ತಾಮ್ರ ಕುಟಿಕ (COPPERSMITH)
ಮೆ. ಹೀಮೆಸಿಫಾಲ (
Megalaima haemacephala)

288_69_PP_KUH

ಗಾತ್ರ : ೧೭ ಸೆಂ.ಮೀ.

ಆವಾಸ : ಹಳ್ಳಿಗಾಡು, ಪಟ್ಟಣದಲ್ಲಿ ಮಠಗಳಿರುವ ಸ್ಥಳ. ತೋಟ ಇತ್ಯಾದಿ ಕಡೆ ಇರುತ್ತದೆ. ಇದು ಸ್ಥಳೀಯ ಪ್ರಭೇದ.

ಲಕ್ಷಣಗಳು : ಚಿಕ್ಕ ಸುಂದರ ಹಸಿರು ಹಕ್ಕಿ. ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕೆಂಪು ಹಣೆ ಮತ್ತು ಎದೆ ಪ್ರಮುಖ ಲಕ್ಷಣ. ಗಂಟಲು ಹಳದಿ, ಕಣ್ಣಿನ ಮೇಲೆ ಮತ್ತು ಕೆಳಗೆ ಹಳದಿ ಪಟ್ಟಿಗಳು. ಹೊಟ್ಟೆ ತಿಳಿಹಸಿರು ಉಳಿದಂತೆ ಕಡುಹಸಿರು. ಕೆಂಪು ಕಾಲುಗಳಿರುತ್ತವೆ.

ಆಹಾರ : ಉಳಿದ ಕುಟ್ರು ಹಕ್ಕಿಗಳಂತೆ ಆಲದ ಹಣ್ಣು, ರಸವುಳ್ಳ ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಜೂನ್ ವರೆಗಿನ ಅವಧಿ. ಮೆದು ಮರಗಳ ರೆಂಬೆಯಲ್ಲಿ ಕೊರದ ಗೂಡು, ೩ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—-

ಕಾಫಿ ಕಂದು ಮರಕುಟಿಕ (RUFOUS WOODPECKER)
ಮೈಕ್ರೊಪ್ಟೆರ್ನಸ್ ಬ್ರಾಕಿಯೂರಸ್ (
Micropternus brachyurus)

289_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಕಾಡು, ದ್ವಿತೀಯ ಬೆಳವಣಿಗೆಯ ಅರಣ್ಯದಲ್ಲಿ ಇರುತ್ತದೆ. ಸ್ಥಳೀಯ ಪ್ರಭೇದ.

ಲಕ್ಷಣಗಳು : ಕಾಫಿ ಕಂದು ಬಣ್ಣದ ಮರಕುಟಿಕ. ಕಣ್ಣಿನ ಅರ್ಧ ಸುತ್ತು ಕೆಂಗಂದು. ಮೊನಚಾದ ಕಪ್ಪು ಕೊಕ್ಕು. ರೆಕ್ಕೆ ಮತ್ತು ಬಾಲದ ಮೇಲೆ ಕಪ್ಪು ಅಡ್ಡ ಪಟ್ಟಿಗಳು. ಹೆಣ್ಣಿನ ಕಣ್ಣ ಬಳಿ ಕೆಂಗಂದು ರಚನೆಯಿಲ್ಲ. ಇದನ್ನು ಬಿಟ್ಟರೆ ಉಳಿದಂತೆ ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ.

ಆಹಾರ : ಇರುವೆಗಳ ಮೊಟ್ಟೆ, ಮರಿ ಮತ್ತು ಬಲಿತ ಇರುವೆಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಏಪ್ರೀಲ್ ಮತ್ತು ಮೇ. ಮರ ಇರುವೆಯ (Cremafogasta) ಗೂಡನ್ನು ತೋಡಿ ಗೂಡು ನಿರ್ಮಿಸುತ್ತದೆ. ಈ ಕಟ್ಟಿರುವೆಗಳಿರುವಾಗಲೇ ಗೂಡು ಕಟ್ಟುತ್ತದೆ. ೨-೩ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಹುರುಪೆ ಹೊಟ್ಟೆಯ ಹಸಿರು ಮರಕುಟಿಕ (SCALYBELLIED GREEN WOODPECKER)
ಪೈಕಸ್ ಮಿರ‍್ಮ್ಮೆಕೊಫೊನಿಯಸ್ (
Picus myrmecophoneus)

290_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಅರೆ ನಿತ್ಯ ಹರಿದ್ವರ್ಣ ಕಾಡು ಮತ್ತು ಎಲೆ ಉದುರುವ ಕಾಡಿನಲ್ಲಿರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಒಂದು ಸಾಮಾನ್ಯ ಮರಕುಟಿಕ. ಮೊನಚಾದ, ನೇರ, ಗಟ್ಟಿಯಾದ ಕೊಕ್ಕು, ತಿಳಿಹಸಿರು ಮೇಲ್ಭಾಗ, ಬಾಲದ ಬುಡ ಹಳದಿ, ಹಸಿರುಕಂದು ಬಾಲದ ಮೇಲೆ ಬಿಳಿ ಅಡ್ಡ ಪಟ್ಟಿಗಳು. ನೆತ್ತಿಯು ಕೆಂಪು, ಗರಿಗೆಂಪು. ಹೆಣ್ಣು ಹಕ್ಕಿಗಳಲ್ಲಿ ಈ ರಚನೆ ಕಪ್ಪು. ಕೆನ್ನೆ ತಿಳಿಬೂದು ಗಂಟಲಲ್ಲಿ ಬಿಳಿಗೆರೆಗಳು.

ಆಹಾರ : ಇರುವೆ, ಗೆದ್ದಲು, ದುಂಬಿ ಮತ್ತು ಮಕರಂದ.

ಸಂತಾನಾಭಿವೃದ್ಧಿ : ಜನವರಿಯಿಂದ ಜೂನ್‌ನ ಅವಧಿ. ಮರವನ್ನು ಕೊರೆದು ರಚಿಸಿದ ಗೂಡಿನಲ್ಲಿ ೫-೬ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—- 

ಬಂಗಾರದ ಬೆನ್ನಿನ ಮರಕುಟುಕ (GOLDENBACKED WOODPECKER)
ಡಿನೊಪಿಯಮ್ ಬೆಂಗಾಲೆನ್ಸ್ (
Dinopium benghalense)

291_69_PP_KUH

ಗಾತ್ರ : ೨೬-೨೯ ಸೆಂ.ಮೀ.

ಆವಾಸ : ಮಾವಿನ ತೋಪು, ಕುರುಚಲು ಕಾಡು, ತೆರೆದ ದೊಡ್ಡ ಮರಗಳು ಮತ್ತು ತೆಂಗಿನ ತೋಟದಲ್ಲಿ ಕಾಣಸಿಗುತ್ತದೆ.

ಲಕ್ಷಣಗಳು : ಮೇಲ್ಭಾಗ ಬಂಗಾರದ ಹಳದಿ ಮತ್ತು ಕಪ್ಪು ಹೊಟ್ಟೆ ಎದೆಯ ಭಾಗ ಬಿಳಿ ಜೊತೆಗೆ ಕರಿಗೆರೆಗಳು. ನೆತ್ತಿ, ಮುಂತಲೆ ಕೆಂಪು, ಕಪ್ಪು ಕಲ್ಲು ಪಟ್ಟಿ ಮತ್ತು ಗಂಟಲು, ರೆಕ್ಕೆಗಳ ಮೇಲೆ ಬಿಳಿ ಚುಕ್ಕೆಗಳು. ಬಾಲ ಕಪ್ಪು. ಹೆಣ್ಣು ಹಕ್ಕಿಯ ಮುಂತಲೆ ಕಪ್ಪಾಗಿದ್ದು ಬಿಳಿ ರೇಖೆಗಳಿರುತ್ತವೆ.

ಆಹಾರ : ಕರಿ ಇರುವೆ, ಹಣ್ಣಿನ ತಿರುಳು ಮತ್ತು ಮಕರಂದ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಆಗಸ್ಟ್‌ನ ಅವಧಿ. ಮರದ ಕಾಂಡಕೊಂಬೆಯಲ್ಲಿ ರಂಧ್ರ ಕೊರೆದು, ಗೂಡು ರಚಿಸಿ, ೩ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಮೂರು ಬೆರಳು ಮರಕುಟಿಕ (Three toed woodpecker)
ಡಿನೊಪಿಯಮ್ ಜಾವನಿಯೂಸ್ (
Dinopium javanense)

292_69_PP_KUH

ಗಾತ್ರ : ೨೮-೩೦ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟತಟದ ನಿತ್ಯ ಹರಿದ್ವರ್ಣ ಮತ್ತು ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಬಂಗಾರದ ಬೆನ್ನಿನ ಮರಕುಟಿಕವನ್ನು ಹೋಲುತ್ತದೆ. ಆದರೆ ರೆಕ್ಕೆ ಮತ್ತು ಬೆನ್ನು ಕಡುಬಂಗಾರದ ಬಣ್ಣ. ರೆಕ್ಕೆಗಳ ಮೇಲೆ ಬಿಳಿ ಗುರುತುಗಳಿಲ್ಲ. ಕುತ್ತಿಗೆಯ ಇಕ್ಕೆಡೆ ಕಪ್ಪು ರೇಖೆ ಎದ್ದು ಕಾಣುತ್ತದೆ. ಹಿಂತಲೆ ಕಪ್ಪು.

ಆಹಾರ : ಕೀಟಗಳು ಮತ್ತು ಅವುಗಳ ಮರಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಮೇ ವರೆಗಿನ ಅವಧಿ. ಮರವನ್ನು ಕೊರೆದು ಗೂಡು ರಚಿಸಿ ೨-೪ ಬಿಳಿ ಮೊಟ್ಟೆಗಳನ್ನಿಡುತ್ತದೆ.