ಕಾಡು ಗೂಬೆ (WOOD OWL)
ಸ್ಟ್ರಿಕ್ಸ್ ಆಸೆಲ್ಲೇಟ (Strix ocellata)

253_69_PP_KUH

ಗಾತ್ರ : ೪೮ ಸೆಂ.ಮೀ.

ಆವಾಸ : ತೋಪು, ವ್ಯವಸಾಯ ಭೂಮಿಯ ಬಳಿಯ ಮರಗಳು, ತೆರೆದ ಕಾಡು ಮೊದಲಾದೆಡೆ ವಾಸ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಮಧ್ಯಮ ಗಾತ್ರದ ಗೂಬೆ.

ಆಹಾರ : ಚಿಕ್ಕ ಹಕ್ಕಿಗಳು, ಇಲಿ, ಅಳಿಲುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ನವೆಂಬರ‍್ನಿಂದ ಎಪ್ರೀಲ್‌ವರೆಗಿನ ಸಮಯ. ಹಳೆಮರದ ಪೊಟರೆಯ ಗೂಡಿನಲ್ಲಿ ೩ ತಿಳಿಕೆಂಪು ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತದೆ.

 —-

ಕಂದು ಕಾಡು ಗೂಬೆ (BROWN WOOD OWL)
ಸ್ಟ್ರಿಕ್ಸ್ ಲೆಪ್ಟೊಗ್ರಾಮ್ಮಿಕಾ (Strix leptogrammica)

254_69_PP_KUH

ಗಾತ್ರ : ೪೭-೫೦ ಸೆಂ.ಮೀ.

ಆವಾಸ : ಅಗಲ ಎಲೆಗಳ ದಟ್ಟವಾದ ಅರಣ್ಯ. ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಕಾಣಬಹುದು. ಸ್ಥಳೀಯ ಪ್ರಭೇದ.

ಲಕ್ಷಣಗಳು : ದೊಡ್ಡ ಗಾತ್ರದ ಚಾಕೋಲೇಟ್ ಕಂದು ಬಣ್ಣದ ಗೂಬೆ. ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಮುಖದ ಮೇಲೆ ಎರಡು ಬಿಳಿಯ ವೃತ್ತಗಳು, ಮಧ್ಯೆ ದೊಡ್ಡ ಕಣ್ಣುಗಳು. ತಲೆಯ ಮೇಲ್ಭಾಗ, ಕುತ್ತಿಗೆ ಕಡುಕಂದು. ಬಾಲದ ತುದಿ ಬಿಳಿ. ಹೊಟ್ಟೆಯ ಭಾಗದಲ್ಲಿ ಒತ್ತೊತ್ತಾಗಿರುವ ಅಡ್ಡ ಪಟ್ಟಿಗಳಿರುತ್ತವೆ.

ಆಹಾರ : ಸಣ್ಣ ಸಸ್ತನಿಗಳು, ಹಕ್ಕಿಗಳು, ಸರೀಸೃಪಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಮಾರ್ಚ್‌ನ ಅವಧಿ. ಮರಗಳ ಪೊಟರೆಯಲ್ಲಿ ಅಥವಾ ಹೆಬ್ಬಂಡೆಯ ಮೇಲೆ ಕಡ್ಡಿಗಳನ್ನು ಇರಿಸಿದ ಗೂಡು. ೨ ಮೊಟ್ಟೆಗಳನ್ನಿಡುತ್ತದೆ.

—- 

ಕಾಲರು ಗೂಬೆ (COLLARED OWL)
ಓಟಸ್ ಬೆಕ್ಕುಮೀನ (Otus bakkamoena)

255_69_PP_KUH

ಗಾತ್ರ : ೨೩-೨೫ ಸೆಂ.ಮೀ.

ಆವಾಸ : ಕಾಡುಮರಗಳು ಹೆಚ್ಚಿರುವ ಪ್ರದೇಶ, ಸಾಮಾನ್ಯವಾಗಿ ಹಳ್ಳಿ ಬದಿಯ ಕಾಡುತೋಪುಗಳಲ್ಲಿ ವಾಸಿಸುತ್ತದೆ. ಇದು ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕೊಂಬಿನ ಗೂಬೆಯನ್ನು ಹೋಲುತ್ತದೆ. ಕಂದು ಕುತ್ತಿಗೆ ಪಟ್ಟಿ ಪ್ರಮುಖ ಲಕ್ಷಣ. ಮೂಗಿನ ಮೇಲೆ ‘X’ ಆಕಾರದ ತುದಿಯಲ್ಲಿ ‘ಕೊಂಬುಗಳು’. ಮಾಸಲು ಕಂದು ಬಣ್ಣ. ಬಿಳಿಗಡ್ಡ, ಮೈಮೇಲೆ ಕಂದು ಚುಕ್ಕೆಗಳು, ಅಡ್ಡ ಕಣ್ಣುಗಳು.

ಆಹಾರ : ಕೀಟ, ಕ್ವಜತ್ತಾಗಿ ಇಲಿ, ಓತಿಕಾಟ ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಏಪ್ರೀಲ್ ವರೆಗೆ, ಮರದ ಪೊಟರೆಯಲ್ಲಿ ಗೂಡು. ೩-೫ ಗೋಲಾಕೃತಿಯ ಮೂರು ಮೊಟ್ಟೆಗಳು.

—- 

ಕಾಡು ನೆತ್ತಿಂಗೆ (JUNGLE NIGHTJAR)
ಕ್ಯಾಪ್ರಿಮಲಗಸ್ ಇಂಡಿಕಸ್ (Caprimulgus indicus)

256_69_PP_KUH

ಗಾತ್ರ : ೩೦ ಸೆಂ.ಮೀ.
ಆವಾಸ : ಕಡಿದ ಕಾಡುಗಳಲ್ಲಿ, ಪೊದೆಗಳಿರುವ ನದಿ, ನದಿ ತೀರದಲ್ಲಿ ಕಾಣಸಿಗುವ ಇದು ಸ್ಥಳೀಯ ಹಕ್ಕಿ.

ಲಕ್ಷಣಗಳು : ಸಾಮಾನ್ಯ ಕಂದು ಬಣ್ಣ. ಆವಾಸಕ್ಕೆ ಹೊಂದಿಕೊಳ್ಳುವ ಮೈಬಣ್ಣ. ನೆಲದ ಮೇಲೆ ಹೊಟ್ಟೆಯೊತ್ತಿ ಕುಳಿತಿರುತ್ತದೆ. ಬಾಲದ ಹೊರಬದಿಯ ನಾಲ್ಕು ಗರಿಗಳಲ್ಲಿ ಬಿಳಿ ಚುಕ್ಕೆಗಳಿವೆ. ಹೆಣ್ಣು ಹಕ್ಕಿಯಲ್ಲಿ ಈ ಚುಕ್ಕೆಗಳಿಲ್ಲ. ನಿಶಾಚರಿ, ಒಂಟಿಯಾಗಿ ಕಾಣಸಿಗುತ್ತದೆ.

ಆಹಾರ : ಕೀಟಾಹಾರಿ. ಹಾರು ಕೀಟಗಳನ್ನು ಹಾರುತ್ತಲೇ ಹಿಡಿಯುವುದು ಅದರ ಸ್ವಭಾವ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ವರೆಗಿನ ಅವಧಿ, ಗೂಡು ಕಟ್ಟುವ ಅಭ್ಯಾಸವಿಲ್ಲ. ಸಾಮಾನ್ಯವಾಗಿ ೩ ಮೊಟ್ಟೆಗಳಿರುತ್ತವೆ. ಕೆನೆ ಬಣ್ಣದ ಮೊಟ್ಟೆಗಳ ಮೇಲೆ ಕಂದು ಚುಕ್ಕೆಗಳಿರುತ್ತದೆ.

—- 

ಸಾಮಾನ್ಯ ನೆತ್ತಿಂಗ (COMMON NIGHTJAR)
ಕ್ಯಾ. ಏಸಿಯೊಟಿಕಸ್ (Caprimulgus asiaticus)

257_69_PP_KUH

ಗಾತ್ರ : ೨೪ ಸೆಂ.ಮೀ

ಆವಾಸ : ಕಲ್ಲು ಬಂಡೆಗಳಿರುವ ಬೆಟ್ಟದ ಬುಡಗಳಲ್ಲಿ, ತೆರೆದ ಕಾಡುಗಳಲ್ಲಿ. ಮೈದಾನ ಪ್ರದೇಶಗಳಲ್ಲಿ, ಮನುಷ್ಯ ವಾಸದ ಸನಿಹದಲ್ಲಿ ಇರುತ್ತವೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ನಿಶಾಚರಿ, ನೆತ್ತಿಯ ಮೇಲೆ ತಿಳಿ ಆದರೆ ಸ್ಪಷ್ಟವಾದ ರೇಖೆಗಳು. ಹಾರುವಾಗ ರೆಕ್ಕೆಗಳ ಮೇಲಿನ ಬಿಳಿ ತೇಪೆ ಎದ್ದು ಕಾಣುತ್ತದೆ.

ಆಹಾರ : ದುಂಬಿ, ಹಾತೆ, ಮತ್ತಿತರ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮಾರ್ಚ್‌ನ ಅವಧಿ. ಗೂಡು ಕಟ್ಟುವುದಿಲ್ಲ. ಕಂದು ಚುಕ್ಕೆಗಳಿರುವ ಎರಡು ತಿಳಿಗುಲಾಬಿ ಮೊಟ್ಟೆಗಳಿರುತ್ತವೆ.