ಕಪ್ಪು ಮರಕುಟಿಕ (BLACK WOODPECKR)
ಡ್ರೈಯೊಕೊಪಸ್ ಜಾವಾನಿಯನ್ ಸಿಸ್ (
Dryocopus javanenses)

293_69_PP_KUH

ಗಾತ್ರ : ೪-೮ ಸೆಂ.ಮೀ.

ಆವಾಸ : ಕಾಡು ಮತ್ತು ಎತ್ತರದ ಮರಗಳಿರುವ ಪ್ರದೇಶಗಳಲ್ಲಿರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ದೊಡ್ಡ ಗಾತ್ರದ ಕಪ್ಪು ಮರಕುಟಿಕ. ಹೊಟ್ಟೆಯ ಬಿಳಿ ಎದ್ದು ಕಾಣುವುದು ಪ್ರಮುಖ ಲಕ್ಷಣ. ಮುಂತಲೆ, ನೆತ್ತಿ, ಹಿಂತಲೆ, ಕಣ್ಣುಗಳ ಕೆಳಗೆ ಕಂಪು. ಹೆಣ್ಣು ಹಕ್ಕಿಗೆ ಈ ಕೆಂಪು ಹಿಂತಲೆಗೆ ಮಾತ್ರ ಸೀಮಿತ. ಉಳಿದಂತೆ ಕಡುಕಪ್ಪು ಇರುತ್ತದೆ.

ಆಹಾರ : ಇರುವೆ, ದುಂಬಿ ಮತ್ತು ಡಿಂಬಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಮಾರ್ಚ್‌ವರೆಗಿನ ಅವಧಿ ಎತ್ತರದ ಮರದ ಕಾಂಡ, ರೆಂಬೆಗಳಲ್ಲಿ ರಂಧ್ರ ಕೊರೆದು ಗೂಡು ನಿರ್ಮಿಸಿ ೨ ಮೊಟ್ಟೆಗಳನ್ನಿಡುತ್ತದೆ.

—- 

ಮರಾಠ ಮರುಕುಟಿಕ (MAHRATTA WOODPECKER)
ಪಿಕೇಯಿಡಿಸ್ ಮಹಾರಾಟೆನ್ಸಿಸ್ (
Picoides mahrattensis)

294_69_PP_KUH

ಗಾತ್ರ : ೧೭-೧೮ ಸೆಂ.ಮೀ.

ಆವಾಸ : ತೆರೆದ ಕಾಡು, ಮರಗಳಿರುವೆಡೆ, ಕಾಡು ಇತ್ಯಾದಿ ಕಡೆ ಸಿಗುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಚಿಕ್ಕ ಮರುಕುಟಿಕ. ಉದ್ದ, ಮೊನಚಾದ, ಗಟ್ಟಿಯಾದ ಕೊಕ್ಕು, ಬೆಣೆಯಾಕಾರದ ಬಾಲ. ಬೆನ್ನ ಮೇಲೆ ಕಪ್ಪು ಬಿಳಿ ಚುಕ್ಕೆಗಳು. ಹಳದಿ ಮುಂತಲೆ, ಹೊಟ್ಟೆಯ ಮೇಲೆ ಅಲ್ಲಲ್ಲಿ ಕೆಂಪುಗೆರೆಗಳಿರುತ್ತವೆ. ಹಿಂತಲೆಯಲ್ಲಿ ಕೆಂಪು ಪಟ್ಟಿ. ಆದರೆ ಹೆಣ್ಣಿಗೆ ಈ ಭಾಗ್ಯವಿಲ್ಲ ಕಣ್ಣುಗಳ ಕೆಳಗೆ (ಕೆನ್ನೆಯಲ್ಲಿ) ಬಿಳಿ ಬಣ್ಣವಿರುತ್ತದೆ. ಆಹಾರ : ಕೀಟ, ದುಂಬಿ ಮತ್ತು ಹುಳುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಮೇ ವರೆಗಿನ ಅವಧಿ. ಮರದ ಕೊಂಬೆ, ಕಾಂಡದಲ್ಲಿ ತೂತು ಕೊರದು ಗೂಡು ರಚಿಸಿ ೩ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಕುಬ್ಜ ಮರಕುಟಿಕ (PIGMY WOODPECKER)
ಪಕಾಯಿಡಿಸ್ ನೇನಸ್ (
Picoides nanus)

295_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ತೆಳುವಾದ ಕಾಡು, ದ್ವಿತೀಯ ಹಂತದ ಸಸ್ಯವರ್ಗ ಮತ್ತು ಮರಗಳು ಇರುವ ಕಡೆ ಕಾಣಸಿಗುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಪುಟ್ಟ ಮರಕುಟುಕ. ಬೆನ್ನ ಮೇಲೆ ಕಡುಕಂದು ಚುಕ್ಕೆಗಳು. ಹೊಟ್ಟೆಯ ಭಾಗ ಮಾಸಿದ ಬಿಳಿ, ಅಲ್ಲಲ್ಲಿ ಕಂದು ಗೆರೆಗಳು, ಕಣ್ಣುಗಳ ಮೇಲೆ ಎರಡು ಬಿಳಿ ಪಟ್ಟಿಗಳು ಕುತ್ತಿಗೆ ವರೆಗೂ ಹಬ್ಬಿವೆ. ಬೆಳ್ಳಿ ಪಟ್ಟಿ ಮಧ್ಯದಲ್ಲಿ ಕೆಂಪು ಚುಕ್ಕೆ. ಹೆಣ್ಣಿನಲ್ಲಿ ಕೆಂಪು ರೇಖೆಯಿಲ್ಲ.

ಆಹಾರ : ಹಣ್ಣು, ಕೀಟ ಮತ್ತು ಮಕರಂದವನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಎಪ್ರೀಲ್ ನವರೆಗೆ. ಬಣ ಹಳೆಯ ರೆಂಬೆಯಲ್ಲಿ ರಂಧ್ರು ಕೊರೆದು ಗೂಡು ಕಟ್ಟಿ ೨-೩ ಬಿಳಿ ಮೊಟ್ಟೆಯನ್ನಿಡುತ್ತದೆ.

 —-

ಟಿಕೆಲ್ಸ್ ಹೂಕುಟುಕ (TICKELL’S FLOWER PECKER)
ಡಿಸೀಮ್ ಎರಿಥ್ರೋರ‍್ಹಿಂಕಾಸ್ (
Dicaeum erythrorhynchos)

296_69_PP_KUH

ಗಾತ್ರ : ೮ ಸೆಂ.ಮೀ.

ಆವಾಸ : ತೋಪು, ತೆಳು ಕಾಡು. ಸ್ಥಳೀಯ ಪಕ್ಷಿ.
ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ಆಲಿವ್‌ಕಂದು ಮೇಲ್ಭಾಗ, ಬೂದುಬಿಳಿ ಕೆಳಭಾಗ, ಹಳದಿ ಕಂದುಕೊಕ್ಕು, ಇತರೆ ಯಾವುದೇ ಆಕರ್ಷಕ ವಿನ್ಯಾಸವಿಲ್ಲ.

ಆಹಾರ : ಹಣ್ಣು, ಜೇಡ, ಕೀಟಗಳು, ಹಣ್ಣಿನ ತೋಟಕ್ಕೆ ಸಾಕಷ್ಟು ಹಾನಿ ಮಾಡುಬಹುದು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜೂನ್ ವರೆಗೆ. ಅಂದವಾದ ನೇತಾಡುವ ಗೂಡು. ಬದಿಯಲ್ಲಿ ದಾರಿ, ೨ ಬಿಳಿ ಮೊಟ್ಟೆಗಳು.

—-

ಹೃದಯ ಗುರುತಿಸಿ ಮರಕುಟಿಕ (HEARTSPOTTED WOODPECKER)
ಹೆಮಿಸರ‍್ಕಸ್ ಕನೆಂಟ (
Hemicircus canente)

297_69_PP_KUH

ಗಾತ್ರ : ೧೬ ಸೆಂ.ಮೀ.

ಆವಾಸ : ಕಾಫಿ ತೋಟ, ಅಗಲ ಎಲೆಗಳ ದಟ್ಟ ಅರಣ್ಯದಲ್ಲಿ ಕಂಡುಬರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಕಪ್ಪು ಬಿಳುಪು ಮರ ಕುಟುಕ. ಕಪ್ಪು ತಲೆ ಮೇಲೆ ನೇರ ಜುಟ್ಟು, ಬೆನ್ನಿನ ಮೇಲೆ ಹೃದಯಾಕಾರದ ಕಪ್ಪು ಛಾಯೆ. ಗಲ್ಲ, ಕುತ್ತಿಗೆ ಬೆಳ್ಳಗಿರುತ್ತದೆ. ಅತಿಗಿಡ್ಡ ಬಾಲ. ರೆಕ್ಕೆಗಳ ಮೇಲೆ ಚಿಕ್ಕ ಚಿಕ್ಕ ಹೃದಯಾಕರದ ಗುರುತುಗಳು ಹೊಟ್ಟೆಯ ಭಾಗ ಹೊಗೆ ಕಪ್ಪು. ಹೆಣ್ಣು ಹಕ್ಕಿಗೆ ಬಿಳಿನೆತ್ತಿ.

ಆಹಾರ : ಇರುವೆ, ಗೆದ್ದಲು, ಕಂಬಳಿ ಹುಳು ಇತ್ಯಾದಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ನವೆಂಬರ‍್ನಿಂದ ಏಪ್ರೀಲ್ ವರೆಗಿನ ಅವಧಿ. ಒಣಮರದ ಕೊಂಬೆಯಲ್ಲಿ ಚಿಕ್ಕ ರಂಧ್ರುದಂತಹ ಗೂಡು ರಚಿಸಿ ೨-೩ ಬಿಳಿ ಮೊಟ್ಟೆಗಳನ್ನಿಡುತ್ತದೆ.