ಬಂಗಾರದ ಹಕ್ಕಿ (GOLDEN ORIOLE)
ಓರಿಯೋಲಸ್ ಓರಿಯೋಲಸ್ (
Oriolus oriolus)

307_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಕಾಡು, ತೋಪು, ಉದ್ಯಾನ, ಮನುಷ್ಯರ ಆವಾಸದ ಸುತ್ತ ಮುತ್ತ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಕಡು ಬಂಗಾರ ಹಳದಿ, ಕಣ್ಣಿನ ಮೂಲಕ ಕಪ್ಪು ಪಟ್ಟಿ, ಕೆಂಪು ಕೊಕ್ಕು, ರೆಕ್ಕೆಗಳು ಮತ್ತು ಬಾಲದ ಮಧ್ಯ ಕಪ್ಪು. ಹೆಣ್ಣು ಹಳದಿಹಸಿರು ಮೇಲ್ಭಾಗ ಕಂದುಹಸಿರು ರೆಕ್ಕೆಗಳು, ಮಾಸಲು ಬಿಳಿ ಕೆಳಭಾಗ ಜೊತೆಗೆ ಕಂದು ಗೆರೆಗಳು ಇರುತ್ತವೆ.

ಆಹಾರ : ಕೀಟ, ಹಣ್ಣು ತಿನ್ನುತ್ತವೆ ಮತ್ತು ಮಕರಂದವನ್ನು ಹೀರುತ್ತದೆ.

ಸಂತಾನಾಭಿವೃದ್ಧಿ : ಏಪ್ರೀಲ್‌ನಿಂದ ಜುಲೈ ವರೆಗಿನ ಅವಧಿ. ಜೇಡನ ಬಲೆ ಬಳಸಿ ಹುಲ್ಲು, ನಾರುಗಳಿಂದ ಜೋಡಿಸಿ ಆಲವಾದ ಬಟ್ಟಲಿನಂತಹ ಗೂಡು ನಿರ್ಮಿಸಿ ೨-೩ ಕಂದು ಚುಕ್ಕೆಗಳಿರುವ ಮೊಟ್ಟೆಯನ್ನಿಡುತ್ತದೆ.

—- 

ಕಪ್ಪು ತಲೆ ಬಂಗಾರದ ಹಕ್ಕಿ (BLACKHEADED ORIOLE)
ಓರಿಯೋಲಸ್ ಗ್ಸಾಂಥೊರ್ನಸ್ (
Oriolus xanthornus)

308_69_PP_KUH

ಗಾತ್ರ : ೨೪-೨೫ ಸೆಂ.ಮೀ.

ಆವಾಸ : ಕಾಡು, ತೋಪು, ಉದ್ಯಾನ, ಕೆಲವೊಮ್ಮೆ ಮನುಷ್ಯನಿರುವಲ್ಲಿ ಇರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹೊಳೆಯುವ ಚಿನ್ನದ ಹಳದಿ ಬಣ್ಣ. ತಲೆ, ಬಾಲ, ಗಂಟಲು ಕಡುಕಪ್ಪು, ಕೆಂಪು ಕೊಕ್ಕು.

ಆಹಾರ : ಮಕರಂದ, ಕೀಟ ಮತ್ತು ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಏಪ್ರಿಲ್‌ನಿಂದ ಜುಲೈವರೆಗಿನ ಅವಧಿ. ಬಂಗಾರದ ಹಕ್ಕಿಯ ಗೂಡಿನಂತಹ ಗೂಡು ನಿರ್ಮಿಸುತ್ತದೆ. ಮೊಟ್ಟೆ ಸ್ವಲ್ಪ ಕೆಂಪು ಹೊಳಪು ಬಣ್ಣ.

—- 

ಕಾಜಾಣ (ರಾಜಕಾಗೆ) (KING CROW)
ಡೈಕ್ರುರಸ್ ಅಡ್ಸಿಮಿಲಿಸ್ (
Dicrurus adsimilis)

309_69_PP_KUH

ಗಾತ್ರ : ೩೨ ಸೆಂ.ಮೀ.

ಆವಾಸ : ಹೊಲಗದ್ದೆ, ರಸ್ತೆ ಬದಿ, ತೆರೆದ ಕಾಡು, ತೋಪು, ಉದ್ಯಾನದ ಪ್ರದೇಶದಲ್ಲಿ ಕಾಣಸಿಗುತ್ತದೆ. ಸಾಮಾನ್ಯವಾದ ಸ್ಥಳೀಯ ಪಕ್ಷಿ.

ಲಕ್ಷಣಗಳು : ಹೊಳೆಯುವ ಅಚ್ಚ ಕಪ್ಪು ಬಣ್ಣದ ಚುರುಕಿನ ಪಕ್ಷಿ. ಬಾಲ ಕವಲೊಡೆದಿದೆ. ತಂತಿ, ದನಕರುಗಳ ಮೇಲೆ ಕುಳಿತಿರುತ್ತದೆ. ಅಪ್ರತಿಮ ಹಾರಾಟಗಾರ ಪಕ್ಷಿ. ಗಾಳಿಯಲ್ಲಿ ತೇಲುತ್ತಾ ಕೀಟ ಹಿಡಿಯುತ್ತವೆ. ಅತಿ ಧೈರ್ಯವಂತ ಪಕ್ಷಿ.

ಆಹಾರ : ಪ್ರಮುಖವಾಗಿ ಕೀಟಗಳು, ಮಕರಂದ ಹೀರುವುದೂ ಉಂಟು.

ಸಂತಾನಾಭಿವೃದ್ಧಿ : ಏಪ್ರೀಲ್‌ನಿಂದ ಆಗಸ್ಟವರೆಗಿನ ಅವಧಿ. ಚಿಕ್ಕಪುಟ್ಟ ಟೊಂಗೆಗಳೊಡನೆ ಹುಲ್ಲು ನಾರುಗಳನ್ನು ಜೋಡಿಸಿ ಬಲೆಯಿಂದ ಕೂಡಿದ ಬಟ್ಟಲಿನಂತಹ ಗೂಡು ರಚಿಸುತ್ತದೆ. ಕೆಂಪು ಚುಕ್ಕೆಗಳಿರುವ ೩-೫ ಬಿಳಿ ಮೊಟ್ಟೆಯನ್ನು ಇಡುತ್ತದೆ.

—- 

ಬೂದು ಕಾಜಾಣ (ASHY DRONGO)
ಡೈ. ಲ್ಯೂಕೊಫೇಕಸ್ (
Dicrurus leucophaeus)

310_69_PP_KUH

ಗಾತ್ರ : ೩೦-೩೨ ಸೆಂ.ಮೀ.

ಆವಾಸ : ಕಾಡುಪಕ್ಷಿ. ಉಳಿದೆಡೆ ಕಂಡು ಬರುವುದು ಕಡಿಮೆ. ವಲಸೆ ಬರುವುದು ಹೆಚ್ಚು.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಪ್ಪು ಹಕ್ಕಿ ಬಾಲವು ಆಳವಾದ ಕವಲಿಂದ ಕೂಡಿದೆ. ಕೆಂಪು ಬಣ್ಣದ ಕಣ್ಣು ಪ್ರಮುಖ ಲಕ್ಷಣ. ಕೆಳಭಾಗ ಬೂದು, ರೆಕ್ಕೆ ಕಂದುಕಪ್ಪಾಗಿರುವುದು.

ಆಹಾರ : ಪ್ರಮುಖವಾಗಿ ಕೀಟಗಳು. ಚಿಕ್ಕಪುಟ್ಟ ಪ್ರಾಣಿಗಳನ್ನು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಹಿಮಾಲಯ ಪ್ರದೇಶದಲ್ಲಿ, ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತದೆ.

—- 

ಕಂಚಿನ ಕಾಜಾಣ (BRONZE DRONGO)
ಡೈ. ಅನಿಯಸ್ (
Dicrurus aeneus)

311_69_PP_KUH

ಗಾತ್ರ : ೨೪ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಅಗಲ ಎಲೆಗಳ ಕಾಡು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಕಪ್ಪು ಕಾಡು ಕಾಜಾಣ ಇದು. ಬಾಲದ ಕವಲು ಆಲವಾಗಿಲ್ಲ. ತಲೆ, ಬೆನ್ನು, ರೆಕ್ಕೆಗಳ ಮೇಲೆ ಹಸಿರು ಕಂಚು ಬಣ್ಣದ ಲೇಪ ಪ್ರಮುಖ ಲಕ್ಷಣ. ಕೊಕ್ಕು ಅಗಲ ಮತ್ತು ಚಪ್ಪಟೆಯಾಗಿರುತ್ತದೆ.

ಆಹಾರ : ಹಾರಾಡುವ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್‌ನ ಅವಧಿ. ತೊಗಟೆ, ಎಲೆ, ಎಳೆಗಳಿಂದ ಆಳವಿಲ್ಲದ ಬಟ್ಟಲಿನಂತಹ ಗೂಡು ರಚಿಸಿ ಕೆಂಪು ಚುಕ್ಕೆಗಳಿರುವ ೩-೪ ತಿಳಿಗೆಂಪು ಮೊಟ್ಟೆಗಳನ್ನು ಇಡುತ್ತದೆ.