ಬಿಳಿಹೊಟ್ಟೆಯ ಮರಕೋಗಿಲೆ (WHITEBELLIED TREEPIE)
ಡೆಂ.ಲ್ಯೂಕೊಗ್ಯಾಸ್ಟ್ರೆ (Dendrocitta leucogastra)

327_69_PP_KUH

ಗಾತ್ರ : ೨೮-೩೦ ಸೆಂ.ಮೀ.

ಆವಾಸ : ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ (ಗೋವಾದಿಂದ ದಕ್ಷಿಣಕ್ಕೆ) ಕಂಡುಬರುತ್ತದೆ. ಸ್ಥಳೀಯ ಪಕ್ಷಿಗಳು.

ಲಕ್ಷಣಗಳು : ಗಂಡುಹೆಣ್ಣಿನ ನಡುವೆ ವ್ಯತ್ಯಾಸವಿಲ್ಲ. ಮುಖ ಕಪ್ಪು. ಹಿಂತಲೆ ಹೊಟ್ಟೆ ಬಿಳಿ. ಕೆಂಪು ಕಣ್ಣು, ರೆಕ್ಕೆ ಅರ್ಧಭಾಗ ಕಪ್ಪು. ರೆಕ್ಕೆಗಳ ಮೇಲೆ ಬಿಳಿಯ ಚುಕ್ಕೆ. ಉದ್ದನೆಯ ಬಾಲತುದಿಯ ಮೂರನೇ ಒಂದಂಶ ಕಪ್ಪು ಉಳಿದಂತೆ ಬೂದು ಬಣ್ಣವಿರುವುದು.

ಆಹಾರ : ಕೀಟ, ಹಣ್ಣು ಸತ್ತ ಪ್ರಾಣಿ ಇತ್ಯಾದಿಗಳನ್ನೊಳಗೊಂಡ ಸರ್ವಭಕ್ಷಕ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರೀಲ್‌ವರೆಗಿನ ಅವಧಿ. ಕಾಗೆಯ ಗೂಡಿನಂತಹ ಗೂಡು. ಒಳಗೆ ಚಿಕ್ಕ ಪುಟ್ಟ ಬೇರುಗಳ ಹೊದಿಕೆ ಇರುತ್ತದೆ. ಬಣ್ಣದಲ್ಲಿ ಸಾಕಷ್ಟು ವ್ಯತ್ಯಾಸವಿರುವ ೪-೫ ಮೊಟ್ಟೆಗಳಿರುತ್ತವೆ.

—- 

ಮಡಿವಾಳ (MAGPIE ROBIN)
ಕೊಪ್ಸಿಕಲ್ ಸಾಲರಿಸ್ (Copsychus saularis)

328_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಉದ್ಯಾನ, ತೋಪು, ಹುಲ್ಲುಗಾವಲು, ಹಳ್ಳಿಪೇಟೆಗಳಲ್ಲಿ ಕಾಣುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ನೀಟಾದ ಕಪ್ಪು ಬಿಳಿ ಹಕ್ಕಿ. ಬಾಲ ಎತ್ತಿರುವುದು ಪ್ರಮುಖ ಲಕ್ಷಣ. ತಲೆ, ಬೆನ್ನು, ಬಾಲ, ಗಂಟಲು, ಕೊಕ್ಕು ಕಪ್ಪಾಗಿರುತ್ತದೆ. ಬಾಲದ ಕೆಳಭಾಗ ಬಿಳಿ ರೆಕ್ಕೆಗಳ ಮೇಲೆ ಬಿಳಿ ರೇಖೆ ಇರುತ್ತದೆ. ಗಂಡು ಹಕ್ಕಿಗೆ ಕಪ್ಪು ಇರುವೆಡೆ ಹೆಣ್ಣು ಹಕ್ಕಿಗೆ ಕಡುಬೂದು ಬಣ್ಣವಿರುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಏಪ್ರೀಲ್ ನಿಂದ ಜುಲೈ. ಹಳೆಯ ಗೋಡೆಯ ತೂತುಗಳಲ್ಲಿ ಹುಲ್ಲು, ಬೇರುಗಳಿಂದ ಗೂಡು ರಚನೆ. ೩-೫ ತಿಳಿ ನೀಲಿ ಹಸಿರು ಮೊಟ್ಟೆಗಳಿರುತ್ತವೆ.

 —-

ಮಧುರ ಕಂಠ (IORA)
ಏಗಿಥಿನ ಟಿಫಿಯ (Aegithina tiphia)

329_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕಾಡು, ತೋಪು, ಉದ್ಯಾನ, ಮರಗಳಿರುವ ಗದ್ದೆ. ಇತ್ಯಾದಿ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಕಪ್ಪು ಹಳದಿ ಮಿಶ್ರಿತ ಹಕ್ಕಿ. ಕಪ್ಪು ರೆಕ್ಕೆಗಳ ಮೇಲೆ ಬಿಳಿ ಅಡ್ಡಪಟ್ಟಿ. ಎದೆ, ಹೊಟ್ಟೆ, ಕುತ್ತಿಗೆ ಹಳದಿ ತಲೆ, ಬಾಲ ಕಪ್ಪಿರುತ್ತದೆ. ಬಾಲದ ಬುಡ ಹಳದಿ ಹಸಿರು. ಸಂತಾನಾಭಿವೃದ್ಧಿ ಕಾಲದಲ್ಲಿ ಬಣ್ಣಗಳು ಹೆಚ್ಚು ಕಡು. ಹೆಣ್ಣು : ತಿಳಿ ಬಣ್ಣ, ಹಳದಿ ಹಸಿರು ಗರಿಗಳು. ಕರಿ ರೆಕ್ಕೆಗಳ ಮೇಲೆ ಬಿಳಿ ಅಡ್ಡ ಗೆರೆಗಳಿರುತ್ತವೆ.

ಆಹಾರ : ಕೀಟಗಳು, ಅವುಗಳ ಮೊಟ್ಟೆ ಮತ್ತು ಮರಿಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮೇ ನಿಂದ ಸೆಪ್ಟೆಂಬರ್ ವರೆಗಿನ ಅವಧಿ. ಹುಲ್ಲುಗಳಿಂದ ಬಟ್ಟಲಿನಂತಹ ಗೂಡು ರಚಿಸಿ ಲೈಖೆನ್ ನಿಂದ ಅಂದವಾದ ಹೊದಿಗೆ ಮಾಡುತ್ತವೆ. ೨-೪ ತಿಳಿ ಗುಲಾಬಿಬಿಳಿ ಮೊಟ್ಟೆಗಳಿರುತ್ತವೆ.

 —-

ಬಂಗಾರದ ಹಣೆಯ ಎಲೆಹಕ್ಕಿ (GOLDFRONTED CHLOROPSIS)
ಕ್ಲೋರೊಪ್ಸಿಸ್ ಆರಿಫ್ರೊನ್ಸ್ (Chloropsis aurifrons)

330_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ತೆರೆದ ಕಾಡು, ಮರ, ಪೊದೆಗಳಿರುವ ಕಡೆ ಕಾಣಬಹುದು.

ಲಕ್ಷಣಗಳು : ಎಲೆ ಬಣ್ಣದ ಹಸಿರು ಹಕ್ಕಿ. ಬಂಗಾರದ ಹಳದಿ ಹಣೆ. ಹೆಗಲು ನೀಲಿ, ಗಲ್ಲನೀಲಿ, ಗಂಟಲು ಕಪ್ಪು. ಕೊಕ್ಕಿನ ಬುಡದಿಂದ ಕುತ್ತಿಗೆವರೆಗೆ ಕಪ್ಪು ಪಟ್ಟಿ ಪಕ್ಕದಲ್ಲಿ ಹಳದಿ, ಕೊಕ್ಕು ಕಪ್ಪು ಕಾಲು ಹಸಿರಾಗಿರುತ್ತದೆ.

ಆಹಾರ : ಕೀಟ, ಜೇಡ ಮತ್ತು ಮಕರಂದವನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮೇ ನಿಂದ ಅಗಸ್ಟ್‌ನವರೆಗೆ. ಎಲೆಗಳ ಮಧ್ಯೆ ಹುಲ್ಲು, ಎಳೆ, ಬಳ್ಳಿಗಳ ಬಟ್ಟಲಿನಂತಹ ಗೂಡು ರಚಿಸುತ್ತದೆ. ಹುಲ್ಲು, ತೊಗಟೆಗಳ ಒಳ ಹೊದಿಕೆ ಇರುತ್ತದೆ. ಚುಕ್ಕೆಗಳಿರುವ ೨ ಕೆನೆಕೆಂಪು ಮೊಟ್ಟೆಗಳಿರುತ್ತವೆ.

 —-

ಮೋಹಕ ನೀಲಿಹಕ್ಕಿ (FAIRY BLUE BIRD)
ಇರುಬ ಪ್ಯುಯೆಲ್ಲ (Irena puella)

331_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ದಡ್ಡ ನಿತ್ಯ ಹರಿದ್ವರ್ಣದ ಕಾಡು. ಸ್ಥಳೀಯಪಕ್ಷಿ.

ಲಕ್ಷಣಗಳು : ಗಂಡುಹೊಳೆವ ಕಡು ಸಾಗರ ನೀಲಿ ಬಣ್ಣದ ಮೇಲ್ಭಾಗ, ವೆಲ್ವೆಟಿನಂತಹ ಕಪ್ಪು ಕೆಳಭಾಗ, ಬಾಲದ ಗರಿಗಳು ನೀಲಿಯಾಗಿರುತ್ತವೆ. ಹೆಣ್ಣು : ತಿಳಿಕಪ್ಪಿನ ಹಿನ್ನೆಲೆಯಲ್ಲಿ ಮಾಸಲು ಪಚ್ಚೆ ಬಣ್ಣ. ಜೊತೆಯಾಗಿ ಅಥವಾ ಸಣ್ಣ ಗುಂಪಿನಲ್ಲಿ ಕಂಡು ಬರುತ್ತವೆ.

ಆಹಾರ : ಹಣ್ಣುಗಳು, ಮಕರಂದ ಮತ್ತು ಕೀಟಗಳನ್ನು ಸೇವಿಸುತ್ತವೆ.

ಸಂತಾನಾಭಿವೃದ್ಧಿ : ಮುಖ್ಯವಾಗಿ ಫೆಬ್ರವರಿಯಿಂದ ಏಪ್ರೀಲ್‌ನ ಅವಧಿ. ಹಸಿರು ಮಾಸ್ ಎಲೆಗಳ ನಾರು ಮತ್ತು ಕಿರು ಬೇರುಗಳ ಕೆಳಗೆ ದಪ್ಪ, ನೇರವಾದ ಕಡ್ಡಿಗಳ ಗೂಡು ರಚಿಸುತ್ತದೆ. ತ್ರಿಕೋನಾಕೃತಿಯ ಕಂದು ವಿನ್ಯಾಸದ ೨ ಆಲಿವ್ ಬೂದು ಮೊಟ್ಟೆಗಳನ್ನಿಡುತ್ತದೆ.