ.

ಆವಾಸ : ನದೀ ತೀರದ ದಟ್ಟ ಕಾಡು. ಎತ್ತರದ ಮರಗಳು ಪ್ರಶಸ್ತ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ದೊಡ್ಡ ಗಾತ್ರದ, ದಟ್ಟ ಕಂದು ಬಣ್ಣದ ಗೂಬೆ. ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕೆಳಭಾಗ ತಿಳಿಗಂದು ಮತ್ತು ನೇರ ಗೆರೆಗಳು. ಮೇಲ್ಭಾಗ ದಟ್ಟಕಂದು. ‘ಕೊಂಬು’ ನೇರವಾಗಿವೆ. ಹಳದಿ ಬಣ್ಣದ ದೊಡ್ಡ ಕಣ್ಣುಗಳು. ಕಾಲುಗಳಲ್ಲಿ ಗರಿಗಳಿಲ್ಲದಿರುವುದು ಪ್ರಮುಖ ಲಕ್ಷಣ.

ಆಹಾರ : ಪ್ರಮುಖವಾಗಿ ಮೀನು, ಕಪ್ಪೆ, ಹಾವು, ಇಲಿ ಇತ್ಯಾದಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಡಿಸೆಂಬರೆನಿಂದ ಮಾರ್ಚ್‌ನ ಅವಧಿ. ಮರದ ಪೊಟರೆ ಅಥವಾ ಎತ್ತರದ ಬಂಡೆಯ ತುದಿಯಲ್ಲಿ ಗೂಡು. ೧ ಅಥವಾ ೨ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

 —-

ಚುಕ್ಕಿ ಕಿರುಗೂಬೆ (SPOTTED OWLET)
ಅಥೀನೆ ಬ್ರಾಮ (Athene brama)

252_69_PP_KUH

ಗಾತ್ರ : ೨೦-೨೧ ಸೆಂ.ಮೀ.

ಆವಾಸ : ಪೇಟೆಪಟ್ಟಣಗಳ ಹಳೆ ಮನೆಯ ಸಂದಿಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಚಿಕ್ಕ ಗೂಬೆ. ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಂದು ಹಿನ್ನೆಲೆಯಲ್ಲಿ ಮೈಯೆಲ್ಲಾ ಬಿಳಿ ಚುಕ್ಕೆಗಳು. ರೇಖೆಗಳು. ದೊಡ್ಡ ದಂಡುಗಿತ ತಲೆ ಇರುತ್ತದೆ. ಮುಖದ ಎದುರಿಗೆ ಎರಡು ದೊಡ್ಡ ಹಳದಿ ಕಣ್ಣುಗಳಿವೆ. ಎದೆಯ ಮುಂಬಾಗದಲ್ಲಿದ ಬಿಳಿಯ ಅಡ್ಡ ಪಟ್ಟಿ ಇರುವುದು.

ಆಹಾರ : ಹೆಚ್ಚಾಗಿ ಕೀಟಗಳು, ಇಲಿ, ಚಿಕ್ಕ ಹಕ್ಕಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ನವಂಬರ‍್ನಿಂದ ಏಫ್ರೀಲ್ ನ ಅವಧಿ. ಹಳೆಯ ಗೋಡೆಯ ಸಂದು ಮರದ ಪೊಟರೆಯಲ್ಲಿ ಗೂಡು. ೩ ರಿಂದ ೪ ಬಿಳಿ ಮೊಟ್ಟೆಗಳನ್ನಿಡುವುದು.