ಕೆಂಪುರೆಕ್ಕೆ ಬಾನಾಡಿ (REDWINGED BUSH LARK)
ಮಿರಾಫ್ರೆ ಎರಿತ್ರೊಪ್ಟೆರ (Mirafra erythroptera)

263_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕುರುಚಲು ಕಾಡು, ಸ್ಥಳೀಯ ಪಕ್ಷಿ.

ಲಕ್ಷಣಗಳು : ದಪ್ಪ ಕೊಕ್ಕು, ರೆಕ್ಕೆಯ ಮೇಲೆ ಕೆಂಗಂದು, ಎದೆಯ ಮೇಲೆ ಗಡುಸಾದ ಕಪ್ಪು ಚುಕ್ಕೆಗಳು, ಉಳಿದಂತೆ ಕೆಳಭಾಗ ಬಿಳಿ. ಎಲೆಗಳಿಲ್ಲದ ಪೊದೆಯ ಮೇಲೆ ಕುಳಿತಿರುವುದು ಸಾಮಾನ್ಯ.

ಆಹಾರ : ಇತರೆ ಬಾನಾಡಿಗಳಂತೆ ಕೀಟಗಳು ಮತ್ತು ಕಾಳುಗಳು.

ಸಂತಾನಾಭಿವೃದ್ಧಿ : ಎಪ್ರೀಲ್‌ನಿಂದ ಅಕ್ಟೋಬರ‍್ವರೆಗೆ. ಹುಲ್ಲು ಎಳೆಗಳ ಬಟ್ಟಲಿನಂತಹ ಗೂಡು, ಪೂದೆಯ ಬುಡದಲ್ಲಿ ಅಡಗಿಸಿರುವುದು ಸಾಮಾನ್ಯ ೨ ರಿಂದ ೪ ತಿಳಿ ಬೂದುಬಿಳಿ ಮೊಟ್ಟೆಗಳು.

 —-

ಪೊದೆ ಬಾನಾಡಿ (BUSH LARK)
ಮಿರಾಫ್ರೆ ಅಸ್ಸಾಮಿಕ (Mirafra assamica)

264_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಮೈದಾನ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ದಪ್ಪ ಕೊಕ್ಕು. ರೆಕ್ಕೆಗಳ ಮೇಲೆ ಕೆಂಗಂದು. ಎದೆಯ ಮೇಲೆ ಕಂದು ಚುಕ್ಕೆಗಳು ಪ್ರಮುಖ ಲಕ್ಷಣ. ಕಿವಿಯ ಬದಿಯಲ್ಲೂ ಕಂದು ಚುಕ್ಕೆಗಳು ಹೊಟ್ಟೆ ಭಾಗ ಬೆಳುಚು.

ಆಹಾರ : ಕಳೆ ಮತ್ತು ಹುಲ್ಲುಗಳ ಬೀಜ, ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ವರೆಗಿನ ಅವಧಿ. ಹುಲ್ಲಿನಿಂದ ರಚಿಸಲ್ಪಟ್ಟ ಬಟ್ಟಲಿನಂತಹ ಗೂಡು ನಿರ್ಮಿಸಿ ಚುಕ್ಕೆಗಳಿರುವ ೩ ರಿಂದ ೪ ಬೂದು ಮೊಟ್ಟೆಗಳನ್ನಿಡುತ್ತದೆ.

—- 

ಜುಟ್ಟು ಬಾನಾಡಿ (CRESTED LARK)
ಗ್ಯಾಲೆರಿಡ ಕ್ರಿಸ್ಟೇಟ (Galerida cristata)

265_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ಮರುಭೂಮಿ, ಅರೆ ಮರುಭೂಮಿ, ವ್ಯವಸಾಯ ಭೂಮಿ ಮತ್ತೆ ಕರಾವಳಿ ಮಣ್ಣಿನ ದಿಣ್ಣೆಯಲ್ಲಿ ಕಾಣಸಿಗುತ್ತದೆ.

ಲಕ್ಷಣಗಳು : ನೆತ್ತಿ ಮೇಲಿನ ಜುಟ್ಟು ಪ್ರಮುಖ ಲಕ್ಷಣ. ಗಂಡು ಹೆಣ್ಣಯು ಒಂದೇ ತೆರನಾಗಿವೆ. ಮೇಲ್ಭಾಗ ಮರುಳು ಕಂದು, ಕಂದು ಗೀಟುಗಳಿರುವ ಎದೆ, ಅಗಲ ಮತ್ತು ದುಂಡನೆಯ ರೆಕ್ಕೆಗಳು. ಬಾಲದ ಹೊರ ಗರಿಗಳು ಕೆಂಗಂದು. ಕಣ್ಣಿನ ಮೇಲೆ ಬಿಳಿಪಟ್ಟಿ ಇರುತ್ತದೆ.

ಆಹಾರ : ಕೀಟಗಳು ಮತ್ತು ಬೀಜಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿ. ಹುಲ್ಲು, ಕೂದಲುಗಳ ಬಟ್ಟಲಿನಂತಹ ಗೂಡು ನಿರ್ಮಿಸಿ ಹುಲ್ಲುಗಳ ಬುಡದಲ್ಲಿ ೩-೪ ತಿಳಿ ಹಳದಿ ಮೊಟ್ಟೆಗಳನ್ನಿಡುತ್ತದೆ.

 —-

ಚಿಕ್ಕ ಬಾನಾಡಿ (SMALL SKYLARK)
ಅಲೌಡ ಗುಲ್ಗುಲ (Alauda gulgula)

266_69_PP_KUH

ಗಾತ್ರ : ೧೬ ಸೆಂ.ಮೀ.

ಆವಾಸ : ಹುಲ್ಲುಗಾವಲು, ವ್ಯವಸಾಯ ಒಣ ಭೂಮಿ ಸಮುದ್ರ ತೀರದ ಮಣ್ಣಿನ ತಟಗಳಲ್ಲಿ ಕಂಡುಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಹೆಣ್ಣು ಗುಬ್ಬಚ್ಚಿಯಂತೆ ಇರುತ್ತದೆ. ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಣ್ಣಿನ ಸುತ್ತಲೂ ಬಿಳಿ, ಹೊಟ್ಟೆ ತಿಳಿಗಂದು, ಕಂದು ಚುಕ್ಕೆಗಳು ಸಣ್ಣ ಕೊಕ್ಕು, ಪ್ರಮುಖ ಲಕ್ಷಣ.

ಆಹಾರ : ಬೀಜಗಳು ಮತ್ತು ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜುಲೈನ ಅವಧಿ. ಬಟ್ಟಲಿನಂತಹ ಗುಳಿಯಲ್ಲಿ ಹುಲ್ಲಿನ ಹಾಸಿನ ಗೂಡು ರಚಿಸಿ ೨-೪ ಬಿಳಿ ಬೂದು ಮೊಟ್ಟೆಗಳನ್ನಿಡುತ್ತದೆ.

—- 

ಸೈಕೇಸ್ ಬಾನಾಡಿ (SYKE’S CRESTEDLARK)
ಗ್ಯಾಲೆರಿಡ ಡೇವ (Galerida deva)

267_69_PP_KUH

ಗಾತ್ರ : ೧೪ ಸೆ.ಮೀ.

ಆವಾಸ : ಕಲ್ಲು ಬಡೆಗಳ ಗುಡ್ಡ, ಕುರುಚಲು ಕಾಡಿನ ಪ್ರದೇಶ ಮತ್ತು ಒಣಗಿರುವ ಗದ್ದೆಗಳಲ್ಲಿ ಕಂಡುಬರುತ್ತದೆ.

ಲಕ್ಷಣಗಳು : ದಟ್ಟ ಕಂಗೆಂದು ಬಣ್ಣದ ಜುಟ್ಟಿರುವ ಬಾನಾಡಿ. ಜುಟ್ಟಿನ ಬಾನಾಡಿಯನ್ನು ಹೋಲುತ್ತದೆ. ಆದರೆ ಬಣ್ಣ ಇನ್ನಷ್ಟು ಕಪ್ಪು ಕುತ್ತಿಗೆ, ಎದೆ, ಹೊಟ್ಟೆ ತಿಳಿಗಂದು.

ಆಹಾರ : ಬೀಜ ಮತ್ತು ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಸೆಪ್ಟೆಂಬ‌ರ್ನ್‌ ಅವಧಿ. ಹುಲ್ಲಿನ ಬಟ್ಟಲಿನಂತಹ ಗೂಡು. ೨-೩ ತಿಳಿಬೂದು ಮೊಟ್ಟೆಗಳನ್ನು ಇಡುತ್ತದೆ.