ಬೂದು ತಲೆ ಪಿಕಳಾರ (GREYHEADED BULBUL)
ಪಿಕ್ನೊನೊಟಸ್ ಪ್ರಿಯೊಸಿಫಾಲಸ್ (Pycnonotus priocephalus)

[ಚಿತ್ರ ೩೩೨]332_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ನಿತ್ಯ ಹರಿದ್ವರ್ಣದ ಕಾಡು. ದಡ್ಡ ಸಸ್ಯಗಳಿರುವ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಜುಟ್ಟಿಲ್ಲದ ಬೂದುಹಸಿರು ಪಿಕಳಾರ. ಬೂದು ತಲೆ, ಹಸಿರು ಹಳದಿ ಹಣೆ, ಹಳದಿ ಕೊಕ್ಕು ಮತ್ತು ಕಣ್ಣಗಳು.

ಆಹಾರ : ಚಿಕ್ಕಪುಟ್ಟ ಹಣ್ಣುಗಳು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜುಲೈನ ಅವಧಿ. ಹುಲ್ಲುಗಳ ಬಟ್ಟಲಿನಂತಹ ಗೂಡನ್ನು ದಟ್ಟ ಕಾಡಿನಲ್ಲಿ ರಚಿಸಿ ೧-೨ ಕೆಂಪು ಮೊಟ್ಟೆಗಳನ್ನಿಡುತ್ತದೆ.

 —-

ಕೆಂಪು ಗಂಟಲು ಪಿಕಳಾರ (RUBY THROATED BULBUL)
ಪಿಕ್ನೊನೋಟಸ್ ಮೆಲನಿಕ್ಟೆರಸ್ (Pyconotus melanicterus)

333_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ತೇವದ ಅಗಲ ಎಲೆಯ ಕಾಡು, ಮಿಶ್ರ ಹರಿದ್ವರ್ಣದ ಕಾಡು, ಬಿದಿರು ಮೆಳೆಗಳಿರುವ ಕಾಡು ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತೆರನಾಗಿವೆ. ಶಿಖೆ, ತಲೆ, ಕತ್ತು, ಅಚ್ಚಕಪ್ಪು ಬಣ್ಣ, ಮೇಲ್ಭಾಗ ಆಲಿವ್ ಹಳದಿ, ಕೆಳಭಾಗ ಕಡುಹಳದಿ, ಬಾಲಕಂದು ಹಳದಿ, ಬಿಳಿಕಣ್ಣು ಇರುತ್ತದೆ.

ಆಹಾರ : ಚಿಕ್ಕಪುಟ್ಟ ಹಣ್ಣುಗಳು ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಜನವರಿಯಿಂದ ಆಗಸ್ಟ್‌ನ ಅವಧಿ. ಜೇಡನ ಬಲೆಯನ್ನು ಉಪಯೋಗಿಸಿಕೊಂಡು ಹಳದಿ ಎಲೆಯ ಬಟ್ಟಲಿನಂತಹ ಗೂಡು ರಚಿಸುತ್ತದೆ. ೨ ತಿಳಿ ಗುಲಾಬಿಬಿಳಿ ಮೊಟ್ಟೆಗಳಿರುತ್ತವೆ.

 —-

ಕೆಂಪು ಕೆನ್ನೆಯ ಪಿಕಳಾರ (REDWHISKERED BULBUL)
ಪಿ. ಜೀಕೊಸಸ್ (Pycnonotus jacosus)

334_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಸಾಮಾನ್ಯ ಹಕ್ಕಿ. ಕಾಡು, ಕುರುಚಲು ಕಾಡು, ತೋಟ, ಮನುಷ್ಯರ ವಾಸದ ಬಳಿ ಇರುತ್ತದೆ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಕಂದು ಮೇಲ್ಭಾಗ, ಹೊಟ್ಟೆ, ಎದೆ, ಗಂಟಲು ಬಿಳಿಯಾಗಿರುತ್ತದೆ. ಗುದದ್ವಾರದ ಬಿಳಿ ಕೆಂಪು, ತಲೆ ಕುತ್ತಿಗೆ ಕಪ್ಪು. ನೆತ್ತಿಯ ಮೇಲೆ ಕಪ್ಪು ಶಿಖೆ. ಕಣ್ಣುಗಳ ಹಿಂದೆ, ಕೆನ್ನೆಯ ಮೆಲೆ ಕೆಂಪು ಪಟ್ಟಿ ಪ್ರಮುಖ ಲಕ್ಷಣ. ಹಾಡುವ ಹಕ್ಕಿ.

ಆಹಾರ : ಕೀಟಗಳು, ಮಕರಂದ, ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಆಗಸ್ಟ್‌ನ ಅವಧಿ. ಹುಲ್ಲು, ನಾರುಗಳ ಬಟ್ಟಲಿನಾಕೃತಿಯ ಗೂಡು. ಪೊದೆಗಳ ಮಧ್ಯೆ ಇರುತ್ತದೆ.

೩-೪ ತಿಳಿ ಗೆಂಪು ಬಿಳಿ ಮೊಟ್ಟೆಗಳಿರುತ್ತವೆ.

— 

ಕೆಂಪು ಕುಂಡೆ ಪಿಕಳಾರ (RED WENTER BULBUL)
ಪಿಕ್ನೊನೋಟಸ್ ಕೇಫರ್ (Pycnonotus cafer)

335_69_PP_KUH

ಗಾತ್ರ : ೧೯-೨೦ ಸೆಂ.ಮೀ.

ಆವಾಸ : ಕಾಡು, ತೋಟ, ತೋಪು, ಉದ್ಯಾನ, ಕಡಿದ ಕಾಡುಗಳಲ್ಲಿ ಕಾಣಸಿಗುತ್ತದೆ. ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹೊಗೆಕಂದು ಬಣ್ಣದ ಹಕ್ಕಿ. ಸ್ವಲ್ಪ ಕಪ್ಪು ಶಿಖೆ, ಸೊಂಟ ಬಿಳಿ, ಹೊಟ್ಟೆ ಕಂದುಬಿಳಿ, ಕುತ್ತಿಗೆ ಮುಖ ಕಪ್ಪು, ಕುಂಡೆ ಭಾಗ ಕೆಂಪು, ಬಾಲದ ತುದಿ ಬಿಳಿ ಇರುವುದು.

ಆಹಾರ : ಹಣ್ಣು, ಕೀಟ, ಮಕರಂದವನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮೇ ವರೆಗಿನ ಅವಧಿ. ತೆಳು ಬೇರು, ಹುಲ್ಲುಗಳು, ಜೇಡನ ಬಲೆಯೊಂದಿಗೆ ಬಟ್ಟಲು ರೀತಿಯ ಗೂಡು ಕಟ್ಟಿ ೨-೩ ತಿಳಿ ಕೆನ್ನೀಲಿ ಮೊಟ್ಟೆಗಳನ್ನು ಇಡುತ್ತದೆ.

 —-

ಹಳದಿ ಗಂಟಲಿನ ಪಿಕಳಾರ (YELOWTHROATED BULBUL)
ಪಿ. ಕ್ಯಾಂಥೊಲೆಮಸ್ (Pycnonotus xantholaemus)

336_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಕಾಡು, ಕಲ್ಲು ಬಂಡೆಗಳಿರುವ ಎಲೆ ಉದುರುವ ಕಾಡುಗಳಲ್ಲಿ ಸಿಗುವ ಇದು ಸ್ಥಳೀಯ ಪಕ್ಷಿ. ದೇವರಾಯನ ದುರ್ಗದ ಕಾಡುಗಳಲ್ಲಿ ವಿಶೇಷ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹಳದಿ ಹಸಿರು ತಲೆ, ಗಂಟಲು ಕಡುಹಳದಿ ಇರುವುದು ಪ್ರಮುಖ ಲಕ್ಷಣ. ಬೂದು ಹೊಟ್ಟೆ ಮತ್ತು ಬಾಲದ ಕೆಳಗಿನ ಗರಿ ಹಳದಿ, ಶಿಖೆ ಇರುವುದಿಲ್ಲ.

ಆಹಾರ : ಕೀಟ ಮತ್ತು ಹಣ್ಣುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮೇ ಯಿಂದ ಜುಲೈ ವರೆಗಿನ ಅವಧಿ. ಜೇಡನ ಬಲೆಯಿಂದ, ಕಡ್ಡಿ, ಎಲೆ, ನಾರುಗಳನ್ನು ಕೂಡಿಸಿದ ಬಟ್ಟಲಿನಂತಹ ಗೂಡು ರಚಿಸಿ. ಕೆನ್ನೀಲಿ ಕಲೆ ಇರುವ ೨-೩ ಬಿಳಿ ಮೊಟ್ಟೆಗಳನ್ನು ಇರುತ್ತದೆ.