ಗುಡ್ಡದ ಗೊರವಂಕ (HILL MYNA)
ಗ್ರಾಕುಲ ರಿಲಿಜಿಯೋಸ (
Gracula religiosa)

317_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ತೇವಾಂಶವಿರುವ ಕಾಡುಗಳು, ನೆಡು ತೋಪು ಇತ್ಯಾದಿ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಕಪ್ಪು ಮೈಬಣ್ಣದ ಮೇಲೆ ಹೊಳೆಯುವ ಹಸಿರು ಲೇಪವಿರುತ್ತದೆ. ಕಿತ್ತಳೆ ಕೆಂಪು ಕೊಕ್ಕು, ಹಳದಿ ಕಾಲುಗಳು, ಕತ್ತಿನ ಹಿಂಬದಿಯಲ್ಲಿ ಹಳದಿ ತೇಪೆ, ಬಾಲದಲ್ಲಿ ಬಿಳಿ ಮಚ್ಚೆ ಇರುತ್ತದೆ.

ಆಹಾರ : ಹಣ್ಣುಗಳು, ಕೀಟ, ಮಕರಂದ ಮತ್ತು ಸರೀಸೃಪಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಅಕ್ಟೋಬರ‍್ನ ಅವಧಿ. ಎತ್ತರದ ಮರಗಳ ಪೊಟರೆಯಲ್ಲಿ ಕಡ್ಡಿ, ಎಲೆ, ಗರಿ ಇತ್ಯಾದಿಗಳ ಕಸದ ರಾಶಿಯಂತಿರುವ ಗೂಡು ನಿರ್ಮಿಸುತ್ತದೆ. ಚುಕ್ಕೆಗಳಿರುವ ೨-೩ ನೀಲಿ ಮೊಟ್ಟೆ ಇರುತ್ತವೆ.

—- 

ಗೊರವಂಕ (MYNA)
ಅಕ್ರಿಡೊತೆರಿಸ್ ಟ್ರಿಸ್ಟಿಸ್ (
Acridotheres tristis)

318_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಮನುಷ್ಯರ ವಾಸ, ವ್ಯವಸಾಯದ ಭೂಮಿ, ತೆರೆದ ಕಾಡುಗಳಲ್ಲಿರುವ ಇದು ಸರ್ವೇ ಸಾಮಾನ್ಯವಾದ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಡುಕಂದು ಮೈಬಣ್ಣ, ಹಳದಿ ಕೊಕ್ಕು, ರೆಕ್ಕೆಯ ಮೇಲೆ ಬಿಳಿತೇಪೆ, ಬಾಲದ ಬುಡ ಬಿಳಿಯಾಗಿರುತ್ತದೆ. ಕಣ್ಣು, ಕಣ್ಣಿನ ಸುತ್ತಮುತ್ತ, ಕಾಲು ಹಳದಿಯಾಗಿರುತ್ತದೆ. ಸಾಮನ್ಯವಾಗಿ ಜೊತೆಯಾಗಿ ನೆಲದ ಮೇಲೆ ಓಡಾಡುತ್ತಿರುತ್ತವೆ.

ಆಹಾರ : ಸರ್ವಭಕ್ಷಕ. ಕೀಟ, ಹಣ್ಣು, ಮಕರಂದ, ತರಕಾರಿ, ಮನೆ ತ್ಯಾಜ ಇತ್ಯಾದಿ.

ಸಂತಾನಾಭಿವೃದ್ಧಿ : ಏಪ್ರಿಲ್‌ನಿಂದ ಆಗಸ್ಟ್‌ನ ಅವಧಿ. ಮರದ ತೂತು, ಮನೆ ಛಾವಣಿ, ತಂತಿ ಕಂಬ ಇತ್ಯಾದಿಗಳಲ್ಲಿ ಕಸಕಡ್ಡಿ, ಚಾಕಲೇಟ್ ಕಾಗದ ಪ್ಲಾಸ್ಟಿಕ್ ತುಂಡು ಇತ್ಯಾದಿಗಳಿರುವ ಗೂಡು ನಿರ್ಮಿಸಿ ೪-೫ ಹೊಳೆವ ನೀಲಿ ಮೊಟ್ಟೆಗಳನ್ನಿಡುತ್ತದೆ.

—- 

ಮರಕೋಗಿಲೆ (TREEPIE)
ಡೆಂಡ್ರೊಸಿಟ್ಟ ವೇಗಬುಂಡ (
Dendrocitta vegabunda)

319_69_PP_KUH

ಗಾತ್ರ : ೫೦ ಸೆಂ.ಮೀ.

ಆವಾಸ : ಕಾಡು, ತೋಟ, ಹೊಲಗದ್ದೆ, ಮನುಷ್ಯರ, ವಾಸದ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಉದ್ದ ಬಾಲ, ಕೆಂಗಂದು ಬಣ್ಣದ ಸಾಮಾನ್ಯ ಪಕ್ಷಿ. ಗಂಡು ಹೆಣ್ಣು ಒಂದೇ ತೆರನಾಗಿವೆ. ಕುತ್ತಿಗೆ, ತಲೆ, ಹಾಗು ಕೊಕ್ಕು ಕಪ್ಪಾಗಿದೆ. ಬೆನ್ನು ಕೆಂಗಂದು. ರೆಕ್ಕೆಗೆ ಬಿಳಿಯಂಚು, ಕಪ್ಪು ತುದಿ. ಬಾಲ ಬೂದು, ತುದಿಯಲ್ಲಿ ಕಪ್ಪು. ಕರ್ಕಶ ಧ್ವನಿಯಿಂದ ಆಕರ್ಷಿಸುತ್ತದೆ.

ಆಹಾರ : ಕೀಟಗಳು, ಸರೀಸೃಪಗಳು, ಇಲಿ, ಇತರ ಹಕ್ಕಿಗಳು, ಮೊಟ್ಟೆ ಇತ್ಯಾದಿಗಳನ್ನು ತಿನ್ನುತ್ತದೆ. ಸದ್ದಿಲ್ಲದೆ ಗಿಡಪೊಟರೆಯಲ್ಲಿ ಅಡಗಿರುವ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುವುದು ಸಾಮಾನ್ಯ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜುಲೈನ ಅವಧಿ. ಕಾಗೆ ಗೂಡಿನಂತಹ ಗೂಡು ನಿರ್ಮಿಸುತ್ತದೆ. ಕೆಲವೊಮ್ಮೆ ಮುಳ್ಳಿರುವ ಟೊಂಗೆಗಳನ್ನು ಉಪಯೋಗಿಸುವುದೂ ಉಂಟು. ೪-೫ ಬಿಳಿಕಂದು ವಿನ್ಯಾಸದ ಮೊಟ್ಟೆಗಳಿರುತ್ತವೆ.

—-

ನಾಡುಕಾಗೆ (HOUSE CROW)
ಕೋರ‍್ವಸ್ ಸ್ಪ್ಲೆಂಡೆನ್ಸ್ (
Corvus splendens)

320_69_PP_KUH

ಗಾತ್ರ : ೪೦ ಸೆಂ.ಮೀ.

ಆವಾಸ : ವ್ಯವಸಾಯ ಭೂಮಿ, ಮನುಷ್ಯರ ವಾಸದ ಕಡೆ ಇರುತ್ತದೆ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಅತ್ಯಂತ ಸಾಮಾನ್ಯ ಹಾಗು ಮನುಷ್ಯ ಪರಿಸರದಲ್ಲಿ ವ್ಯಾಪಕವಾಗಿರುವ ಹಕ್ಕಿ. ಮುಂತಲೆ, ಕೊಕ್ಕು, ಗಂಟಲು ಕಡುಕಪ್ಪು, ಬಲಿಷ್ಠ, ದಪ್ಪ, ದೊಡ್ಡ ಕೊಕ್ಕು, ಕಪ್ಪು ರೆಕ್ಕೆ ಕಪ್ಪು ಬಾಲವಿರುತ್ತದೆ. ಕುತ್ತಿಗೆ ಮತ್ತು ಎದೆ ಬೂದು.

ಆಹಾರ : ಸತ್ತ ಪ್ರಾಣಿಗಳಿಂದ ಹಿಡಿದು ಹಣ್ಣು ಕೀಟಗಳ ವರೆಗೆ ಸರ್ವಭಕ್ಷಕ. ಅತ್ಯಂತ ಉಪಯುಕ್ತ ಜಾಡಮಾಲಿಹಕ್ಕಿ.

ಸಂತಾನಾಭಿವೃದ್ಧಿ : ಹೆಚ್ಚಾಗಿ ಏಪ್ರೀಲ್‌ನಿಂದ ಜೂನ್ ವರೆಗೆ. ಕಡ್ಡಿಗಳಿಂದ ರಚಿಸಿದಗೂಡು. ತಂತಿಗಳನ್ನು ಬಳಸುವುದೂ ಉಂಟು ೪-೫ ತಿಳಿಹಸಿರು ಮೊಟ್ಟೆ ಕಂದು ಗೀಟುಗಳೂ ಇರಬಹುದು.

—- 

ಕಾಡು ಕಾಗೆ (JUNGLE CROW)
ಕೊ. ಮಾಕ್ರೊರಿಂಕಾಸ್
(Corvus macrorhynchos)

321_69_PP_KUH

ಗಾತ್ರ : ೪೮ ಸೆಂ.ಮೀ.

ಆವಾಸ : ಹಳ್ಳಿಗಾಡು, ಕಾಡು, ಕೆಲವೊಮ್ಮೆ ಪೇಟೆ ಪಟ್ಟಣಗಳಲ್ಲಿ ಸಾಮಾನ್ಯವಾಗಿರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೊಳೆಯುವ ಕಪ್ಪು ಗರಿಗಳು. ಬಲಿಷ್ಠ ದಪ್ಪ ಕೊಕ್ಕು ಸ್ವಲ್ಪ ಬಾಗಿದೆ.

ಆಹಾರ : ಸರ್ವ ಭಕ್ಷಕ, ಜಾಡಮಾಲಿ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಏಪ್ರೀಲ್‌ನವರೆಗಿನ ಅವಧಿ. ಗೂಡು ಮತ್ತು ಮೊಟ್ಟೆ ಸಾಮಾನ್ಯ ಕಾಗೆಯಂತಿದೆ.