ಬಿಳಿ ಹುಬ್ಬಿನ ಪಿಕಳಾರ (WHITEBROWED BULBUL)
ಪಿ. ಲ್ಯೂಟಿಯೋಲಸ್ (Pychonotus luteolus)

337_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಶುಷ್ಕ ಕುರುಚಲು ಕಾಡು, ಹಕ್ಕಿ ಕಾಡು, ಕಡಿದ ಕಾಡು, ತೋಟ ತೋಪು ಮುಂತಾದೆಡೆ ಇರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಶಿಖೆಯಿಲ್ಲದ ಆಲಿವ್ ಕಂದು ಬಣ್ಣದ ಪಿಕಳಾರ. ಕಣ್ಣಿನ ಮೇಲೆ ಬಿಳಿ ಹುಬ್ಬು ಪ್ರಮುಖ ಲಕ್ಷಣ. ಹೊಟ್ಟೆ ಭಾಗ, ಗಂಟಲು ಬಿಳಿ.

ಆಹಾರ : ಆಲದ ಹಣ್ನು, ಕೀಟ ಮತ್ತು ಮಕರಂದ.

ಸಂತಾನಾಭಿವೃದ್ಧಿ : ಮಾರ್ಚ್‌ನಿಮದ ಜುಲೈನ ಅವಧಿ. ಇತರೆ ಪಿಕಳಾರದಂತೆ ಬಟ್ಟಲಿನಂತಹ ಗೂಡು ಮತ್ತು ಮೊಟ್ಟೆಗಳಿರುತ್ತವೆ.

—- 

ಹಳದಿ ಹುಬ್ಬಿನ ಪಿಕಳಾರ (YELLOWBROWED BULBUL)
ಹಿಸ್ಪಿಪಿಟಿಸ್ ಇಂಟಿಕಸ್ (Hyspipetes indicus)

338_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಕಾಡು, ಏಲಕ್ಕಿ ತೋಟಗಳಲ್ಲಿರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹೊಳೆವ ಹಳದಿ ಆಲಿವ್ ಬಣ್ಣ ಮೇಲ್ಭಾಗದಲ್ಲಿರುತ್ತದೆ. ಹಣೆ ಹಳದಿ, ಹಳದಿ ಹುಬ್ಬು ಪ್ರಮುಖ ಲಕ್ಷಣ. ಕಡು ಕಂದು ರೆಕ್ಕೆಗಳು, ಆಲಿವ್ ಹಳದಿ ಬಾಲ ಇರುತ್ತದೆ.

ಆಹಾರ : ಹಣ್ಣುಗಳು, ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮೇ ತಿಂಗಳ ಅವಧಿ. ಆಳವಾದ ಬಟ್ಟಲಿನಂತಹ ಗೂಡು ನೀಳವಾದ ಕವಲಿನಂತೆ ರಚಿಸುತ್ತದೆ. ಕಂದು ಚುಕ್ಕೆಗಳಿರುವ ೨-೩ ತಿಳಿ, ಕೆನೆ, ಕೆನ್ನೀಲಿ ಮೊಟ್ಟೆಗಳನ್ನಿಡುತ್ತದೆ.

—- 

ಕತ್ತಿ ಕೊಕ್ಕಿನ ಹರಟೆಮಲ್ಲ (SCIMITAR BABBLER)
ಪೊಮೆಟೊರ‍್ಹಿನಸ್ ಹಾರ್‌ಸ್ಫಿಲ್ಡಿ (Pomatorhinus horsfieldii)

339_69_PP_KUH

ಗಾತ್ರ : ೨೨ ಸೆಂ.ಮೀ.

ಆವಾಸ : ಕಾಡು, ಕುರುಚಲು ಕಾಡು ಮತ್ತು ಬಿದಿರು ಹೆಚ್ಚಾಗಿರುವ ಪ್ರದೇಶಗಳಲ್ಲಿರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಹಳದಿ ಬಣ್ಣದ ಕತ್ತಿ ಅಥವಾ ಸಣ್ಣ ಖಡ್ಗದಂತಹ ಕೊಕ್ಕು ಇರುತ್ತದೆ. ಕಡು ಕಂದು ಮೇಲ್ಭಾಗ. ಕಣ್ಣುಗಳ ಮೇಲೆ ಬಿಳಿ ರೇಖೆ ಹೊಟ್ಟೆ, ಕತ್ತು, ಗಲ್ಲ ಬಿಳಿಯಾಗಿರುತ್ತದೆ.

ಆಹಾರ : ಮಕರಂದ, ಕೀಟ, ಜೇಡಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಮೆ ವರೆಗಿನ ಸಮಯ. ಹುಲ್ಲು ಬೇರು, ಹಾವಸೆ ಇತ್ಯಾದಿಗಳನ್ನು ಒಳಗೊಂಡು ಜೊಂಡಿನಂತಹ ಗೂಡನ್ನು ಪೊದೆಗಳ ಕೆಳಗೆ ರಚಿಸಿ, ೩-೫ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಕೆಂಗಂದು ಹೊಟ್ಟೆಯ ಹರಟೆಮಲ್ಲ (RUFOUSBELLIED BABBLER)
ಡ್ಯುಮೆಸಿಯ ಹೈಪೆರಿತ್ರ (
Dumetia hyperythra)

340_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಕುರುಚಲು ಮತ್ತು ಬಿದಿರು ಮೆಳೆಗಳ ಕಾಡುಗಳಲ್ಲಿ ಕಂಡು ಬರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳು ಒಂದೇ ತೆರನಾಗಿವೆ. ಆಲಿವ್ ಕಂದು ಮೇಲ್ಭಾಗ, ಹೊಟ್ಟೆ, ಕತ್ತು ಕೆಂಗಂದು, ಕಡುಕೆಂಗಂದು ಹಣೆ, ಬಿಳಿಗಲ್ಲ ಇರುವ ಗಲಾಟೆಪಕ್ಷಿ.

ಆಹಾರ : ಕೀಟಗಳು, ಅವುಗಳ ಮರಿ ಮತ್ತು ಮಕರಂದ.

ಸಂತಾನಾಭಿವೃದ್ಧಿ : ಮೇ ಯಿಂದ ಸೆಪ್ಟೆಂಬರ್ ವರೆಗಿನ ಅವಧಿ. ಹುಲ್ಲು ಮತ್ತು ಬಿದಿರು ಎಲೆಗಳ ಚೆಂಡಿನಂತಹ ಗೂಡು ರಚಿಸಿ ಕೆಂಗಂದು ಕಳೆಗಳಿರುವ ೩-೪ ಹೊಳೆವ ತಿಳಿಗೆಂಪುಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಚುಕ್ಕೆ ಹರಟೆಮಲ್ಲ (SPOTTED BABBLER)
ಪೆಲ್ಲೊರ್ನಿಯಮ್ ರುಪಿಸೆಪ್ಸ್ (
Pellorneum ruficeps)

341_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಕಾಡುಗಳ ತಳಮಟ್ಟದ ಸಸ್ಯಗಳು, ದ್ವಿತೀಯ ಹಂತದ ಕಾಡು, ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಆಲಿವ್ ಕಂದು ಬಣ್ಣದ ಚಿಕ್ಕ ಹರಟೆಮಲ್ಲ. ಕೆಂಗಂದು ನೆತ್ತಿ, ಬಿಳಿ ಗಂಟಲು, ಎದೆಯ ಮೇಲೆ ಕಂದು ಮಚ್ಚೆ.

ಆಹಾರ : ಸಾಮಾನ್ಯವಾಗಿ ಚಿಕ್ಕ ಪುಟ್ಟ ಹಣ್ಣುಗಳು, ಕೀಟಗಳನ್ನು ತಿನ್ನುವುದು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ತಿಂಗಳವರೆಗೆ. ಬಿದಿರು ಎಲೆಗಳ ಚೆಂಡಿನಂತಹ ಗೂಡು. ೨-೩ ಬಿಳಿ ಮೊಟ್ಟೆಗಳು.