ರಾಕೆಟ್ ಬಾಲದ ಕಾಜಾಣ (RACKET-TAILED DRONGO)
ಡೈ. ಪೆರೆಡಿಸಿಯಸ್ (
Dicrurus paradiseus)

312_69_PP_KUH

ಗಾತ್ರ : ೬೦ ಸೆಂ.ಮೀ.

ಆವಾಸ : ಕಾಡು, ಬೋಗಿ ಮರಗಳಿರುವ ತೆರೆದ ಕಾಡು, ತೋಪು ಇತ್ಯಾದಿಗಳಲ್ಲಿ ಕಾಣಸಿಗುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೊಳೆಯುವ

ಕಪ್ಪು ಬಣ್ಣದ ಕಾಜಾಣ. ಬಾಲದ ಇಕ್ಕೆಡೆಯ ಗರಿಗಳು ರಾಕೆಟ್ ನಂತೆ ಕಾಣುವುದರಿಂದ ಈ ಹೆಸರು. ತಲೆಯ ಮೇಲೆ ಜುಟ್ಟು ಇದೆ.

ಆಹಾರ : ಹಾತೆ ಮತ್ತು ದೊಡ್ಡ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್ ವರೆಗಿನ ಅವಧಿ. ಜೇಡನ ಬಲೆಯಿಂದ ಅಂಟಿಸಿದ ಬೇರು, ಎಳೆ, ಚಿಕ್ಕ ಟೊಂಗೆ ಇತ್ಯಾದಿಗಳ ಆಳವಿಲ್ಲದ ಬಟ್ಟಲಿನಂತಹ ಗೂಡನ್ನು ನಿರ್ಮಿಸುತ್ತದೆ. ಕೆಂಗಂದು ಚುಕ್ಕೆಗಳಿರುವ ೩-೪ ಕೆನೆ ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ.

 —-

ಬೂದು ತಲೆಯ ಗೊರವಂಕ (GREYHEADED MYNA)
ಸ್ಟರ‍್ನಸ್ ಮಲಬಾರಿಕಸ್ (
Sturnus malabaricus)

313_69_PP_KUH

ಗಾತ್ರ : ೨೦-೨೨ ಸೆಂ.ಮೀ.

ಆವಾಸ : ತೋಟ, ತೆರೆದ ಕಾಡು, ಮತ್ತು ಅಲ್ಲಲ್ಲಿ ಮರಗಳಿರುವ ಪ್ರದೇಶಗಳಲ್ಲಿ, ಚಳಿಗಾಲದಲ್ಲಿ ವಲಸೆ ಬರುತ್ತದೆ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ಮೇಲ್ಭಾಗ ಬೆಳ್ಳಿಬೂದು, ಎದೆ, ಹೊಟ್ಟೆ ಕಂದು, ಬಾಲದ ಗರಿಗಳು ಸ್ವಲ್ಪ ಕಪ್ಪು, ಬೂದು ಕೊಕ್ಕು ಇರುತ್ತದೆ. ಗುಂಪುಗಳಲ್ಲಿ ಚಿಲಿಪಿಲಿ ಗುಟ್ಟುತ್ತಾ ಸದ್ದು ಮಾಡುವ ಮೈನಾಹಕ್ಕಿ.

ಆಹಾರ : ಮಕರಂದ, ಹಣ್ಣು ಮತ್ತು ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತದೆ.

—- 

ಕಪ್ಪು ತಲೆ ಗೊರವಂಕ (BLACKHEADED MYNA)
ಸ್ಟ್ರ. ಪಗೊಡೆರಮ್ (
Sturnus pagodarum)

314_69_PP_KUH

ಗಾತ್ರ : ೨೧ ಸೆಂ.ಮೀ.

ಆವಾಸ : ತೆಳು ಕಾಡು, ತೆರೆದ ಕಾಡು, ತೋಟ, ಹೊಲಗದ್ದೆಗಳ ಕಡೆ ಕಾಣಸಿಗುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಸಾಮಾನ್ಯ ಮೈನಾಹಕ್ಕಿ. ಕಪ್ಪು ತಲೆ, ಹಳದಿ ಕೊಕ್ಕು, ಕುತ್ತಿಗೆ, ಎದೆ, ಹೊಟ್ಟೆ ತಿಳಿ ಕಂದಾಗಿರುವುದು ಪ್ರಮುಖ ಲಕ್ಷಣಗಳು. ಬೂದು ಬಾಲದ ಕೊನೆಗೆ ಕಪ್ಪು ಅದಕ್ಕೆ ಬಿಳಿ ಅಂಚು ಇರುತ್ತದೆ.

ಆಹಾರ : ಮಕರಂದ, ಹಣ್ಣು ಮತ್ತು ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮೇನಿಂದ ಜುಲೈನ ಅವಧಿ. ಮರದ ಪೊಟರೆ ಅಥವಾ ಹಳೆಯ ಗೋಡೆಯ ಸಂದಿಯಲ್ಲಿ ಕಸಕಡ್ಡಿಗಳ ಗೂಡು ರಚಿಸಿ ೩-೪ ತಿಳಿನೀಲಿ ಮೊಟ್ಟೆಗಳನ್ನಿಡುತ್ತದೆ.

 —-

ಗುಲಾಬಿ ಮೈನಾ (ROSY PASTOR)
ಸ್ಟ. ರೊಸಿಯಸ್ (
Sturnus roseus)

315_69_PP_KUH

ಗಾತ್ರ : ೨-೪ ಸೆಂ.ಮೀ.

ಆವಾಸ : ಮೈದಾನ ಪ್ರದೇಶ, ತೆರೆದ ಕಾಡು, ತೋಟ, ತೋಪು ಹಾಳು ಬಿದ್ದ ಜಮೀನು ಇತ್ಯಾದಿ ಕಡೆ ಕಾಣುವ ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೆ ತೆರನಾಗಿವೆ. ಗುಲಾಬಿ ಬಣ್ಣದ ಗೊರವಂಕ. ತಲೆ, ಕುತ್ತಿಗೆ, ಎದೆಯ ಮುಂಭಾಗ, ಬಾಲದ ತುದಿ, ರೆಕ್ಕೆ ಕಪ್ಪು ಬಣ್ನದಿಮದ ಕೂಡಿದೆ. ಕಣ್ಣು ಕೊಕ್ಕು. ಹಳದಿ ರೆಕ್ಕೆಯ ಕಪ್ಪಿನ ಮೇಲೆ ಹಸಿರು ಛಾಯೆ ಇದ್ದು ಕಾಲು ಮಾಸಲಾಗಿದೆ.

ಆಹಾರ : ಕಾಳು, ಕೀಟ, ಮಕರಂದವನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಚಳಿಗಾಲದಲ್ಲಿ ವಲಸೆ ಬರುತ್ತದೆ.

—- 

ಕಾಡು ಗೊರವಂಕ (JUNGLE MYNA)
ಅಕ್ರಿಡೊತೆರಿಸ್ ಫುಸ್ಕಸ್ (
Acridotheres fuscus)

316_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಮರಗಳಿರುವ ಹಳ್ಳಿಗಾಡಿನ ಅಂಚು ವ್ಯವಸಾಯದ ಭೂಮಿ ಇತ್ಯಾದಿ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಪ್ಪು ಬಣ್ಣದ ಮೈನಾ, ಬಿಳಿ ಕೊಕ್ಕು ಮತ್ತು ಕಾಲುಗಳು. ತಲೆಯ ಮೇಲೆ ಗರಿಗುಚ್ಛ, ರೆಕ್ಕೆಯ ಮೇಲೆ ಮತ್ತು ಬಾಲದ ತುದಿಯಲ್ಲಿ ಬಿಳಿತೇಪೆಗಳಿರುತ್ತವೆ. ಕಣ್ಣು ಕಪ್ಪು.

ಆಹಾರ : ಕೀಟಗಳು, ಹಣ್ಣು ಇತ್ಯಾದಿ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜುಲೈನ ಅವಧಿ. ಮರ ಕುಟಿಕದ ಗೂಡಲ್ಲಿ ಕಸಕಡ್ಡಿ ಸೇರಿಸಿ ಗೂಡುನಿರ್ಮಿಸುತ್ತದೆ. ೩-೪ ತಿಳಿ ನೀಲಿ ಮೊಟ್ಟೆಗಳಿರುತ್ತವೆ.