ಕಪ್ಪು ತಲೆ ಕುಕೂ ಶ್ರೈಕ್ (BALCKHEADED CUCKOOSHRIKE)
ಕೊ. ಮೆಲನೊಪ್ಪರ (
Coracina melanoptera)

322_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಕಾಡು, ತೋಟ, ತೋಪುಗಳಲ್ಲಿರುವ ಇದು ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಕಪ್ಪು ತಲೆ ಮತ್ತು ರೆಕ್ಕೆಗಳ ಬೂದು ಬಣ್ಣದ ಹಕ್ಕಿ. ಮೇಲ್ಭಾಗ ಬೂದು. ಬಾಲದ ತುದಿ ಕೂಡಾ ಕಪ್ಪು ಕೆಳಭಾಗ ಅಡ್ಡ ಪಟ್ಟಿಗಳಿರುವ ಬೂದು ಬಣ್ಣದಿಂದ ಕೂಡಿದೆ.

ಆಹಾರ : ಮುಖ್ಯವಾಗಿ ಕೀಟಗಳು, ಹಣ್ಣು ಮತ್ತು ಮಕರಂದಗಳನ್ನು ಹೀರುವುದೂ ಉಂಟು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ವರೆಗಿನ ಅವಧಿ. ಜೇಡನ ಬಲೆ ಬಳಸಿಕೊಂಡು ಬೇರುನಾರು, ಕಡ್ಡಿಗಳ ಬಟ್ಟಲಿನಂಥ ಗೂಡು ಇರುತ್ತದೆ. ೫ ತಿಳಿ ಹಸಿರಿನ ಬಿಳಿ ಮೊಟ್ಟೆಗಳಿರುತ್ತವೆ.

—-

ದೊಡ್ಡ ಕೂಕೂ ಶ್ರೈಕ್ (LARGE CUCKOO SHRIKE)
ಕೊರಾಸಿನ ನೆವಕೊಲ್ಲಾಂಡಿಯೆ (
Coracina novaehollandiae)

323_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ಕೆಳಕಾಡು, ಕಾಡಿನ ಅಂಚು, ವ್ಯವಸಾಯ ಪ್ರದೇಶ ಮತ್ತು ತೋಟಗಳಲ್ಲಿರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಮೇಲ್ಭಾಗ ಬೂದು, ಕೊಕ್ಕಿನ ಬುಡದಿಂದ ಕಣ್ಣಿನ ಮೂಲಕ ಕಿವಿಯ ವರೆಗೆ ಕಪ್ಪು ಪಟ್ಟಿ ಇರುತ್ತದೆ. ಕಪ್ಪು ರೆಕ್ಕೆ ಮತ್ತು ಬಾಲ ಕೆಳಭಾಗ ಬಿಳಿ ಇರುವುದು. ಹೆಣ್ಣು ಅಡ್ಡಗೆರೆಗಳಿರುವ ಬೂದು ಬಿಳಿ ಕೆಳಭಾಗ ಕಣ್ಣು ಪಟ್ಟಿ ತಿಳಿಯಾಗಿರುತ್ತದೆ.

ಆಹಾರ : ಮರಗಿಡಗಳ ಸಂಧಿಯಲ್ಲಿರುವ ದೊಡ್ಡ ಕೀಟಗಳನ್ನು ಮತ್ತು ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮೇ ಯಿಂದ ಅಕ್ಟೊಬರ‍್ನ ಅವಧಿ. ಜೇಡಿನ ಬಲೆ ಉಪಯೋಗಿಸಿಕೊಂಡು ಕಡ್ಡಿಗಳಿಂದ ರಚಿತವಾದ ಬಟ್ಟಲಿನಂತಹ ಗೂಡು. ಗೂಡಿಗೆ ಲೈಖೆನ್ ಮತ್ತು ತೊಗಟೆಯ ಸಿಂಗಾರವಿರುವುದು. ೩ ತಿಳಿನೀಲಿ ಮೊಟ್ಟೆಗಳನ್ನಿಡುತ್ತದೆ.

 —-

ಕೇಸರಿಕೆಂಪು ಹಕ್ಕಿ (SCARLET MINIVET)
ಪೆರಿಕ್ರೊಕೊಟಸ್ ಫ್ಲೆಮ್ಮಿಯಸ್ (
Pericrocotus flammeus)

324_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಕಾಡು, ತೋಪು, ತೋಟಗೇರು ತೋಟದಲ್ಲಿ ಸಾಮಾನ್ಯವಾಗಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಕಣ್ಣು ಕೋರೈಸುವ ಕೇಸರಿ, ಕೆಂಪು, ಕಪ್ಪು ಹಕ್ಕಿ. ತಲೆ, ಬೆನ್ನು ಬಾಲದ ಮೇಲ್ಭಾಗ ಹೊಳೆಯುವ ಕಪ್ಪು ಹೊಟ್ಟೆ, ಬಾಲದ ಕೆಳಭಾಗ, ರೆಕ್ಕೆಗಳ ಮಧ್ಯೆ ಕಡುಕೇಸರಿ ಕೆಂಪು. ಹೆಣ್ಣು : ಹಳದಿ, ಬೂದು ಕಪ್ಪು ಬಣ್ಣ. ಮುಂತಲೆ ಹಳದಿ, ಹಿಂತಲೆ, ಬೆನ್ನು ತಿಳಿಬೂದು ಹಳದಿ, ಬಾಲದ ಬುಡ, ಎದೆ, ಹೊಟ್ಟೆ ಹಳದಿ, ಕಪ್ಪು ರೆಕ್ಕೆಗಳ ಮೇಲೆ ಹಳದಿ ತೇಪೆ ಇರುತ್ತದೆ.

ಆಹಾರ : ಕೀಟಗಳು ಮತ್ತು ಅವುಗಳ ಮರಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಎಪ್ರೀಲ್‌ನಿಂದ ಜುಲೈವರೆಗಿನ ಅವಧಿ ಮರದ ಕೊಂಬೆಯ ಮೇಲೆ ಲೈಖೆನ್ ಹೊದಿಕೆಯ ಬಟ್ಟಲಿನಂತಹ ಗೂಡು ಕಟ್ಟಿ ಕಂದು ಚುಕ್ಕೆಗಳಿರುವ ೨-೪ ತಿಳಿ ಹಸಿರು ಮೊಟ್ಟೆಗಳನ್ನಿಡುತ್ತದೆ.

—- 

ಚಿಕ್ಕ ಮಿನಿವೆಟ್ (SMALL MINIVET)
ಪೆ. ಸಿನ್ನಮೊಮಿಯಸ್ (
Perucricitys cinnamommeus)

325_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಕಡು, ತೋಪು, ಉದ್ಯಾನ, ಮರಗಳಿರುವ ವ್ಯವಸಾಯ ಭೂಮಿಯ ಕಡೆ ಇರುವುದು.

ಲಕ್ಷಣಗಳು : ಗಂಡು ಕಡು ಬೂದು ತಲೆ, ಬೆನ್ನು ಮತ್ತು ಗಂಟಲು ಕಪ್ಪು ರೆಕ್ಕೆಗಳ ಮಧ್ಯೆ ಕೆಂಪು ಛಾಯೆ, ಹೊಟ್ಟೆ ನಸುಕೆಂಗಂದು, ಕಪ್ಪು ಬಾಲಕ್ಕೆ ಕೆಂಪು ಅಂಚೆ. ಹೆಣ್ಣು ಮಾಸಲು ಮೇಲ್ಭಾಗ, ಎದೆ, ಹೊಟ್ಟೆ ಹಳದಿ. ಬಾಲದ ಅಂಚು, ರೆಕ್ಕೆಗಳ ಮಧ್ಯೆ ಹಳದಿ ಇರುತ್ತದೆ.

ಆಹಾರ : ಮುಖ್ಯವಾಗಿ ಕೀಟಗಳು, ಮಕರಂದ ಹೀರುವುದುಂಟು

ಸಂತಾನಾಭಿವೃದ್ಧಿ : ಫೆಬ್ರವರಿ ಮತ್ತು ಸೆಪ್ಟೆಂಬರ್ ನಡುವಿನ ಅವಧಿ. ಜೆಡನ ಬಲೆ ಲೈಖೆಲ್ ಹೊದಿಕೆಯ ಹುಲ್ಲು ಕಡ್ಡಿ, ಎಳೆಗಳ ಗೂಡು ರಚಿಸಿ ೩ ತಿಳಿ ಹಸಿರು ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—- 

ಬಿಳಿ ಹೊಟ್ಟೆಯ ಮಿನಿವೆಟ್ (WHITEBELLIED MINIVET)
ಪೆ. ಎರಿತ್ರೊಪೈಗಿಯಸ್ (
Pericrocotus erythropygius)

326_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಬಿಳಿ ಕುರುಚಲು ಕಾಡು.

ಲಕ್ಷಣಗಳು : ಗಂಡುಬಹುತೇಕ ಕಪ್ಪು ಬಿಳಿ ಹಕ್ಕಿ. ಎದೆಯಲ್ಲಿ ಕಿತ್ತಳೆಕೆಂಪು ಹೊಟ್ಟೆಯಲ್ಲಿ ಬಿಳಿ ಬಣ್ಣವಿದೆ. ಕರಿ ರೆಕ್ಕೆಗಳ ಮೇಲೆ ಬಿಳಿ ತೇಪೆ. ಬಾಲದ ಬುಡ ನಸುಗಂದು. ಹೆಣ್ಣು : ಗಂಡಿನಲ್ಲಿ ಕಪ್ಪು ಇರುವಡೆ ಹೆಣ್ಣಿನಲ್ಲಿ ತಿಳಿಬೂದು ಬಣ್ಣ. ಎದೆ, ಹೊಟ್ಟೆ, ಬಿಳಿ, ಬಾಲದ ಬುಡ (ಸೊಂಟ) ಕಿತ್ತಳೆ ಹಳದಿ.

ಆಹಾರ : ಕೀಟಗಳು ಮತ್ತು ಜೇಡವನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜೂನ್‌ನಿಂದ ಅಕ್ಟೋಬರ‍್ನ ಅವಧಿ. ಜೇಡನ ಬಲೆ ಸವರಿದ ಎಳೆಗಳ ಬಟ್ಟಲಿನಂತಹ ಗೂಡು ರಚಿಸಿ ೩ ತಿಳಿ ಬೂದು ಮೊಟ್ಟೆಗಳನ್ನಿಡುತ್ತದೆ.