ಮಿದುಳೂತ ಪಕ್ಷಿ (BRAINFEVER BIRD)
ಕುಕುಬಸ್ ವೆರಿಯಸ್ (
Cucubus varius)

302_69_PP_KUH

ಗಾತ್ರ : ೩೫ ಸೆಂ.ಮೀ.

ಆವಾಸ : ಕಾಡು, ಹಳ್ಳಿಕಾಡು ಮತ್ತು ಮನುಷ್ಯರ ವಾಸದ ಸುತ್ತಮುತ್ತ ಕಂಡುಬರುತ್ತದೆ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಮೇಲ್ಭಾಗ ಬೂದುಬಣ್ಣ, ಬಾಲದ ಮೇಲೆ ಅಡ್ಡ ಪಟ್ಟಿಗಳು ಮಾಸಲುಬಿಳಿ ಕೆಳಭಾಗ, ಚಿಕ್ಕ ಕೊಕ್ಕು, ಮಾಸಲು ತಲೆ, ಒಂಟಿಯಾಗಿ ಕಾಣಸಿಗುವ ಇದರದ್ದು ಮರದ ಮೇಲಿನ ಬದುಕು.

ಆಹಾರ : ಪ್ರಮುಖವಾಗಿ ಕೀಟಗಳು, ಕೆಲವೊಮ್ಮೆ ಸರೀಸೃಪ ಮತ್ತು ಹಣ್ಣುಗಳನ್ನು ತಿನ್ನುವುದುಂಟು.

ಸಂತಾನಾಭಿವೃದ್ಧಿ : ಮಾರ್ಚನಿಂದ ಜೂನ್‌ವರೆಗಿನ ಸಮಯ.  ಬಾಬ್ಲರ್ ಗೂಡಿನಲ್ಲಿ ಮೊಟ್ಟೆ ಇಡುವುದರಿಂದ ಪರಾವಲಂಬಿಯಾಗಿದೆ. ಬಾಬ್ಲರ್ ಮೊಟ್ಟೆಗಳನ್ನು ಹೋಲುವ ನೀಲಿ ಮೊಟ್ಟೆಗಳನ್ನಿಡುತ್ತದೆ.

 —-

ಗೀರು ಗಂಟಲು ಕವಲು ತೋಕೆ (CLIFF SWALLOW)
ಹಿ. ಫ್ಲುವಿಕೋಲ (
Hirundo fluvicola)

303_69_PP_KUH

ಗಾತ್ರ : ೧೧ ಸೆಂ.ಮೀ.

ಆವಾಸ : ನೀರಿನ ಹತ್ತಿರವಿರುವ ಮೈದಾನ, ಗದ್ದೆಗಳಲ್ಲಿ ಕಾಣುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಚಿಕ್ಕ ಹಕ್ಕಿ, ಬಾಲ ಅಗಲ, ಸ್ವಲ್ಪ ಮಾತ್ರ ಕವಲು, ಚೌಕಕಾರ, ನೆತ್ತಿಯ ಮೇಲೆ, ಕುತ್ತಿಗೆಯ ಮೇಲೆ ಕೆಂಗಂದು. ಹೊಟ್ಟೆ ಬಿಳಿ, ಗಲ್ಲ, ಗಂಟಲು, ಎದೆಗಳಲ್ಲಿ ಕಂದು ಗೀರುಗಳು ಬೆನ್ನಿನ ಹಿಂಭಾಗ ತಿಳಿಗಂದು ಇರುತ್ತದೆ.

ಆಹಾರ : ಕೀಟಗಳನ್ನು ಸೇವಿಸುತ್ತದೆ.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡೀ ನಡೆಸುತ್ತದೆ. ಗುಂಪಾಗಿ ಸಂತಾನಾಭಿವೃದ್ಧಿ ಮಾಡುತ್ತವೆ. ಮಡಕೆಯಂತಹ ಹಲವಾರು ಮಣ್ಣಿನ ರಚನೆಗಳು. ಒಟ್ಟಾಗಿರುವುದು ಸಮೂಹ ಸಂತಾನಾಭಿವೃದ್ಧಿಯ ದ್ಯೋತಕ. ೩-೪ ಬಿಳಿ ಮೊಟ್ಟೆಗಳಿರುತ್ತವೆ.

—- 

ಕೆಂಪು ಪ್ರುಷ್ಠ ಕವಲು ತೋಕೆ (REDRUMPED SWALLOW)
ಹಿ. ಡಾರಿಕಾ (
Hirundo daurica)

304_69_PP_KUH

ಗಾತ್ರ : ೧೬-೧೭ ಸೆಂ.ಮೀ.

ಆವಾಸ : ಕಾಡು ನಾಶವಾದ ಪ್ರದೇಶದಲ್ಲಿ, ಗದ್ದೆಬಯಲುಗಳಲ್ಲಿ ಹುಲ್ಲು ಇರುವ ಬೆಟ್ಟಗಳಲ್ಲಿ ಕಾಣಸಿಗುತ್ತವೆ. ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಹಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಂದು ಕಿತ್ತಳೆ ಬಣ್ಣದ ಕುತ್ತಿಗೆ, ಸೊಂಟದ ಭಾಗದಲ್ಲಿ ಕಿತ್ತಳೆಕೆಂಪು ಪ್ರಮುಖ ಲಕ್ಷಣ. ಮೇಲ್ಭಾಗ ಹೊಳೆಯುವ ಲೋಹ ನೀಲಿ ಹೊಟ್ಟೆ, ಕುತ್ತಿಗೆ, ಎದೆ ಮತ್ತು ರೆಕ್ಕೆಯ ಕೆಳಭಾಗ ಮೂರನೇ ಒಂದಂಶ ಕರಿಕೆಂದು ಕಿತ್ತಳೆ. ಉದ್ದನೆಯ ಕವಲು ಬಾಲವಿರುತ್ತದೆ.

ಆಹಾರ : ಹಾರುವ ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಎಪ್ರೀಲ್‌ನಿಂದ ಆಗಸ್ಟ್‌ನ ಅವಧಿ. ವೆರಾಂಡ, ಗುಹೆ, ಬಂಡೆಯ ಕೆಳಭಾಗಗಳಲ್ಲಿ ಮಣ್ಣಿನ ಗೂಡು ನಿರ್ಮಿಸಿ (ಕಿರಿದಾದ) ದ್ವಾರವಿರುವ) ೩-೪ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

—- 

ಮನೆಯ ಕವಲು ತೋಕೆ (HOUSE MARTIN)
ಡೆಲಿಕಾನ್ ಉರ‍್ಬಕ (
Delichon urbica)

305_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಗುಡ್ಡ ಪರ್ವತ ಸುತ್ತಲಿನ ಕಾಡು. ಸ್ಥಳೀಯ ಮತ್ತು ವಲಸೆ ಹೋಗುವ ಪಕ್ಷಿ.

ಲಕ್ಷಣಗಳು : ಸಣ್ಣ ಜಾತಿಯ ಕಪ್ಪು ಬಿಳುಪು ಕವಲು ತೋಕೆ ಪಕ್ಷಿ. ಬಾಲ ಆಳವಾಗಿ ಕವಲಾಗಿಲ್ಲ. ಗಂಡುಹೆಣ್ಣು ಒಂದೇ ತೆರನಾಗಿವೆ. ಹೊಳೆಯುವ ಕಪ್ಪು ಮೇಲ್ಭಾಗ. ಸೊಂಟ ಮತ್ತು ಹೊಟ್ಟೆಯ ಭಾಗ ಬಿಳಿಯಾಗಿರುತ್ತದೆ.

ಆಹಾರ : ಹಾರುತ್ತಿರುವ ಕೀಟಗಳ ಮತ್ತು ಮಿಡತೆಯನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಉತ್ತರ ಭಾರತದಲ್ಲಿ ನಡೆಸುತ್ತದೆ. ದಕ್ಷಿಣಕ್ಕೆ ಬೆಳಗಾವಿಯವರೆಗೆ ವಲಸೆ ಬರುತ್ತವೆ.

—- 

ಕಂದು ಕಳಿಂಗ (BROWN SHRIKE)
ಲೇನಿಯಸ್ ಕ್ರಿಸ್ಟೇಟಸ್ (
Lanius cristatus)

306_69_PP_KUH

ಗಾತ್ರ : ೧೮-೧೯ ಸೆಂ.ಮೀ.

ಆವಾಸ : ಕಾಡಿನ ಅಂಚು, ಹುಲ್ಲು ತುಂಬಿರುವ ಗುಡ್ಡಗಳ ಇಳಿಜಾರು ಒಣ ಎಲೆ ಉದುರಿಸುವ ಕಾಡು ಇತ್ಯಾದಿ ಕಡೆ ವಾಸಿಸುತ್ತವೆ.

ಲಕ್ಷಣಗಳು : ಕಂದು ಬಣ್ಣದ ಶೈಕ್, ಹಣೆ ಬಿಳಿ. ಕಣ್ಣಿನಿಂದ ಕಿವಿವರೆಗೆ ಕಪ್ಪು ಪಟ್ಟಿ ಇರುತ್ತದೆ. ಬಾಲ ಕೆಂಗಂದು, ಹೊಟ್ಟೆ ತಿಳಿಗಂದು.

ಆಹಾರ : ದೊಡ್ಡ ಕೀಟಗಳು, ಸಣ್ಣ ಇತರ ಹಕ್ಕಿಗಳು. ಇಲಿ ಇತ್ಯಾದಿಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ವಲಸೆ ಬರುವ ಹಕ್ಕಿ. ಸಂತಾನಾಭಿವೃದ್ಧಿಯನ್ನು ದೇಶದ ಹೊರಗೆ ನಡೆಸುತ್ತವೆ.